ಇಂದು ಇನ್ಫಿನಿಕ್ಸ್‌ ಕೋರ್‌ i9 ಲ್ಯಾಪ್‌ಟಾಪ್‌ ಫಸ್ಟ್‌ ಸೇಲ್‌; ಬೆಲೆ ತಿಳಿದ್ರೆ, ವಾವ್ಹ್ ಅಂತೀರಾ!

|

ಇನ್ಫಿನಿಕ್ಸ್‌ ಸಂಸ್ಥೆಯು ತನ್ನ ಜಿರೋ ಬುಕ್ ಸರಣಿಯಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್‌ ಜಿರೋ ಬುಕ್ ಅಲ್ಟ್ರಾ (Infinix Zero Book Ultra) ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಈ ನೂತನ ಲ್ಯಾಪ್‌ಟಾಪ್‌ ಫೆಬ್ರುವರಿ 3, 2023 ರಿಂದ (ಇಂದು) ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಲ್ಯಾಪ್‌ಟಾಪ್‌ 12ನೇ ಜನರೇಶನ್‌ ಕೋರ್‌ i9 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಪ್ರಮುಖ ಹೈಲೈಟ್‌ ಆಗಿದೆ.

ಇಂದು ಇನ್ಫಿನಿಕ್ಸ್‌ ಕೋರ್‌ i9 ಲ್ಯಾಪ್‌ಟಾಪ್‌ ಫಸ್ಟ್‌ ಸೇಲ್‌; ಬೆಲೆ?

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಇಂದು ಇನ್ಫಿನಿಕ್ಸ್‌ ಜಿರೋ ಬುಕ್ ಅಲ್ಟ್ರಾ (Infinix Zero Book Ultra) ಲ್ಯಾಪ್‌ಟಾಪ್‌ ಮಾರಾಟ ಪ್ರಾರಂಭಿಸಲಿದೆ. ಈ ಲ್ಯಾಪ್‌ಟಾಪ್‌ 512GB SSD ಮತ್ತು 1TB SSD ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ 16GB RAM ಹಾಗೂ 32GB RAM ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೆ ಇನ್ಫಿನಿಕ್ಸ್‌ ಜಿರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಬೆಲೆ ಎಷ್ಟು? ಇತರೆ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ಜಿರೋ ಬುಕ್ ಅಲ್ಟ್ರಾ: ಬೆಲೆ ಮಾಹಿತಿ
- ಕೋರ್ i5, 16GB RAM ಮತ್ತು 512GB SSD ವೇರಿಯಂಟ್‌ ಬೆಲೆ 49,990ರೂ. ಆಗಿದೆ.
- ಕೋರ್ i7, 16GB RAM ಮತ್ತು 512GB SSD ವೇರಿಯಂಟ್ ಬೆಲೆ 64,990ರೂ. ಆಗಿದೆ.
- ಕೋರ್ i9, 16GB RAM ಮತ್ತು 512GB SSD ವೇರಿಯಂಟ್ ಬೆಲೆ 79,990ರೂ. ಆಗಿದೆ.
- ಕೋರ್ i9, 32GB RAM ಮತ್ತು 1TB SSD ವೇರಿಯಂಟ್ ಬೆಲೆ 84,990ರೂ. ಆಗಿದೆ.

ಇಂದು ಇನ್ಫಿನಿಕ್ಸ್‌ ಕೋರ್‌ i9 ಲ್ಯಾಪ್‌ಟಾಪ್‌ ಫಸ್ಟ್‌ ಸೇಲ್‌; ಬೆಲೆ?

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 16:9 ರ ಆಕಾರ ಅನುಪಾತದೊಂದಿಗೆ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದುಕೊಂಡಿದೆ. ಹಾಗೆಯೇ 100% sRGB ಬಣ್ಣದ ಹರಿವನ್ನು ಇದು ಸಪೋರ್ಟ್‌ ಮಾಡಲಿದೆ. 400 nits ಬ್ರೈಟ್‌ನೆಸ್‌ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, 178 ಡಿಗ್ರಿಗಳವರೆಗೆ ವೀಕ್ಷಣಾ ಫೀಚರ್ಸ್‌ ಅನ್ನು ಪಡೆದುಕೊಂಡಿರುವುದು ಮತ್ತಷ್ಟು ಅನುಕೂಲಕರವಾದ ವಿಷಯವಾಗಿದೆ.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ: ಪ್ರೊಸೆಸರ್‌ ಪವರ್ ಎಷ್ಟು?
ಈ ಹೊಸ ಲ್ಯಾಪ್‌ಟಾಪ್‌ 12 ನೇ ಜನ್ ಇಂಟೆಲ್ ಕೋರ್ H ಸರಣಿಯ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಕೋರ್‌ i7 ಮತ್ತು ಕೋರ್‌ i5 ವೇರಿಯಂಟ್‌ನಲ್ಲಿ ಲಭ್ಯವಿದೆ. ಎಲ್ಲಾ ನಾಲ್ಕು ವೇರಿಯಂಟ್‌ಗಳೂ ಸಹ 96EU ಐರಿಸ್ ಗ್ರಾಫಿಕ್ಸ್‌ನೊಂದಿಗೆ ಪ್ಯಾಕ್‌ ಆಗಿವೆ. ಇದರೊಂದಿಗೆ ಸ್ಟೋರೇಜ್‌ ಸಾಮರ್ಥ್ಯದಲ್ಲೂ ವಿವಿಧ ವೇರಿಯಂಟ್‌ ಲಭ್ಯವಾಗಲಿದ್ದು, ಅದರಲ್ಲಿ 32GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯದ ಲ್ಯಾಪ್‌ಟಾಪ್‌ ಹೆಚ್ಚು ಗಮನಸೆಳೆಯುತ್ತದೆ.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ: ಇತರೆ ಸೌಲಭ್ಯ
ಹಾಗೆಯೇ ಹೆಚ್ಚಿನ ಸ್ಟೋರೇಜ್‌ಗಾಗಿ ಹೆಚ್ಚುವರಿ SSD ಸ್ಲಾಟ್ ಅನ್ನು ಸಹ ಪಡೆದುಕೊಂಡಿರುವ ಈ ಲ್ಯಾಪ್‌ಟಾಪ್‌ನಲ್ಲಿ ಸ್ಪೆಷಲ್ ಹಾರ್ಡ್‌ವೇರ್ ಕೀ ಯನ್ನು ಅಳವಡಿಸಲಾಗಿದೆ. ಇದನ್ನು ಇನ್ಫಿನಿಕ್ಸ್ ಓವರ್‌ಬೂಸ್ಟ್ ಸ್ವಿಚ್ ಎಂದು ಕರೆದಿದೆ. ಈ ಸ್ವಿಚ್‌ ಅನ್ನು ಲ್ಯಾಪ್‌ಟಾಪ್‌ನ ಬದಿಯಲ್ಲಿ ನೀಡಲಾಗಿದ್ದು, ಕೇವಲ ಒಂದು ಟಾಗಲ್‌ನೊಂದಿಗೆ ಅಧಿಕ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದು ಮೂರು ವಿಧಾನಗಳನ್ನು ಹೊಂದಿದ್ದು, ಇಕೋ ಮೋಡ್, ಬಾಲ್ ಮೋಡ್ ಮತ್ತು ಓವರ್‌ಬೂಸ್ಟ್ ಮೋಡ್ ಎಂಬ ಆಯ್ಕೆಗಳಿವೆ.

ಇಂದು ಇನ್ಫಿನಿಕ್ಸ್‌ ಕೋರ್‌ i9 ಲ್ಯಾಪ್‌ಟಾಪ್‌ ಫಸ್ಟ್‌ ಸೇಲ್‌; ಬೆಲೆ?

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ಬ್ಯಾಟರಿ ಸಾಮರ್ಥ್ಯ
ನೂತನ ಲ್ಯಾಪ್‌ಟಾಪ್‌ನ ಬ್ಯಾಟರಿ ಬಗ್ಗೆ ನೋಡುವುದಾದರೆ ಇದು 70Whr ಬ್ಯಾಟರಿ ಪವರ್ ಅನ್ನು ಹೊಂದಿದ್ದು, ಇಂದು ಪೂರ್ಣ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಕ್‌ಅಪ್‌ ನೀಡಲಿದೆ. ಹಾಗೆಯೇ ಇದರೊಂದಿಗೆ 96W ಪೋರ್ಟಬಲ್ ಹೈಪರ್ ಚಾರ್ಜರ್ ಲಭ್ಯವಾಗಲಿದ್ದು, ಕೇವಲ ಎರಡು ಗಂಟೆಯಲ್ಲಿ ಪೂರ್ಣ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
The Infinix Zero Book Ultra with 32GB RAM, Core i9 CPU, and 1TB SSD is priced under Rs 90,000. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X