ಇನ್ಫೊಸಿಸ್ ಆದಾಯ ಏರಿಕೆ!..ಮತ್ತೆ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಮೂರ್ತಿ!!
ನಾನು ಕೇಳಿದ್ದ ಪ್ರಶ್ನೆಗಳಿಗೆ ನಿರ್ದೇಶಕ ಮಂಡಳಿಯು ಸಮಾಧಾನಕರ ಉತ್ತರ ನೀಡಿಲ್ಲ. ಅದರ ನಡವಳಿಕೆಯಲ್ಲಿ ಪಾರದರ್ಶಕತೆ ಕಂಡು ಬಂದಿಲ್ಲ. ಇದರಿಂದ ನನಗೆ ನಿರಾಶೆಯಾಗಿದೆ ಎಂದು ಮೂರ್ತಿ ತಿಳಿಸಿದ್ದಾರೆ.
ಎಲ್ಲಾ ಅಡೆತಡೆಗಳನ್ನು ಮುರಿದು ಮತ್ತೆ ಮೇಲೆದ್ದಿರುವ ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆ ಇನ್ಫೊಸಿಸ್ ಸಂಸ್ಥೆ ದ್ವಿತೀಯ ತ್ರೈಮಾಸಿಕದಲ್ಲಿ 3,726 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟಾರೆ ವರಮಾನವು ಶೇ 1.4ರಷ್ಟು ಹೆಚ್ಚಳಗೊಂಡು 17,567 ಕೋಟಿ ಗಳಿಗೆ ತಲುಪಿದೆ.!!
ಇನ್ಫೊಸಿಸ್ ಸಂಸ್ಥೆಯ ಕಳೆದ ವರ್ಷದ ಈ ಅವಧಿಯಲ್ಲಿನ 3,606 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.3ರಷ್ಟು ಏರಿಕೆ ದಾಖಲಾಗಿದೆ. ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರ ಮಾರ್ಗದರ್ಶನದಲ್ಲಿ ಇನ್ಫೊಸಿಸ್ ಉತ್ತಮ ದಾಪುಗಾಲನ್ನು ಹಾಕುತ್ತಿದ್ದು, ವರಮಾನ ಹೆಚ್ಚಳದ ಅಂದಾಜನ್ನು ಶೇ 6.5-8.5 ದಿಂದ ಶೇ 5.5-6.5ಕ್ಕೆ ತಗ್ಗಿಸಲಾಗಿದೆ.!!

ಇನ್ಫೊಸಿಸ್ ಸಹ ಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಪಾಲಿಸುವ ವಿಷಯದಲ್ಲಿ ಪಾರದರ್ಶಕತೆ ತೋರದ ಹೊಸ ನಿರ್ದೇಶಕ ಮಂಡಳಿಯ ಧೋರಣೆಗೆ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.!!

ಮಾಜಿ ಸಿಎಫ್‌ಒ ರಾಜೀವ್ ಬನ್ಸಲ್ ಅವರಿಗೆ ಸೇವಾ ಒಪ್ಪಂದ ರದ್ದತಿ ಅನ್ವಯ ಗರಿಷ್ಠ ಮೊತ್ತದ ಪರಿಹಾರ ಒದಗಿಸಿರುವುದಕ್ಕೆ ಸಂಬಂಧಿಸಿದಂತೆ ನಾನು ಕೇಳಿದ್ದ ಪ್ರಶ್ನೆಗಳಿಗೆ ನಿರ್ದೇಶಕ ಮಂಡಳಿಯು ಸಮಾಧಾನಕರ ಉತ್ತರ ನೀಡಿಲ್ಲ. ಅದರ ನಡವಳಿಕೆಯಲ್ಲಿ ಪಾರದರ್ಶಕತೆ ಕಂಡು ಬಂದಿಲ್ಲ. ಇದರಿಂದ ನನಗೆ ನಿರಾಶೆಯಾಗಿದೆ ಎಂದು ತಿಳಿಸಿದ್ದಾರೆ.!

ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ, ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ರಾಜೀವ್ ಬನ್ಸಲ್ ಅವರಿಗೆ ಹೆಚ್ಚುವರಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದ ವಿವರಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದೂ ನಿರ್ದೇಶಕ ಮಂಡಳಿಯು ತಿಳಿಸಿದೆ.
ಓದಿರಿ: ಟೆಲಿಕಾಂ ಕಂಪೆನಿಗಳಿಗೆ ಸರ್ಕಾರದಿಂದ ಮತ್ತೊಂದು ಶಾಕ್!..ಗ್ರಾಹಕರಿಗೆ ವರದಾನ!!


Click it and Unblock the Notifications