Home
ಸುದ್ದಿಜಾಲ

ಬಳಕೆದಾರರಿಗೆ ಹೊಸ ಮಾದರಿಯ ಸ್ಟಿಕ್ಕರ್ ಪರಿಚಯಿಸಿದ ಇನ್‌ಸ್ಟಾಗ್ರಾಮ್!

ಇಡೀ ಜಗತ್ತೇ ಕೋರೊನಾ ವೈರಸ್‌ನಿಂದ ಬಳಲುತ್ತಿದೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಮೊರ ಹೋಗಿದ್ದು ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸುವ ಪರಿಸ್ಥಿತಿ ಉದ್ಭವ ಆಗಿದೆ. ಇದರ ನಡುವೆ ವೈಧ್ಯಕೀಯ ವಲಯ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಫಿಸುವ ವಲಯಗಳು ನಮ್ಮ ಉಳಿವಿಗಾಗಿ ಶ್ರಮಿಸುತ್ತಿವೆ. ಕೊರೋನಾ ವಿರುದ್ದ ಹೋರಾಟದಲ್ಲಿ ಅವರೆಲ್ಲರೂ ಕೊರೋನಾ ವಾರಿಯರ್ಸ್‌ ಅಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸೇವೆ ಸಲ್ಲಿಸುವವರನ್ನ ಅಭಿನಂದಿಸುವುದಕ್ಕಾಗಿ ಇನ್‌ಸ್ಟಾಗ್ರಾಮ್‌ ಹೊಸ ಸ್ಟಿಕ್ಕರ್‌ಗಳನ್ನ ಪರಿಚಯಿಸಿದೆ.

ಸೊಶೀಯಲ್‌

ಹೌದು ಸೊಶೀಯಲ್‌ ಮಿಡಿಯಾ ಆಪ್‌ಗಳಲ್ಲಿ ಒಂದಾಗಿರುವ ಇನ್‌ಸ್ಟಾಗ್ರಾಮ್‌ ಕೋವಿಡ್ -19 ಯೋಧರಿಗೆ ಮತ್ತು ಹೆಚ್ಚಿನವರಿಗೆ ಸಹಾಯ ಮಾಡಲು ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸುತ್ತಿದೆ. ಅಲ್ಲದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡುವಾಗ ಇದು ಹೆಚ್ಚಿನ ಜನರಿಗೆ ಮಾಹಿತಿ ತಲುಪಲು ಸಹಾಯ ಮಾಡಲು ಈ ಸ್ಟಿಕ್ಕರ್‌ಗಳನ್ನ ಪರಿಚಯಿಸಿದೆ. ಅಂದರೆ ಹೊಸ "ಸಣ್ಣ ಉದ್ಯಮಗಳಿಗೆ ಬೆಂಬಲಿಸುವ" ಸ್ಟಿಕ್ಕರ್ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಸದ್ಯ ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವ್ಯವಹಾರಗಳನ್ನು ಬೆಂಬಲಿಸಲು ಈ ಹೊಸ ಸ್ಟಿಕ್ಕರ್ಗಳನ್ನ ಬಳಸಬಹುದಾಗಿದೆ. ಬಳಕೆದಾರರು ಈ ಸ್ಟಿಕ್ಕರ್ ಬಳಸಿ ತಮ್ಮ ಸ್ಮಾಲ್‌ ಬ್ಯುಸಿನೆಸ್‌ ಅನ್ನು ಪ್ರಚಾರ ಮಾಡಬಹುದು. ಸ್ಟಿಕ್ಕರ್‌ಗಳ ಮೂಲಕ ವ್ಯಾಪಾರ ವಹಿವಾಟಿನ ಬಗ್ಗೆ ಟಿಪ್ಪಣಿಗಳನ್ನ ನೀಡಬಹುದು. ಅಲ್ಲದೆ ಇನ್‌ಸ್ಟಾಗ್ರಾಮ್‌ ಸ್ಟೋರಿಗಳಲ್ಲಿ ಈ ಸ್ಟಿಕ್ಕರ್‌ಗಳನ್ನ ಸೇರಿಸಬಹುದು. ಜೊತೆಗೆ ಈ ಸ್ಟಿಕ್ಕರ್ ಬಳಸಿ ಕಥೆಗಳ ಸಂಗ್ರಹವನ್ನು ಇನ್‌ಸ್ಟಾಗ್ರಾಮ್ ತೋರಿಸುತ್ತದೆ. ಈ ಹೊಸ ಸ್ಟಿಕ್ಕರ್ ಅನ್ನು ಬಳಸುವುದು ತುಂಬಾ ಸರಳ ಮತ್ತು ಸುಲಭವಾಗಿದ್ದು, ಕೆಲವು ಹಂತಗಳು ಮಾತ್ರ ಅಗತ್ಯವಿದೆ.

ಸ್ಟಿಕ್ಕರ್

ಇನ್‌ಸ್ಟಾಗ್ರಾಮ್‌ನ ಹೊಸ ಸ್ಟಿಕ್ಕರ್ ಅನ್ನು ಹೇಗೆ ಬಳಸುವುದು
ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೊಸ ಸ್ಟಿಕ್ಕರ್‌ ಅನ್ನು ಬಲಸಬೇಕಾದರೆ ನೀವು ಮೊದಲು ನಿಮ್ಮ ಸ್ಮಾಲ್‌ ಬ್ಯುಸಿನೆಸ್‌ಗೆ ಸಂಬಂಧಪಟ್ಟ ಪೋಟೋಗಳನ್ನ ತೆಗೆದುಕೊಳ್ಳಬೇಕು. ಇದಕ್ಕಾಗಿ ಇನ್‌ಸ್ಟಗ್ರಾಮ್ನಲ್ಲಿ ಕ್ಯಾಮೆರಾ ತೆರೆಯಲು ಎಡಕ್ಕೆ ಸ್ವೈಪ್ ಮಾಡಿ ಮತ್ತು ಫೋಟೋ ತೆಗೆದುಕೊಳ್ಳಲು ಅಥವಾ ನಿರ್ದಿಷ್ಟ ವ್ಯವಹಾರಕ್ಕಾಗಿ ಒಂದನ್ನು ಆರಿಸಿ. ನಂತರ ಮೇಲಿನ ಸ್ಟಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಟಾಪ್ ಟ್ರೇನಲ್ಲಿರುವ "ಸಣ್ಣ ವ್ಯಾಪಾರವನ್ನು ಬೆಂಬಲಿಸಿ" ಸ್ಟಿಕ್ಕರ್ ಆಯ್ಕೆಮಾಡಿ. ಒಮ್ಮೆ ನೀವು ಸ್ಟಿಕ್ಕರ್ ಅನ್ನು ಆಯ್ಕೆ ಮಾಡಿದ ನಂತರ ಅದನ್ನು ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಎಲ್ಲಿಯಾದರೂ ಸೇರಿಸಬಹುದಾಗಿದೆ.

ನಂತರ

ಇದಾದ ನಂತರ ವ್ಯವಹಾರದ ಹೆಸರನ್ನು ನಮೂದಿಸಲು ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ ಮತ್ತು ಕೆಳಗೆ ಕಾಣಿಸಿಕೊಳ್ಳುವ ಆಯ್ಕೆಗಳ ಪಟ್ಟಿಯಿಂದ ಅದನ್ನು ಆಯ್ಕೆ ಮಾಡಿ. ನಂತರ ನೀವು ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಕಸ್ಟಮೈಸ್ ಮಾಡಬಹುದು ಮತ್ತು ನೀವು ಅದನ್ನು ಹಂಚಿಕೊಳ್ಳಬಹುದು. ಸ್ಟಿಕ್ಕರ್ ಅನ್ನು ಸ್ಪರ್ಶಿಸುವ ವೀಕ್ಷಕರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆ ವ್ಯವಹಾರದ ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ನಿಮಗೆ ಬೇಕಾದಷ್ಟು ವ್ಯವಹಾರಗಳನ್ನು ನೀವು ಬೆಂಬಲಿಸಬಹುದು. ಈಗಾಗ್ಲೇ ಇನ್‌ಸ್ಟಾಗ್ರಾಮ್ "ಥ್ಯಾಂಕ್ಸ್ ಅವರ್" ಅಥವಾ "ಧನ್ಯವಾಡ್" ಸ್ಟಿಕ್ಕರ್‌ಗಳನ್ನು ಮತ್ತು "ಸ್ಟೇ ಹೋಮ್" ಸ್ಟಿಕ್ಕರ್‌ಗಳನ್ನು ಪ್ರಾರಂಭಿಸಿದೆ. ಇದೀಗ ಸ್ಮಾಟ್‌ ಬ್ಯುಸಿನೆಶ್‌ ಬೆಂಬಲಿಸುವ ಸ್ಟಿಕ್ಕರ್‌ ಪರಿಚಯಿಸಿದೆ. ಸದ್ಯ ಎಲ್ಲಾ ಸ್ಟಿಕ್ಕರ್‌ಗಳನ್ನು ಕಥೆಗಳ ವಿಭಾಗದಲ್ಲಿ ಕಾಣಬಹುದಾಗಿದೆ.

Best Mobiles in India

English summary
Instagram’s new sticker gives users the chance to help support small businesses on the platform.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+