Home
ಸುದ್ದಿಜಾಲ

ಟಿಕ್‌ಟಾಕ್‌ಗೆ ಪೈಪೋಟಿ ನೀಡಲು ಮುಂದಾದ 'ಇನ್‌ಸ್ಟಾಗ್ರಾಂ IGTV'.!

ಸದ್ಯ ಟಿಕ್‌ಟಾಕ್‌ ಸೇರಿದಂತೆ ವಿಡಿಯೊ ಆಪ್‌ಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಫೇಸ್‌ಬುಕ್ ಒಡೆತನದ ಸಾಮಾಜಿಕ ಜಾಲತಾಣ 'ಇನ್‌ಸ್ಟಾಗ್ರಾಂ' ಸಹ ಈ ನಿಟ್ಟಿನಲ್ಲಿ IGTV ಆಯ್ಕೆಯನ್ನು ಈಗಾಗಲೇ ಪರಿಚಯಿಸಿದೆ. ಆದರೆ ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರನ್ನು ಸೆಳೆಯಲು ಹೊಸದೊಂದು ಹೆಜ್ಜೆ ಇರಿಸಿದ್ದು, IGTVಯಲ್ಲಿ ವಿಡಿಯೊ ವೀಕ್ಷಿಸುವ ಆಯ್ಕೆಯಲ್ಲಿ ಹೊಸತನ ಪರಿಚಯಿಸಲು ಮುಂದಾಗಿದೆ. ಈ ಮೂಲಕ ಟಿಕ್‌ಟಾಕ್‌ ಮತ್ತು ಸ್ನ್ಯಾಪ್‌ಚಾಟ್‌ ಆಪ್‌ಗಳಿಗೆ ಸೆಡ್ಡು ಹೊಡೆಯಲಿದೆ.

ಟಿಕ್‌ಟಾಕ್‌ಗೆ ಪೈಪೋಟಿ ನೀಡಲು ಮುಂದಾದ 'ಇನ್‌ಸ್ಟಾಗ್ರಾಂ IGTV.'!

ಹೌದು, ಇನ್‌ಸ್ಟಾಗ್ರಾಂ ಆಪ್‌ ತನ್ನ IGTV ಆಯ್ಕೆಗೆ ಮತ್ತಷ್ಟು ಹೊಸ ರೂಪ ನೀಡಲು ಸಜ್ಜಾಗಿದ್ದು, ಈ ಆಯ್ಕೆಯು ಬಳಕೆದಾರರಿಗೆ ಹೆಚ್ಚಿನ ಅವಧಿಯ ವಿಡಿಯೊಗಳನ್ನು ವೀಕ್ಷಿಸುವ ಅವಕಾಶ ಮಾಡಿಕೊಡಲಿದೆ. ಇದರೊಂದಿಗೆ IGTV ಆಪ್‌ನಲ್ಲಿ ವಿಡಿಯೊ ವೀಕ್ಷಣೆಯಲ್ಲಿ ಹಲವು ಹೊಸ ಫೀಚರ್ಸ್‌ಗಳು ಸೇರಿಕೊಳ್ಳಲಿದ್ದು, 'ಫಾರ್ ಯೂ', 'ಫಾಲೋಯಿಂಗ್', 'ಪಾಪ್ಯುಲರ್', ಮತ್ತು 'ಕಂಟಿನ್ಯೂ ವಾಚಿಂಗ್‌' ಎನ್ನುವ ನ್ಯಾವಿಗೇಷನ್‌ ಟ್ಯಾಬ್‌ಗಳು ಇರುವುದಿಲ್ಲ.

ಟಿಕ್‌ಟಾಕ್‌ಗೆ ಪೈಪೋಟಿ ನೀಡಲು ಮುಂದಾದ 'ಇನ್‌ಸ್ಟಾಗ್ರಾಂ IGTV.'!

ಸ್ನ್ಯಾಪ್‌ಚಾಟ್‌ ಆಪ್‌ನಲ್ಲಿರುವಂತೆ ವರ್ಟಿಕಲ್‌ ಸ್ಕ್ರೋಲ್ ಆಯ್ಕೆಯನ್ನು IGTV ಆಪ್‌ನಲ್ಲಿ ಸೇರಿಸಲಾಗಿದೆ. ವಿಡಿಯೊ ಗ್ರೀಡ್‌ನಲ್ಲಿನ ಮೊದಲ ವಿಡಿಯೊಗೆ ಬಳಕೆದಾರರು ಪ್ಲೇ ಒತ್ತುವ ಮೊದಲೇ ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತದೆ.. ಹಾಗಾದರೇ ಇನ್‌ಸ್ಟಾಗ್ರಾಂನ IGTV ಆಪ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಟಿಕ್‌ಟಾಕ್‌ನೊಂದಿಗೆ ಪೈಪೋಟಿ

ಟಿಕ್‌ಟಾಕ್‌ನೊಂದಿಗೆ ಪೈಪೋಟಿ

ಪ್ರಸ್ತುತ ಭಾರಿ ಟ್ರೆಂಡ್‌ನಲ್ಲಿರುವ ಟಿಕ್‌ಟಾಕ್‌ ವಿಡಿಯೊ ಆಪ್‌ನ ಓಟಕ್ಕೆ ಬ್ರೇಕ್‌ ಹಾಕಲು ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಂ ಸಜ್ಜಾಗಿದ್ದು, ಅದಕ್ಕಾಗಿ ತನ್ನ IGTV ಆಪ್‌ನಲ್ಲಿ ಹೊಸತನದ ಫೀಚರ್ಸ್‌ಗಳನ್ನು ಸೇರಿಸಿಕೊಂಡಿದೆ. ಇನ್‌ಸ್ಟಾಗ್ರಾಂ ಮೇನ್‌ ಆಪ್‌ನಲ್ಲಿಯೂ ಈ IGTV ಆಯ್ಕೆ ಇದ್ದು, ಪ್ರತ್ಯೇಕವಾಗಿಯೂ ಆಪ್‌ ಸಹ ಇದೆ.

ಆಯ್ಕೆಗಳಲ್ಲಿ ಬದಲಾವಣೆ

ಆಯ್ಕೆಗಳಲ್ಲಿ ಬದಲಾವಣೆ

IGTV ಆಪ್‌ನಲ್ಲಿ ಈ ಮೊದಲು ಫಾರ್ ಯೂ', 'ಫಾಲೋಯಿಂಗ್', 'ಪಾಪ್ಯುಲರ್', ಮತ್ತು 'ಕಂಟಿನ್ಯೂ ವಾಚಿಂಗ್‌' ಎನ್ನುವ ನ್ಯಾವಿಗೇಷನ್‌ ಟ್ಯಾಬ್‌ಗಳು ಇದ್ದವು. ಆದರೆ ಇದೀಗ ಫೀಚರ್ಸ್‌ಗಳಲ್ಲಿ ಹೊಸತನ ತಂದಿರುವುದರಿಂದ ಇನ್ಮುಂದೆ ಈ ಆಯ್ಕೆಗಳು ಇರುವುದಿಲ್ಲ.

ವರ್ಟಿಕಲ್ ಸ್ಕ್ರೋಲ್

ವರ್ಟಿಕಲ್ ಸ್ಕ್ರೋಲ್

ಇನ್‌ಸ್ಟಾಗ್ರಾಂ ವಿಡಿಯೊ ಆಪ್‌ನಲ್ಲಿ ಅಡ್ಡಲಾಗಿ(horizontal) ಸ್ಲೈಡ್‌ ಮಾಡುವ ಆಯ್ಕೆ ಇದ್ದು, ಬದಲಾದ ವರ್ಷನ್‌ನಲ್ಲಿ ವರ್ಟಿಕಲ್ ಸ್ಕ್ರೋಲ್‌ ಆಯ್ಕೆ ಇರಲಿದೆ. ಇದು ಟಿಕ್‌ಟಾಕ್‌ ಮತ್ತು ಸ್ನ್ಯಾಪ್‌ಚಾಟ್‌ ಆಪ್‌ಗಳ ಅನುಕರಣೆ ಎನ್ನಲಾಗುತ್ತದೆ.

ಆಟೋ ಪ್ಲೇ

ಆಟೋ ಪ್ಲೇ

ಇನ್‌ಸ್ಟಾಗ್ರಾಂ ವಿಡಿಯೊ ಆಪ್‌ನಲ್ಲಿ ಆಟೋಮ್ಯಾಟಿಕ್ ಆಗಿ ವಿಡಿಯೊ ಪ್ಲೇ ಆಗುವ ಆಯ್ಕೆ ಇರಲಿದೆ. ವಿಡಿಯೊ ಲಿಸ್ಟ್ ತೆರೆದಾಗ ಮೊದಲ ವಿಡಿಯೊ ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತದೆ. ಹಾಗೆಯೇ ನಂತರದ ವಿಡಿಯೊ ಪ್ರಿವ್ಯೂವ್‌ ಆಗುವ ಆಯ್ಕೆಗಳು ಇವೆ.

Best Mobiles in India

English summary
Instagram IGTV Redesign Is Inspired by TikTok and Snapchat.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+