ಸ್ಮಾರ್ಟ್‌ಫೋನ್ ಬಳಕೆಯ ಕಾಲದಲ್ಲಿ ಟಿವಿ ವೀಕ್ಷಣೆ ಎಷ್ಟು ಕಡಿಮೆಯಾಗಿದೆ ಗೊತ್ತಾ? ರಿಪೋರ್ಟ್!!
ಇಂಟರ್‌ನೆಟ್ ಬಳಕೆದಾರರಲ್ಲಿ ಶೇ.88% ಪರ್ಸೆಂಟ್ ಜನರು ಕನಿಷ್ಟ ಒಂದು ಆನ್‌ಲೈನ್ ವ್ಯವಹಾರವನ್ನು ಸ್ಮಾರ್ಟ್‌ಫೊನ್ ಮುಲಕ ನಡೆಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಿದೆ.
ಭಾರತದಲ್ಲಿ ಮೊಬೈಲ್ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಝಿನ್ನೋವ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಝಿನ್ನೋವ್ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದ್ದು, ದೇಶದಲ್ಲಿ ಆನ್‌ಲೈನ್ ಚಟುವಟಿಕೆ, ಆಪ್ ಬಳಕೆ ಮತ್ತು ಇ- ವ್ಯವಹಾರಗಳ ಬಗ್ಗೆ ವರದಿ ತಯಾರಿಸಿದೆ.
ದೇಶದ ಪ್ರಮುಖ ಸ್ಥಳಗಳಲ್ಲಿ ಇಂಟರ್‌ನೆಟ್ ಬಳಕೆದಾರರನ್ನು ಅಧ್ಯಯನ ನಡೆಸಿ. ಅಂದರೆ, ಮುಂಬೈ ದೆಹಲಿ, ಕೋಲ್ಕತ್ತಾ, ಕೊಯಮತ್ತೂರು ಮತ್ತು ವಿಜಯವಾಡದಲ್ಲಿ ಈ ವರದಿ ತಯಾರಿಸುವುದಾಗಿ ಝಿನ್ನೋವ್ ಸಂಸ್ಥೆ ಹೇಳಿದೆ. ಭಾರತದಲ್ಲಿ ಸ್ಮಾರ್ಟ್‌ಫೊನ್ ಬಳಕೆಯ ಜೊತೆಯಲ್ಲಿಯೇ ಸ್ಮಾರ್ಟ್‌ಫೋನ್ ಆಧಾರಿತ ಸೇವೆಗಳ ಬಳಕೆಯೂ ಹೆಚ್ಚಾಗಿದ್ದು, ಕಂಪ್ಯೂಟರ್‌ನಲ್ಲಿ ನಡೆಯುತ್ತಿದ್ದ ಬಹುತೇಕ ಆನ್‌ಲೈನ್ ಚಟುವಟಿಕೆಗಳು ಇದೀಗ ಸ್ಮಾಟ್‌ಫೋನ್‌ಗಳಲ್ಲಿ ನಡೆಯುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಆಂಡ್ರಾಯ್ಡ್ ನ್ಯೂಗಾ ಸಾಫ್ಟವೇರ್ ಅಪ್‌ಡೇಟ್ ನಿಮ್ಮ ಸ್ಮಾರ್ಟ್‌ಫೋನ್‌ಗಿದೆಯೇ? ಚೆಕ್ ಮಾಡಿ!
ಇನ್ನು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಶೇ.58% ಪರ್ಸೆಂಟ್ ಜನರು ಇಂಟರ್‌ನೆಟ್ ಬಳಕೆ ಮಾಡುತ್ತಾರೆ.ಹಾಗೆಯೇ, ಇಂಟರ್‌ನೆಟ್ ಬಳಕೆದಾರರಲ್ಲಿ ಶೇ.88% ಪರ್ಸೆಂಟ್ ಜನರು ಕನಿಷ್ಟ ಒಂದು ಆನ್‌ಲೈನ್ ವ್ಯವಹಾರವನ್ನು ಸ್ಮಾರ್ಟ್‌ಫೊನ್ ಮುಲಕ ನಡೆಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಿದೆ. ಇಂಟರ್‌ನೆಟ್ ಆಧಾರಿತ ಈ ಅಧ್ಯಯನದಲ್ಲಿ ಇನ್ನು ಹಲವು ಅಂಶಗಳು ಸೇರಿದ್ದು, ಅಧ್ಯಯನ ವರದಿ ಏನು ಪ್ರಮುಕ ಅಂಶಗಳನ್ನು ಹೇಳುತ್ತದೆ ಎಂಬುದನ್ನು ಈ ಕೆಳಗಿನಂತೆ ನೋಡಬಹುದು.

#1 ಅಧ್ಯಯನ ವರದಿ ಅಂಶಗಳು.
ಮೊಬೈಲ್ ಇಂಟರ್‌ನೆಟ್ ಬಳಕೆದಾರರಲ್ಲಿ ಶೇ 80 ರಷ್ಟು ಜನರು ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದೆ.

#2 ಅಧ್ಯಯನ ವರದಿ ಅಂಶಗಳು.
ಎರಡು ವರ್ಷಗಳಿಂದ ಈಚೆಗೆ ಮೊಬೈಲ್ ಬಳಕೆದಾರರು ಸ್ಮಾರ್ಟ್‌ಫೋನ್ ಬಳಸುವ ಅಂದರೆ ಸ್ಮಾರ್ಟ್‌ಫೊನ್‌ಗೆ ಸಮಯ ವಿನಿಯೋಗಿಸುವುದು ಶೇ.94% ಹೆಚ್ಚಿದೆ

#3 ಅಧ್ಯಯನ ವರದಿ ಅಂಶಗಳು.
ಶೇ 43% ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್‌ನೆಟ್‌ಗಾಗಿ ತಿಂಗಳಿಗೆ 100 ರೂಪಾಯಿಗಳಿಗಿಂತ ಹೆಚ್ಚು ಹಣ ವೆಚ್ಚ ಮಾಡುತ್ತಾರೆ.

#4 ಅಧ್ಯಯನ ವರದಿ ಅಂಶಗಳು.
ಶೇ 73% ನಷ್ಟು ಜನರು ಟಿವಿ ವೀಕ್ಷಣೆಯನ್ನು ಕಡಿಮೆಮಾಡಿ, ಮೊಬೈಲ್ ಇಂಟರ್‌ನೆಟ್ ಮೂಲಕ ಹೆಚ್ಚು ಸಮಯ ಕಳೆಯಲು ಆರಂಭಿಸಿದ್ದಾರೆ.


Click it and Unblock the Notifications








