ಇನ್ಮುಂದೆ ಆನ್‌ಲೈನ್‌ನಲ್ಲಿ ತಕ್ಷಣಕ್ಕೆ ಸಿಗಲಿದೆ 'ಇ-ಪ್ಯಾನ್ ಕಾರ್ಡ್‌!

|

ಆಧಾರ್ ಕಾರ್ಡ್‌ ಹೊಂದಿರುವವರಿಗೆ ಇದೀಗ ಕೇಂದ್ರ ಸರ್ಕಾರ ಖುಷಿ ಸಮಾಚಾರ ತಿಳಿಸಿದ್ದು, ಪ್ಯಾನ್‌ ಕಾರ್ಡ್‌ ಪಡೆಯುವ ಪ್ರಕ್ರಿಯೆ ಸುಲಭವಾಗಿಸಿದೆ. ಆಧಾರ್‌ ಕಾರ್ಡ್‌ ಮಾಹಿತಿಯನ್ನು ಆಧರಿಸಿ ಆನ್‌ಲೈನ್‌ ಮೂಲಕ ತಕ್ಷಣವೇ ಪ್ಯಾನ್‌ಕಾರ್ಡ್‌ ನೀಡುವ ವ್ಯವಸ್ಥೆಯನ್ನು ಇದೇ ಫೆಬ್ರುವರಿ ತಿಂಗಳಿನಲ್ಲಿ ಅಧಿಕೃತವಾಗಿ ಚಾಲ್ತಿಗೆ ಬರಲಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್

ಹೌದು, ಕೇಂದ್ರ ಬಜೆಟ್ ಮಂಡನೆಯಲ್ಲಿ ಪ್ಯಾನ್‌ ನೀಡುವ ಪ್ರಕ್ರಿಯೆಯನ್ನು ಬದಲಾವಣೆ ತರುವ ಬಗ್ಗೆ ಕ್ರೇಂದ್ರ ಬಜೆಟ್ 2020-21ರ ಮಂಡನೆಯಲ್ಲಿ ವಿತ್ತ ಸಚಿವರು ತಿಳಿಸಿದ್ದರು. ಅದರ ಬೆನ್ನಲೆ ಈಗ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆಧಾರ್‌ ಕಾರ್ಡ್ ಇದ್ದರೆ ಇನ್ನು ಪ್ಯಾನ್ ಕಾರ್ಡ್‌ ಪಡೆಯುವುದು ಅತೀ ಸರಳವಾಗಿದೆ. ಹಾಗೆಯೇ ಇದು ತೆರೆಗೆ ಪಾವತಿದಾರರಿಗೂ ಅನುಕೂಲಕರವಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ಯಾನ್‌ಗೆ ಅರ್ಜಿ ಬೇಕಿಲ್ಲ

ಪ್ಯಾನ್‌ಗೆ ಅರ್ಜಿ ಬೇಕಿಲ್ಲ

ಆಧಾರ್ ಕಾರ್ಡ್‌ ಹೊಂದಿರುವವರು ಪ್ಯಾನ್ ಕಾರ್ಡ್‌ ಪಡೆಯುವುದು ಇನ್ನು ಅತೀ ಸುಲಭವಾಗಲಿದೆ. ಪ್ಯಾನ್ ಕಾರ್ಡ್‌ ಪಡೆಯಲು ಬಳಕೆದಾರರು ಯಾವುದೇ ಹೆಚ್ಚುವರಿ ಮಾಹಿತಿ ತುಂಬುವ ಅಗತ್ಯ ಇರುವುದಿಲ್ಲ. ಕೇವಲ ಆಧಾರ್ ಕಾರ್ಡ್‌ ನಂಬರ್ ನಮೂದಿಸಿ OTP ಎಂಟ್ರಿ ಮಾಡುವ ಮೂಲಕ ಇ-ಪ್ಯಾನ್ ಅನ್ನು ಪಡೆದುಕೊಳ್ಳಬಹುದು.

ಇ-ಪ್ಯಾನ್ ಪಡೆಯುವುದು ಹೇಗೆ

ಇ-ಪ್ಯಾನ್ ಪಡೆಯುವುದು ಹೇಗೆ

* ಬಳಕೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡುವುದು.
* ಅಲ್ಲಿ ಆಧಾರ್ ನಂಬರ್ ನಮೂದಿಸುವುದು.
* ಆಧಾರ್‌ಗೆ ಜೋಡಣೆ ಮಾಡಿರುವ ರಿಜಿಸ್ಟರ್ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ.
* ಆ ಓಟಿಪಿಯನ್ನು ನಮೂದಿಸುವುದು.
* ನಂತರ ಇ-ಪ್ಯಾನ್ ಕಾರ್ಡ್ ಕಾಣಿಸುತ್ತದೆ.
* ಬಳಕೆದಾರರು ಇ-ಪ್ಯಾನ್ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಅನುಕೂಲವೇನು

ಅನುಕೂಲವೇನು

ತೆರಿಗೆ ಪಾವತಿದಾರರು ಅಪ್ಲಿಕೇಶನ್ ಪ್ಯಾನ್ಫಾರ್ಮ್ ತುಂಬುವ ರಗಳೆ ಇರುವುದಿಲ್ಲ. ಬಳಕೆದಾರರು ಅರ್ಜಿಯನ್ನು ತೆರೆಗೆ ಇಲಾಖೆಗೆ ಅಲ್ಲಿಸುವ ಅಗತ್ಯವು ಇರಲ್ಲ. ಹಾಗೆಯೆ ತೆರೆಗೆ ಇಲಾಖೆ ಪ್ಯಾನ್‌ ಅನ್ನು ತರಿಗೆ ಪಾವತಿದಾರರ ಮನೆ ವಿಳಾಸಕ್ಕೆ ತಲುಪಿಸುವ ಪ್ರಮೇಯವು ಇರಲ್ಲ.

ಪ್ಯಾನ್‌-ಆಧಾರ್ ಜೋಡಣೆ

ಪ್ಯಾನ್‌-ಆಧಾರ್ ಜೋಡಣೆ

ಹಣಕಾಸು ಸಚಿವಾಲಯವು ಪ್ಯಾನ್‌ನೊಂದಿಗೆ ಆಧಾರ್ ನಂಬರ್‌ ಅನ್ನು ಅಡ್ಡಾಯ ಎಂದಿದ್ದು, ಇದೇ ಮಾರ್ಚ್ 31, 2020ರ ಒಳಗಾಗಿ ಪ್ಯಾನ್ ನೊಂದಿಗೆ ಆಧಾರ್ ಜೋಡಣೆ ಮಾಡಲು ಗಡವು ನೀಡದೆ. ಈಗಾಗಲೇ ಎರಡು ಬಾರಿ ಪ್ಯಾನ್ ಜೊತೆಗೆ ಆಧಾರ್ ಜೋಡಣೆ ಮಾಡುವ ಅವಧಿಯನ್ನು ವಿಸ್ತರಿಸಿದ್ದು, ಕಳೆದ ಡಿಸೆಂಬರ್ 31, 2019ಕ್ಕೆ ನೀಡಿದ್ದ ಗಡವನ್ನು ಇದೇ ಮಾರ್ಚ್ 31ರ ವರೆಗೂ ವಿಸ್ತರಿಸಿದೆ.

Most Read Articles
Best Mobiles in India

English summary
Revenue secretary Ajay Bhushan Pandey told that instant online PAN cards facility on furnishing of Aadhaar will begin this month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X