Home
ಸುದ್ದಿಜಾಲ

5G ಫೋನ್‌ನೊಂದಿಗೆ 5G ವ್ಯಾಪ್ತಿಯಲ್ಲಿದ್ದರೂ ಇಂಟರ್ನೆಟ್‌ ನಿಧಾನವೇ: ಈ ಕೆಲಸ ಮಾಡಿ!

5G ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಭಾರೀ ಬೇಡಿಕೆ ಸೃಷ್ಟಿಮಾಡಿವೆ. ಈ ನಡುವೆ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌ ಹಾಗೂ ಜಿಯೋ ತಾಮುಂದು ನಾಮುಂದು ಎಂಬಂತೆ ಒಂದಕ್ಕೊಂದು ಪೈಪೋಟಿಯಲ್ಲಿ 5G ಸೇವೆ ನೀಡುತ್ತಾ ಬರುತ್ತಿದ್ದು, ಅದಾಗ್ಯೂ ಕೆಲವು ಕಡೆ 5G ಜಾಲವಿದ್ದರೂ ಸಹ ಬಳಕೆದಾರರು ಈ ಈ ಸೇವೆ ಪಡೆದುಕೊಳ್ಳಲಾಗುತ್ತಿಲ್ಲ.

ಹೌದು, 5G ವ್ಯಾಪ್ತಿ ಹಾಗೂ 5G ಬೆಂಬಲಿತ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದರೂ ಸಹ ಬಹಳಷ್ಟು ಮಂದಿಗೆ ಈ ಸೇವೆ ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿದಿಲ್ಲ. ಅದಾಗ್ಯೂ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ನಿಧಾನಗತಿಯ ಇಂಟರ್ನೆಟ್‌ ಲಭ್ಯವಾಗುತ್ತಿದೆ. ಈ ನಡುವೆ ನೀವು ಈ ಕೆಲವು ಟ್ರಿಕ್‌ನೊಂದಿಗೆ ರಾಕೆಟ್‌ನಂತಹ ಇಂಟರ್ನೆಟ್‌ ವೇಗವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಏನು ಈ ಟ್ರಿಕ್ಸ್, ಇದನ್ನು ಬಳಕೆ ಮಾಡುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳಿ.

5G ಫೋನ್‌ನೊಂದಿಗೆ 5G ವ್ಯಾಪ್ತಿಯಲ್ಲಿದ್ದರೂ ಇಂಟರ್ನೆಟ್‌ ನಿಧಾನವೇ: ಈ ಕೆಲಸ ಮಾಡಿ!

5G ವೇಗವು 4G LTE ಗಿಂತ 20 ರಿಂದ 30 ಪಟ್ಟು ಹೆಚ್ಚು ವೇಗ: ಬಳಕೆದಾರರಿಗೆ ವೇಗವಾದ ಇಂಟರ್ನೆಟ್ ವೇಗದ ಪ್ರಯೋಜನವನ್ನು ನೀಡಲು ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ತಮ್ಮ 5G ಸೇವೆಯನ್ನು ಎಲ್ಲಾ ಕಡೆ ಪರಿಚಯಿಸುತ್ತಾ ಬರುತ್ತಿವೆ. ಅದರಲ್ಲೂ ಈ 5G ವೇಗವು 4G LTE ಗಿಂತ 20 ರಿಂದ 30 ಪಟ್ಟು ಹೆಚ್ಚು ವೇಗವಾಗಿರಲಿದ್ದು, ಕಣ್ಣು ಮಿಟುಕಿಸುವುದರೊಳಗೆ ಸರ್ಚ್‌ ಮಾಡಲಾದ ಯಾವುದೇ ಮಾಹಿತಿ ಕ್ಷಣಮಾತ್ರದಲ್ಲಿ ತೆರೆದುಕೊಳ್ಳುತ್ತದೆ.

ಆಪ್‌ ಕ್ಲೋಸ್‌ ಮಾಡಿ: ನಿಮ್ಮ ಸ್ಮಾರ್ಟ್‌ಫೋನ್‌ ನಿಧಾನಗತಿಯ ಇಂಟರ್ನೆಟ್‌ ಬಳಕೆ ಮಾಡುತ್ತಿದೆ ಎಂದು ನಿಮಗೆ ಅನಿಸಿದರೆ ಮೊದಲು ಆಪ್‌ಗಳನ್ನು ಕ್ಲೋಸ್‌ ಮಾಡಿ. ಅಂದರೆ ಫೋರ್ಸ್‌ ಕ್ಲೋಸ್‌ ದಿ ಆಪ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ಸಾಕು. ಇನ್ನು ನಿಮ್ಮ ಫೋನ್‌ನ ಹಿನ್ನೆಲೆಯಲ್ಲಿ ನೀವು ಹಲವಾರು ಆಪ್‌ಗಳನ್ನು ಏಕಕಾಲದಲ್ಲಿ ತೆರೆದಿದ್ದರೆ, ಈ ಮೊಬೈಲ್ ಆಪ್‌ಗಳು ನಿಮ್ಮ ಡೇಟಾವನ್ನು ಮಾತ್ರ ಬಳಕೆ ಮಾಡದೆ ಇಂಟರ್ನೆಟ್ ವೇಗವನ್ನು ಸಹ ನಿಧಾನಗೊಳಿಸುತ್ತವೆ

5G ಫೋನ್‌ನೊಂದಿಗೆ 5G ವ್ಯಾಪ್ತಿಯಲ್ಲಿದ್ದರೂ ಇಂಟರ್ನೆಟ್‌ ನಿಧಾನವೇ: ಈ ಕೆಲಸ ಮಾಡಿ!

ಕ್ಯಾಶ್ ಫೈಲ್‌ಗಳನ್ನು ತೆರವುಗೊಳಿಸಿ: ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾಡಬೇಕಾದ ಮತ್ತೊಂದು ಕೆಲಸ ಏನೆಂದರೆ ನಿಮ್ಮ ಫೋನ್‌ನಲ್ಲಿ ನೀವು ಯಾವುದೇ ಆಪ್‌ ಅಥವಾ ವೆಬ್‌ಸೈಟ್ ಅನ್ನು ತೆರೆದ ತಕ್ಷಣ, ಫೋನ್ ಕ್ಯಾಶ್ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಇದು ಸಹಜವಾಗಿ ಲೋಡಿಂಗ್ ಸಮಯವನ್ನು ಹೆಚ್ಚಾಗುವಂತೆ ಮಾಡುತ್ತದೆ. ಈ ಮೂಲಕ ನಿಮ್ಮ ಫೋನ್ ನಿಧಾನವಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಈ ಕಾರಣಕ್ಕೆ ಕ್ಯಾಶ್ ಫೈಲ್‌ ಅನ್ನು ಕಡ್ಡಾಯವಾಗಿ ತೆರವುಗೊಳಿಸಿ.

ನೀವು ನಿಮ್ಮಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಶ್ ಫೈಲ್‌ಗಳನ್ನು ತೆರವುಗೊಳಿಸಲು ಬಯಸಿದರೆ ಮೊದಲು ಫೋನ್‌ನ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಬೇಕು. ಅಲ್ಲಿ ಸ್ಟೋರೇಜ್ ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ ನಂತರ ಅಗತ್ಯ ಆಪ್‌ಗಳನ್ನು ಓಪನ್‌ ಮಾಡುವ ಮೂಲಕ ನೀವು ಕ್ಯಾಶ್ ಫೈಲ್‌ಗಳನ್ನು ತೆರವುಗೊಳಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಆಪ್‌ಗಳು ಸಹ ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.

5G ಫೋನ್‌ನೊಂದಿಗೆ 5G ವ್ಯಾಪ್ತಿಯಲ್ಲಿದ್ದರೂ ಇಂಟರ್ನೆಟ್‌ ನಿಧಾನವೇ: ಈ ಕೆಲಸ ಮಾಡಿ!

ಸಾಫ್ಟ್‌ವೇರ್‌ ಅನ್ನು ನವೀಕರಿಸಿ: ಇಷ್ಟೆಲ್ಲಾ ಮಾಡಿದರೂ ನಿಮಗೆ 5G ಸೇವೆ ಲಭ್ಯವಾಗುತ್ತಿಲ್ಲ ಎಂದಾದರೆ ಫೋನ್‌ನ ಸಾಫ್ಟ್‌ವೇರ್ ಅನ್ನು ನವೀಕರಿಸಿ. ಈ ಕೆಲಸ ಮಾಡಿದರೆ ಡಿವೈಸ್‌ಗಳು ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತವೆ. ಜೊತೆಗೆ ತಂತಾನೆ ಫೋನ್‌ನಲ್ಲಿರುವ ಅನೇಕ ದೋಷಗಳನ್ನು ಸಹ ಸರಿಯಾಗುತ್ತವೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ, ಅಲ್ಲಿ ನಿಮ್ಮ ಫೋನ್‌ಗೆ ಯಾವುದೇ ನವೀಕರಣ ಬಾಕಿ ಇದೆಯೇ ಎಂದು ನೋಡಲು ಸಾಫ್ಟ್‌ವೇರ್ ನವೀಕರಣವನ್ನು ಪರಿಶೀಲಿಸಿ. ಅಪ್‌ಡೇಟ್ ಆಯ್ಕೆ ಇದ್ದರೆ ಫೋನ್ ಅಪ್‌ಡೇಟ್ ಮಾಡಿ.

Best Mobiles in India

English summary
Even with 5G coverage and using a 5G supported smartphone, many people don't know how to use the high-speed service. However, slow internet is available on some smartphones. Follow these tricks to fix this problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+