Subscribe to Gizbot

21 ಭಾಷೆಗಳಿಗೆ ಬೆಂಬಲ ನೀಡುವ ಇಂಟೆಕ್ಸ್ ಆಕ್ವಾ ಸ್ಟಾರ್ II ಸ್ಮಾರ್ಟ್‌ಫೋನ್

Written By:

ಭಾರತೀಯ ಫೋನ್ ತಯಾರಿಕಾ ಕಂಪೆನಿ ಇಂಟೆಕ್ಸ್ ಇನ್ನೊಂದು ಸ್ಮಾರ್ಟ್‌ಫೋನ್ ಇಂಟೆಕ್ಸ್ ಆಕ್ವಾ ಸ್ಟಾರ್ II ಅನ್ನು ಲಾಂಚ್ ಮಾಡಿದ್ದು ಆಕ್ವಾ ಸಿರೀಸ್‌ ಕುಟುಂಬಕ್ಕೆ ಇನ್ನೊಂದು ಸೇರ್ಪಡೆ ಈ ಹ್ಯಾಂಡ್‌ಸೆಟ್ ಆಗಿದೆ. ಫೋನ್‌ನಲ್ಲಿ ಈಗಾಗಲೇ ಇನ್‌ಸ್ಟಾಲ್ ಮಾಡಿರುವ ಒಪೇರಾ ಮಿನಿ, ಓಎಲ್‌ಎಕ್ಸ್, ಇಂಟೆಕ್ಸ್ ಸರ್ವೀಸ್, ಕ್ಲೀನ್ ಮಾಸ್ಟರ್, ಆಸ್ಕ್ ಮೀ, ಮಿಂತ್ರಾ, ನ್ಯೂಸ್ ಹಂಟ್ ಮತ್ತು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಕಾಣಬಹುದಾಗಿದೆ. ಫೋನ್ 21 ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತಿದೆ.

ಓದಿರಿ: ಬಿಲಿಯಗಟ್ಟಲೆ ದುಡ್ಡಿದ್ದರೂ ಬಡವರಲ್ಲಿ ಅತಿಬಡವರು

21 ಭಾಷೆಗಳಿಗೆ ಬೆಂಬಲ ನೀಡುವ ಇಂಟೆಕ್ಸ್ ಆಕ್ವಾ ಸ್ಟಾರ್ II ಸ್ಮಾರ್ಟ್‌ಫೋನ್

ಇನ್ನು ಫೋನ್ 5 ಇಂಚಿನ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯೂಶನ್ 1280x720 ಪಿಕ್ಸೆಲ್‌ಗಳಾಗಿದೆ. ಫೋನ್ 1.2 GHZ ಕ್ವಾಡ್‌ಕೋರ್ ಸ್ಪ್ರೆಡ್‌ಟ್ರಮ್ SC7731 ಪ್ರೊಸೆಸರ್ ಜೊತೆಗೆ 1 ಜಿಬಿ RAM ಅನ್ನು ಫೋನ್ ಹೊಂದಿದೆ. ಫೋನ್‌ನಲ್ಲಿ 8 ಜಿಬಿ ಆಂತರಿಕ ಸಂಗ್ರಹಣೆಯನ್ನು ನೀವು ಕಾಣಬಹುದಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಓದಿರಿ: ಎಸ್‌ಎಮ್‌ಎಸ್ ಮಾಯಗಾರನ ಇಂಟ್ರೆಸ್ಟಿಂಗ್ ಕಹಾನಿ

21 ಭಾಷೆಗಳಿಗೆ ಬೆಂಬಲ ನೀಡುವ ಇಂಟೆಕ್ಸ್ ಆಕ್ವಾ ಸ್ಟಾರ್ II ಸ್ಮಾರ್ಟ್‌ಫೋನ್

ಸ್ಟಾರ್ II ಎಚ್‌ಡಿ ದಪ್ಪ 8.95 ಎಮ್‌ಎಮ್ ಆಗಿದ್ದು, ತೂಕ 125 ಗ್ರಾಮ್‌ಗಳಾಗಿದೆ. ಇದರಲ್ಲಿ ಕನೆಕ್ಟಿವಿಟಿ ಆಯ್ಕೆಗಳೆಂದರೆ ಡ್ಯುಯಲ್ ಸಿಮ್, 3ಜಿ, ವೈಫೈ, ಬ್ಲ್ಯೂಟೂತ್, ಜಿಪಿಎಸ್ ಮತ್ತು 2000 mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಫೋನ್ ಬಿಳಿ, ಕಂದು ಮತ್ತು ಬೆಳ್ಳಿಯ ಬಣ್ಣದಲ್ಲಿ ಲಭ್ಯವಿದೆ. ಭಾರತದಾದ್ಯಂತ ಇಂಟೆಕ್ಸ್ ಡಿಸ್ಟ್ರಿಬ್ಯೂಶನ್ ನೆಟ್‌ವರ್ಕ್ ಮೂಲಕ ಲಭ್ಯವಿದೆ.

English summary
Indian handset manufacturer, Intex technologies has launched another smartphone in the Aqua series. Dubbed as Intex Aqua Star II, it is the successor of Aqua Star II, which was launched earlier this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot