Home
ಸುದ್ದಿಜಾಲ

laptop tips: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಈ ಅಪ್ಲಿಕೇಶನ್‌ಗಳು ಕಡ್ಡಾಯವಾಗಿರಲಿ...ಉಚಿತವಾಗಿ ಲಭ್ಯ!

ಈಗಂತೂ ವಿದ್ಯಾವಂತರಾದ ಎಲ್ಲರ ಬಳಿ ಕಡ್ಡಾಯವಾಗಿ ಲ್ಯಾಪ್‌ಟಾಪ್‌ (laptop) ಅಥವಾ ಪಿಸಿ (PC) ಇದ್ದೇ ಇರುತ್ತದೆ. ಕೆಲವರು ಅದನ್ನು ತಮ್ಮ ಕೆಲಸಗಳಿಗೆ ಬಳಕೆ ಮಾಡಿಕೊಂಡರೆ ಇನ್ನೂ ಕೆಲವರು ಖಾಸಗಿ ವಿಚಾರಗಳಿಗೆ ಅಥವಾ ಫೋಟೋ ಹಾಗೂ ವಿಡಿಯೋ, ಇನ್ನಿತರೆ ಮಾಹಿತಿ ಸ್ಟೋರೇಜ್‌ ಮಾಡಿಕೊಂಡು ಅಗತ್ಯ ಎಂದಾಗ ಬಳಕೆ ಮಾಡಲು ಮುಂದಾಗುತ್ತಾರೆ. ಅದಾಗ್ಯೂ ಕೆಲವರಿಗೆ ಲ್ಯಾಪ್‌ಟಾಪ್‌ ಅಥವಾ ಪಿಸಿಯನ್ನು ಯಾವೆಲ್ಲಾ ಅಪ್ಲಿಕೇಶನ್‌ ಇರಬೇಕು ಎಂಬುದೇ ತಿಳಿದಿರುವುದಿಲ್ಲ.

ಹೌದು, ಪ್ರತಿ ವಿಂಡೋಸ್ ಬಳಕೆದಾರರು ಈ ಕೆಲವು ಉಚಿತ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಲ್ಯಾಪ್‌ಟಾಪ್‌ ಅಥವಾ ಪಿಸಿ ಉಪಯೋಗ ಮಾಡುವಾಗ ಉತ್ತಮ ಅನುಭವ ಪಡೆದುಕೊಳ್ಳಬಹುದು. ಅದರಲ್ಲೂ ಹೊಸದಾಗಿ ಖರೀದಿ ಮಾಡಿದಾಗ ನಿಮಗೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕ್ಯಾಲ್ಕುಲೇಟರ್, ಗಡಿಯಾರ, ಎಮ್‌ಎಸ್ ಪೇಂಟ್ ಮತ್ತು ಮೈಕ್ರೋಸಾಫ್ಟ್‌ ವೆಬ್ ಸ್ಟೋರ್‌ ನಂತಹ ಆಯ್ಕೆಗಳು. ಆದರೆ, ನಾವು ಇಲ್ಲಿ ತಿಳಿಸಿಕೊಡುವ ಅಪ್ಲಿಕೇಶನ್‌ ನಿಮ್ಮ ಲ್ಯಾಪ್‌ನಲ್ಲಿ ಇಲ್ಲದಿದ್ದರೆ ನಿರರ್ಥಕವಾದಂತೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಅಪ್ಲಿಕೇಶನ್‌ ಫ್ರೀ ಹಾಗೂ ಅಗತ್ಯ ಎಂದು ತಿಳಿಯೋಣ.

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಈ ಅಪ್ಲಿಕೇಶನ್‌ಗಳು ಕಡ್ಡಾಯವಾಗಿರಲಿ...ಉಚಿತವಾಗಿ ಲಭ್ಯ

ಅಡಾಸಿಟಿ: ಈ ಅಪ್ಲಿಕೇಶನ್‌ ಈಗಂತೂ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆಡಿಯೊ ಫೈಲ್‌ಗಳನ್ನು ರೆಕಾರ್ಡ್ ಮಾಡಲು ಮತ್ತು ಮ್ಯಾನಿಪ್ಯುಲೇಟ್ ಮಾಡಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಆಡಿಯೊ ಟ್ರ್ಯಾಕ್‌ಗಳನ್ನು ರೆಕಾರ್ಡಿಂಗ್ ಮತ್ತು ಲೇಯರಿಂಗ್ ಮಾಡುವ ಮೂಲಕ ಮೂಲ ಆಡಿಯೊ ರಚನೆಗಳನ್ನು ರಚಿಸಲು ಇದು ಅನುಕೂಲ. ಅಂದರೆ ಯಾವುದೇ ಆಡಿಯೋವನ್ನು ಹೇಗೆ ಬೇಕಾದರೂ ಸುಲಭವಾಗಿ ಎಡಿಟ್‌ ಮಾಡಬಹುದು.

ಜೂಮ್: ಇಂದಿನ ದಿನಗಳಲ್ಲಿ ಜೂಮ್ ಆಪ್‌ ಬಳಕೆ ಬಹಳ ಹೆಚ್ಚಾಗಿದೆ. ಇದರಲ್ಲಿ ಬಳಕೆದಾರರು ವಿಡಿಯೋ ಸಂವಹನ ಸೇವೆ ಪಡೆದುಕೊಳ್ಳಬಹುದಾಗಿದೆ. ವರ್ಚುವಲ್ ಆಗಿ ಕಾರ್ಯನಿರ್ವಹಿಸುವ ಇಂದಿನ ಜಗತ್ತಿನಲ್ಲಿ ಜೂಮ್ ಅತ್ಯಂತ ಪ್ರಯೋಜನಕಾರಿ. ಅದರಂತೆ ಬಳಕೆದಾರರಿಗೆ ನೈಜ-ಸಮಯದ ಆಡಿಯೊ ಮತ್ತು ವಿಡಿಯೋದೊಂದಿಗೆ ಆನ್‌ಲೈನ್ ಸಭೆಗಳನ್ನು ಹೊಂದಲು ಅನುವು ಮಾಡಿಕೊಡುತ್ತಿದೆ.

ಗೂಗಲ್ ಅರ್ಥ್ ಪ್ರೊ: ವಿಶ್ವದ ಜಾಗತಿಕ ಸ್ಥಾನೀಕರಣ ವ್ಯವಸ್ಥೆ (GPS) ಯನ್ನು ಈ ಹಿಂದೆ ಮಿಲಿಟರಿ ಬಳಕೆಗಾಗಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಅಭಿವೃದ್ಧಿಪಡಿಸಿತ್ತು. ಆದರೆ, ಇದು ಸಾಮಾನ್ಯ ಜನರಿಗೂ ತಲುಪಿದೆ. ಈ ಮೊದಲು ಮ್ಯಾಪ್‌ಕ್ವಿಸ್ಟ್‌ ರೀತಿಯ ಸೇವೆಗಳು ಬಳಕೆದಾರರಿಗೆ ತಮ್ಮ ಆರಂಭಿಕ ಬಿಂದು ಮತ್ತು ಅವರ ಗಮ್ಯ ಸ್ಥಾನವನ್ನು ಪ್ಲಗ್ ಮಾಡಲು ಅವಕಾಶ ಮಾಡಿಕೊಟ್ಟವು. ಈಗ ಸ್ವತಂತ್ರ GPS ಎಲ್ಲಾ ಡಿವೈಸ್‌ಗಳಲ್ಲಿ ಕೆಲಸ ಮಾಡುತ್ತಿದ್ದು, ಬಳಕೆದಾರರಿಗೆ ತಮ್ಮದೇ ಆದ ಸೇವೆ ನೀಡುತ್ತಿದೆ.

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಈ ಅಪ್ಲಿಕೇಶನ್‌ಗಳು ಕಡ್ಡಾಯವಾಗಿರಲಿ...ಉಚಿತವಾಗಿ ಲಭ್ಯ

ಲೈವ್ಲಿ ವಾಲ್‌ಪೇಪರ್‌: ಈ ಅಪ್ಲಿಕೇಶನ್‌ ಮೂಲಕ ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ ಅನ್ನು ಹೆಚ್ಚು ಮನೋರಂಜನಾತ್ಮಕವಾಗಿ ಮಾಡಬಹುದು. ಇದನ್ನು ಡೌನ್‌ಲೋಡ್ ಮಾಡುವ ಮೊದಲು ಸಾಫ್ಟ್‌ವೇರ್‌ನ ಬಳಕೆದಾರ ಇಂಟರ್ಫೇಸ್‌ನ ಸರಳೀಕೃತ ಆವೃತ್ತಿಯನ್ನು ಪರೀಕ್ಷಿಸಲು ನಿಮಗೆ ಅನುಮತಿಸುತ್ತದೆ. ಇದರಲ್ಲಿ ಹಿನ್ನೆಲೆ ಚಿತ್ರಣ, ಮಳೆ ಅಥವಾ ಚಲನೆಯಂತಹ ಚಟುವಟಿಕೆಯ ಎಫೆಕ್ಟ್‌ಗಳನ್ನ ನೀಡಲಿದ್ದು, ತೀವ್ರತೆ, ಗಾತ್ರ ಮತ್ತು ಚಲನೆಯ ವೇಗ, ಹೊಳಪು, ಜೂಮ್, ಮಸುಕು ಮತ್ತು ಹೆಚ್ಚಿನವುಗಳಂತಹ ಕಂಟೆಂಟ್‌ ಕಂಟ್ರೋಲ್‌ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಡ್ಯುಯೊಲಿಂಗೋ: ಡ್ಯುಯೊಲಿಂಗೋ ಎಂಬುದು ಸಂಶೋಧಕ ಮತ್ತು ಕಾರ್ನೆಗೀ ಮೆಲನ್ ಪ್ರೊಫೆಸರ್ ಲೂಯಿಸ್ ವಾನ್ ಅಹ್ನ್ ಅವರ ಮೆದುಳಿನ ಕೂಸಾಗಿದೆ. ಇದು ಭಾಷಾ ಕಲಿಕೆಯ ಸಾಫ್ಟ್‌ವೇರ್ ಆಗಿದ್ದು , ಸಂಭಾಷಣೆಯ ಭಾಷೆಯನ್ನು ಬಳಸುವ ಮೂಲಕ ಮತ್ತು ಸಂಪೂರ್ಣ ಅನುಭವವನ್ನು ಗೇಮಿಫೈ ಮಾಡುವ ಮೂಲಕ ಇದು ತನ್ನದೇ ಆದ ಸೇವೆ ನೀಡುತ್ತದೆ. ಇದರ ಮೂಲಕ ಮಕ್ಕಳ ಭೌತಿಕ ಜ್ಞಾನ ಹೆಚ್ಚು ಮಾಡಬಹುದಾಗಿದೆ.

ಫೋನ್ ಲಿಂಕ್: ಆಪಲ್‌ನ ಸಂಪರ್ಕಿತ ಪರಿಸರ ವ್ಯವಸ್ಥೆಯ ಡಿವೈಸ್‌ಗಳಂತೆ ಫೋನ್ ಲಿಂಕ್ ನಿಮ್ಮ ವಿಂಡೋಸ್ ಕಂಪ್ಯೂಟರ್ ಅನ್ನು ಹೊಂದಾಣಿಕೆಯ ಆಂಡ್ರಾಯ್ಡ್‌ ಫೋನ್‌ನೊಂದಿಗೆ ಕನೆಕ್ಟ್‌ ಮಾಡಲು ಅನುಮತಿಸುತ್ತದೆ. ವಿಂಡೋಸ್ ಅಪ್ಲಿಕೇಶನ್‌ಗೆ ಲಿಂಕ್ ಪಡೆಯಲು ಬ್ರೌಸರ್ ತೆರೆಯಿರಿ ಮತ್ತು www.aka.ms/yourpc ಗೆ ಭೇಟಿ ನೀಡಿ. ಸರ್ಫೇಸ್ ಡ್ಯುವೋ ಮತ್ತು ಕೆಲವು ಸ್ಯಾಮ್‌ಸಂಗ್ ಅಥವಾ ಹಾನರ್ ಫೋನ್‌ಗಳಂತಹ ಕೆಲವು ಡಿವೈಸ್‌ಗಳಲ್ಲಿ ಈಗಾಗಲೇ ಇದು ಇನ್‌ಬಿಲ್ಟ್‌ ಆಗಿರುತ್ತದೆ.

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಈ ಅಪ್ಲಿಕೇಶನ್‌ಗಳು ಕಡ್ಡಾಯವಾಗಿರಲಿ...ಉಚಿತವಾಗಿ ಲಭ್ಯ

ಅವಿರಾ: ನೀವು ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ನಿರಂತರ ದಾಳಿಯ ಅಪಾಯದಲ್ಲಿದ್ದರೆ ಈ ಭದ್ರತಾ ಸಾಫ್ಟ್‌ವೇರ್ ಅದರ ವಿರುದ್ಧ ಹೋರಾಡುವ ಪ್ರಮುಖ ಅಸ್ತ್ರವಾಗುತ್ತದೆ. ಈ ಆಪ್‌ ಇಲ್ಲದೆ ಹೊಸ ಕಂಪ್ಯೂಟರ್ ಅನ್ನು ಬಳಕೆ ಮಾಡುವುದು ವಿಮೆ ಇಲ್ಲದೆ ಹೊಸ ಕಾರನ್ನು ಚಾಲನೆ ಮಾಡಿದಂತೆ. ಈಗಿನ ಕಾರಣಕ್ಕೆ ಕಡ್ಡಾಯವಾಗುವ ಹೊಸ ಲ್ಯಾಪ್‌ಟಾಪ್‌ ಖರೀದಿ ಮಾಡಿದಾಗ ಈ ಅಪ್ಲಿಕೇಶನ್‌ಗೆ ಮೊದಲ ಪ್ರಾಶಸ್ತ್ಯ ನೀಡಿ.

Best Mobiles in India

English summary
Some people don't know what applications a laptop or PC should have. But, users can get better experience by using this free application.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+