ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸೂಪರ್ ಬಜೆಟ್ ಸ್ಮಾರ್ಟ್ ಫೋನ್....!!!

ಬಜೆಟ್ ಸ್ಮಾರ್ಟ್ ಫೋನ್ ಗಳ ಬೇಡಿಕೆ ಹೆಚ್ಚಾಗಿರುವ ಕಾರಣ ಅನೇಕ ಮೊಬೈಲ್ ತಯಾರಕ ಕಂಪನಿಗಳು ಈ ವಿಭಾಗದಲ್ಲಿಯೇ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ಶುರು ಮಾಡಿದ್ದಾರೆ.

By Precilla Dias
|

ಭಾರತೀಯಾ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳ ಬೇಡಿಕೆ ಹೆಚ್ಚಾಗಿರುವ ಕಾರಣ ಅನೇಕ ಮೊಬೈಲ್ ತಯಾರಕ ಕಂಪನಿಗಳು ಈ ವಿಭಾಗದಲ್ಲಿಯೇ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ಶುರು ಮಾಡಿದ್ದಾರೆ. ಇದೇ ಹಾದಿಯಲ್ಲಿ ಸಾಗುತ್ತಿದೆ ಇಂಟೆಕ್ಸ್ ಕಂಪನಿ ಸಹ. ಇಂಟೆಕ್ಸ್ ಹೊಸದಾಗಿ ಇಂಟೆಕ್ಸ್ ELYT e7 ಎಂಬ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಿದೆ.

ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸೂಪರ್ ಬಜೆಟ್ ಸ್ಮಾರ್ಟ್ ಫೋನ್....!!!

ಇಂಟೆಕ್ಸ್ ELYT e7 ಬೆಲೆ ಮಾರುಕಟ್ಟೆಯಲ್ಲಿ ರೂ.7,999 ಆಗಿದ್ದು, ಈ ಸ್ಮಾರ್ಟ್ ಫೋನ್ ಕೇವಲ ಅಮೆಜಾನ್ ಶಾಪಿಂಗ್ ತಾಣದಲ್ಲಿ ಮಾತ್ರವೇ ದೊರೆಯಲಿದೆ. ಈ ಫೋನಿನ ಪ್ರಮುಖ ಅಂಶ ಎಂದರೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ, ಆಂಡ್ರಾಯ್ಡ್ 7.0 ದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 4020mAh ಬ್ಯಾಟರಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಕೊಟ್ಟ ಬೆಲೆಗೆ ಈ ಫೋನ್ ಲಾಸ್ ಇಲ್ಲ ಎಂದೇ ಹೇಳಬಹುದು.

ಮೆಟಾಲಿಕ್ ಸ್ಟೀಲ್ ಬಾಡಿ ಹೊಂದಿರುವ ಈ ಫೋನು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ. ಇಂಟೆಕ್ಸ್ ELYT e7ನಲ್ಲಿ ಹಿಂಭಾಗದಲ್ಲಿ ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಕ್ಯಾಮೆರಾ ಕೆಳ ಭಾಗದಲ್ಲಿ ಈ ಸ್ಕ್ಯಾನರ್ ನೀಡಲಾಗಿದೆ. ಮೈಕ್ರೋ ಯುಎಸ್ ಬಿ ಪೋರ್ಟ್ ಕೆಳಭಾಗದಲ್ಲಿದ್ದು, ಮೇಲ್ಭಾಗದಲ್ಲಿ 3.5 ಇಯರ್ ಫೋನ್ ಜಾಕ್ ಕಾಣಬಹುದಾಗಿದೆ.

ಇನ್ನು ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇಂಟೆಕ್ಸ್ ELYT e7 ಫೋನಿನಲ್ಲಿ 5.2 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 1.25GHz ಕ್ವಾಡ್ ಕೋರ್ ಮಿಡಿಯಾ ಟೆಕ್ ಪ್ರೋಸೆಸರ್ ಮತ್ತು 3GB RAM ಮತ್ತು ಮೆಲ್ T720 ಗ್ರಾಫಿಕ್ಸ್ ಕಾರ್ಡ್ ಕಾಣಬಹುದಾಗಿದೆ. 32GB ಇಂಟರ್ನಲ್ ಮೆಮೊರಿ ಈ ಫೋನಿನಲ್ಲಿದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಇಂಟೆಕ್ಸ್ ELYT e7 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 4020 mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ 4G VoLTE ಸಪೋರ್ಟ್ ಮಾಡುವದರೊಂದಿಗೆ OTG, WiFi , FM ರೇಡಿಯೋ ಇದೆ.

Best Mobiles in India

Read more about:
English summary
Intex ELYT e7 with Android Nougat OS and 4020mAh battery has been launched at Rs. 7,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X