Subscribe to Gizbot

ಇನ್ಫೊಸಿಸ್ 13 ಸಾವಿರ ಕೋಟಿ ಷೇರು ಮರುಖರೀದಿ!.ನೀಲೇಕಣಿ, ಮೂರ್ತಿಗೆ ಸಿಗುವ ಆದಾಯ ಇಷ್ಟು!!

Written By:

13 ಸಾವಿರ ಕೋಟಿಗಳಷ್ಟು ಮೊತ್ತದ ಷೇರು ಮರು ಖರೀದಿಗೆ ಟೆಕ್ ದೈತ್ಯ ಇನ್ಫೊಸಿಸ್ ನಿರ್ಧರಿಸಿದ್ದು, ಷೇರು ಮರು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಸಂಸ್ಥೆಯ ಪ್ರಸ್ತುತ ಅಧ್ಯಕ್ಷ ನೀಲೇಕಣಿ ಹಾಗೂ ಮಾಜಿ ಅಧ್ಯಕ್ಷರಾದ ಎನ್‌. ಆರ್‌. ನಾರಾಯಣ ಮೂರ್ತಿ ಅವರ ಕುಟುಂಬಗಳು ಸೇರಿ ಒಟ್ಟಾಗಿ 1300 ಕೋಟಿಗೂ ಹೆಚ್ಚು ಆದಾಯ ಪಡೆಯಲಿವೆ!!

ನಂದನ್ ನೀಲೇಕಣಿ ಅವರೊಬ್ಬರೇ ತಮ್ಮ 21 ಲಕ್ಷ ಷೇರುಗಳಿಗೆ ಪ್ರತಿಯಾಗಿ 241 ಕೋಟಿ ರೂಗಳನ್ನು ಪಡೆಯುತ್ತಿದ್ದರೆ, ಅವರ ಕುಟುಂಬದ ಒಟ್ಟು 58 ಲಕ್ಷ ಷೇರುಗಳನ್ನು ಸಂಸ್ಥೆಗೆ ಸಲ್ಲಿಸಲು ಮುಂದಾಗಿದೆ ಒಟ್ಟು 667 ಕೋಟಿಗಳ ಲಾಭ ಪಡೆಯಲಿದ್ದಾರೆ. ಸಂಸ್ಥೆಯಲ್ಲಿ ಈ ಕುಟುಂಬದ ಷೇರುಗಳ ಒಟ್ಟಾರೆ ಮೊತ್ತವು ಸದ್ಯಕ್ಕೆ 4,932 ಕೋಟಿ ರೂ.ಗಳಷ್ಟಿದೆ.

ಇನ್ಫೊಸಿಸ್ 13 ಸಾವಿರ ಕೋಟಿ ಷೇರು ಮರುಖರೀದಿ!.ನೀಲೇಕಣಿ, ಮೂರ್ತಿಗೆ ಸಿಗುವ ಆದಾಯ?

ಇನ್ನು ಎನ್‌. ಆರ್‌. ನಾರಾಯಣ ಮೂರ್ತಿ ಅವರ ಕುಟುಂಬ 54.18 ಲಕ್ಷ ಷೇರುಗಳನ್ನು ಸಂಸ್ಥೆಗೆ ಸಲ್ಲಿಸಲು ನಿರ್ಧರಿಸಿದ್ದು, ಮೂರ್ತಿ ಅವರ ಮಗಳು ಅಕ್ಷತಾ ಅವರು ಕೂಡ 20 ಲಕ್ಷ ಷೇರುಗಳನ್ನು ಸಂಸ್ಥೆಗೆ ಮರಳಿಸಲಿದ್ದಾರೆ ಇದರಿಂದ ಮೂರ್ತಿ ಕುಟುಂಬದ ಸಂಪತ್ತು 623 ಕೋಟಿಗಳಷ್ಟು ಹೆಚ್ಚಲಿದೆ. ಸಂಸ್ಥೆಯಲ್ಲಿ ಈ ಕುಟುಂಬದ ಷೇರುಗಳ ಒಟ್ಟಾರೆ ಮೌಲ್ಯವು 7,391 ಕೋಟಿಗಳಷ್ಟಿದೆ.!!

ಇನ್ಫೊಸಿಸ್ 13 ಸಾವಿರ ಕೋಟಿ ಷೇರು ಮರುಖರೀದಿ!.ನೀಲೇಕಣಿ, ಮೂರ್ತಿಗೆ ಸಿಗುವ ಆದಾಯ?

ಇನ್ನು 2011 ರಿಂದ 2014ರವರೆಗೆ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಎಸ್‌.ಡಿ. ಶಿಬುಲಾಲ್ ಅವರು ತಮ್ಮ ಪಾಲಿನ ಯಾವುದೇ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿಲ್ಲ.ಇನ್ನು ಪ್ರವರ್ತಕರು ಷೇರು ಮರು ಖರೀದಿಯಲ್ಲಿ ಭಾಗಿಯಾಗಲಿರುವುದರಿಂದ ಕಂಪೆನಿಯಲ್ಲಿ ಅವರ ಬಂಡವಾಳದ ಪ್ರಮಾಣವು ಶೇ 8.23ಕ್ಕೆ ಇಳಿಯಲಿದೆ.!!

ಓದಿರಿ: ದೀಪಾವಳಿ ಹಬ್ಬಕ್ಕೆ 'ಜಿಯೋ' ಭರ್ಜರಿ ಗಿಫ್ಟ್!..399ಕ್ಕೆ ಡಬಲ್ ಆಫರ್!!

English summary
Infosys promoters including Murthy, Nilekani offer shares worth Rs 2,038 crore for buyback.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot