Xe ಗ್ರಾಫಿಕ್ಸ್‌ ಬೆಂಬಲಿತ 11ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ಸರಣಿ ಅನಾವರಣ!

|

ಟೈಗರ್ ಲೇಕ್ ಸರಣಿಯ ಲ್ಯಾಪ್‌ಟಾಪ್‌ಗಳಿಗಾಗಿ 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಸರಣಿಯನ್ನು ಇಂಟೆಲ್ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಪ್ರೊಸೆಸರ್‌ಗಳು 10 nm ಪ್ರಕ್ರಿಯೆಯನ್ನು ಆಧರಿಸಿವೆ ಮತ್ತು ಇಂಟೆಲ್ secret tiger sauce ಎಂದು ಕರೆಯುವ ಮೆಟಲ್ ಸ್ಟ್ಯಾಕ್‌ನೊಂದಿಗೆ ಬರುತ್ತವೆ. ಈ ಪ್ರೊಸೆಸರ್‌ಗಳನ್ನು ಸೂಪರ್‌ಫಿನ್ ತಂತ್ರಜ್ಞಾನದೊಂದಿಗೆ 10nm ಪ್ರಕ್ರಿಯೆಯನ್ನು ಬಳಸಿ ತಯಾರಿಸಲಾಗಿದೆ. ಡ್ರೈವ್ ಕರೆಂಟ್ ಅನ್ನು ಸುಧಾರಿಸಲು 60-ಪಾಲಿ ಪಿಚ್ ಟ್ರಾನ್ಸಿಸ್ಟರ್ ಅನ್ನು ಬಳಸಲಾಗಿದೆ.

Xe ಗ್ರಾಫಿಕ್ಸ್‌ ಬೆಂಬಲಿತ 11ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ಸರಣಿ ಅನಾವರಣ!

11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಸರಣಿಯು ಸೋರಿಕೆ, ಕಾರ್ಯಕ್ಷಮತೆ ಮತ್ತು ವ್ಯತ್ಯಾಸವನ್ನು ಸುಧಾರಿಸಲು ಕಂಪನಿಯು ಈಗಾಗಲೇ ಅಸ್ತಿತ್ವದಲ್ಲಿರುವ ಟ್ರಾನ್ಸಿಸ್ಟರ್‌ಗಳಲ್ಲಿ ಕೆಲಸ ಮಾಡಿದೆ. ಹಾಗೆಯೇ 11 ನೇ ಜನ್ ಇಂಟೆಲ್ ಕೋರ್ ಟೈಗರ್ ಲೇಕ್ ಪ್ರೊಸೆಸರ್ ಕಾರ್ಯಾಚರಣೆಯು ವೋಲ್ಟೇಜ್ ಅನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಇಂಟೆಲ್ ಕೋರ್ ಪ್ರೊಸೆಸರ್ ಹೊಂದಿದ ಲ್ಯಾಪ್‌ಟಾಪ್‌ಗಳು ಕಡಿಮೆ ಶಕ್ತಿಯನ್ನು ಬಳಕೆ ಮಾಡಲಿವೆ. ಅದೇ ರೀತಿ 10 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಹೊಂದಿರುವ ಲ್ಯಾಪ್‌ಟಾಪ್‌ಗಳು ಸಹ ಇದೇ ರೀತಿಯ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಇನ್ನು ಕಂಪನಿಯು MIM-CAP ಸಾಮರ್ಥ್ಯಗಳನ್ನು ನಾಲ್ಕು ಪಟ್ಟು ಹೆಚ್ಚಿಸಿದೆ, ಅದು ಹೆಚ್ಚಿನ ಸಿಪಿಯು ತೀವ್ರತೆಯ ಕೆಲಸದ ಹೊರೆಗಳಿಗೆ ಪ್ರತಿಕ್ರಿಯೆಯನ್ನು ನೀಡಲು ತ್ವರಿತ ಮತ್ತು ಘನ ಶಕ್ತಿಯನ್ನು ಖಾತರಿಪಡಿಸುತ್ತದೆ. ಆದ್ದರಿಂದ, ಹಿಂದಿನ ಪೀಳಿಗೆಯ CPUಗೆ ಹೋಲಿಸಿದಾಗ, 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಒಂದೇ ರೀತಿಯ TDPಯೊಂದಿಗೆ ಶೇಕಡಾ 20 ರಷ್ಟು ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ.

Xe ಗ್ರಾಫಿಕ್ಸ್ ಬೆಂಬಲ
11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಪ್ರಮುಖ ಅಂಶವೆಂದರೆ ಇಂಟಿಗ್ರೇಟೆಡ್ ಪ್ರೊಸೆಸರ್. ಇಂಟೆಲ್ ಕೋರ್ i7-1185G7 ನಲ್ಲಿನ ಎಲ್ಲಾ ಹೊಸ Xe ಗ್ರಾಫಿಕ್ಸ್ AMD 4800U ನಲ್ಲಿ ಸಂಯೋಜಿತ ಗ್ರಾಫಿಕ್ಸ್ ಅನ್ನು ಫೋಟೋಶಾಪ್ ಎಲಿಮೆಂಟ್ಸ್ ಬಳಸಿ ಇಮೇಜ್ ಅಪ್‌ಸ್ಕೇಲಿಂಗ್‌ನಂತಹ ಕಾರ್ಯಗಳಲ್ಲಿ ಮೀರಿಸುತ್ತದೆ. ಅಂತೆಯೇ, 11 ನೇ ಜನ್ ಟೈಗರ್ ಲೇಕ್ ಪ್ರೊಸೆಸರ್ AMD 4800U ಅನ್ನು ವಿಡಿಯೋ ಸಂಸ್ಕರಣೆ ಮತ್ತು ರಫ್ತು ಮಾಡುವಿಕೆಯನ್ನು ಮೀರಿಸುತ್ತದೆ. ಅದೇ ರೀತಿ ಗೇಮಿಂಗ್ ವಿಷಯಕ್ಕೆ ಬಂದರೆ, Xe ಗ್ರಾಫಿಕ್ಸ್ AMD 4800U ಇಂಟಿಗ್ರೇಟೆಡ್ ಗ್ರಾಫಿಕ್ಸ್ ಮತ್ತು Nvidia MX350 ಡಿಸ್ಕ್ರೀಟ್ ಗ್ರಾಫಿಕ್ಸ್ ಅನ್ನು ಮೀರಿಸುತ್ತದೆ.

ಆಧುನಿಕ ಕನೆಕ್ಟಿವಿಟಿ ಕವರ್ಡ್ 11 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ಗಳು PCIe 4.0, ವೈಫೈ 6, ಮತ್ತು ಥಂಡರ್ಬೋಲ್ಟ್ 4 ನಂತಹ ಫೀಚರ್ಸ್‌ಗಳನ್ನು ಸಹ ನೀಡುತ್ತವೆ. ಈ ಪ್ರೊಸೆಸರ್‌ಗಳನ್ನು ಆಧರಿಸಿದ ಕೆಲವು ಲ್ಯಾಪ್‌ಟಾಪ್‌ಗಳು ಒಂದೇ ಚಾರ್ಜ್‌ನಲ್ಲಿ 9 ಗಂಟೆಗಳ ಬ್ಯಾಟರಿ ಅವಧಿಯನ್ನು ಒಂದೇ ಚಾರ್ಜ್‌ನಲ್ಲಿ ನೀಡಬಲ್ಲವು. ಒಟ್ಟಾರೆಯಾಗಿ, ಕಂಪನಿಯು 9 ಹೊಸ 11 ನೇ ತಲೆಮಾರಿನ ಇಂಟೆಲ್ ಕೋರ್ CPUಗಳು ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತವೆ. ಅವುಗಳಲ್ಲಿ ಐದು ಮಾದರಿಗಳಿಗೆ ಗರಿಷ್ಠ TDP 28W ಮತ್ತು ಉಳಿದ ಮಾದರಿಗಳಿಗೆ 15W ಸಾಮರ್ಥ್ಯದ ಸಫೋರ್ಟ್‌ ಹೊಂದಿವೆ.

Processor NameGraphicsCores / ThreadsGraphics (EUs)CacheMemoryOperating RangeBase Freq (GHz)Max Single Core Turbo (GHz, up to)Max All Core Turbo (GHz, up to)Graphics Max Freq (GHz, up to)
Intel® CoreTM i7-1185G7Intel Iris Xe8/4/20205-Apr12MBDDR4-3200LPDDR4x-426612-28W34.84.31.35
Intel® CoreTM i7-1165G7Intel Iris Xe4-Aug9612MBDDR4-3200LPDDR4x-426612-28W2.84.74.11.3
Intel® CoreTM i5-1135G7Intel Iris Xe4-Aug808MBDDR4-3200LPDDR4x-426612-28W2.44.23.81.3
Intel® CoreTM i3-1125G4Intel UHD Graphics4-Aug488MBDDR4-3200LPDDR4x-373312-28W23.73.31.25
Intel® CoreTM i3-1115G4Intel UHD Graphics2-Apr486MBDDR4-3200LPDDR4x-373312-28W34.14.11.35
Intel® CoreTM i7-1160G7Intel Iris Xe8/4/20205-Apr12MBLPDDR4x-42667-15W1.24.43.61.1
Intel® CoreTM i5-1130G7Intel Iris Xe4-Aug808MBLPDDR4x-42667-15W1.143.41.1
Intel® CoreTM i3-1120G4Intel UHD Graphics4-Aug488MBLPDDR4x-42667-15W1.13.531.1
Intel® CoreTM i3-1110G4Intel UHD Graphics2-Apr486MBLPDDR4x-42667-15W1.83.93.91.1
Best Mobiles in India

Read more about:
English summary
Intel takes on AMD with 11th-gen Tiger Lake CPUs and Iris Xe graphics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X