Home
ಸುದ್ದಿಜಾಲ

ಇನ್‌ಸ್ಟಾಗ್ರಾಮ್‌ ರೀಲ್ಸ್‌ ವೀಕ್ಷಕರಿಗೆ, ಕ್ರಿಯೇಟರ್ಸ್‌ಗೆ ಗುಡ್‌ ನ್ಯೂಸ್! ಏನದು ಗೊತ್ತಾ?

ಇನ್‌ಸ್ಟಾಗ್ರಾಮ್‌ (Instagram) ವಿಶ್ವದಲ್ಲಿಯೇ ಹೆಚ್ಚು ಬಳಕೆ ಮಾಡುವ ಆಪ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಈ ಆಪ್‌ ಸುಧಾರಿತ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ಭಿನ್ನ ಅನುಭವವನ್ನು ನೀಡುತ್ತಾ ಬರುತ್ತಿದ್ದು, ಈಗ ಇನ್‌ಸ್ಟಾಗ್ರಾಮ್‌ನ ರೀಲ್ಸ್‌ (Reels) ವಿಭಾಗಕ್ಕೆ ಹೊಸ ಸೌಲಭ್ಯ ಸೇರಿಕೊಳ್ಳಲಿದೆ.

ಹೌದು, ಬಹುಪಾಲು ಮಂದಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ ನೋಡುವ ಮೂಲಕ ಮಾಹಿತಿ ಹಾಗೂ ಮನರಂಜನೆ ಪಡೆಯುತ್ತಾರೆ. ಇನ್ನೂ ಕೆಲವರು ರೀಲ್ಸ್‌ ಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಹಣದ ಜೊತೆಗೆ ಹೆಚ್ಚಿನ ಫಾಲೋವರ್ಸ್‌ಗಳನ್ನೂ ಸಹ ಪಡೆಯುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ರೀಲ್ಸ್‌ ವೀಕ್ಷಕರಿಗೆ ಹಾಗೂ ಕ್ರಿಯೇಟರ್ಸ್‌ಗಳಿಗೆ ಬಹುದೊಡ್ಡ ಸೌಲಭ್ಯವೊಂದು ಲಭ್ಯವಾಗಲಿದೆ. ಹಾಗಿದ್ರೆ, ಯಾವುದು ಈ ಹೊಸ ಸೌಲಭ್ಯ?, ಇದರಿಂದ ಆಗುವ ಅನುಕೂಲ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ ವೀಕ್ಷಕರಿಗೆ, ಕ್ರಿಯೇಟರ್ಸ್‌ಗೆ ಗುಡ್‌ ನ್ಯೂಸ್! ...

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ಸೌಲಭ್ಯ: ಸಾಮಾನ್ಯವಾಗಿ ರೀಲ್ಸ್‌ಗಳು ಶಾರ್ಟ್‌ ಆಗಿರುತ್ತವೆ. ಈ ಮೂಲಕ ಕೆಲವೇ ಸೆಕೆಂಡ್‌ ಅಥವಾ ನಿಮಿಷದಲ್ಲಿ ಎಲ್ಲಾ ಮಾಹಿತಿಯನ್ನು ನೀಡಬೇಕು. ಇದು ನೋಡುಗರಿಗೂ ಸಮಸ್ಯೆ ಹಾಗೂ ರೀಲ್ಸ್‌ ಕ್ರಿಯೇಟರ್ಸ್‌ಗೂ ಸಮಸ್ಯೆ. ಆದರೆ, ಇನ್ಮುಂದೆ ಈ ತೊಂದರೆ ಇರುವುದಿಲ್ಲ. ಯಾಕೆಂದರೆ ರೀಲ್ಸ್‌ನ ಉದ್ದವನ್ನು 10 ನಿಮಿಷಗಳಿಗೆ ಹೆಚ್ಚಿಸಲು ಮೆಟಾ ಎಲ್ಲಾ ಸಿದ್ಧತೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಹೊಸ ಫೀಚರ್ಸ್‌ ಯೂಟ್ಯೂಬ್ ರೀತಿ ಇರಲಿದೆ ಎನ್ನಲಾಗಿದೆ. ಅಂದರೆ ಇಲ್ಲಿ ದೀರ್ಘ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುವ ಅವಕಾಶ ಇದೆ. ಇದರೊಂದಿಗೆ ಟಿಕ್‌ಟಾಕ್‌ ಸಹ ಈಗಾಗಲೇ ಉದ್ದದ ರೀಲ್ಸ್‌ಗಳನ್ನು ಕ್ರಿಯೇಟ್‌ ಮಾಡಲು ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದು, ಈ ಮೂಲಕ ಬಹಳಷ್ಟು ಬಳಕೆದಾರರು ಸಂತೋಷ ಹೊರಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬದಲಾವಣೆ ಆಗುತ್ತಿದೆ.

ಪ್ರಮುಖ ಸುದ್ದಿ ವೆಬ್‌ಸೈಟ್‌ ಆಗಿರುವ ದಿ ವರ್ಜ್ ಈ ಬಗ್ಗೆ ವರದಿ ಮಾಡಿದೆ. ಇನ್‌ಸ್ಟಾಗ್ರಾಮ್ ರೀಲ್ಸ್‌ ಶೀಘ್ರದಲ್ಲೇ 10 ನಿಮಿಷಗಳವರೆಗೆ ಇರಬಹುದು ಈ ಮೂಲಕ ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ಗೂಗಲ್ ಒಡೆತನದ ಯೂಟ್ಯೂಬ್ ಫೀಚರ್ಸ್‌ ಅನ್ನು ಕ್ಯಾಪ್ಚರ್‌ ಮಾಡಲಿದೆ ಎಂದು ಉಲ್ಲೇಖಿಸಿದೆ. ಹಾಗೆಯೇ ಮೊಬೈಲ್ ಡೆವಲಪರ್ ಮತ್ತು ಲೀಕರ್ ಅಲೆಸ್ಸಾಂಡ್ರೊ ಪಲುಝಿ ಟ್ವಿಟರ್‌ನಲ್ಲಿ ಈ ಬಗ್ಗೆ ಒಂದು ಪೋಸ್ಟ್‌ ಸಹ ಮಾಡಿದ್ದಾರೆ.

ಇವರು ಮಾಡಿದ ಪೋಸ್ಟ್‌ನಲ್ಲಿ, ಎರಡು ಪಕ್ಕ-ಪಕ್ಕದ ರೀಲ್ಸ್ ಪೇಜ್‌ಗಳ ಸ್ಕ್ರೀನ್‌ಶಾಟ್‌ಗಳು ಇವೆ. ಒಂದರಲ್ಲಿ ಮೂರು ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಮತ್ತು ಇನ್ನೊಂದರಲ್ಲಿ 10 ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಆಯ್ಕೆ ನೀಡಲಾಗಿದೆ. ಪರಿಣಾಮ ಇನ್‌ಸ್ಟಾಗ್ರಾಮ್ 10 ನಿಮಿಷಗಳವರೆಗೆ ರೀಲ್ಸ್‌ ಕ್ರಿಯೇಟ್‌ ಮಾಡುವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಮೆಟಾ ಈ ರೀಲ್ಸ್‌ ಸಮಯ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಗ್ರೂಪ್‌ ಉಲ್ಲೇಖ ಫೀಚರ್ಸ್‌ ಅನ್ನೂ ಸಹ ಪರೀಕ್ಷಿಸುತ್ತಿದೆ. ಅದು ಬಳಕೆದಾರರಿಗೆ ಒಂದೇ ಉಲ್ಲೇಖವನ್ನು ಬಳಸಿಕೊಂಡು ಸ್ಟೋರಿಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಟ್ಯಾಗ್ ಮಾಡಲು ಇದು ಅನುಮತಿಸುತ್ತದೆ. ಈ ಸಂಬಂಧ ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಮಾಹಿತಿ ನೀಡಿದ್ದು, ಒಂದು ಉಲ್ಲೇಖವನ್ನು ಬಳಕೆ ಮಾಡಿಕೊಂಡು ಸ್ಟೋರಿಯಲ್ಲಿ ಜನರ ಗುಂಪನ್ನು ಟ್ಯಾಗ್ ಮಾಡುವ ವಿಧಾನವನ್ನು ನಾವು ಪರೀಕ್ಷಿಸುತ್ತಿದ್ದೇವೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ ವೀಕ್ಷಕರಿಗೆ, ಕ್ರಿಯೇಟರ್ಸ್‌ಗೆ ಗುಡ್‌ ನ್ಯೂಸ್! ...

ಒಮ್ಮೆ ನೀವು ಗ್ರೂಪ್‌ ಉಲ್ಲೇಖವನ್ನು ಕ್ರಿಯೇಟ್‌ ಮಾಡಿದರೆ, ಅದನ್ನು ಯಾರಾದರೂ ಮರುಬಳಕೆ ಮಾಡಿಕೊಳ್ಳಬಹುದಾಗಿದೆ ಹಾಗೆಯೇ ಯಾವುದೇ ಹೊಸ ಸ್ಟೋರಿಗಳಲ್ಲಿ ಪ್ರತಿಯೊಬ್ಬರನ್ನು ಆಟೋಮ್ಯಾಟಿಕ್‌ ಆಗಿ ಟ್ಯಾಗ್ ಮಾಡಲು ಈ ಫೀಚರ್ಸ್‌ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ. ಪರಿಣಾಮ ಇನ್‌ಸ್ಟಾಗ್ರಾಮ್‌ ಬಳಕೆದಾರರು ಒಂದಾದ ಮೇಲೊಂದರಂತೆ ಹೊಸ ಹೊಸ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Usually the reels are short. This should provide all the information within a few seconds or minutes. This is a problem for the viewers as well as a problem for the creators of the reels. However, Meta is all set to increase the length of the Instagram reels to 10 minutes henceforth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+