Home
ಸುದ್ದಿಜಾಲ

Infinix smartphone: 200MP ಕ್ಯಾಮೆರಾ.. 3D ಡಿಸ್ಪ್ಲೇ.. ಇನ್‌ಫಿನಿಕ್ಸ್‌ನ ಈ ಫೋನ್‌ಗೆ ಬೃಹತ್‌ ರಿಯಾಯಿತಿ!

ಇನ್‌ಫಿನಿಕ್ಸ್‌ (Infinix) ಸ್ಮಾರ್ಟ್‌ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಹೊಂದಿರುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ಈ ಫೋನ್‌ಗಳಿಗೆ ಬಹು ಬೇಡಿಕೆ ಇದೆ. ಈ ನಡುವೆ ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್‌ ಅನ್ನು ಘೋಷಣೆ ಮಾಡಲಾಗಿದೆ. ಅದೂ ಸಹ 3D ಕರ್ವ್ಡ್ ಅಮೋಲೆಡ್‌ (3D Curved AMOLED) ಇರುವ ಫೋನ್‌ಗಂತೂ ದೊಡ್ಡ ರಿಯಾಯಿತಿ ನೀಡಲಾಗಿದೆ.

ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 200MP ಕ್ಯಾಮೆರಾ ಸೆನ್ಸರ್‌, 180W ಚಾರ್ಜಿಂಗ್ ಸೌಲಭ್ಯ ಹಾಗೂ 3D ಕರ್ವ್ಡ್ ಡಿಸ್‌ಪ್ಲೇ ಇರುವ ಇನ್ಫಿನಿಕ್ಸ್ ಜಿರೋ ಅಲ್ಟ್ರಾ (Infinix ZERO ULTRA) ಫೋನ್ ಅನ್ನು ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಹಾಗಿದ್ರೆ, ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಅಫರ್‌ ವಿವರ ಏನು ಎಂದು ತಿಳಿದುಕೊಳ್ಳಿ.

200MP ಕ್ಯಾಮೆರಾ.. 3Dಡಿಸ್ಪ್ಲೇ.. ಇನ್‌ಫಿನಿಕ್ಸ್‌ನ ಈ ಫೋನ್‌ಗೆ ಬೃಹತ್‌ ರಿಯಾಯಿತಿ

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಡಿಸ್‌ಪ್ಲೇ ವಿವರ: ಈ ಫೋನ್‌ನ ಆಫರ್‌ ಬೆಲೆ ವಿವರ ತಿಳಿಯುವ ಮುನ್ನ ಇದರ ಫೀಚರ್ಸ್‌ ಕಡೆ ಕಣ್ಣಾಯಿಸೋಣ. ಈ ಫೋನ್ 6.8 ಇಂಚಿನ ಫುಲ್‌ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 3D ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಹಾಗೂ 1000 ಪೀಕ್ ಬ್ರೈಟ್‌ನೆಸ್‌ನೊಂದಿಗೆ ಕಾಣಿಸಿಕೊಂಡಿದೆ.

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 6nm ಚಿಪ್‌ಸೆಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಮಾಲಿ- G68 MC4 GPU ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಪ್ಯಾಕ್‌ ಆಗಿದೆ. ಈ ಮೂಲಕ ಗ್ರಾಹಕರು ಉತ್ತಮ ಕಾರ್ಯಕ್ಷಮತೆಯನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಹಾಗೂ ಈ ಫೋನ್ ಆಂಡ್ರಾಯ್ಡ್‌ 12 OS (Android 12 OS) ಅನ್ನು ರನ್ ಮಾಡಲಿದೆ.

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಕ್ಯಾಮೆರಾ ಫೀಚರ್ಸ್‌: ಈ ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್ ದೊಡ್ಡ ಪಿಕ್ಸೆಲ್‌ ನ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ ಇದು ಬರೋಬ್ಬರಿ 200 ಮೆಗಾ ಮೆಗಾಪಿಕ್ಸೆಲ್‌ನ OIS ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದ್ದು, 13 ಮೆಗಾ ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2 ಮೆಗಾ ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಸೆಲ್ಫಿಗಾಗಿ ಇದರಲ್ಲಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಬ್ಯಾಟರಿ ಹಾಗೂ ಇತರೆ: ಈ ಫೋನ್‌ ಬ್ಯಾಟರಿ ವಿಚಾರದಲ್ಲೂ ಒಂದು ಹೆಜ್ಜೆ ಮುಂದಿದೆ. ಅಂದರೆ ಇದು 180W ಥಂಡರ್ ಚಾರ್ಜ್ ಬೆಂಬಲದೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದ್ದು, ಉಳಿದಂತೆ ಈ ಫೋನ್ ಬ್ಲೂಟೂತ್ ಆವೃತ್ತಿ 5.2, 5G NSA, ಜಿಪಿಎಸ್‌ ಮತ್ತು ವೈ-ಫೈ 802 ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಸ್ಟಿರಿಯೊ ಸ್ಪೀಕರ್‌ ಆಯ್ಕೆ, ಇನ್ ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.

200MP ಕ್ಯಾಮೆರಾ.. 3Dಡಿಸ್ಪ್ಲೇ.. ಇನ್‌ಫಿನಿಕ್ಸ್‌ನ ಈ ಫೋನ್‌ಗೆ ಬೃಹತ್‌ ರಿಯಾಯಿತಿ

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಆಫರ್‌ ವಿವರ: ಈಗ ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರೋಣ. 8GB RAM + 256GB ಸ್ಟೋರೇಜ್ ವೇರಿಯಂಟ್‌ಗೆ 29,999ರೂ.ಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಇದಕ್ಕೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಸೇಲ್‌ನಲ್ಲಿ (Flipkart Big Billion Sale) ರಿಯಾಯಿತಿ ನೀಡಲಾಗಿದೆ. ಈ ವೇಳೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನ್ ಅನ್ನು ಆರ್ಡರ್ ಮಾಡಿದರೆ 2,925ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ 24,000ರೂ.ಗಳ ವಿನಿಮಯ ಬೋನಸ್ ಸಹ ಲಭ್ಯ.

Best Mobiles in India

English summary
Infinix smartphone has been given huge discount in Flipkart Big Billion Days sale. Especially the Infinix Zero Ultra phone with 200MP camera sensor, 180W charging facility and 3D curved display is available at a cheap price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+