Subscribe to Gizbot

ದೀಪಾವಳಿ ಹಬ್ಬಕ್ಕೆ 'ಜಿಯೋ' ಭರ್ಜರಿ ಗಿಫ್ಟ್!..399ಕ್ಕೆ ಡಬಲ್ ಆಫರ್!!

Written By:

ದೀಪಾವಳಿ ಹಬ್ಬಕ್ಕೆ ರಿಲಾಯನ್ಸ್ ಜಿಯೋ ಭರ್ಜರಿ ಗಿಫ್ಟ್ ಒಂದನ್ನು ನೀಡಿ ಮತ್ತೆ ಗಮನ ಸೆಳೆದಿದೆ.! ಹೌದು, ದಿಪಾವಳಿ ಸಂಭ್ರಮದ ವಿಶೇಷವಾಗಿ, ಜಿಯೋ ಹೊಸದಾದ ಧನ್ ಧನಾ ಧನ್ ಆಫರ್ ಅನ್ನು ಘೋಷಿಸಿದ್ದು, ಈ ಹೊಸ ಆಫರ್ ಮೂಲಕ 399ರೂಪಾಯಿ ರೀಚಾರ್ಜ್ ಮೇಲೆ ಭರ್ಜರಿ 100% ಪರ್ಸೆಂಟ್ ಕ್ಯಾಶ್‌ಬ್ಯಾಕ್ ನೀಡಿದೆ.!!

ಅಕ್ಟೋಬರ್ 12 ರಿಂದ ಆರಂಭವಾಗುವ ಈ ಸೀಮಿತ ಧನ್ ಧನಾ ಧನ್ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಜಿಯೊವಿನ ಗ್ರಾಹಕ ದೀಪಾವಳಿಯ ಈ ಆಫರ್ ಅನ್ನು ಎಂಜಾಯ್ ಮಾಡಬಹುದು. ಹಾಗಾದರೆ, ಜಿಯೋ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ? ಮತ್ತು ಈ ಆಫರ್ ಬಗ್ಗೆ ಪೂರ್ಣಡೀಟೆಲ್ಸ್ ಅನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಲ್ಲರಿಗೂ ಇದೆ 100% ಕ್ಯಾಶ್‌ಬ್ಯಾಕ್!!

ಎಲ್ಲರಿಗೂ ಇದೆ 100% ಕ್ಯಾಶ್‌ಬ್ಯಾಕ್!!

ಜಿಯವಿನ ಪ್ರತಿಯೊಬ್ಬ ಗ್ರಾಹಕನಿಗೂ ಕೂಡ ಜಿಯೋವಿನ ಈ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದೆ.!! ಜಿಯೋ ಈ ಬಗ್ಗೆ ಪ್ರಕಟಣೆ ಹೊರಡಿಸಿದದ್ದು ದಶಲಕ್ಷ ಗ್ರಾಹಕರಿಗೆ ದೀಪಾವಳಿ ಉಡುಗೊರೆ ಎಂದು ತಿಳಿಸಿದೆ. ಅಂದರೆ ಜಿಯೋವಿನ ಪ್ರತಿಯೋರ್ವ ಗ್ರಾಹಕನಿಗು ಈ ಆಫರ್‌ಗೆ ಲಭ್ಯ.!!

ಆರು ದಿನಗಳು ಮಾತ್ರ ಆಫರ್!!

ಆರು ದಿನಗಳು ಮಾತ್ರ ಆಫರ್!!

ಅಕ್ಟೋಬರ್ 12 ರಿಂದ ಜಿಯೋವಿನ ಈ ಹೊಸ ಆಫರ್ ಪ್ರಾರಂಭವಾಗಲಿದ್ದು, ಕೇವಲ ಆರುದಿನಗಳು ಮಾತ್ರ ಈ ಆಫರ್ ಲಭ್ಯವಿರಲಿದೆ.!! ಅಕ್ಟೋಬರ್ 12 ರಿಂದ ಶುರುವಾಗುವ ಈ ಆಫರ್ ಅಕ್ಟೋಬರ್ 18 ಕ್ಕೆ ಕೊನೆಗೊಳ್ಳಲಿದೆ.!!

Jio ಜದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
ಜಿಯೋ ಕ್ಯಾಶ್‌ಬ್ಯಾಕ್ ಹೇಗೆ?

ಜಿಯೋ ಕ್ಯಾಶ್‌ಬ್ಯಾಕ್ ಹೇಗೆ?

ಜಿಯೋವಿನ 399 ರೂಪಾಯಿ ರೀಚಾರ್ಜ್ ಮಾಡಿಸಿದರೆ ಮೂರು ತಿಂಗಳು ಅನ್‌ಲಿಮಿಟೆಡ್ ಸೇವೆ ಹಾಗೂ 400ರೂಪಾಯಿಗಳ ಕ್ಯಾಶ್‌ಬ್ಯಾಕ್ ಲಭ್ಯವಿದೆ.!! ಈ ಕ್ಯಾಶ್‌ಬ್ಯಾಕ್ ನಿಮಗೆ ಹಣದ ರೂಪದಲ್ಲಿ ದೊರೆಯದೆ ವೋಚರ್‌ಗಳ ರೂಪದಲ್ಲಿ ದೊರೆಯಲಿದೆ.!!

8 ವೋಚರ್‌ಗಳು 400 ರೂಪಾಯಿ!!

8 ವೋಚರ್‌ಗಳು 400 ರೂಪಾಯಿ!!

399 ರೂಪಾಯಿ ರೀಚಾರ್ಜ್ ಮಾಡಿಸಿದ ಹಣ ನಿಮಗೆ ಹಣದ ರೂಪದಲ್ಲಿ ದೊರೆಯದೆ, 50 ರೂಪಾಯಿಗಳ 8 ವೋಚರ್‌ಗಳ ರೂಪದಲ್ಲಿ ದೊರೆಯುತ್ತದೆ. ಈ ವೋಚರ್‌ಗಳನ್ನು ಜಿಯೋ ಆಪ್‌ ಮೂಲಕ ಪಡೆಯಬಹುದಾಗಿದ್ದು, ಈ ವೋಚರ್‌ಗಳನ್ನು ನೀವು ಇತರ ಆಫರ್‌ಗಳಿಗೆ ಬಳಕೆ ಮಾಡಬಹುದು.!!

ಮತ್ತೆ ಕಡಿಮೆ ಬೆಲೆಗೆ ಜಿಯೋ!!

ಮತ್ತೆ ಕಡಿಮೆ ಬೆಲೆಗೆ ಜಿಯೋ!!

ಈಗಾಗಲೇ ಮೊಬೈಲ್ ಕಂಪೆನಿಗಳ ಇಂಟರ್‌ಕನೆಕ್ಟ್ ಚಾರ್ಜ್ ಬೆಲೆ ಕಡಿಮೆಯಾಗಿರುವುದರಿಂದ ಜಿಯೋ ಮತ್ತಷದಟು ಕಡಿಮೆ ಬೆಲೆಗೆ ತನ್ನ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡಲಿದೆ.! ಜಿಯೋ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುಂದಿನ ಆಫರ್‌ಗಳು ಮತ್ತಷ್ಟು ಪರಿಣಾಮಕಾರಿಯಾಗಿರಲಿವೆ ಎಂದು ತಿಳಿಸಿದೆ.!!

ಓದಿರಿ:ಬಳಕೆದಾರರ ಎಲ್ಲಾ ಮಾಹಿತಿ ಕದಿಯುತ್ತಿದೆ ಚೀನಾದ 'ಒನ್‌ಪ್ಲಸ್' ಮೊಬೈಲ್ ಕಂಪೆನಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jio giving 100 per cent cashback on recharge of Rs 399. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot