ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

Written By:

ನಾವು ಸಾಮಾಜಿಕವಾಗಿ ಆರ್ಥಿಕವಾಗಿ ತಾಂತ್ರಿಕವಾಗಿ ಎಷ್ಟೇ ಪ್ರಗತಿಯನ್ನು ಹೊಂದಿದ್ದರೂ ಇಂದಿನ ದುಬಾರಿ ಯುಗದಲ್ಲಿ ಶಿಕ್ಷಣ ಮಾತ್ರ ಗಗನ ಕುಸುಮವಾಗಿಬಿಟ್ಟಿದೆ. ಬಡತನದ ಭೂತ ಬೆನ್ನುಹತ್ತಿರುವವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೈಲಾಗದವರಿಗೆ ಕಬ್ಬಿಣದ ಕಡಲೆಯಾಗಿಬಿಟ್ಟಿದೆ.

ಓದಿರಿ:ತಂತ್ರಜ್ಞಾನದ ಮಾರ್ಪಾಡು ಅಂದು ಇಂದು

ಆದರೆ ಫೇಸ್‌ಬುಕ್ ತಾಣ ಕಲಿಯುವ ತುಡಿತವನ್ನು ಹೊಂದಿರುವ ಬಾಲಕನ ಭವಿಷ್ಯವನ್ನೇ ಮಾರ್ಪಡಿಸಿದೆ. ಹೌದು ರಸ್ತೆಯಲ್ಲೇ ತನ್ನ ಶಾಲಾ ಕೆಲಸವನ್ನು ಮಾಡುತ್ತಿದ್ದ 9 ವರ್ಷದ ಡೇನಿಯಲ್ ಕೆಬ್ರೇರಿಗೆ ಬದುಕಿನ ಆಶಾಕಿರಣವಾಗಿ ಬೆಂಬಲವನ್ನು ನೀಡಿದೆ. ಸಾಮಾಜಿಕ ತಾಣದಲ್ಲಿ ಫೋಸ್ಟ್ ಮಾಡಲಾದ ಈ ಹುಡುಗನ ರಸ್ತೆ ಬದಿಯ ಹೋಮ್‌ವರ್ಕ್ ಚಿತ್ರಗಳು ಜಗತ್ತಿನ ಫೇಸ್‌ಬುಕ್ ಬಾಂಧವರ ಮನಕಲಿಕಿ ಆತನ ಭವಿಷ್ಯವನ್ನೇ ಬದಲಾಯಿಸುವ ಮುನ್ನುಡಿಗೆ ಕಾರಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುರುಕು ಜೋಪಡಿ

ಮುರುಕು ಜೋಪಡಿ

ಬಡತನದಲ್ಲೇ ಕಳೆಯುತ್ತಿರುವ ಡೇನಿಯಲ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಮುರುಕು ಜೋಪಡಿಯಲ್ಲಿ ವಾಸವಾಗಿದ್ದಾನೆ.

ರಸ್ತೆಬದಿಯ ಬೀದಿ ದೀಪ

ರಸ್ತೆಬದಿಯ ಬೀದಿ ದೀಪ

ನಿತ್ಯವೂ ಶಾಲೆಯ ನಂತರ ಡೇನಿಯಲ್ ತನ್ನ ಪುಸ್ತಕಗಳ ಬ್ಯಾಗ್ ಅನ್ನು ಹೊತ್ತುಕೊಂಡು ರಸ್ತೆಬದಿಯ ಬೀದಿ ದೀಪದ ಕೆಳಗೆ ಶಾಲಾ ಕೆಲಸಗಳನ್ನು ಮಾಡುತ್ತಾನೆ.

ಶಾಲಾ ಹೋಮ್‌ವರ್ಕ್

ಶಾಲಾ ಹೋಮ್‌ವರ್ಕ್

ಈ ಬೀದಿಬದಿಯ ದೀಪದ ಬೆಳಕಿನಲ್ಲೇ ಈತನ ಶಾಲಾ ಹೋಮ್‌ವರ್ಕ್ ಚಟುವಟಿಕೆ ನಡೆದಿದೆ.

ಬದುಕನ್ನು ಬಂಗಾರ

ಬದುಕನ್ನು ಬಂಗಾರ

ಕೆಲವು ಕಾಲೇಜು ವಿದ್ಯಾರ್ಥಿಗಳು ಡೇನಿಯಲ್‌ನ ಬದುಕನ್ನು ಬಂಗಾರವಾಗಿಸಿದಂತಹ ಘಟನೆ ನಡೆದಿದೆ.

ಅಪ್‌ಲೋಡ್

ಅಪ್‌ಲೋಡ್

ಜಾಯ್ಸ್ ಗಿಲಾಸ್ ಎಂಬ ಫೇಸ್‌ಬುಕ್ ಬಳಕೆದಾರರು ಡೇನಿಯಲ್‌ನ ರಸ್ತೆಬದಿಯ ಹೋಮ್‌ವರ್ಕ್ ಚಿತ್ರಗಳನ್ನು ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ವಿದ್ಯುತ್ ಸಂಚಾರ

ವಿದ್ಯುತ್ ಸಂಚಾರ

ಮತ್ತು ಈ ಪೋಸ್ಟ್ ಅತ್ಯಧಿಕ ಪೋಸ್ಟ್, ಕಾಮೆಂಟ್ ಅಂತೆಯೇ ಶೇರ್‌ಗಳನ್ನು ಪಡೆದುಕೊಂಡು ಜಾಲತಾಣದಲ್ಲಿ ವಿದ್ಯುತ್ ಸಂಚಾರವನ್ನೇ ಉಂಟುಮಾಡಿದೆ.

ಲೇಖನ

ಲೇಖನ

ಇನ್ನು ಈ ಚಿತ್ರವನ್ನು ನೋಡಿದ ಸ್ಥಳೀಯ ಸುದ್ದಿ ಜಾಲವು ಆತನನ್ನು ಹುಡುಕಿ ಆತನ ಕುರಿತ ಲೇಖನವನ್ನು ಪ್ರಕಟಿಸಿದೆ.

ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲ

ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲ

ಉತ್ತಮ ವಿದ್ಯಾಭ್ಯಾಸವನ್ನು ಪಡೆದುಕೊಂಡು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲವಾಗಿರಬೇಕೆಂಬುದು ಈ ಪುಟ್ಟ ಹುಡುಗನ ಮನದಾಳದ ಆಸೆಯಾಗಿದೆ ಎಂಬುದಾಗಿ ಪತ್ರಿಕೆಗೆ ಈತ ಹೇಳಿಕೊಂಡಿದ್ದಾನೆ.

ಸ್ಕಾಲರ್‌ಶಿಪ್

ಸ್ಕಾಲರ್‌ಶಿಪ್

ಇನ್ನು ಡೇನಿಯಲ್ ಮತ್ತು ಆತನ ಸಹೋದರನಿಗೆ ವಿಶ್ವದಾದ್ಯಂತ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಸ್ಥಳೀಯ ರಾಜಕಾರಣಿಯೊಬ್ಬರು ವಿದ್ಯಾಭ್ಯಾಸ ಪೂರ್ಣಗೊಳಿಸಲು ಅನುಕೂಲಕರವಾದ ಸ್ಕಾಲರ್‌ಶಿಪ್ ಅನ್ನು ಡೇನಿಯಲ್‌ಗೆ ನೀಡಿದ್ದಾರೆ.

ದಾರಿದೀಪ

ದಾರಿದೀಪ

ಇನ್ನು ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿರುವ ಡೇನಿಯಲ್ ಕಥೆ ನಮಗೆಲ್ಲಾ ದಾರಿದೀಪವಾಗಿದೆ. ಬಡತನದ ಬೇಗೆಯಲ್ಲಿದ್ದರೂ ಅತ್ಯುತ್ತಮ ನೆಲೆಯಲ್ಲಿ ಜೀವನವನ್ನು ಕೊಂಡೊಯ್ಯಬೇಕೆಂಬ ಈತನ ಮಹತ್ವಾಕಾಂಕ್ಷೆ ಹೆಚ್ಚಿನ ಬಡ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This is the story of 9 year-old Daniel Cabrera. Like most kids, Daniel was having a hard time doing his homework, but not due to lack of determination or motivation.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot