Home
ಸುದ್ದಿಜಾಲ

ಆನ್‌ಲೈನ್‌ನಿಂದ ಹಣ ಸಂಪಾದಿಸಲು 10 ಸರಳ ವಿಧಾನಗಳು

By Suneel

ಯಾವುದೇ ಬ್ಯುಸಿನೆಸ್‌ ಆರಂಭಮಾಡುವುದು ಸುಲಭದ ಕೆಲಸವಲ್ಲ. ಆದರೆ ಇಂದು ಕೆಲವು ಸುಲಭದ ಮಾರ್ಗಗಳು ಇಂಟರ್ನೆಟ್‌ ಮೂಲಕ ಹಣ ಸಂಪಾದನೆ ಮಾಡಲು ಇವೆ. ಆದರೆ ನಿಮಗೆ ಉತ್ತಮ ಬ್ಯುಸಿನೆಸ್ ಐಡಿಯಾಗಳು, ಸೃಜನಶೀಲತೆಗಳು ಅವಶ್ಯಕ. ಅಲ್ಲದೇ ಮಾರುಕಟ್ಟೆ ಯೋಜನೆಯು ಬೇಕಾಗುತ್ತದೆ. ಕೆಲವು ಬೇಸಿಕ್‌ ಸ್ಕಿಲ್‌ಗಳೊಂದಿಗೆ ಡೊಮೇನ್‌ ಮತ್ತು ಹೋಸ್ಟಿಂಗ್‌ ಮಾಡುವುದರಿಂದ ಸರಳ ರೀತಿಯಲ್ಲಿ ಆನ್‌ಲೈನ್‌ ಮೂಲಕ ಹಣಗಳಿಸಬಹುದಾಗಿದೆ.

ಓದಿರಿ: ಶಿಕ್ಷಣ ಅರ್ಧಕ್ಕೆ ಬಿಟ್ರು ಟಾಪ್‌ ಸೆಲೆಬ್ರಿಟಿಗಳು :ಯಾರು ಗೊತ್ತೇ?

ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಮಾಡಬಹುದಾದ ವಿಧಾನಗಳು ಮತ್ತು ಬ್ಯುಸಿನೆಸ್‌ಗಳು ಯಾವುವು ಎಂಬುದನ್ನು ಈ ಲೇಖನ ಓದಿ ತಿಳಿಯಿರಿ.

 ಡೊಮೇನ್ ಪಡೆಯಿರಿ (Domain)

ಡೊಮೇನ್ ಪಡೆಯಿರಿ (Domain)

ಇಂದು ಪ್ರಪಂಚದಾದ್ಯಂತ ಹಲವು ಜನರು ಡೊಮೇನ್‌ ಪಡೆದು ಅಂದರೆ ಸ್ವಂತ ವೆಬ್‌ಸೈಟ್‌ಗಳನ್ನು ಸ್ಥಾಪಿಸಿ ತಮ್ಮ ಸೈಟ್‌ಗಳಲ್ಲಿ ಕೆಲವು ವಿಧದ ಸೇವೆ, ತರಬೇತಿಗಳು, ಜನರು ಯಾವುದಾದರೂ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುವುದು. ಹೀಗೆ ಮಾಡುವುದರಿಂದ ನೀವು ಹಣಗಳಿಸಬಹುದಾಗಿದೆ.

ಇ-ಕಾಮರ್ಸ್‌ ಸ್ಟೋರ್‌

ಇ-ಕಾಮರ್ಸ್‌ ಸ್ಟೋರ್‌

ಸ್ವಂತ ಡೊಮೇನ್‌ ಪಡೆಯುವುದರಿಂದ ನಿಮ್ಮದೇ ಆದ ಇ-ಕಾಮರ್ಸ್‌ ಸೈಟ್‌ಗಳನ್ನು ಆರಂಭಿಸಿ. ಇದರಲ್ಲಿ ನಿಮ್ಮ ಆಸಕ್ತಿಯ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಉತ್ತಮ ರೀತಿಯ ವಿನ್ಯಾಸ ಪಡೆಯಿರಿ. ಹಾಗೂ ಕಾರ್ಯಕ್ರಮಗಳಿಗೆ ಸ್ಪಾನ್‌ಸರ್‌ಶಿಪ್‌ ಲಿಸ್ಟ್‌ ನೀಡುವ ಕೆಲಸವನ್ನು ನಿರ್ವಹಿಸಿ ಇದರಿಂದ ಹಲವು ರೀತಿಯಲ್ಲಿ ಹಣಗಳಿಸಬಹುದಾಗಿದೆ. ಅಲ್ಲದೇ ವಿಶೇಷ ಪ್ರಾಡಕ್ಟ್‌ಗಳ ಸ್ಟೋರ್‌ಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸಿ.

ಬ್ಲಾಗಿಂಗ್‌ (Blogging)

ಬ್ಲಾಗಿಂಗ್‌ (Blogging)

ನೀವು ಅಂದುಕೊಂಡಹಾಗೆ ಬ್ಲಾಗಿಂಗ್‌ ಆರಂಭಿಸುವುದು ಕಷ್ಟಕರವೇನಲ್ಲ. ಇದು ಬ್ಲಾಗಿಂಗ್‌ ಮಾಡುವುದರಿಂದ ಹಣ ಸಂಪಾದನೆ ಮಾಡಲು ಇಂಟರ್ನೆಟ್‌ ಟ್ರಾಫಿಕ್‌ ಅನ್ನು ಹೆಚ್ಚು ನಿಮ್ಮ ಸೈಟ್‌ಗೆ ಬರುವಂತೆ ಮಾಡಬೇಕಷ್ಟೆ. ಇದರಿಂದ ಜಾಹಿರಾತು ಬ್ಯಾನರ್‌ಗಳು ನಿಮ್ಮ ಸೈಟ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕೇಳಿ ನಂತರದಲ್ಲಿ ಅವುಗಳಿಂದ ನೀವು ಹಣಗಳಿಸಬಹುದು.

 eBay ನಲ್ಲಿ ಮಾರಾಟ ಮಾಡಿ

eBay ನಲ್ಲಿ ಮಾರಾಟ ಮಾಡಿ

eBay ಯಾವುದೇ ಒಂದು ಪ್ರಾಡಕ್ಟ್‌ ಮಾರುವ ಉತ್ತಮ ಕೌಶಲ್ಯದಿಂದ ಸೈಟ್‌ ನಡೆಸುವುದಾಗಿದೆ. ಇದರಿಂದ ಟಾರ್ಗೆಟ್‌ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿದಂತೆಲ್ಲಾ ಹೆಚ್ಚು ಹಣವನ್ನು ಗಳಿಸಬಹುದಾಗಿದೆ.

ತರಬೇತಿ ನೀಡುವುದು

ತರಬೇತಿ ನೀಡುವುದು

ನೀವು ಡೊಮೇನ್‌ ಪಡೆದ ಸೈಟ್‌ನಲ್ಲಿ ನಿಮ್ಮ ಯಾವುದಾದರೂ ಉತ್ತಮ ಸೃಜನಶೀಲತೆಗಳಿಂದ ಇತರರಿಗೆ ತರಬೇತಿ ನೀಡಿ. ಈ ತರಭೇತಿಗೆ ಮೊದಲು ಕಡಿಮೆ ಹಣ ಚಾರ್ಜ್‌ ಮಾಡಿ. ನಂತರದಲ್ಲಿ ಹೆಚ್ಚು ಮಾಡಿ ಹಣ ಪಡೆಯಿರಿ. ಅಂದರೆ ಭಾಷೆಯನ್ನು ಕಲಿಸುವುದು, ಮಾರುಕಟ್ಟೆ ತರಬೇತಿ, ಬರವಣಿಗೆ ಶೈಲಿ ಅಭಿವೃದ್ದಿಪಡಿಸುವ ತರಭೇತಿ ನೀಡುವುದು, ಇತರೆ ತರಬೇತಿಗಳನ್ನು ನಿಮ್ಮ ಸೈಟ್‌ನಲ್ಲಿ ನೀಡುವುದು.

 ಡ್ರಾಪ್‌ ಶಿಪ್ಪರ್‌

ಡ್ರಾಪ್‌ ಶಿಪ್ಪರ್‌

ನಿಮ್ಮ ವೆಬ್‌ಸೈಟಿಗೆ ವಸ್ತುಗಳನ್ನು ಖರೀದಿಸಲು ಬಂದ ಗ್ರಾಹಕರನ್ನು ಪ್ರಾಡಕ್ಟ್‌ನ ಸೈಟಿಗೆ ನೇರವಾಗಿ ಕಳುಹಿಸುವ ಕೆಲಸವನ್ನು ಮಾಡುವುದನ್ನು "ಡ್ರಾಪ್‌ ಶಿಪ್ಪರ್‌" ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನೀವು ಹಣ ಸಂಪಾದನೆ ಮಾಡಬಹುದಾಗಿದೆ.

 ಪೇಡ್ ಬ್ಲಾಗಿಂಗ್

ಪೇಡ್ ಬ್ಲಾಗಿಂಗ್

ಇಂದು 35 ಕೋಟಿಗೂ ಅಧಿಕ ವೆಬ್‌ಸೈಟ್‌ಗಳಿಗೆ ಮಾಹಿತಿಯ ಕೊರತೆ ಇದೆ. ನೀವು ಸಹ ಉತ್ತಮ ಬರಹಗಾರರಾದಲ್ಲಿ ಇತರರಿಗೂ ನಿಮ್ಮ ಬ್ಲಾಗ್‌ಗೆ ಮಾಹಿತಿಯನ್ನು ಪೋಸ್ಟ್ ಮಾಡಲು ಅವಕಾಶ ನೀಡಿ ಅವರಿಗೂ ಹಣ ನೀಡಿ. ಇದರಿಂದ ನಿಮ್ಮ ಬ್ಲಾಗ್‌ ಟ್ರಾಫಿಕ್‌ ಹೆಚ್ಚುತ್ತದೆ. ಆದರೆ ಬರಹಗಳು ಹೆಚ್ಚು ಆಸಕ್ತವಾಗಿರಬೇಕು. ಇದರಿಂದ ಜಾಹಿರಾತು ಹೆಚ್ಚಲು ಕಾರಣವಾಗಿ ನೀವು ಉತ್ತಮ ಹಣ ಪಡೆಯಬಹುದು.

ವೆಬ್‌ ಡಿಸೈನ್‌ ಆಫರ್‌ ಮಾಡಿ

ವೆಬ್‌ ಡಿಸೈನ್‌ ಆಫರ್‌ ಮಾಡಿ

ನೀವು ಉತ್ತಮ ಕಂಪ್ಯೂಟರ್‌ ಸ್ಕಿಲ್‌ಗಳಾದ ವೆಬ್‌ ಡಿಸೈನ್‌ ವಿನ್ಯಾಸ ಮಾಡುವವರೇ ಆದಲ್ಲಿ ನೀವು ಯಾವುದೇ ಬಂಡವಾಳವಿಲ್ಲದೇ ಹಣ ಗಳಿಸಲು ಉತ್ತಮ ಮಾರ್ಗ. ವೆಬ್‌ ಡಿಸೈನ್‌ ಸ್ಕಿಲ್‌ ಇದ್ದಲ್ಲಿ ಹವ್ಯಾಸಿ ಸೈಟ್‌ಗಳಿಗೆ ಲಾಗಿನ್‌ ಆಗಿ ಅಲ್ಲಿ ಇತರೆ ಕಂಪನಿಗಳು ನಿಮಗೆ ಅವರ ಕಂಪನಿಯ ವೆಬ್‌ ಡಿಸೈನ್‌ ಮಾಡುವ ಅವಕಾಶ ನೀಡುತ್ತವೆ. ಹೀಗೆ ಮಾಡುವುದರಿಂದ ಮನೆಯಲ್ಲೇ ಕುಳಿತು ನೀವು ಹಣ ಸಂಪಾದನೆ ಮಾಡಬಹುದು.

ವೀಡಿಯೋ ತಯಾರಿಸಿ

ವೀಡಿಯೋ ತಯಾರಿಸಿ

ವೀಡಿಯೋ ವೇದಿಕೆಗಳು ಹೆಚ್ಚು ಅಭಿವೃದ್ದಿಯಲ್ಲಿವೆ. ನೀವು ಯಾವುದೇ ಉತ್ತಮವಾದ ವೀಡಿಯೋಗಳನ್ನು ನೀಡಿದಲ್ಲಿ ಅದಕ್ಕೂ ಸಹ ಹಣ ಪಡೆಯಬಹುದು. ಕ್ರಿಯೇಟಿವ್‌ ವೀಡಿಯೋಗಳು ಇಂಟರ್ನೆಟ್‌ ಬಳಕೆದಾರರನ್ನು ಹೆಚ್ಚು ಸೆಳೆಯುವುದರಿಂದ ಕ್ರಿಯೇಟಿವ್‌ ವೀಡಿಯೋಗಳಿಗೆ ಹೆಚ್ಚು ಬೇಡಿಕೆ ಇದೆ. ಅಂತಹ ವೀಡಿಯೋಗಳನ್ನು ಜಾಹಿರಾತು ವಿಷಯಗಳ ಮೇಲೆ ಕುರಿತು ಮಾಡಿದ್ದಲ್ಲಿ ಹಣ ಗಳಿಸಬಹುದಾಗಿದೆ.

ಸಾಮಾಜಿಕ ಜಾಲತಾಣ ಪ್ರೊಫೈಲ್‌ ನಿರ್ವಹಣೆ

ಸಾಮಾಜಿಕ ಜಾಲತಾಣ ಪ್ರೊಫೈಲ್‌ ನಿರ್ವಹಣೆ

ಆನ್‌ಲೈನ್‌ ಮೀಡಿಯಾ ಆನ್‌ಲೈನ್‌ ಬ್ಯುಸಿನೆಸ್‌ನ ಪ್ರಧಾನ ಅಂಗ. ಹಲವು ಬ್ಯುಸಿನೆಸ್‌ ಮಾಲೀಕರಿಗೆ ಸೋಶಿಯಲ್‌ ಮೀಡಿಯಾದಲ್ಲಿ ತೊಡಗಿಕೊಳ್ಳಲು ಸಮಯವಿಲ್ಲ. ಅಂತಹವರಿಗೆ ಸಹಾಯ ಮಾಡಿ ಹೆಚ್ಚು ಗ್ರಾಹಕರನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಸೆಳೆಯುವ ಕೆಲಸ ಮಾಡುವ ಮುಖಾಂತರ ಹಣ ಗಳಿಸಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Internet Business Ideas To Make Money Online. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+