Home
ಸುದ್ದಿಜಾಲ

ಭಾರತದ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈ ಸೌಲಭ್ಯಗಳಿಲ್ಲ...ಅವು ಯಾವುವು ಗೊತ್ತೇ?

ಈಗಂತೂ ಹಳ್ಳಿಯಿಂದ ದೊಡ್ಡ ನಗರಗಳ ವರೆಗೆ ಸುಲಭ ಪ್ರಯಾಣಕ್ಕೆ ಗೂಗಲ್‌ ಮ್ಯಾಪ್‌ ಅನ್ನು ಬಳಕೆ ಮಾಡಲಾಗುತ್ತದೆ. ಅದರಲ್ಲೂ ಈ ಗೂಗಲ್ ಮ್ಯಾಪ್‌ ವಿಚಾರದಲ್ಲಿ ಸಾಕಷ್ಟು ಕೌತುಕದ ವಿಷಯಗಳೂ ಸಹ ಇರುವುದು ಇನ್ನೂ ಕೆಲವರಿಗೆ ತಿಳಿದಿಲ್ಲ. ಜಗತ್ತಿನಾದ್ಯಂತ ಈ ಗೂಗಲ್‌ ಮ್ಯಾಪ್‌ ಅನ್ನು ಬಳಕೆ ಮಾಡುತ್ತಿದ್ದರೂ ಸಹ ಕೆಲವು ದೇಶಗಳಲ್ಲಿ ಭಿನ್ನ ಫೀಚರ್ಸ್‌ ಲಭ್ಯ ಇದ್ದು, ಇವು ವಿಶೇಷವಾದ ಸೇವೆ ನೀಡುವ ಮೂಲಕ ಜನರನ್ನು ತಲ್ಲೀನಗೊಳಿಸಿವೆ.

ಭಾರತದ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈ ಸೌಲಭ್ಯಗಳಿಲ್ಲ....ಅವು ಯಾವುವು ?

ಹೌದು, ಗೂಗಲ್‌ ಮ್ಯಾಪ್‌ ವಿಚಾರಕ್ಕೆ ಬಂದರೆ ಕೆಲವು ಫೀಚರ್ಸ್‌ಗಳನ್ನು ಭಾರತದಲ್ಲೇ ಹೊಸದಾಗಿ ಪರಿಚಯಿಸಿದರೆ ಇನ್ನೂ ಹಲವು ಫೀಚರ್ಸ್‌ ಈವರೆಗೂ ಭಾರತದ ಬಳಕೆದಾರರಿಗೆ ಲಭ್ಯವಿಲ್ಲ. ಅದರಲ್ಲೂ ಗೂಗಲ್‌ ಮ್ಯಾಪ್‌ ಅನ್ನು 220 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬಳಸಲಾಗುತ್ತಿದ್ದು, ಭಾರತದಲ್ಲಿ ದ್ವಿಚಕ್ರ ವಾಹನ ಮೋಡ್, ಆಫ್‌ಲೈನ್ ಮೋಡ್ ಮತ್ತು ಲ್ಯಾಂಡ್‌ಮಾರ್ಕ್-ಆಧಾರಿತ ನ್ಯಾವಿಗೇಶನ್‌ನಂತಹ ಕೆಲವು ಫೀಚರ್ಸ್‌ಗಳನ್ನು ಮೊದಲು ಪರಿಚಯಿಸಲಾಗಿತ್ತು. ಆದರೆ, ಯಾವೆಲ್ಲಾ ಪ್ರಮುಖ ಫೀಚರ್ಸ್‌ ಭಾರತದ ಬಳಕೆದಾರರಿಗೆ ಲಭ್ಯವಿಲ್ಲ ಎನ್ನುವ ವಿವರ ಇಲ್ಲಿದೆ ನೋಡಿ.

ಲೈವ್ ವೀಕ್ಷಣೆಯೊಂದಿಗೆ ಸರ್ಚ್‌ (Search with Live View)

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದು ವರ್ಧಿತ ರಿಯಾಲಿಟಿ ಲೇಯರ್ ಬೆಂಬಲದೊಂದಿಗೆ ನಕ್ಷೆಗಳ ಆಪ್‌ನಲ್ಲಿ ಹುಡುಕಾಟ ಕಾರ್ಯವನ್ನು ಮಾಡುತ್ತದೆ. ಹಾಗೆಯೇ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಂಡು ಉತ್ತಮ ಮಾರ್ಗ ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ಅಂದರೆ ನೀವು ಬಾರ್ಸಿಲೋನಾದ ಕ್ಯಾಂಪ್ ನೌ ಕ್ರೀಡಾಂಗಣಕ್ಕೆ ಹೋಗಲು ಇಚ್ಚಿಸಿದರೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಓಪನ್‌ ಮಾಡಿ ನಿಮ್ಮ ಗಮ್ಯಸ್ಥಾನವನ್ನು ತಲುಪಲು ತೇಲುವ ಬಾಣಗಳನ್ನು ಅನುಸರಿಸಬೇಕಿದೆ. ಸದ್ಯಕ್ಕೆ ಈ ಫೀಚರ್ಸ್‌ ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಪ್ಯಾರಿಸ್ ಮತ್ತು ಟೋಕಿಯೊದಲ್ಲಿ ಲಭ್ಯವಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಡಬ್ಲಿನ್ ಮತ್ತು ಮ್ಯಾಡ್ರಿಡ್‌ಗೂ ಪರಿಚಯಿಸಲಾಗುತ್ತದೆ ಎನ್ನಲಾಗಿದೆ.

ಒಳಾಂಗಣ ಲೈವ್ ವೀಕ್ಷಣೆ (Indoor Live View)

ಈ ಒಳಾಂಗಣ ಲೈವ್ ವ್ಯೂ ಫೀಚರ್ಸ್‌ಮೂಲಕ ಮಾಲ್‌ಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಒಳಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ತೋರಿಸುತ್ತದೆ. ಈ ಫೀಚರ್ಸ್‌ ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಬರ್ಲಿನ್, ಫ್ರಾಂಕ್‌ಫರ್ಟ್, ಲಂಡನ್, ಮ್ಯಾಡ್ರಿಡ್, ಮೆಲ್ಬೋರ್ನ್, ಪ್ಯಾರಿಸ್, ಪ್ರೇಗ್, ಸಾವೊ ಪಾಲೊ, ಸಿಂಗಾಪುರ, ಸಿಡ್ನಿ ಮತ್ತು ತೈಪೆಯಲ್ಲಿ 1,000 ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾಲ್‌ಗಳಿಗೆ ಪರಿಚಯಿಸಲಾಗುತ್ತದೆ ಎಂದು ಗೂಗಲ್‌ ಮಾಹಿತಿ ನೀಡಿದೆ.

ಭಾರತದ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈ ಸೌಲಭ್ಯಗಳಿಲ್ಲ....ಅವು ಯಾವುವು ?

ಇಮ್ಮೆರ್ಸಿವ್ ವ್ಯೂ

ಈ ಫೀಚರ್ಸ್‌ ಎಲ್ಲಾ ಬಳಕೆದಾರರಿಗೂ ಅಗತ್ಯವಾಗಿ ಬೇಕಾಗಿದೆ. ಯಾಕೆಂದರೆ ಈ ಫೀಚರ್ಸ್‌ ಮೂಲಕ ಬಳಕೆದಾರರು ಹವಾಮಾನ, ದಟ್ಟಣೆಯಂತಹ ಮಾಹಿತಿಯನ್ನು ಪೂರ್ವದಲ್ಲಿಯೇ ತಿಳಿದುಕೊಳ್ಳಬಹುದು. ಕಳೆದ ವರ್ಷ ಗೂಗಲ್‌ I/O ನಲ್ಲಿ ತಲ್ಲೀನಗೊಳಿಸುವ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ನೀವು ಸಂಚರಿಸಲು ಉದ್ದೇಶಿಸಿರುವ ಪ್ರದೇಶದಲ್ಲಿನ ಸಂಪೂರ್ಣ ಮಾಹಿತಿಯನ್ನು ಇದು ಒದಗಿಸುತ್ತದೆ. ಆದರೆ, ಈ ಫೀಚರ್ಸ್‌ ಭಾರತದ ಬಳಕೆದಾರರಿಗೆ ಯಾವಾಗ ಲಭ್ಯವಾಗುತ್ತದೋ ಕಾದು ನೋಡಬೇಕಿದೆ.

ಪರಿಸರ ಸ್ನೇಹಿ ಮಾರ್ಗಗಳು

ಪರಿಸರ ಸ್ನೇಹಿ ಮಾರ್ಗಗಳು ಫೀಚರ್ಸ್‌ ಗೂಗಲ್‌ನಲ್ಲಿ ಯಶಸ್ಸು ಕಂಡಿದೆ. ಗೂಗಲ್‌ ಮ್ಯಾಪ್‌ ಅನ್ನು ಸಂಪೂರ್ಣವಾಗಿ ಹೊಸ ರೂಟಿಂಗ್ ಮಾಡೆಲ್‌ನೊಂದಿಗೆ ಅಪ್‌ಡೇಟ್‌ ಮಾಡಲಾಗಿದ್ದು, ನವೀಕರಿಸಲಾಗಿದೆ, ಇದು ಪರಿಸರ ಸ್ನೇಹಿ ರೀತಿಯಲ್ಲಿ ಜನರು ತಮ್ಮ ಗಮ್ಯಸ್ಥಾನವನ್ನು ಬೇಗ ತಲುಪಲು ಸಹಾಯ ಮಾಡುತ್ತದೆ. ಸದ್ಯಕ್ಕೆ ಈ ಫೀಚರ್ಸ್‌ ಯುಎಸ್‌ ಮತ್ತು ಯೂರೋಪ್‌ನಲ್ಲಿ ಲಭ್ಯವಿದೆ.


ಸೈಕ್ಲಿಸ್ಟ್‌ಗಳಿಗೆ ಲೈಟ್ ನ್ಯಾವಿಗೇಷನ್

ಸೈಕ್ಲಿಸ್ಟ್‌ಗಳಿಗೆ ಲೈಟ್ ನ್ಯಾವಿಗೇಷನ್ ಫೀಚರ್ಸ್‌ ಬಹಳ ಉಪಯೋಗ. ಆದರೆ, ಇದು ಭಾರತೀಯ ಸೈಕ್ಲಿಸ್ಟ್‌ಗಳಿಗೆ ಲಭ್ಯವಿಲ್ಲ. ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ಸೈಕ್ಲಿಸ್ಟ್‌ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಪ್ರವೇಶಿಸದೆಯೇ ಸುಲಭವಾಗಿ ತಿರುಗಲು ಗೂಗಲ್‌ ಲೈಟ್ ನ್ಯಾವಿಗೇಷನ್ ಎಂಬ ಫೀಚರ್ಸ್‌ ಅನ್ನು ಪ್ರಾರಂಭಿಸಿತು. ಇನ್ನು ಸೈಕ್ಲಿಸ್ಟ್‌ಗಳು ತಮ್ಮ ಡಿಸ್‌ಪ್ಲೇಯನ್ನು ಆನ್‌ನಲ್ಲಿ ಇರಿಸುವ ಅಗತ್ಯವಿಲ್ಲದೆ ಅವರ ಮಾರ್ಗದ ಕುರಿತು ಪ್ರಯಾಣದ ಪ್ರಗತಿ, ನೈಜ ಸಮಯದಲ್ಲಿ ನಿಮ್ಮ ಇಟಿಎ ಅಪ್‌ಡೇಟ್ ಮತ್ತು ಮಾರ್ಗದ ಎತ್ತರದಂತಹ ಪ್ರಮುಖ ವಿವರಗಳನ್ನು ತ್ವರಿತವಾಗಿ ತಿಳಿಯಲು ಅನುವು ಮಾಡಿಕೊಡುತ್ತದೆ.

ಭಾರತದ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈ ಸೌಲಭ್ಯಗಳಿಲ್ಲ....ಅವು ಯಾವುವು ?

ನೆರೆಹೊರೆಯ ವೈಬ್ ಪರಿಶೀಲನೆ (Neighbourhood vibe check)

ನೀವು ಯಾವ ಸ್ಥಳಕ್ಕೆ ಹೋಗಲು ಉದ್ದೇಶ ಹೊಂದಿದ್ದೀರೋ ಆ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಫೀಚರ್ಸ್‌ ಸಹಾಯ ಮಾಡಲಿದೆ. ಅಂದರೆ ನೀವು ಯಾವುದಾದರೂ ನಗರದ ಕೇಂದ್ರ ಮಾರುಕಟ್ಟೆಗೆ ಭೇಟಿ ನೀಡಲು ಮುಂದಾಗಿದ್ದೀರಾ ಎಂದಾದರೆ, ಆ ಪ್ರದೇಶದ ಹೆಚ್ಚು ಜನಪ್ರಿಯ ತಾಣಗಳನ್ನು ನೋಡಲು ನೀವು ವೈಬ್ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು. ಇದರಲ್ಲಿ ಸ್ಥಳಗಳ ವಿಮರ್ಶೆಗಳು, ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಮಾಹಿತಿ ದೊರೆಯುತ್ತದೆ.

Best Mobiles in India

English summary
Here are some of Google Maps features that are currently not available in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+