ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಖುಷಿ ಸಂಗತಿ!..ಸದ್ಯದಲ್ಲೇ ಈ ಫೀಚರ್ ನಿಮಗಾಗಿ!
ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಆಕರ್ಷಕ ಆಯ್ಕೆಗಳ ಮೂಲಕ ಬಳಕೆದಾರರ ಗಮನ ಸೆಳೆದಿದೆ. ಮುಖ್ಯವಾಗಿ ಇನ್‌ಸ್ಟಾಗ್ರಾಮ್ ರೀಲ್ ಫೀಚರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಇನ್‌ಸ್ಟಾಗ್ರಾಮ್ ರಚನೆಕಾರರಿಗೆ ಕಂಟೆಂಟ್ ಎಡಿಟ್ ಮಾಡಲು ಅನುಕೂಲಕರವಾಗುವಂತಹ ಕೆಲವು ಎಡಿಟಿಂಗ್ ಟೂಲ್ ಸೇರ್ಪಡೆ ಮಾಡಲು ಸಜ್ಜಾಗಿದೆ.
ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಹೊಸ ಫೀಚರ್ಸ್, ಎಡಿಟಿಂಗ್ ಟೂಲ್ ಫೀಲ್ಟರ್ ಸೇರಿದಂತೆ ಇನ್ನಷ್ಟು ಆಯ್ಕೆಗಳಲ್ಲಿ ಅಪ್‌ಡೇಟ್ ಮಾಡುವುದಾಗಿ ತಿಳಿಸಿದೆ. ಹೊಸದಾಗಿ ಫಿಲ್ಟರ್ ಆಯ್ಕೆ ಸೇರ್ಪಡೆ ಆಗಲಿದೆ. ಟೆಕ್ಸ್ಟ್ ಫಾಂಟ್ ಹಾಗೂ ಮತ್ತಷ್ಟು ಆಕರ್ಷಕ ಸೇವೆಗಳು ಸದ್ಯದಲ್ಲೇ ಇನ್‌ಸ್ಟಾಗ್ರಾಮ್ ಆಪ್‌ನಲ್ಲಿ ಕಾಣಬಹುದಾಗಿದೆ.

'ಇಂದು ನಾವು ರೀಲ್‌ಗಳು, ಫೀಡ್ ಫೋಟೋಗಳು ಮತ್ತು ಸ್ಟೋರಿಗಳಿಗೆ ಹಲವಾರು ಸುಧಾರಣೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಅಲ್ಲದೇ ನಿಮ್ಮ ಕಂಟೆಂಟ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಹೊಸ ಇನ್‌ಸೈಟ್ ಅನ್ನು ಹಂಚಿಕೊಳ್ಳುತ್ತಿದ್ದೇವೆ' ಎಂದು ಕಂಪನಿ ಹೇಳಿದೆ.
ರೀಲ್ಸ್‌ಗಾಗಿ ಎಡಿಟಿಂಗ್ ಟೂಲ್
ಎಡಿಟಿಂಗ್‌ನಲ್ಲಿ ವೈಯಕ್ತಿಕ ಕ್ಲಿಪ್‌ಗಳನ್ನು, ಕ್ರಾಪ್ ಮಾಡುವ ಮತ್ತು ತಿರುಗಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ಪರೀಕ್ಷಿಸುತ್ತಿದೆ ಎಂದು ಇನ್‌ಸ್ಟಾಗ್ರಾಮ್ ಹೇಳಿದೆ. ರೆಡೋ ಮತ್ತು ಅಂಡೂ ಆಯ್ಕೆಗಳು ಶೀಘ್ರದಲ್ಲೇ ಬರಲಿವೆ ಎಂದು ಸಂಸ್ಥೆಯು ಹೇಳಿದೆ. ಅಂದಹಾಗೆ ಹೊಸ ಎಡಿಟಿಂಗ್ ಟೂಲ್‌ಗಳ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಘೋಷಿಸಿದ್ದಾರೆ.

ಹಾಗೆಯೇ ಸಂಸ್ಥೆಯು ಆಡಿಯೋ ಬ್ರೌಸರ್ ಅಥವಾ ಟ್ರೆಂಡಿಂಗ್ ಆಡಿಯೊವನ್ನು ಆಕ್ಸಸ್ ಗಾಗಿ ಹೊಸ ಮಾರ್ಗಗಳನ್ನು ಪರೀಕ್ಷಿಸುತ್ತಿದೆ. ಇದಲ್ಲದೆ, ಡ್ರಾಫ್ಟ್‌ಗಳ ಫೀಚರ್ ಮೇಕ್‌ಓವರ್ ಅನ್ನು ಪಡೆಯುತ್ತಿದೆ. ಇದು ಪ್ರಗತಿಯಲ್ಲಿರುವ ರೀಲ್‌ಗಳನ್ನು ಎಡಿಟ್ ಮಾಡಲು ಸುಲಭವಾಗಿದೆ. ಶೀಘ್ರದಲ್ಲೇ, ಬಳಕೆದಾರರು ಡ್ರಾಫ್ಟ್‌ಗಳನ್ನು ಪೂರ್ವವೀಕ್ಷಿಸಲು, ಅವುಗಳನ್ನು ರೀ ನೇಮ್ ಮತ್ತು ಮುಂಚಿತವಾಗಿ ಅವುಗಳನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
ಪೋಸ್ಟ್‌ಗಾಗಿ ಹೊಸ ಫಿಲ್ಟರ್‌ಗಳ ಆಯ್ಕೆ
ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಆಪ್ ಹೊಸ ಫಿಲ್ಟರ್‌ಗಳನ್ನು ಸೇರ್ಪಡೆ ಮಾಡಲಿದೆ. ಬಳಕೆದಾರರು ಎಡಿಟಿಂಗ್‌ಗಾಗಿ ಟೂಲ್ ಸರ್ಚ್ ಮಾಡುವ ವಿಧಾನವನ್ನು ಸರಳಗೊಳಿಸುವ ನವೀಕರಣಗಳಿವೆ. ಬಳಕೆದಾರರ ಕ್ಯಾಮರಾ ರೋಲ್‌ನಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳಿಂದ ಅಥವಾ ಇನ್‌ಸ್ಟಾಗ್ರಾಮ್ ನಲ್ಲಿ ಅರ್ಹ ಫೋಟೋಗಳು ಮತ್ತು ವೀಡಿಯೊಗಳಿಂದ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಪ್ಲಾಟ್‌ಫಾರ್ಮ್ ಪರೀಕ್ಷಿಸುತ್ತಿದೆ.

ಇನ್ನೊಂದು ಇನ್‌ಸ್ಟಾಗ್ರಾಮ್ ಖಾತೆ ತೆರೆಯಲು ಈ ಹಂತಗಳನ್ನು ಅನುಸರಿಸಿ
ಹಂತ 1 : ನಿಮ್ಮ ಮೊಬೈಲ್‌ನಿಂದ ಇನ್‌ಸ್ಟಾಗ್ರಾಮ್ ಆಪ್ ಅನ್ನು ತೆರೆಯಿರಿ
ಹಂತ 2 : ನಂತರ ಈಗ ಕೆಳಗಿನ ಬಲ ಮೂಲೆಯಲ್ಲಿರುವ DP ಅನ್ನು ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ.
ಹಂತ 3 : ಬಳಿಕ ಗೇರ್ ಆಯ್ಕೆ ಮಾಡಿ ಅಥವಾ ಸ್ಕ್ರೀನ್ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಆಯ್ಕೆಮಾಡಿ.
ಹಂತ 4 : ಆ ನಂತರ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಖಾತೆಯನ್ನು ಸೇರಿಸಿ ಆಯ್ಕೆಮಾಡಿ.
ಹಂತ 5 : ಬಳಿಕ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಅಥವಾ ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಲಾಗ್ ಇನ್ ಮಾಡಿ
ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿ
ಹಂತ 1: ನಿಮ್ಮ ಪ್ರೊಫೈಲ್ ಫೇಜ್‌ಗೆ ಹೋಗಿ ಮತ್ತು ಗೇರ್ ಐಕಾನ್ ಆಯ್ಕೆ ಮಾಡಿ.
ಹಂತ 2: ನಂತರ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಲಾಗ್‌ಔಟ್ ಆಯ್ಕೆಗೆ ಹೋಗಿ, ಆಡ್ ಖಾತೆಯ ಬಳಿಯೇ ನೀಡಲಾಗಿದೆ.
ಹಂತ 3: ಬಳಿಕ ಡಿಲೀಟ್ ಮಾಡ ಬಯಸುವ ಯಾವುದೇ ಖಾತೆಯಿಂದ ಲಾಗ್ ಔಟ್ ಮಾಡಿ ಅಥವಾ ನೀವು ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಬಹುದು.


Click it and Unblock the Notifications








