ಭಾರತೀಯನ ಸಾಧನೆ: ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

By Ashwath
|

ಸುನಾಮಿ,ಭೂಕಂಪ ಸಂಭವಿಸಿ ದೇಶ ತತ್ತರಿಸಿ ಹೋದರು ಕೆಲವೇ ತಿಂಗಳಿನಲ್ಲಿ ನಮಗೇನು ಆಗಿಲ್ಲ,ನಮ್ಮ ದೇಶ ಪಾಕೃತಿಕ ವಿಕೋಪಗಳಿಗೆ ಹೆದರುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿದ ಜಪಾನ್‌,ಈಗ ಭೂಕಂಪ ಸಂಭವಿಸಿದರೂ ಕಡಿಮೆ ಪ್ರಮಾಣದ ಹಾನಿಯಾಗಬಹುದಾದ ಬಲೂನ್‌ ಸಭಾಂಗಣ ತಯಾರಿಸುವ ಮೂಲಕ ಮತ್ತೆ ಸುದ್ದಿಯಲ್ಲಿದೆ.

ಹೌದು.ವಿಶ್ವದ ಮೊದಲ ಬಲೂನ್‌ ಸಭಾಂಗಣವನ್ನು ಜಪಾನ್‌ ಅಭಿವೃದ್ಧಿ ಪಡಿಸಿದೆ.ಹೆಮ್ಮೆಯ ವಿಚಾರವೆನೆಂದರೆ ಈ ಬಲೂನ್‌ ಸಭಾಂಗಣದ ವಿನ್ಯಾಸದಲ್ಲೂ ಭಾರತಿಯರೊಬ್ಬರ ಕೈ ಚಳಕವಿದೆ. ಭಾರತೀಯ ಮೂಲದ ಇಂಗ್ಲೆಂಡ್‌ನಲ್ಲಿರುವ ಶಿಲ್ಪಿ ಅನೀಶ್ ಕಪೂರ್ ಮತ್ತು ಜಪಾನಿನ ವಾಸ್ತುಶಿಲ್ಪಿಅರಟ ಐಸೋಜೊಕಿ(arata isozaki)ಸೇರಿ ಅರ್ಕ್‌ ನೋವಾ(ark nova)ಹೆಸರಿನ ಸಭಾಂಗಣವನ್ನು ವಿನ್ಯಾಸಮಾಡಿ ನಿರ್ಮಿಸಿದ್ದಾರೆ. ಜಪಾನ್‌ನಿನ ಈಶಾನ್ಯ ಭಾಗದ ತೀರ ಪ್ರದೇಶ ಮತ್ಸ್‌ತುಶಿಮ(Matsushima)ಪಟ್ಟಣದಲ್ಲಿ ನಿರ್ಮಾಣವಾಗಿರುವ ಈ ಬಲೂನ್‌ ಸಭಾಂಗಣದಲ್ಲಿ ನಾಳೆಯಿಂದ ಅಕ್ಟೋಬರ್‌ 14ರವರೆಗೆ ಸಂಗೀತಾ ಕಾರ್ಯ‌ಕ್ರಮ ನಡೆಯಲಿದೆ.

ಐನೂರು ಜನರು ಕುಳಿತುಕೊಳ್ಳಬಹುದಾದ ಈ ವೃತ್ತಾಕಾರದ ಭವನವನ್ನು ಎಲಾಸ್ಟಿಕ್‌ ಮತ್ತು ವಿಶೇಷವಾದ ಪಾಲಿಸ್ಟರ್‌ ಬಟ್ಟೆಯಿಂದ ತಯಾರಿಸಲಾಗಿದೆ.ಸುಲಭವಾಗಿ ಮಡಚಿ ಸಾಗಿಸಬಹುದಾದ ಬಲೂನ್‌‌ 35 ಮೀಟರ್‍ ಅಗಲ,18 ಮೀಟರ್‍ಎತ್ತರವನ್ನು ಹೊಂದಿದೆ.

ಜಪಾನಿನ ಈಶಾನ್ಯ ಭಾಗದಲ್ಲಿರುವ ಈ ತೀರ ಪ್ರದೇಶದಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತಿರುತ್ತದೆ. ಇಲ್ಲಿ ಈ ಹಿಂದೆ 9.0 ತೀವೃತೆಯ ಭೂಕಂಪ ಸಂಭವಿಸಿದ್ದು, 2011 ಮಾರ್ಚ್‌ ಸುನಾಮಿಯಿಂದಾಗಿ 19 ಸಾವಿರ ಜನರು ಮೃತಪಟ್ಟಿದ್ದರು. ಹೀಗಾಗಿ ಇಲ್ಲಿ ದೊಡ್ಡ ಕಾರ್ಯ‌ಕ್ರಮವನ್ನು ಸಂಘಟಿಸುವುದು ಬಹಳ ಸಮಸ್ಯೆಯಾಗಿ ಕಾಡತೊಡಗಿತ್ತು. ಈ ಸಮಸ್ಯೆ ನಿವಾರಿಸಲು ಮಳೆಗೆ ಜಗ್ಗದ,ಭೂಕಂಪವಾದರೂ ಪ್ರಾಣಹಾನಿಯಾಗದ ಈ ಸಭಾಂಗಣವನ್ನು ಜಪಾನ್‌ ನಿರ್ಮಿಸಿದೆ.

ಇದನ್ನೂ ಓದಿ: ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

 ಜಪಾನ್‌ಲ್ಲೊಂದು ಭೂಕಂಪಕ್ಕೆ ಜಗ್ಗದ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ಭೂಕಂಪಕ್ಕೆ ಜಗ್ಗದ ಬಲೂನ್‌ ಸಭಾಂಗಣ


ಮುಂಬೈಯಲ್ಲಿ 1954ರಲ್ಲಿ ಜನಿಸಿದ ಅನೀಶ್‌ ಕಪೂರ್‌ 1970ರಲ್ಲಿ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಬಂದವರು ಅಲ್ಲಿಯೇ ನೆಲೆಸಿದ್ದಾರೆ. ಲಂಡನ್‌ ಒಲಿಂಪಿಕ್‌ ಪಾರ್ಕ್‌ನಲ್ಲಿರುವ ಅರ್ಸೆಲ್ಲರ್‌ ಮಿತ್ತಲ್‌ ವೀಕ್ಷಣಾ ಗೋಪುರ, ಚಿಕಾಗೋದಲ್ಲಿರುವ ಕ್ಲೌಡ್‌ಗೇಟ್‌ನ್ನು ಇವರು ನಿರ್ಮಿಸಿದ್ದಾರೆ. 1991ರಲ್ಲಿ ಇಂಗ್ಲೆಂಡ್‌ನ ಪ್ರಖ್ಯಾತ ಟರ್ನರ್‌ ಪ್ರಶಸ್ತಿಯನ್ನುಅನೀಶ್‌ ಕಪೂರ್‌ ಪಡೆದಿದ್ದಾರೆ.

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಅರ್ಕ್‌ ನೋವಾ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಅರ್ಕ್‌ ನೋವಾ ಸಭಾಂಗಣ

  ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

  ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಅರ್ಕ್‌ ನೋವಾ ಸಭಾಂಗಣ

 ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ

ಜಪಾನ್‌ಲ್ಲೊಂದು ವಿಶಿಷ್ಟ ಬಲೂನ್‌ ಸಭಾಂಗಣ


ಈ ark nova ಸಭಾಂಗಣದ ಪ್ರೊಜೆಕ್ಟ್‌ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಬಹುದು:www.designboom.com

ಅನೀಶ್‌ ಕಪೂರ್‌ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಬಹುದು:anishkapoor.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X