ಟೆಲಿಕಾಂ ಕಂಪೆನಿಗಳಿಗೆ ಸರ್ಕಾರದಿಂದ ಮತ್ತೊಂದು ಶಾಕ್!..ಗ್ರಾಹಕರಿಗೆ ವರದಾನ!!

ಮೊಬೈಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಜಾಲದಲ್ಲಿ ಆಮೆಗತಿಯ ಇಂಟರ್‌ನೆಟ್‌ಗೆ ಶೀಘ್ರವೇ ಕೊನೆಗಾಲ ಬರಲಿದೆ.!!

|

ಗ್ರಾಹಕರಿಗೆ ಆಮೆಗತಿಯ ಇಂಟರ್‌ನೆಟ್‌ ಸೇವೆಯನ್ನು ನೀಡುವ ಟೆಲಿಕಾಂ ಕಂಪೆನಿಗಳಿಗೆ ಸರ್ಕಾರ ಶಾಕ್ ನೀಡಿದ್ದು, ಗ್ರಾಹಕರಿಗೆ ಕನಿಷ್ಠ ಎಂದರೂ 2 ಎಂಬಿಪಿಎಸ್‌ಗೆ ವೇಗದ ಇಂಟರ್‌ನೆಟ್ ಸಂಪರ್ಕ ಹೆಚ್ಚಿಸುವ ಪ್ರಕ್ರಿಯೆಗಳನ್ನು ಸರ್ಕಾರ ಆರಂಭಿಸಿದೆ.! ಹಾಗಾಗಿ, ಮೊಬೈಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಜಾಲದಲ್ಲಿ ಆಮೆಗತಿಯ ಇಂಟರ್‌ನೆಟ್‌ಗೆ ಶೀಘ್ರವೇ ಕೊನೆಗಾಲ ಬರಲಿದೆ.!!

ಡಿಜಿಟಲ್ ಯುಗದಲ್ಲಿ ವೇಗದ ಇಂಟರ್‌ನೆಟ್‌ ಸೇವೆ ಬಹಳ ಪ್ರಮುಖವಾಗಿದ್ದು, ಈ ಹಂತದಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಳ ಅತೀ ಅಗತ್ಯವಾಗಿದೆ. ಡಿಜಿಟಲ್‌ ಇಂಡಿಯಾ ಯೋಜನೆಗಳು, ಡಿಜಿಟಲ್‌ ಪಾವತಿಯ ಪ್ರಯತ್ನಗಳು ಮತ್ತು 5ಜಿ ಇವೆಲ್ಲವೂ ಇಂಟರ್‌ನೆಟ್‌ ವೇಗ ಹೆಚ್ಚಳದ ಅನಿವಾರ್ಯತೆಯ ಹೆಚ್ಚಿಸಿವೆ ಎಂದು ಸರ್ಕಾರ ಹೇಳಿದೆ.! ಹಾಗಾದರೆ, ಸರ್ಕಾರದ ಈ ನೀತಿಯಿಂದ ಗ್ರಾಹಕರಿಗೆ ಆಗಬಹುದಾದ ಅನುಕೂಲಗಳು ಯಾವುವು? ಟೆಲಿಕಾಂಗಳಿಗೆ ಏನು ಕಷ್ಟ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಮೆಗತಿಯ ಇಂಟರ್‌ನೆಟ್‌ಗೆ ಬ್ರೇಕ್!!

ಆಮೆಗತಿಯ ಇಂಟರ್‌ನೆಟ್‌ಗೆ ಬ್ರೇಕ್!!

ಇಂಟರ್‌ನೆಟ್‌ ಮೂಲಕವೇ ಎಲ್ಲ ವ್ಯವಹಾರಗಳನ್ನೂ ನಡೆಸುವ ಕಾಲದಲ್ಲಿ ನಾವಿದ್ದೇವೆ. ಆದರೆ ಅದಕ್ಕೆ ತಕ್ಕಂತೆ ವೇಗದ ಮತ್ತು ಗುಣಮಟ್ಟದ ಸಂಪರ್ಕ ಸಿಗುತ್ತಿಲ್ಲ. ಇನ್ನು ನಿಧಾನಗತಿಯ ಇಂಟರ್‌ನೆಟ್‌ ಸಂಪರ್ಕದಿಂದ ಜನತೆ ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು,ಹಾಗಾಗಿ, ಆಮೆಗತಿಯ ಇಂಟರ್‌ನೆಟ್‌ಗೆ ಬ್ರೇಕ್ ಬೀಳಲಿದೆ.!!

ಸ್ಪೀಡ್ ಇಂಟರ್‌ನೆಟ್ ಅನಿವಾರ್ಯ!!

ಸ್ಪೀಡ್ ಇಂಟರ್‌ನೆಟ್ ಅನಿವಾರ್ಯ!!

ಭಾರತ ಸಂಪೂರ್ಣ ಡಿಜಿಟಲ್‌ ಅರ್ಥವ್ಯವಸ್ಥೆಯತ್ತ ಸಾಗುತ್ತಿದ್ದು, ಈ ಹಂತದಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಳ ಅಗತ್ಯವಾಗಿದೆ. ಡಿಜಿಟಲ್‌ ಪಾವತಿ, ಡಿಜಿಟಲ್ ಸೇವೆಗಳೆಲ್ಲವೂ ಇಂಟರ್‌ನೆಟ್‌ ವೇಗ ಹೆಚ್ಚಳದ ಅನಿವಾರ್ಯತೆಯನ್ನು ಹೆಚ್ಚಿಸಿದ್ದು, ಸರ್ಕಾರದ ಈ ಕ್ರಮ ಬಹಳ ಮುಖ್ಯವಾಗಿದೆ.!!

2 ಎಂಬಿಪಿಎಸ್ ವೇಗ ಮಾತ್ರ ಸಾಕೇ?

2 ಎಂಬಿಪಿಎಸ್ ವೇಗ ಮಾತ್ರ ಸಾಕೇ?

ಟ್ರಾಯ್‌ ಶಿಫಾರಸು ಮಾಡಿರುವ 2 ಎಂಬಿಪಿಎಸ್‌ ವೇಗದ ಇಂಟರ್‌ನೆಟ್‌ ಡಿಜಿಟಲ್ ಭಾರತಕ್ಕೆ ಸಾಕಾಗುತ್ತದೆಯೇ? ಎಂಬ ಪ್ರಶ್ನೆಗೆ, 'ಇಂಟರ್‌ನೆಟ್‌ನಲ್ಲಿ 2 ಎಂಬಿಪಿಎಸ್ ಪ್ರಾಥಮಿಕ ಕನಿಷ್ಠ ವೇಗ. ಹಾಗಾಗಿ, ಅದನ್ನು ನಾವು ಕಡ್ಡಾಯಗೊಳಿಸಲಿದ್ದೇವೆ. ಅದಕ್ಕಿಂತ ಕಡಿಮೆ ವೇಗ ಇರುವಂತಿಲ್ಲ' ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರರಾಜನ್ ಹೇಳಿದ್ದಾರೆ.!!

 ಗ್ರಾಹಕರಿಗೆ ಏನು ಲಾಭ?

ಗ್ರಾಹಕರಿಗೆ ಏನು ಲಾಭ?

ಇಂಟರ್‌ನೆಟ್‌ ಮೂಲಕವೇ ಎಲ್ಲ ವ್ಯವಹಾರಗಳನ್ನೂ ನಡೆಸುವ ಕಾಲದಲ್ಲಿ ಟ್ರಾಯ್‌ ಶಿಫಾರಸು ಮಾಡಿರುವ 2 ಎಂಬಿಪಿಎಸ್‌ ವೇಗದ ಇಂಟರ್‌ನೆಟ್‌ ಗ್ರಾಹಕರಿಗೆ ವರದಾನವಾಗಲಿದೆ. ಕಡಿಮೆ ಇಂಟರ್‌ನೆಟ್ ವೇಗದಿಂದ ಗ್ರಾಹಕರು ಅನುಭವಿಸಿದ್ದ ತೊಂದರೆಗಳಿಗೆಲ್ಲ ಇನ್ಮುಂದೆ ಬ್ರೇಕ್ ಬೀಳಲಿದೆ.!! 2 ಎಂಬಿಪಿಎಸ್ ವೇಗದಲ್ಲಿ ಎಲ್ಲಾ ಆನ್‌ಲೈನ್ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.!!

ಟೆಲಿಕಾಂಗಳಿಗೆ ಶಾಕ್ ಏಕೆ ?

ಟೆಲಿಕಾಂಗಳಿಗೆ ಶಾಕ್ ಏಕೆ ?

ಟೆಲಿಕಾಂ ಕಂಪನಿಗಳು ಇಂಟರ್‌ನೆಟ್‌ ವೇಗ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿವೆ. 2ಜಿ/3ಜಿ ಬ್ಯಾಂಡ್‌ಗಳಲ್ಲಿ ಪ್ರತಿ ಆಪರೇಟರ್‌ಗೂ ಲಭ್ಯವಿರುವ ತರಂಗಗುಚ್ಛಗಳು ಸೀಮಿತವಾಗಿವೆ ಎಂಬುದು ಅವುಗಳು ಕಳವಳ. ಇನ್ನು ದೇಶಾದ್ಯಂತ 4ಜಿ ಜಾಲವನ್ನು ನಿರ್ಮಿಸುತ್ತಿರುವ ಹಂತದಲ್ಲಿ ಈ ಸಮಸ್ಯೆ ಶುರುವಾಗಿದ್ದು, ಕಡಿಮೆ ಬೆಲೆಯಲ್ಲಿ 1GB 4G ಡೇಟಾ ನಂತರ ಕಡಿಮೆ ವೆಗದ ಡೇಟಾ ನೀಡುತ್ತಿರುವ ಟೆಲಿಕಾಂ ಕಂಪೆನಿಗಳಿಗೆ ಮತ್ತೊಂದು ಸಮಸ್ಯೆ ಶುರುವಾಗಿದೆ.!!

ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!

Best Mobiles in India

English summary
Govt looks to hike minimum net speed nearly four-fold. Days of low internet speed on mobile and broadband networks could soon be over.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X