ವಿಶ್ವದ ಟಾಪ್‌ ಇಂಜಿನಿಯರಿಂಗ್‌ ಕಾಲೇಜುಗಳು

By Suneel
|

ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಯುವ ಪೀಳಿಗೆಯ ಯುವಕರು ತಾವು ಆವಿಷ್ಕಾರ, ಹೊಸತನ ಎಂದು ತೊಡಗಲು ಸಾಧ್ಯವಾಗುವುದು ಅವರಿಗೆ ಬೆನ್ನಲುಬಾಗಿ ನಿಲ್ಲುವ ಪೋಷಕರು ಮತ್ತು ಹೆಚ್ಚಿನದಾಗಿ ಸಲಹೆ ನೀಡುವ ಸ್ನೇಹಿತರು ಇದ್ದಾಗ ಮಾತ್ರ. ಇದು ಒಂದು ರೀತಿಯ ಏಳಿಗೆಗೆ ಸಹಾಯವಾಗುವ ಪ್ರಥಮ ಮಾರ್ಗ. ಆದರೆ ಸಲಹೆ, ಯೋಚನೆಗಳ ಕಾರ್ಯರೂಪಕ್ಕೆ ಸಂಪೂರ್ಣ ಸಹಾಯಸಿಗುವುದು ನಾವು ಓದುವ ವಿಶ್ವವಿದ್ಯಾನಿಲಯಗಳು ಮಾತ್ರ. ಹಾಗಾದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರಿಗೆ ಅತ್ಯುತ್ತಮ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅಧ್ಯಯನ ಮಾಡಬೇಕೆಂಬ ಹಂಬಲವು ಇರುತ್ತದೆ. ಹಾಗೆ ಅಂತಹ ಕಾಲೇಜುಗಳು ಯಾವುವು ಎಂಬುದನ್ನು ತಿಳಿಯುವ ಮನಸ್ಸು ಕೂಡ ಇರುತ್ತದೆ ಅಲ್ಲವೇ.

ಓದಿರಿ: ಏರ್‌ಸೆಲ್‌ ಗ್ರಾಹಕರಿಗೆ ಉಚಿತ ಇಂಟರ್‌ನೆಟ್‌

ಅತ್ಯುತ್ತಮವಾದ ಟಾಪ್‌ 9 ಇಂಜಿನಿಯರಿಂಗ್ ಕಾಲೇಜುಗಳು ಜಗತ್ತಿನಲ್ಲಿ ಪ್ರಸಿದ್ದವಾಗಿವೆ. ಫ್ಯಾಕಲ್ಟಿ ಅನುಪಾತವು 3:1 ಇದ್ದು, ಗರಿಷ್ಟ 13500 ಫುಲ್‌ ಟೈಮ್‌ ವಿದ್ಯಾರ್ಥಿಗಳು ಇದ್ದಾರೆ. ಇಂತಹ ಕಾಲೇಜುಗಳು ಯಾವುವು ಅವುಗಳ ವಿಶೇಷತೆ ಏನು ಎಂಬ ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಕ್ಯಾಲಿಫೊರ್ನಿಯಾ ತಂತ್ರಜ್ಞಾನ ಸಂಸ್ಥೆ

ಕ್ಯಾಲಿಫೊರ್ನಿಯಾ ತಂತ್ರಜ್ಞಾನ ಸಂಸ್ಥೆ

ಟಾಪ್‌ 10 ಇಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕ್ಯಾಲಿಫೊರ್ನಿಯಾ ತಂತ್ರಜ್ಞಾನ ಸಂಸ್ಥೆಯಾಗಿದೆ. ಇದು ಸಂಶೋಧನಾ ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ಸೇರಿದ್ದು ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ದಾಖಲಾತಿ ಶೇಕಡ 12.5 ರಷ್ಟಿದ್ದು, 2175 ಪೂರ್ಣ ಸಮಯದ ವಿದ್ಯಾರ್ಥಿಗಳಿದ್ದಾರೆ.

 ಪ್ರಿನ್ಸ್ಟನ್ ವಿಶ್ವವಿದ್ಯಾಲಯ

ಪ್ರಿನ್ಸ್ಟನ್ ವಿಶ್ವವಿದ್ಯಾಲಯ

ಈ ಇಂಜಿನಿಯರಿಂಗ್‌ ಕಾಲೇಜು 2 ನೇ ಸ್ಥಾನದಲ್ಲಿದ್ದು, ನ್ಯೂಜರ್ಸಿಯಲ್ಲಿದೆ. ಕಾಲೇಜಿನ ಫ್ಯಾಕಲ್ಟಿ ಅನುಪಾತ 6:1, ಉತ್ತಮ ರೀತಿಯ ವಿದ್ಯಾರ್ಥಿಗಳನ್ನು ಹೊಂದಿದೆ.

 ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಲಾಭದಾಯಕವಲ್ಲದ ಈ ಕಾಲೇಜಿನಲ್ಲಿ 10360 ಫುಲ್‌ ಟೈಮ್‌ ವಿದ್ಯಾರ್ಥಿಗಳಿದ್ದಾರೆ. ಶೇಕಡ 10 ದಾಖಲಾತಿ ಪ್ರಮಾಣ ಹೊಂದಿದೆ.

 ಕ್ಯಾಲಿಫೋರ್ನಿಯಾದ ಬರ್ಕ್ಲಿಯ ವಿಶ್ವವಿದ್ಯಾಲಯ

ಕ್ಯಾಲಿಫೋರ್ನಿಯಾದ ಬರ್ಕ್ಲಿಯ ವಿಶ್ವವಿದ್ಯಾಲಯ

ನಾಲ್ಕನೇ ಸ್ಥಾನದಲ್ಲಿರುವ ಈ ವಿಶ್ವವಿದ್ಯಾನಿಲಯವು ಶೇಕಡ 21.6 ದಾಖಲಾತಿ ಪ್ರಮಾಣ ಹೊಂದಿದ್ದು, ಫ್ಯಾಕಲ್ಟಿ ಅನುಪಾತವು 16:1. ಇಲ್ಲಿ ಅತಿ ಹೆಚ್ಚಿನ ಸಂಶೋಧನೆಗಳು ಜರುಗುವುದರಿಂದ ಸಂಶೋಧನಾ ಕಾಲೇಜುಗಳ ವರ್ಗಕ್ಕೆ ಸೇರಿಸಲಾಗಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ

ಈ ವಿಶ್ವವಿದ್ಯಾನಿಲಯವು ಸಾರ್ವಜನಿಕ ವಿಶ್ವವಿದ್ಯಾಲಯದ ವರ್ಗಕ್ಕೆ ಸೇರುತ್ತದೆ. ಕೇಂಬ್ರಿಡ್ಜ್ ನಲ್ಲಿರುವ ಇದು, ಸಂಶೋಧನಾ ಕಾಲೇಜು ಎಂದು ಹೆಸರು ವಾಸಿಯಾಗಿದೆ. ತುಂಬ ಹಳೆಯ ವಿಶ್ವವಿದ್ಯಾಲಯವಾದರೂ ತನ್ನ ಘನತೆಯನ್ನೂ ಪ್ರಸ್ತುದಲ್ಲೂ ಹಾಗೆ ಕಾಪಾಡಿಕೊಂಡಿದೆ.

 ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ

ಕ್ಯಾಲಿಫೋರ್ನಿಯಾದಲ್ಲಿರುವ ಈ ವಿಶ್ವವಿದ್ಯಾಲಯವು ಖಾಸಗಿ ಇಂಜಿನಿಯರಿಂಗ್‌ ಕಾಲೇಜು, ಆದರೂ ಸಹ ಲಾಭದಾಯಕ ಸಂಸ್ಥೆಯಲ್ಲ. 14793 ಫುಲ್‌ ಟೈಮ್‌ ವಿದ್ಯಾರ್ಥಿಗಳನ್ನು ಹೊಂದಿದ್ದು, ಫ್ಯಾಕಲ್ಟಿ ಅನುಪಾತವು 10:1, ದಾಖಲಾತಿ ಪ್ರಮಾಣ ಶೇಕಡ 7.31 ಇದೆ.

 ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ: ಲಾಸ್ ಎಂಜಲೀಸ್‌

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ: ಲಾಸ್ ಎಂಜಲೀಸ್‌

7ನೇ ಸ್ಥಾನದಲ್ಲಿರುವ ಈ ವಿಶ್ವವಿದ್ಯಾಲಯವು, ಎಂಜೆಲ್‌ ನಗರದಲ್ಲಿದೆ. ಪಬ್ಲಿಕ್‌ ವಿಶ್ವವಿದ್ಯಾನಿಲಯವಾದ ಕಾಲೇಜು SAT ಸ್ಕೋರ್‌ ಅಗತ್ಯಗಳನ್ನು ಪಾಲಿಸುತ್ತಿದೆ.

ETH ಜ್ಯೂರಿಚ್ನ - ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ETH ಜ್ಯೂರಿಚ್ನ - ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಜೂರಿಚ್‌ನಲ್ಲಿರುವ ಈ ಇಂಜಿನಿಯರಿಂಗ್‌ ಕಾಲೇಜಿನ ಪ್ರೊಫೇಸರ್‌ ಮತ್ತು ಹಳೆಯ ವಿದ್ಯಾರ್ಥಿಗಳು ಒಟ್ಟು 21 ನೊಬೆಲ್‌ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದು ಪಬ್ಲಿಕ್‌ ವಿಶ್ವವಿದ್ಯಾಲಯವಾಗಿದ್ದು, ವಿದೇಶಿ ವಿದ್ಯಾರ್ಥಿಗಳಿಗೂ ಪ್ರವೇಶ ಅವಕಾಶ ನೀಡಿದೆ.

ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಅಟ್ಲಾಂಟದಲ್ಲಿರುವ ಇದು 19:1 ಫ್ಯಾಕಲ್ಟಿ ಅನುಪಾತ ಹೊಂದಿದೆ. ಹಾಗೂ ಶೇಕಡ 58.7 ಪ್ರವೇಶಾತಿ ಪ್ರಮಾಣ ಹೊಂದಿದೆ. ಇದು ಸಹ SAT ಸ್ಕೋರ್‌ ಅಗತ್ಯತೆಯನ್ನು ಪಾಲಿಸುತ್ತಿದೆ ಮತ್ತು 18135 ಫುಲ್‌ ಟೈಮ್‌ ವಿದ್ಯಾರ್ಥಿಗಳನ್ನು ಹೊಂದಿದೆ.

Best Mobiles in India

English summary
Higher studies are becoming crucial and selecting where to study is perhaps one of the most important decisions you’ll ever take in your life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X