ಡಿಜಿಟಲ್‌ ಇಂಡಿಯಾಗೆ ಇಂಟೆಲ್‌ ಸಾತ್‌

By Suneel
|

ಇಂಟೆಲ್‌ ಭಾರತದಾದ್ಯಂತ 100 ಇಂಟರ್‌ನೆಟ್‌ ಸಂಬಂಧಿತ ಶೈಕ್ಷಣಿಕ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಿದೆ. ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್‌ಸಿಟಿ ಮತ್ತು ಡಿಜಿಟಲ್‌ ಇಂಡಿಯಾ ಯೋಜನೆಗೂ ಸಹಾಯವಾಗಲಿದೆ. ಅಲ್ಲದೇ ಭಾರತದಾದ್ಯಂತ ತಂತ್ರಜ್ಞಾನ ಬೆಳವಣಿಗೆಗೆ ಇದು ಶೀಘ್ರ ವೇದಿಕೆ ಒದಗಿಸಲಿದೆ. ಇಂಟೆಲ್‌ ನ ಈ ಯೋಜನೆಯು ಭಾರತದ ಡಿಜಿಟಲ್‌ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಅನುಕೂವಾಗಲಿದೆ.

ಓದಿರಿ: ವಿಶ್ವದ ಟಾಪ್‌ ಇಂಜಿನಿಯರಿಂಗ್‌ ಕಾಲೇಜುಗಳು

ಹಾಗಾದರೆ ಇಂಟೆಲ್‌ನ ಈ ಯೋಜನೆಯ ವಿಶೇಷತೆಗಳು ಏನು ಎಂಬುದನ್ನು ನಿಮಗಾಗಿ ಈ ಲೇಖನದಲ್ಲಿ ಹೇಳಲಿದ್ದೇವೆ.

ಇಂಟೆಲ್‌ ಗೆಲಿಲಿಯೋ ಬೋರ್ಡ್ಸ್

ಇಂಟೆಲ್‌ ಗೆಲಿಲಿಯೋ ಬೋರ್ಡ್ಸ್

ಈ ಕೇಂದ್ರಗಳು ವಿದ್ಯಾರ್ಥಿಗಳು, ವಿದ್ಯಾವಂತರು ಮತ್ತು ಇಲೆಕ್ಟ್ರಾನಿಕ್‌ ಉತ್ಸಾಹಿಗಳಿಗಾಗಿ ತೆರೆಯಲಿದ್ದು, ಇಂಟೆಲ್‌ ಗೆಲಿಲಿಯೋ ಬೋರ್ಡ್ಸ್‌ ಪ್ರೊಟೊಟೈಪ್‌ ಪ್ರಾಡಕ್ಟ್‌ ಸ್ಥಾಪಿಸಲು ಸಹಾಯಮಾಡಲಿದೆ.

ಇಂಟೆಲ್‌ ಇಂಡಿಯಾ ಪಿಎಚ್‌ಡಿ ಫೆಲೋಶಿಪ್

ಇಂಟೆಲ್‌ ಇಂಡಿಯಾ ಪಿಎಚ್‌ಡಿ ಫೆಲೋಶಿಪ್

ಇಂಟೆಲ್‌ 'ಇಂಟೆಲ್‌ ಇಂಡಿಯಾ ಪಿಎಚ್‌ಡಿ ಫೆಲೋಶಿಪ್‌' ಪ್ರಶಸ್ತಿಯನ್ನು 2015 ರಲ್ಲಿ 5 ವಿದ್ಯಾರ್ಥಿಗಳಿಗೆ ನೀಡಲು ಚಿಂತಿಸಿದೆ. ಈ ಪ್ರಕಟಣೆಯನ್ನು 2ನೇ ಇಂಟೆಲ್‌ ಇಂಡಿಯಾ ಅಕಾಡೆಮಿಕ್‌ವೇದಿಕೆಯಲ್ಲಿ ತೀರ್ಮಾನಿಸಿದೆ.

 ಫೆಲೋಶಿಪ್‌6 ಲಕ್ಷ

ಫೆಲೋಶಿಪ್‌6 ಲಕ್ಷ

ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್‌ ಪ್ರಶಸ್ತಿಯು ನಾಲ್ಕು ವರ್ಷಗಳ ಅವಧಿಗೆ ಪ್ರತಿ ವರ್ಷ 6 ಲಕ್ಷ ದೊರೆಯಲಿದೆ. ಇದರಲ್ಲಿ ವಿದ್ಯಾರ್ಥಿಯ ಸ್ಟೇಫಂಡ್‌, ಸಂಶೋಧನಾ ವೆಚ್ಚ, ಟ್ರಾವೆಲ್‌ವೆಚ್ಚ ಮತ್ತು ಕಾನ್ಫೇರೆನ್ಸ್‌ಗಳ ಬೇಟಿ ವೆಚ್ಚ ಸೇರಲಿದೆ.

ಇಂಟೆಲ್‌ ಅಭಿವೃದ್ದಿ

ಇಂಟೆಲ್‌ ಅಭಿವೃದ್ದಿ

ಫೆಲೋಶಿಪ್‌ ಪಡೆದವರು ಇಂಟೆಲ್‌ ಅಭಿವೃದ್ದಿಗಾಗಿ ಕೆಲಸ ನಿರ್ವಹಿಸಬೇಕಾಗಿದ್ದು, ತಂತ್ರಜ್ಞಾನವನ್ನು ಸರಿಯಾಗಿ ಅರ್ಥೈಸಬೇಕಾಗಿದೆ. ಫೆಲೋಶಿಪ್‌ ಪಡೆದವರು ಶೀರ್ಘ ಸಂಶೋಧನಾ ಬೆಳವಣಿಗೆಗಳ ಮುಂದಿಡಬೇಕಾಗಿದೆ.

ಸಂಶೋಧನಾ ವಿಷಯಗಳು

ಸಂಶೋಧನಾ ವಿಷಯಗಳು

ಫೆಲೋಶಿಪ್‌ ಪಡೆದವರು ನೀಡ ಬೇಕಾಗಿರುವ ಸಂಶೋಧನಾ ವಿಷಯಗಳು ಕಂಪ್ಯೂಟಿಂಗ್, ವಾಸ್ತುಶಿಲ್ಪ, ಗ್ರಾಫಿಕ್ಸ್, ಪರ್ಸೆಪ್ಚ್ಯುವಲ್ ಕಂಪ್ಯೂಟಿಂಗ್, ಸೆನ್ಸಿಂಗ್, ವಿದ್ಯುತ್ ನಿರ್ವಹಣೆ, ವ್ಯಾಲಿಡೇಶನ್‌, ಮತ್ತು ಸಂವಹನಕ್ಕೆ ಸಂಬಂಧಿತವಾಗಿರಬೇಕು.

 DNA

DNA

ಇಂಟೆಲ್‌ನಲ್ಲಿ DNA ಅವಿಷ್ಕಾರವಾಗಿದೆ. 15 ವರ್ಷಗಳಿಂದ ಅವಿಷ್ಕಾರ, ಸೃಜನಶೀಲತೆ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸುತ್ತಿದೆ.

 ಕುಮುದ್‌ ಶ್ರೀನಿವಾಸನ್‌

ಕುಮುದ್‌ ಶ್ರೀನಿವಾಸನ್‌

'ಇಂಟೆಲ್‌ ಇಂಡಿಯಾ ಅಕಾಡೆಮಿಕ್‌ ವೇದಿಕೆಯು ತಂತ್ರಜ್ಞಾನ ಒಳನೋಟ ಪ್ರವೃತ್ತಿಯನ್ನು ಅವಕಾಶಗಳೊಂದಿಗೆ ಅಕಾಡೆಮಿಯಾ, ಸರ್ಕಾರ ಮತ್ತು ಕಂಪನಿಗಳ ನಡುವೆ ಪ್ರಚೋದಿಸುತ್ತಿದೆ', ಎಂದು ಇಂಟೆಲ್‌ ಅಧ್ಯಕ್ಷ ಕುಮುದ್‌ ಶ್ರೀನಿವಾಸನ್‌ ಹೇಳಿದರು.

2 ಸಂಶೋಧನೆ ಮತ್ತು ಅಭಿವೃದ್ದಿಯ ಕೇಂದ್ರಗಳು

2 ಸಂಶೋಧನೆ ಮತ್ತು ಅಭಿವೃದ್ದಿಯ ಕೇಂದ್ರಗಳು

ಇಂಟೆಲ್‌ ಈಗಾಗಲೇ 2 ಸಂಶೋಧನೆ ಮತ್ತು ಅಭಿವೃದ್ದಿಯ ಕೇಂದ್ರಗಳನ್ನು ಹೊಂದಿದ್ದು, ಭಾರತದಲ್ಲಿ ಶೇಕಡ 70 ನೌಕರರನ್ನು ನೇಮಿಸಿದೆ.

ಡಿಜಿಟಲ್‌ ಇಂಡಿಯಾ ಕೀ

ಡಿಜಿಟಲ್‌ ಇಂಡಿಯಾ ಕೀ

ಮೋದಿಯವರ ಸ್ಮಾರ್ಟ್‌ಸಿಟಿ ಮತ್ತು ಡಿಜಿಟಲ್‌ ಇಂಡಿಯಾ ಬಗ್ಗೆ ಕುಮುದ್‌ ಮಾತನಾಡಿ " ಸಹಯೋಗ ಮತ್ತು ಸಂಶೋಧನೆಗಳು ಡಿಜಿಟಲ್‌ ಇಂಡಿಯಾ ಕೀ'' ಎಂದಿದ್ದಾರೆ.

Most Read Articles
Best Mobiles in India

English summary
Intel plans to set up 100 Internet of Things (IoT) centres as academic institutions across India. These centres are meant for students, educators and do-it yourself electronic enthusiasts and will be supported by Intel Galileo boards to help build product prototypes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more