Home
ಸುದ್ದಿಜಾಲ

ಶಿಕ್ಷಣ ಅರ್ಧಕ್ಕೆ ಬಿಟ್ರು ಟಾಪ್‌ ಸೆಲೆಬ್ರಿಟಿಗಳು :ಯಾರು ಗೊತ್ತೇ?

By Suneel

ಪ್ರಸ್ತುತದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಯಾವ ಕಾನ್ವೆಂಟ್‌ಗೆ ಸೇರಿಸಬೇಕು ಅಂತ ಯೋಚನೆ ಮಾಡ್ತಾರೆ ಹೊರತು, ತಮ್ಮ ಮಕ್ಕಳಿಗೆ ಜೀವನದಲ್ಲಿ ಏನ್‌ ಸಾಧನೆ ಮಾಡಬೇಕು ಅಂತ ಯೋಚನೆ ಮಾಡಿದ್ದೀ ಎಂಬ ಪ್ರಶ್ನೆಯನ್ನು ಕೇಳೋದೇ ಇಲ್ಲಾ. ಈ ಪ್ರಶ್ನೆಯೇ ಇಲ್ಲದ ಮೇಲೆ ಮಕ್ಕಳಿಗೆ ಸ್ಫೂರ್ತಿ ತಾನೆ ಯಾರ್‌ ಆಗ್ತಾರೆ ಹೇಳಿ. ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳನ್ನು ಜಾಬ್‌ ಓರಿಯಂಟೆಡ್‌ ಕೋರ್ಸ್‌ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಇದೆಲ್ಲಾ ಪಕ್ಕಕ್ಕೇ ಸರಿಸೋಣ.

ಓದಿರಿ: ಫೇಸ್‌ಬುಕ್‌ ಹೆಚ್ಚು ಬಳಸುವಲ್ಲಿ ಪೋಷಕರೇ ಮೇಲುಗೈ

ಸಾಧನೆ ಮಾಡೋಕೆ, ಜಗತ್ತಿಗೆ ಕೊಡುಗೆ ನೀಡೋಕೆ ಶಿಕ್ಷಣವನ್ನೇ ಅರ್ಧಕ್ಕೆ ಬಿಟ್ಟು ಸಾಧನೆ ಮಾಡಿದ ಹಲವು ಮಹಾನ್‌ ವ್ಯಕ್ತಿಗಳು ಪ್ರತಿಯೊಬ್ಬರಿಗೆ ಸ್ಪೂರ್ತಿಯಾಗುವರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಖ್ಯಾತಗೊಂಡ ತಮ್ಮನ್ನು ತಮ್ಮ ಸಾಧನೆ ಇಂದ ಪ್ರಪಂಚದಾದ್ಯಂತ ಗುರುತಿಸಿಕೊಂಡ ಹಲವು ಸಾಧಕರು ಯಾರೂ ಸಹ ಉನ್ನತ ಶಿಕ್ಷಣವನ್ನು ಮಾಡಿದವರಲ್ಲ. ಆದರೆ ಅವರ ಸಾಧನೆಗಳು ಎಂದಿಗೂ ಮರೆಯುವವಲ್ಲ. ತಾವು ಓದಿದ್ದು ಕೇವಲ ಪ್ರಾಥಮಿಕ ಶಿಕ್ಷಣವಾದರೂ ಸಹ ಉನ್ನತ ಶಿಕ್ಷಣ ಮಾಡಿದ ಸಾವಿರಾರು ಜನರು ಅವರ ಟೆಕ್‌ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾದ್ರೆ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸಾಧನೆ ಮಾಡಿದ ಆ ಸಾಧಕರು ಹಾಗೂ ಸಾಮಾಜಿಕ ಜಾಲತಾಣ ಸೆಲಿಬ್ರಿಟಿಗಳು ಯಾರು ಎಂಬುದನ್ನು ಈ ಲೇಖನದಲ್ಲಿ ಓದಿರಿ..

ಬಿಲ್‌ ಗೇಟ್ಸ್‌

ಬಿಲ್‌ ಗೇಟ್ಸ್‌

ಬಿಲ್‌ಗೇಟ್ಸ್‌ ರವರು ಮೈಕ್ರೋಸಾಫ್ಟ್‌ ಟೆಕ್‌ ಕಂಪನಿಯ ಸಂಸ್ಥಾಪಕ. ಇವರು ತಮ್ಮ 19 ವಯಸ್ಸಿಗೆ ಶಿಕ್ಷಣವನ್ನು ಬದಿಗೆ ಸರಿಸಿದರು.

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಪ್ರಸ್ತುತದಲ್ಲಿ ಪ್ರಖ್ಯಾತವಾದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅಧ್ಯಕ್ಷ ಮತ್ತು ಸಿಇಓ ಆದ ಮಾರ್ಕ್‌ ಜುಕರ್‌ಬರ್ಗ್‌ ರವರು ಇಂದು ಪ್ರಪಂಚಕ್ಕೆ ಗೊತ್ತಿದ್ದರೂ ಸಹ ಅವರು ತಮ್ಮ ಶಿಕ್ಷಣವನ್ನು 19ನೇ ವಯಸ್ಸಿಗೆ ನಿಲ್ಲಿಸಿದರು.

ಸಚಿನ್‌ ತೆಂಡೂಲ್ಕರ್‌

ಸಚಿನ್‌ ತೆಂಡೂಲ್ಕರ್‌

ಗಾಡ್‌ ಆಫ್‌ ಕ್ರಿಕೆಟ್‌, ಕ್ರಿಕೆಟ್‌ ಮಾಂತ್ರಿಕ ಎಂದು ಕರೆಯಲ್ಪಡುವ ಭಾರತದ ಸಚಿನ್‌ ತೆಂಡೂಲ್ಕರ್‌ರವರು ಕೇವಲ 16 ನೇ ವಯಸ್ಸಿಗೆ ಶಾಲೆಬಿಟ್ಟರು.

ಲ್ಯಾರಿ ಪೇಜ್

ಲ್ಯಾರಿ ಪೇಜ್

ಪ್ರಪಂಚದ ಅತಿದೊಡ್ಡ ಮಾಹಿತಿ ಸರ್ಚ್‌ ಇಂಜಿನ್‌ ಗೂಗಲ್‌ನ ಸಹ-ಸಂಸ್ಥಾಪಕರಾದ 'ಲ್ಯಾರಿ ಪೇಜ್‌' ರವರು ತಮ್ಮ ಶಿಕ್ಷಣವನ್ನು ಅವರ 21 ವಯಸ್ಸಿನಲ್ಲಿಯೇ ಕೊನೆಗೊಳಿಸಿದರು

ಅಮೀರ್‌ಖಾನ್‌

ಅಮೀರ್‌ಖಾನ್‌

'ಅಮೀರ್‌ ಖಾನ್‌' ರವರು ಭಾರತ ಚಿತ್ರರಂಗ ಕಂಡ ಅತ್ಯಂತ ಪ್ರಭಾವಶಾಲಿ ನಟ. ಇವರು ಶಾಲೆ ಬಿಟ್ಟ ವಯಸ್ಸು ಗೊತ್ತೇ ? ಅವರು ತಮ್ಮ 17 ನೇ ವಯಸ್ಸಿಗೆ ಶಾಲೆ ಬಿಟ್ಟರು.

 ವಾಲ್ಟ್‌ ಡಿಸ್ನಿ

ವಾಲ್ಟ್‌ ಡಿಸ್ನಿ

ವಾಲ್ಟ್‌ ಡಿಸ್ನಿ ಹೆಸರಾಂತ ಚಲನಚಿತ್ರ ನಿರ್ಮಾಪಕ ಮತ್ತು ವಾಲ್ಟ್‌ ಡಿಸ್ನಿ ಕಂಪನಿಯ ಸಹ-ಸಂಸ್ಥಾಪಕ. ಇವರು ತಮ್ಮ ಶಿಕ್ಷಣವನ್ನು 16 ನೇ ವಯಸ್ಸಿಗೆ ಬಿಟ್ಟರು.

 ಅಜೀಂ ಪ್ರೇಮ್‌ಜಿ

ಅಜೀಂ ಪ್ರೇಮ್‌ಜಿ

ದೇಶದ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆಯ ಅಧ್ಯಕ್ಷರಾದ 'ಅಜೀಂ ಪ್ರೇಮ್‌ಜಿ'ಯವರು ತಮ್ಮ ವಿದ್ಯಾಭ್ಯಾಸವನ್ನು 21ನೇ ವಯಸ್ಸಿಗೆ ಬಿಟ್ಟರು.

 ಮೈಕೆಲ್‌ ಡೆಲ್‌

ಮೈಕೆಲ್‌ ಡೆಲ್‌

ಡೆಲ್‌ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಆದ ಮೈಕೆಲ್‌ ಡೆಲ್‌ ಅವರು ಪಿಯುಸಿ ಹಂತದಲ್ಲೇ ಕಾಲೇಜಿಗೆ ಗುಡ್‌ಬಾಯ್‌ ಹೇಳಿದವರು.

ಅಕ್ಷಯ್‌ ಕುಮಾರ್‌

ಅಕ್ಷಯ್‌ ಕುಮಾರ್‌

ಬಾಲಿವುಡ್‌ ಚಿತ್ರರಂಗದ ನಟ ಕರ್ತಾನ್‌ ಕಿ ಖಿಲಾಡಿ 'ಅಕ್ಷಯ್‌ ಕುಮಾರ್‌' ರವರು ಸಹ ತಮ್ಮ ವಿದ್ಯಾಭ್ಯಾಸಕ್ಕೆ 21 ನೇ ವಯಸ್ಸಿನಲ್ಲಿಯೇ ಟಾಟಾ ಮಾಡಿದವರು.

ಸ್ಟೀವ್‌ ಜಾಬ್‌

ಸ್ಟೀವ್‌ ಜಾಬ್‌

ಆಪಲ್‌ ಸಂಸ್ಥೆಯ ಸಹ-ಸಂಸ್ಥಾಪಕರಾದ ಸ್ಟೀವ್‌ ಜಾಬ್‌ ರವರು ತಮ್ಮ ಶಿಕ್ಷಣವನ್ನು 22 ವರ್ಷಕ್ಕೆ ಕೊನೆಗೊಳಿಸಿದರು.

ಸುಭಾಷ್‌ ಚಂದ್ರ ಗೋಯೆಲ್‌

ಸುಭಾಷ್‌ ಚಂದ್ರ ಗೋಯೆಲ್‌

ಭಾರತದ ಅತಿದೊಡ್ಡ ಟಿವಿ ಚಾನೆಲ್‌ 'ಜೀ ಮಿಡಿಯಾ ನೆಟ್‌ವರ್ಕ್‌'ನ ಅಧ್ಯಕ್ಷ ರಾದ ಸುಭಾಷ್‌ ಚಂದ್ರ ಗೋಯೆಲ್‌ ರವರು ಕೇವಲ 12 ನೇ ವಯಸ್ಸಿಗೆ ಅಂದ್ರೆ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶಾಲೆಗೆ ಗುಡ್‌ಬಾಯ್‌ ಹೇಳಿದವರು.

 ಜಾನ್‌ ಕೋಂ

ಜಾನ್‌ ಕೋಂ

ಪ್ರಖ್ಯಾತ ಇನ್ಸ್ಟಾಂಟ್‌ ಮೆಸೇಜ್‌ ವೇದಿಕೆಯಾದ ವಾಟ್ಸಾಪ್‌ನ ಸಂಸ್ಥಾಪಕರಾದ "ಜಾನ್‌ ಕೋಂ"ರವರು ತಮ್ಮ 20 ನೇ ವಯಸ್ಸಿಗೆ ಕಾಲೇಜು ಶಿಕ್ಷಣಕ್ಕೆ ಬಾಯ್‌ ಹೇಳಿದರು.

 ಆಲ್ಬರ್ಟ್‌ ಐನ್‌ಸ್ಟೈನ್‌

ಆಲ್ಬರ್ಟ್‌ ಐನ್‌ಸ್ಟೈನ್‌

ಭೌತಶಾಸ್ತ್ರ ಕ್ಷೇತ್ರದಲ್ಲೇ ತಳಹದಿ ಹಾಕಿದ "ಆಲ್ಬರ್ಟ್‌ ಐನ್‌ಸ್ಟೈನ್‌" ರವರು ಕೇವಲ 15 ನೇ ವಯಸ್ಸಿಗೆ ಟಾಟಾ ಮಾಡಿದರು.

ಎಲ್ಟನ್‌ ಜಾನ್‌

ಎಲ್ಟನ್‌ ಜಾನ್‌

ಪ್ರಪಂಚದಲ್ಲೇ ಅತಿಹೆಚ್ಚು ಸಂಗೀತವನ್ನು ಮಾರಾಟಹೊಂದಿರುವ ಸಂಗೀತಗಾರರಾದ "ಎಲ್ಟನ್‌ ಜಾನ್‌"ರವರು ಪ್ರೌಢಶಾಲೆಗೆ ಗುಡ್‌ ಬಾಯ್‌ ಹೇಳಿದವರು.

ಮೇರಿ ಕೋಂ

ಮೇರಿ ಕೋಂ

ಪ್ರಪಂಚದ ಅದ್ಭುತ ಬಾಕ್ಸರ್‌ ಹಾಗೂ ಐದು ಭಾರಿ ವರ್ಲ್ಡ್‌ ಬಾಕ್ಸರ್‌ ಚಾಂಪಿಯನ್‌ಶಿಪ್‌ ಮತ್ತು ಒಲಿಂಪಿಕ್‌ ಮೆಡಲಿಸ್ಟ್‌ ಮೇರಿ ಕೋಂ ರವರು ಕೇವಲ 8 ನೇ ತರಗತಿಗೆ ಶಾಲೆ ಬಿಟ್ಟರು.

Best Mobiles in India

English summary
People Who Dropped Out Of School And Won The World Anyway. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+