Reels ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ ಇನ್‌ಸ್ಟಾಗ್ರಾಮ್‌!..ಏನದು ಗೊತ್ತಾ?

|

ಪ್ರಮುಖ ಸಾಮಾಜಿಕ ಜಾಲತಾಣಗಳ ಪೈಕಿ ಇನ್‌ಸ್ಟಾಗ್ರಾಮ್‌ ಒಂದಾಗಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್‌ಗಳನ್ನು ಪರಿಚಯಿಸಿದ್ದು, ಬಹುತೇಕ ಆಯ್ಕೆಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಆ ಪೈಕಿ ಇನ್‌ಸ್ಟಾಗ್ರಾಮ್‌ (Instagram) ರೀಲ್ಸ್‌ ಸಹ ಒಂದಾಗಿದೆ. ಸದ್ಯ ಇನ್‌ಸ್ಟಾಗ್ರಾಮ್‌ ಸ್ಟೋರಿ ಹಾಗೂ ರೀಲ್ಸ್‌ ಫೀಚರ್ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿವೆ. ರೀಲ್ಸ್‌ ಪ್ರಿಯರಿಗೆ ಇನ್‌ಸ್ಟಾಗ್ರಾಮ್‌ ಇದೀಗ ಭರ್ಜರಿ ಸಿಹಿಸುದ್ದಿ ನೀಡಿದೆ.

Reels ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ ಇನ್‌ಸ್ಟಾಗ್ರಾಮ್‌!..ಏನದು ಗೊತ್ತಾ?

ಇನ್‌ಸ್ಟಾಗ್ರಾಮ್‌ (Instagram) ಈಗ ಬಳಕೆದಾರರಿಗೆ 90 ಸೆಕೆಂಡುಗಳ ಕಾಲ ರೀಲ್ಸ್ ಅನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ. ಇದು ಮೊದಲು ರೀಲ್ಸ್ 60 ಸೆಕೆಂಡುಗಳಿಗೆ ಸೀಮಿತವಾಗಿತ್ತು. ರೀಲ್ಸ್‌ಗಾಗಿ ಇದೇ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್‌ ಸಮಯವನ್ನು ವಿಸ್ತರಿಸಿದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ ಟೆಂಪ್ಲೇಟ್‌ಗಳು, ಸಂವಾದಾತ್ಮಕ ಸ್ಟಿಕ್ಕರ್‌ಗಳು, ತಾಜಾ ಧ್ವನಿ ಪರಿಣಾಮಗಳು ಮತ್ತು ನಿಮ್ಮ ಸ್ವಂತ ಆಡಿಯೊವನ್ನು ಇಪೋರ್ಟ್‌ ಮಾಡಿಕೊಳ್ಳುವ ಸಾಮರ್ಥ್ಯದಂತಹ ಹಲವಾರು ಇತರ ಫೀಚರ್ಸ್‌ಗಳ್ನು ಸಹ ಸೇರಿಸಿದೆ.

ಇನ್‌ಸ್ಟಾಗ್ರಾಮ್‌ ಇತ್ತೀಚಿಗೆ ಸೇರ್ಪಡೆ ಮಾಡಿರುವ ನೂತನ ಫೀಚರ್ಸ್‌ಗಳೊಂದಿಗೆ ಇತ್ತೀಚಿನ ನವೀಕರಣವು iOS ಮತ್ತು ಆಂಡ್ರಾಯ್ಡ್‌ ಓಎಸ್ ಎರಡಕ್ಕೂ ಲಭ್ಯವಿದೆ. ಅಪ್‌ಡೇಟ್‌ ಇನ್‌ಸ್ಟಾಲ್ ಮಾಡಲು ಬಳಕೆದಾರರು ತಮ್ಮ ಪ್ಲೇ ಸ್ಟೋರ್‌ಗಳಿಗೆ ಹೋಗಬಹುದು. ಇನ್ನು ಭಾರತದಲ್ಲಿ ರೀಲ್‌ಗಳು ಲಭ್ಯವಿದ್ದಾಗಿನಿಂದ, ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಇನ್‌ಸ್ಟಾಗ್ರಾಮ್‌ ವೇದಿಕೆಯು ಹಲವಾರು ಅಪ್‌ಡೇಟ್‌ ಸೇರಿಸಿದೆ. ಈ ಫೀಚರ್ಸ್‌ಗಳನ್ನು ಸೇರಿಸುವ ಮೂಲಕ, ಇನ್‌ಸ್ಟಾಗ್ರಾಮ್‌ ಹಿಂದೆಂದಿಗಿಂತಲೂ ರೀಲ್ಸ್ ಅನ್ನು ಹೆಚ್ಚು ಸಂವಾದಾತ್ಮಕವಾಗಿಸಲು ಪ್ರಯತ್ನಿಸುತ್ತಿದೆ.

Reels ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ ಇನ್‌ಸ್ಟಾಗ್ರಾಮ್‌!..ಏನದು ಗೊತ್ತಾ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?
ಹಂತ: 1 ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಬಲಕ್ಕೆ ಸ್ವೈಪ್ ಮಾಡಿ ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿರುವ ರೀಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ: 2 ನಂತರ ನೀವು ರೀಲ್ ಅನ್ನು ರೆಕಾರ್ಡ್ ಮಾಡಲು, ವೀಡಿಯೊ ಪ್ಲೇಯರ್ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳಿರಿ.
ಹಂತ: 3 ಇದೀಗ ನೀವು ಸೂಕ್ತವಾದ ವೇಗವನ್ನು ಆಯ್ಕೆ ಮಾಡಬೇಕಾಗುತ್ತದೆ, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಮ್ಯೂಸಿಕ್‌ ಅನ್ನು ರೀಲ್ಸ್‌ಗೆ ಆಡ್‌ ಮಾಡಿರಿ.
ಹಂತ: 4 ರೀಲ್ಸ್‌ ಶೇರ್‌ ಮಾಡುವ ಮೊದಲು ರೀಲ್ ಅನ್ನು ವೀಕ್ಷಿಸಲು ಪ್ರಿವ್ಯೂ ಬಟನ್ ಅನ್ನು ಕ್ಲಿಕ್ ಮಾಡಿ ರೀಲ್ ಅನ್ನು ಪ್ರಿವ್ಯೂ ಮಾಡಿ. ಹಂತ:5 ಇದೀಗ ನಿಮ್ಮ ರೀಲ್ಸ್‌ ಶೇರ್‌ ಮಾಡಲು ಶೇರ್‌ ಬಟನ್ ಅನ್ನು ಕ್ಲಿಕ್ ಮಾಡಿ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
ಹಂತ:3 ನಂತರ, ನಿಮ್ಮ ಡಿವೈಸ್‌ನಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ಗಳ ಲಿಂಕ್ ಅನ್ನು ಕಾಪಿ ಮಾಡಿ.
ಹಂತ:4 ಇದೀಗ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ನ ಲಿಂಕ್ ಅನ್ನು ಪೇಸ್ಟ್‌ ಮಾಡಿರಿ.
ಹಂತ:5 ಇದಾದ ನಂತರ ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?
ಹಂತ: 1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ಗಳಿಗೆ ಹೋಗಿ
ಹಂತ: 2 ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ: 3 ಚಾಟ್ ಅನ್ನು ಹೈಡ್‌ ಮಾಡಲು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ
ಹಂತ: 4 ಇದೀಗ ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು. ಮೆಸೇಜ್‌ ಸ್ವೀಕರಿಸುವವರು ನಿಮ್ಮ ಪಠ್ಯವನ್ನು ಓದಿದ ನಂತರ ಅವರು ಡಿಸ್‌ಅಪಿಯರ್‌ ಆಗಲಿದ್ದಾರೆ. ನೀವು GIF ಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಈ ಮೋಡ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ವ್ಯಾನಿಶ್‌ ಮೋಡ್‌ ಅನ್ನು ಮತ್ತೆ ಸ್ವೈಪ್ ಮಾಡುವ ಮೂಲಕ ನೀವು ಈ ಮೋಡ್ ಅನ್ನು ಆಫ್ ಮಾಡಬಹುದು.

Best Mobiles in India

English summary
Instagram now lets users record Reels for 90 seconds: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X