Subscribe to Gizbot

ಇಂಟೆಕ್ಸ್‌ನ ಅತ್ಯುತ್ತಮ ಬ್ಯಾಟರಿ ಫೋನ್ ಲಾಂಚ್

Written By:

ಇಂಟೆಕ್ಸ್ ಕೊನೆಗೂ ಕಡಿಮೆ ಬಜೆಟ್‌ನ ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್ ಬೆಲೆ 8,444 ಆಗಿದ್ದು ಭಾರತದ ಚೀನಾ ಹ್ಯಾಂಡ್‌ಸೆಟ್ ಹೊಸ ಸ್ಮಾರ್ಟ್‌ಫೋನ್ ಅನ್ನು ರೀಟೈಲ್ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ ಎಂಬುದನ್ನು ತಿಳಿಸಿದೆ. ಇಂಟೆಕ್ಸ್ ಆಕ್ವಾ ಪವರ್ ತನ್ನ ದೊಡ್ಡ 4000mAh ಬ್ಯಾಟರಿಯೊಂದಿಗೆ ಬಂದಿದ್ದು, ಇದು 11 ಗಂಟೆಗಳ ಟಾಕ್ ಟೈಮ್ ಅವಧಿಯನ್ನು ಒದಗಿಸಲಿದೆ. 500 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ಕೂಡ ಫೋನ್ ಹೊಂದಿದೆ.

ಇದನ್ನೂ ಓದಿ: ಅತ್ಯುತ್ತಮ ಬ್ಯಾಟರಿ ಜೀವನವುಳ್ಳ ಸೂಪರ್ ಡಿವೈಸ್‌ಗಳು

ಇಂಟೆಕ್ಸ್ ಆಕ್ವಾ ಪವರ್ ಅತಿ ದೊಡ್ಡ ಬ್ಯಾಟರಿ ಇರುವ ಆಂಡ್ರಾಯ್ಡ್ ಫೋನ್ ಆಗಿದ್ದು, ನಿಜಕ್ಕೂ ಇದು ಗ್ರಾಹಕರಿಗೆ ಬಂಪರ್ ಕೊಡುಗೆಯಾಗಿ ಪರಿಣಮಿಸಲಿದೆ. ಇಂಟೆಕ್ಸ್ ಆಕ್ವಾ ಪವರ್ ಕಪ್ಪು, ನೀಲಿ, ಕಂದು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದು ಇದು ಡ್ಯುಯಲ್ ಸಿಮ್ ಫೋನ್ ಆಗಿದೆ ಮತ್ತು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಇದರಲ್ಲಿದೆ.

ಇಂಟೆಕ್ಸ್ ಆಕ್ವಾ ಪವರ್‌ನ ಅದ್ಭುತ ಬ್ಯಾಟರಿ ಪವರ್

ಫೋನ್ 5 ಇಂಚಿನ FWVGA ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಫೋನ್‌ನಲ್ಲಿ 1.4GHZ ಓಕ್ಟಾ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಜೊತೆಗೆ 1 ಜಿಬಿ RAM ಕೂಡ ಇದೆ. ಆಕ್ವಾ ಪವರ್ 8ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಫೋನ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಪಡೆದುಕೊಂಡಿದ್ದು, ಫೋನ್‌ನ ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. ಫೋನ್‌ನ ರಿಯರ್ ಕ್ಯಾಮೆರಾ ಪನೋರಮಾ ಶಾಟ್, ಫೇಸ್ ಬ್ಯೂಟಿ, ಲೈವ್ ಫೋಟೋ ಮೋಡ್, ಸ್ಮೈಲ್ ಶಾಟ್, ಎಚ್‌ಡಿಆರ್, ಫೇಸ್ ಡಿಟೆಕ್ಷನ್ ಆಪ್ಶನ್‌ಗಳನ್ನು ಪಡೆದುಕೊಂಡಿದೆ.

ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನ ಹರಿಸಿದಾಗ 3ಜಿ, ಜಿಪಿಆರ್‌ಎಸ್, ವೈಫೈ, ಮೈಕ್ರೋ ಯುಎಸ್‌ಬಿ ಮತ್ತು ಬ್ಲ್ಯೂಟೂತ್ ಆಯ್ಕೆಗಳನ್ನು ಕಾಣಬಹುದು.

English summary
This article tells about Intex has launched the Aqua Power smartphone in India at Rs. 8,444. The Indian Chinese handset maker has announced that the smartphone is now available to buy from retail stores in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot