2015 ರ ಲೇಟೆಸ್ಟ್ ಉತ್ಪನ್ನಗಳು ಬುದ್ಧಿವಂತರಿಗೆ ಮಾತ್ರ!

  By Suneel
  |

  ಪ್ರತಿದಿನ ಹೊಸ ಹೊಸ ನಿರೀಕ್ಷೆಗಳನ್ನೇ ಬಯಸುವ ಜನರಿಗೆ ಸಮಧಾನ ಮಾಡುವ ಕ್ಷೇತ್ರ ಏನಾದ್ರು ಇದ್ರೆ ಅದು ಬಹುಶಃ ತಂತ್ರಜ್ಞಾನ ಕ್ಷೇತ್ರ ಎಂದರೆ ತಪ್ಪಾಗಲಾರದು. ಹೌದು ಈ ವಿಷಯ ನೂರಕ್ಕೆ ನೂರು ಸತ್ಯ. ಅದಕ್ಕೆ ಉದಾಹರಣೆಯಾಗಿ ನಾವು ಈ ಲೇಖನದಲ್ಲಿ 2015 ರಲ್ಲಿ ಆವಿಷ್ಕಾರಗೊಂಡ ಹಲವು ಅದ್ಭುತ ವಸ್ತುಗಳನ್ನು ಪರಿಚಯಿಸುತ್ತಿದೇವೆ. ಅವುಗಳು ಈ ಕೆಳಗಿನಂತಿವೆ.

  ಓದಿರಿ: ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬರಿಸಿಯರ್

  ಹೌದು. ಇದು ನಿಮ್ಮನ್ನು ಕಾಫಿ ಕುದಿಸುವ ಸೌಂಡಿನಿಂದ ಅಲಾರಾಂ ರೀತಿಯಲ್ಲಿ ಎಬ್ಬಿಸಿ, ಕಾಫಿ ತಯಾರಿ ಮಾಡಿ ಕೊಡುತ್ತದೆ. ಜಗತ್ತಿನಲ್ಲೇ ಮೊದಲ ಉತ್ತಮ ಅಲಾರಾಂ ಗಡಿಯಾರವಾಗಿದೆ.

  ಕುಮುಲಸ್- ಪ್ಯಾರಸಾಲ್

  ಈ ಮೋಡದ ರೀತಿಯ ಛತ್ರಿಯು ಸೂರ್ಯನ ಕಿರಣಗಳು ಪ್ರಕಾಶಮಾನವಾದ ನಂತರದಲ್ಲಿ ಉಬ್ಬಿಕೊಳ್ಳುತ್ತದೆ. ಪ್ರಪಂಚದಲ್ಲಿ ಇಂತಹ ತಂತ್ರಜ್ಞಾನ ಅದ್ಭುತಗಳು ಮನಸ್ಸಿಗೆ ಆಹ್ಲಾದಕರ ನೀಡುವುದರಲ್ಲಿ ಸಂಶಯವಿಲ್ಲ.ಹಾಗೂ ಒಂದೇ ಭಾರಿ ಉಬ್ಬಿಕೊಳ್ಳುತ್ತವೆ.

  ಮಾರ್ಸ್‌ ಕ್ರೇಜಿಬೇಬಿ

  ಬ್ಲೂಟೂತ್ ಸ್ಪೀಕರ್‌ ತೇಲುವಿಕೆ ವಿಶೇಷ ಲಕ್ಷಣವಾಗಿದೆ. ವಾಸ್ತವವಾಗಿ ಇದು 360 ಡಿಗ್ರಿಯ ಧ್ವನಿಯು ಸಬ್‌ ವೂಫರ್‌ ಚಾರ್ಜಿಂಗ್ ಸ್ಟೇಷನ್‌ ಶಬ್ಧ ತರಂಗ ಹೀರುವಿಕೆಯಿಂದ ಪ್ರಾಯೋಗಿಕವಾಗಿ ತೇಲಲು ಕಾರಣವಾಗಿದೆ. ಅಲ್ಲದೆ ಇದು ಸುಮಧುರ ಸಂಗೀತ ಶಬ್ಧವನ್ನು ಉಂಟುಮಾಡುತ್ತದೆ.

  ಸೈಬೀಜ್‌

  ಸಾಮಾನ್ಯ ಕೂಲರ್ ನಾವು ಕುಡಿಯುವ ಪಾನೀಯಗಳನ್ನು ತಂಪು ಮಾಡುತ್ತವೆ. ಆದರೆ ಇದು ಬೇಸಿಗೆ ಕಾಲದಲ್ಲಿಯು ಸಹ ನಮ್ಮನ್ನು ತಂಪು ಮಾಡುವುದಲ್ಲದೆ ಪಾನೀಯಗಳನ್ನು ತಂಪು ಮಾಡುತ್ತದೆ.

  ಬ್ಲೂಸ್ಮಾರ್ಟ್‌

  ಇದನ್ನು ನೀವು ನಿಮ್ಮ ಮೊಬೈಲ್‌ನಿಂದ ನಿಯಂತ್ರಿಸಬಹುದಾಗಿದೆ. ಬಾಸ್ ರೀತಿಯಲ್ಲಿ ನೀವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಆದರೆ ಜೊತೆಯಲ್ಲಿ ಕೊಂಡೊಯ್ಯಬೇಕು ಅಷ್ಟೆ.

  ಯಾಕ್‌ಫಿಸ್

  ಇದು ಮೊಟ್ಟೆಯನ್ನು ಅದರ ಹೊರಕವಚದಿಂದ ಬೇರ್ಪಡಿಸುತ್ತದೆ.

  ಸ್ಮಾರ್ಟ್‌ ಇಯರ್‌ಪ್ಲಗ್ಸ್

  ನಿದ್ರೆ ಸಮಯದಲ್ಲಿ ನಿಮ್ಮ ಪಕ್ಕದವರ ಗೊರಕೆ ಸೌಂಡ್‌ ಕೇಳಲು, ಅಥವಾ ಗಂಡನ ಗೊರಕೆ ಸೌಂಡ್‌ ಕೇಳಲು ನೀವು ಕಂಡಿತ ಬಯಸುವುದಿಲ್ಲ. ಆದರೆ ಅಲಾರಾಂ ಹಾಗು ತುರ್ತುಕರೆಗಳ ಬಗ್ಗೆ ನಿಮಗೆ ಸೌಂಡ್ ಅಗತ್ಯ ಅಲ್ಲವೇ. ಅಂತಹ ಕಾರ್ಯಗಳನ್ನು ನಿರ್ವಹಿಸಲೇ ಈ ಸ್ಮಾರ್ಟ್‌ ಇಯರ್‌ಪ್ಲಗ್ಸ್.

  ರಿಟಾಟ್‌

  ರಿಟಾಟ್ ಒಂದು ತಂತ್ರಜ್ಞಾನದ ವಿಸ್ಮಯ ಎಂದರೆ ತಪ್ಪಾಗಲಾರದು. ಟೈಮ್‌, ಇಮೇಲ್‌, ಸಂದೇಶಗಳು, ಕ್ಯಾಲೆಂಡರ್‌ ಹಾಗೂ ಇತರ ಹಲವು ಅಲರ್ಟ್ಸ್‌ಗಳನ್ನು ಇದು ನಿಮ್ಮ ಕೈಯಲ್ಲಿಯೇ ರೂಪಿಸುತ್ತದೆ.

  Avo

  ನೀವು ಫಿಸ್ ಟ್ಯಾಂಕ್‌ ಹೊಂದಿದ್ದೇ ಆದಲ್ಲಿ, ಅದಕ್ಕೆ ಸ್ವನಿರ್ಮಲಗೊಳಿಸುವ Avo ಅಳವಡಿಸಿ

  ಕಕೂನ್ ( Cocoon)

  ಈ ಚಿತ್ರದಲ್ಲಿರುವ ಗ್ಯಾಜೆಟ್‌ ನೋಡಲು ಸುಂದರವಾಗಿದೆ. ಅಷ್ಟೇ ಅಲ್ಲದೆ, ನಿಮ್ಮ ಮನೆಯನ್ನು ಒಂದು ಚುರುಕಾದ ನಾಯಿಗಿಂತ ಹೆಚ್ಚಾಗಿ ಕಾಯಬಲ್ಲದು. ಇದು ಮನೆ ಗೋಡೆ, ಬಾಗಿಲುಗಳ ಮೂಲಕವು ಕಾಯುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In this article we can see the Insanely Clever Products That Came Out In 2015.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more