Home
ಸುದ್ದಿಜಾಲ

ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಲಾಂಚ್‌; ಏನೆಲ್ಲಾ ಫೀಚರ್ಸ್‌ ಇವೆ ಗೊತ್ತಾ!?

ಇನ್ಫಿನಿಕ್ಸ್ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಲ್ಲಿ ಒಂದಾಗಿದ್ದು, ಡಿಸೆಂಬರ್ 2021 ರಲ್ಲಿ ಭಾರತದಲ್ಲಿ ಲ್ಯಾಪ್‌ಟಾಪ್ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಅದರಂತೆ ಇನ್‌ಬುಕ್‌ X1, ಇನ್‌ಬುಕ್‌ X2, ಇನ್‌ಬುಕ್‌ X1 ಸ್ಲಿಮ್, ಇನ್‌ಬುಕ್‌ X1 ನಿಯೋ ಮತ್ತು ಇನ್ಫಿನಿಕ್ಸ್ ಇನ್‌ಬುಕ್‌ X2 ಪ್ಲಸ್ ನಂತಹ ಅನೇಕ ಕೈಗೆಟುಕುವ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿದ್ದು, ಇದೀಗ ಭಾರತದಲ್ಲಿ ಹೊಸ ಪ್ರೀಮಿಯಂ ಲ್ಯಾಪ್‌ಟಾಪ್‌ ಅನ್ನು ಅನಾವರಣ ಮಾಡಿದೆ.

ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಲಾಂಚ್‌!

ಈಗಾಗಲೇ ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಇತರೆ ಸ್ಮಾರ್ಟ್‌ಡಿವೈಸ್‌ಗಳನ್ನೂ ಪರಿಚಯಿಸಿದೆ. ಇದರ ಭಾಗವಾಗಿ ಈಗ ಹೊಸದಾಗಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಅನಾವರಣ ಮಾಡಿದ್ದು, ಈ ಲ್ಯಾಪ್‌ಟಾಪ್‌ 12ನೇ ಜನ್‌ ಕೋರ್‌ i9 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಇನ್ಫಿನಿಕ್ಸ್ ಭಾರತದಲ್ಲಿ ಮೊದಲ ಪ್ರೀಮಿಯಂ ಲ್ಯಾಪ್‌ಟಾಪ್ ಅನ್ನು ಅನಾವರಣ ಮಾಡಿದ್ದು, ಇದಕ್ಕೆ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ (Infinix Zero Book Ultra) ಎಂದು ಹೆಸರಿಸಿದೆ. ಈ ಲ್ಯಾಪ್‌ಟಾಪ್‌ ವಿಂಡೋಸ್‌ 11 ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 1TB SSD ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗಿದ್ರೆ, ಈ ವಿಶೇಷ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಲಾಂಚ್‌!

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಡಿಸ್‌ಪ್ಲೇ ಮಾಹಿತಿ
ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 16:9 ರ ಆಕಾರ ಅನುಪಾತದೊಂದಿಗೆ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದುಕೊಂಡಿದೆ. ಹಾಗೆಯೇ
100 ಪ್ರತಿಶತ sRGB ಬಣ್ಣದ ಹರವನ್ನು ಇದು ಬೆಂಬಲಿಸಲಿದ್ದು, 400 nits ಬ್ರೈಟ್‌ನೆಸ್‌ ಮೂಲಕ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, 178 ಡಿಗ್ರಿಗಳವರೆಗೆ ವೀಕ್ಷಣಾ ಫೀಚರ್ಸ್‌ ಅನ್ನು ಪಡೆದುಕೊಂಡಿರುವುದು ಮತ್ತಷ್ಟು ಅನುಕೂಲಕರವಾದ ವಿಷಯವಾಗಿದೆ.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಪ್ರೊಸೆಸರ್‌ ವಿವರ
ಈ ಹೊಸ ಲ್ಯಾಪ್‌ಟಾಪ್‌ 12 ನೇ ಜನ್ ಇಂಟೆಲ್ ಕೋರ್ H ಸರಣಿಯ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಕೋರ್‌ i7 ಮತ್ತು ಕೋರ್‌ i5 ವೇರಿಯಂಟ್‌ನಲ್ಲಿ ಲಭ್ಯವಿದೆ. ಎಲ್ಲಾ ನಾಲ್ಕು ವೇರಿಯಂಟ್‌ಗಳೂ ಸಹ 96EU ಐರಿಸ್ ಗ್ರಾಫಿಕ್ಸ್‌ನೊಂದಿಗೆ ಪ್ಯಾಕ್‌ ಆಗಿವೆ. ಇದರೊಂದಿಗೆ ಸ್ಟೋರೇಜ್‌ ಸಾಮರ್ಥ್ಯದಲ್ಲೂ ವಿವಿಧ ವೇರಿಯಂಟ್‌ ಲಭ್ಯವಾಗಲಿದ್ದು, ಅದರಲ್ಲಿ 32GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯದ ಲ್ಯಾಪ್‌ಟಾಪ್‌ ಹೆಚ್ಚು ಗಮನಸೆಳೆಯುತ್ತದೆ.

ಇದರೊಂದಿಗೆ ಹೆಚ್ಚಿನ ಸ್ಟೋರೇಜ್‌ಗಾಗಿ ಹೆಚ್ಚುವರಿ SSD ಸ್ಲಾಟ್ ಅನ್ನು ಸಹ ಪಡೆದುಕೊಂಡಿರುವ ಈ ಲ್ಯಾಪ್‌ಟಾಪ್‌ನಲ್ಲಿ ವಿಶಿಷ್ಟವಾದ ಹಾರ್ಡ್‌ವೇರ್ ಕೀಯನ್ನು ಸೇರಿಸಲಾಗಿದೆ. ಇದನ್ನು ಇನ್ಫಿನಿಕ್ಸ್ ಓವರ್‌ಬೂಸ್ಟ್ ಸ್ವಿಚ್ ಎಂದು ಕರೆದಿದೆ. ಈ ಸ್ವಿಚ್‌ಅನ್ನು ಲ್ಯಾಪ್‌ಟಾಪ್‌ನ ಬದಿಯಲ್ಲಿ ನೀಡಲಾಗಿದ್ದು, ಕೇವಲ ಒಂದು ಟಾಗಲ್‌ನೊಂದಿಗೆ ಗರಿಷ್ಠ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದು ಮೂರು ವಿಧಾನಗಳನ್ನು ಹೊಂದಿದ್ದು, ಇಕೋ ಮೋಡ್, ಬಾಲ್ ಮೋಡ್ ಮತ್ತು ಓವರ್‌ಬೂಸ್ಟ್ ಮೋಡ್ ಎಂಬ ಆಯ್ಕೆಗಳಿವೆ.

ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ಲಾಂಚ್‌!

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ಬ್ಯಾಟರಿ ಸಾಮರ್ಥ್ಯ
ಈ ಹೊಸ ಲ್ಯಾಪ್‌ಟಾಪ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 70Whr ಬ್ಯಾಟರಿ ಘಟಕ ಹೊಂದಿದ್ದು, ಇಂದು ಪೂರ್ಣ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಕಪ್‌ ನೀಡಲಿದೆ. ಹಾಗೆಯೇ ಇದರೊಂದಿಗೆ 96W ಪೋರ್ಟಬಲ್ ಹೈಪರ್ ಚಾರ್ಜರ್ ಲಭ್ಯವಾಗಲಿದ್ದು, ಕೇವಲ ಎರಡು ಗಂಟೆಯಲ್ಲಿ ಪೂರ್ಣ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ನ ಕನೆಕ್ಟಿವಿಟಿ ಆಯ್ಕೆ
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ 2 x ಯುಎಸ್‌ಬಿ ಟೈಪ್-A 3.0, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಹೆಚ್‌ಡಿಎಮ್‌ಐ 1.4 ಹಾಗೂ ಡೇಟಾ ವರ್ಗಾವಣೆಗಾಗಿ ಹೆಚ್ಚುವರಿ ಟೈಪ್-ಸಿ ಪೋರ್ಟ್ ಸೇರಿದಂತೆ ಬಳಕೆದಾರರಿಗೆ ಅಗತ್ಯ ಎನಿಸುವ ಪೋರ್ಟ್‌ ಆಯ್ಕೆಗಳನ್ನು ಈ ಲ್ಯಾಪ್‌ಟಾಪ್‌ ಪಡೆದುಕೊಂಡಿದೆ. ಇದರೊಂದಿಗೆ 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆ ಸಹ ನೀಡಲಾಗಿದ್ದು, ಬ್ಯಾಕ್‌ಲಿಟ್ ಕೀಬೋರ್ಡ್, ವೈ ಫೈ 6E, ICE ಸ್ಟ್ರೋಮ್‌ 2.0 ಡ್ಯುಯಲ್ ಫ್ಯಾನ್ ಕೂಲಿಂಗ್ ಸಿಸ್ಟಮ್ ಆಕರ್ಷಕ ಎನಿಸಿವೆ.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ನ ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ನಾಲ್ಕು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಕೋರ್ i5 ಕಾನ್ಫಿಗರೇಶನ್ ಆಯ್ಕೆ ಇರುವ ಹಾಗೂ 16GB RAM ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇರುವ ಲ್ಯಾಪ್‌ಟಾಪ್ ಬೆಲೆ 49,990 ರೂ. ಗಳು. ಹಾಗೆಯೇ ಕೋರ್ i7 ಕಾನ್ಫಿಗರೇಶನ್ ಆಯ್ಕೆ ಇರುವ 16GB RAM, 512GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಲ್ಯಾಪ್‌ಟಾಪ್‌ಗೆ 64,990 ರೂ. ಗಳ ಬೆಲೆ ಇದೆ.

ಇದರೊಂದಿಗೆ ಕೋರ್ i9 ಕಾನ್ಫಿಗರೇಶನ್‌ ಇರುವ 16GB RAM, 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯ ಲ್ಯಾಪ್‌ಟಾಪ್‌ಗೆ 79,990 ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಕೊನೆಯದಾಗಿ ಕೋರ್ i9 ಕಾನ್ಫಿಗರೇಶನ್‌ 32GB RAM, 1TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇರುವ ಲ್ಯಾಪ್‌ಟಾಪ್‌ಗೆ 84,990 ರೂ.ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್ ಫೆಬ್ರವರಿ 3 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಜೊತೆಗೆ ಇದು ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ.

Best Mobiles in India

English summary
Infinix Zero Book Ultra Laptop Unveiled in India This laptop is available in four configurations and has got various features. details are in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+