Subscribe to Gizbot

ಆಕ್ವಾದ ಹೊಸ ಆಕ್ವಾ i5 ಓಕ್ಟಾ ಉತ್ತಮ ಬ್ಯಾಟರಿ ಬೆಂಬಲದೊಂದಿಗೆ

Written By:

ಆಕ್ವಾ ಶ್ರೇಣಿಗೆ ಹೊಸ ಹೆಸರು ಸೇರುತ್ತಿದೆ ಅದುವೇ ಆಕ್ವಾ i5 ಓಕ್ಟಾ. ಹೊಸದಾಗಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಓಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಇದು 3ಜಿಯೊಂದಿಗೆ ಸಂಯೋಜನೆಗೊಳ್ಳುತ್ತಿದೆ. ಈ ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಈ ಫೋನ್ ಇದೀಗ ಲಭ್ಯವಿದ್ದು ಇದರ ಬೆಲೆ ರೂ 7,499 ಆಗಿದೆ.

(ಇದನ್ನೂ ಓದಿ:ರೆಡ್ಮೀ ನೋಟ್ ಮುಂಗಡ ಕಾಯ್ದಿರಿಸಿ ಅದೃಷ್ಟಶಾಲಿಗಳು ನೀವಾಗಿ)

ಆಕ್ವಾ i5, 5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ ಜೊತೆಗೆ ಬಂದಿದ್ದು ಕ್ಲಿಯರ್ ರೆಸಲ್ಯೂಶನ್ ಅನ್ನು ಹೊಂದಿದೆ. ಫೋನ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯವಾಗುತ್ತಿದೆ.

ಆಕ್ವಾ ಶ್ರೇಣಿಗೆ ಹೊಸ ಸೇರ್ಪಡೆ ಆಕ್ವಾ i5 ಓಕ್ಟಾ

ಇದು 1.4GHZ ಓಕ್ಟಾ ಕೋರ್ ಪ್ರೊಸೆಸರ್ ಮತ್ತು 1ಜಿಬಿ RAM ಜೊತೆಗೆ ಬಂದಿದ್ದು 8ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು. ಫೋನ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ನಲ್ಲಿ ಚಾಲನೆಯಾಗುತ್ತಿದ್ದು ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಮತ್ತು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಗಳಾಗಿವೆ.

(ಇದನ್ನೂ ಓದಿ:ಫೋನ್‌ನ ಹ್ಯಾಂಗಿಂಗ್ ಸಮಸ್ಯೆಯನ್ನು ನಿವಾರಿಸುವುದು ಹೇಗೆ?)

ಡ್ಯುಯಲ್ ಸಿಮ್ ಫೋನ್ ಆಗಿರುವ ಇದು 3ಜಿ, ವೈಫೈ, ಬ್ಲ್ಯೂಟೂತ್ ಮತ್ತು ಜಿಪಿಎಸ್ ಸಂಪರ್ಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇನ್ನು ಫೋನ್‌ನ ಬ್ಯಾಟರಿ 20%ದಷ್ಟು ಪವರ್ ಉಳಿಸುವ ಶಕ್ತಿಯನ್ನು ಹೊಂದಿದ್ದು ನಿಜಕ್ಕೂ ಇದು ಅತ್ಯುತ್ತಮ ಸುದ್ದಿಯಾಗಿದೆ.

ಕಳೆದ ವಾರ ಇಂಟೆಕ್ಸ್ ಆಕ್ವಾ ಪವರ್ ಅನ್ನು ಲಾಂಚ್ ಮಾಡಿದ್ದು ಇದು 4,000mAh ಬ್ಯಾಟರಿಯೊಂದಿಗೆ ಬಂದಿದೆ ಮತ್ತು ಇದು 18 ಗಂಟೆಗಳ ಟಾಕ್ ಟೈಮ್ ಅವಧಿಯನ್ನು ಪೂರೈಸುತ್ತದೆ ಎಂದೂ ತಿಳಿಸಿದೆ. ಈ ಫೋನ್ ಬೆಲೆ ರೂ 8,444 ಆಗಿದೆ.

English summary
This article tells about Adding a new member to the Aqua range, Intex has launched a new smartphone - the Aqua i5 Octa. The newly launched handset is powered by an octa-core processor with integrated 3G connectivity. The smartphone will be made available for ecommerce site Amazon. It is priced at Rs. 7,499.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot