ಇನ್‌ಫಿನಿಕ್ಸ್‌ ಕಂಪನಿಯಿಂದ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

|

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗುರುತಿಸಿಕೊಂಡಿರುವ ಇನ್‌ಫಿನಿಕ್ಸ್‌ ಕಂಪನಿಯು ಕೆಲವು ಹೈ ಎಂಡ್ ಮಾದರಿಯ ಫೋನ್‌ಗಳಿಂದಲೂ ಗುರುತಿಸಿಕೊಂಡಿದೆ. ಕಂಪನಿಯು ಇದೀಗ ಇನ್‌ಫಿನಿಕ್ಸ್‌ ಜೀರೊ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ.áವುಗಳು ಕ್ರಮವಾಗಿ ಇನ್‌ಫಿನಿಕ್ಸ್‌ ಜೀರೊ X, ಇನ್‌ಫಿನಿಕ್ಸ್‌ ಜೀರೊ X ಪ್ರೊ ಮತ್ತು ಇನ್‌ಫಿನಿಕ್ಸ್‌ ಜೀರೊ X ನಿಯೋ ಆಗಿದೆ.

ಇನ್‌ಫಿನಿಕ್ಸ್‌ ಕಂಪನಿಯಿಂದ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

ಹೌದು, ಇನ್‌ಫಿನಿಕ್ಸ್‌ ಕಂಪನಿಯು ನೂತನವಾಗಿ ಇನ್‌ಫಿನಿಕ್ಸ್‌ ಜೀರೊ X, ಇನ್‌ಫಿನಿಕ್ಸ್‌ ಜೀರೊ X ಪ್ರೊ ಮತ್ತು ಇನ್‌ಫಿನಿಕ್ಸ್‌ ಜೀರೊ X ನಿಯೋ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಮೂರು ಫೋನ್‌ಗಳು ಪೆರಿಸ್ಕೋಪ್ ಲೆನ್ಸ್‌ ಮತ್ತು ಮೀಟಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಅನ್ನು ಪಡೆದಿದೆ. ಇನ್ನುಳಿದಂತೆ ಇನ್‌ಫಿನಿಕ್ಸ್‌ ಕಂಪನಿಯ ಇನ್‌ಫಿನಿಕ್ಸ್‌ ಜೀರೊ X, ಇನ್‌ಫಿನಿಕ್ಸ್‌ ಜೀರೊ X ಪ್ರೊ ಮತ್ತು ಇನ್‌ಫಿನಿಕ್ಸ್‌ ಜೀರೊ X ನಿಯೋ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇನ್‌ಫಿನಿಕ್ಸ್‌ ಜೀರೊ X ಫೀಚರ್ಸ್‌
ಇನ್‌ಫಿನಿಕ್ಸ್‌ ಜೀರೊ X ಫೋನ್‌ 6.67-ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 1,080x2,400 ಪಿಕ್ಸೆಲ್‌ಗಳು ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಡಿಸ್‌ಪ್ಲೇ AMOLED ಮಾದರಿಯಲ್ಲಿದ್ದು, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಪಡೆದಿದೆ. ಮೀಟಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಅನ್ನು ಪಡೆದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ನಲ್ಲಿದೆ. ಉಳಿದ ಎರಡು ಕ್ಯಾಮೆರಾಗಳು 8ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದ್ದು, 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಇನ್‌ಫಿನಿಕ್ಸ್‌ ಕಂಪನಿಯಿಂದ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

ಇನ್‌ಫಿನಿಕ್ಸ್‌ ಜೀರೊ X ಪ್ರೊ ಫೀಚರ್ಸ್‌
ಇನ್‌ಫಿನಿಕ್ಸ್‌ ಜೀರೊ X ಪ್ರೊ ಫೋನ್‌ 6.67-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, ಅದು 1,080x2,400 ಪಿಕ್ಸೆಲ್‌ಗಳು ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು AMOLED ಮಾದರಿಯಲ್ಲಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಸಹ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್, ಪಡೆದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಹೊಂದಿದೆ. 128 ಜಿಬಿ ಮತ್ತು 256 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಆಯ್ಕೆಗಳನ್ನು ಒದಗಿಸಿದೆ. ಜೊತೆಗೆ ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ಇನ್‌ಫಿನಿಕ್ಸ್‌ ಕಂಪನಿಯಿಂದ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

ಇನ್‌ಫಿನಿಕ್ಸ್‌ ಜೀರೊ X ನಿಯೋ ಫೀಚರ್ಸ್‌
ಇನ್‌ಫಿನಿಕ್ಸ್‌ ಜೀರೊ X ನಿಯೋ ಫೋನ್ 6.78-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, ಅದು 1,080x2,460 ಪಿಕ್ಸೆಲ್‌ಗಳು ರೆಸಲ್ಯೂಶನ್ ಪಡೆದಿದೆ. ಡಿಸ್‌ಪ್ಲೇಯ ಅನುಪಾತವು 20.5: 9 ಆಗಿದ್ದು, 90Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಪಡೆದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಹೊಂದಿದೆ. ಈ ಫೋನ್ ಸಹ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದ್ದು, ಡ್ಯುಯಲ್ ಎಲ್ಇಡಿ ಫ್ಲ್ಯಾಷ್ ಇದೆ. 128GB ಸ್ಟೋರೇಜ್ ಆಯ್ಕೆ ಇದ್ದು, ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ಇನ್‌ಫಿನಿಕ್ಸ್‌ ಜೀರೊ X, ಇನ್‌ಫಿನಿಕ್ಸ್‌ ಜೀರೊ X ಪ್ರೊ ಮತ್ತು ಇನ್‌ಫಿನಿಕ್ಸ್‌ ಜೀರೊ X ನಿಯೋ ಈ ಮೂರು ಫೋನ್‌ಗಳ ಬೆಲೆ ಇನ್ನು ಬಹಿರಂಗವಾಗಿಲ್ಲ. ಇನ್ನು ಜೀರೊ X ಫೋನ್ ನೆಬ್ಯುಲಾ ಬ್ಲ್ಯಾಕ್ ಮತ್ತು ಸ್ಟಾರಿ ಸಿಲ್ವರ್ ಬಣ್ಣಗಳಲ್ಲಿ, ಜೀರೊ X ಪ್ರೊ ನೆಬುಲಾ ಬ್ಲಾಕ್, ಸ್ಟಾರಿ ಸಿಲ್ವರ್ ಮತ್ತು ಟಸ್ಕನಿ ಬ್ರೌನ್ ಬಣ್ಣಗಳಲ್ಲಿ ಹಾಗೂ ಜೀರೊ X ನಿಯೋ ಫೋನ್ ನೆಬುಲಾ ಬ್ಲಾಕ್, ಸ್ಟಾರಿ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಬ್ಯವಾಗಲಿದೆ.

Most Read Articles
Best Mobiles in India

English summary
Infinix Zero X, Zero X Pro, Zero X Neo With MediaTek Helio G95 SoC Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X