Home
ಸುದ್ದಿಜಾಲ

ಇಂಟೆಕ್ಸ್‌ನಿಂದ ರೂ 3990 ಕ್ಕೆ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

By Shwetha

ಇಂಟೆಕ್ಸ್ ಮೊಬೈಲ್ ಕಂಪೆನಿ ಭಾರತದ ಮಾರುಕಟ್ಟೆಗೆ ಅತಿ ಕಡಿಮೆ ಬೆಲೆಯ ಕೇವಲ 3990 ರೂ. ಇಂಟೆಕ್ಸ್ ಕ್ಲೌಡ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಇವುಗಳು ಸಧ್ಯಕ್ಕೆ ಆನ್‌ಲೈನ್ ಮಾರಾಟ ತಾಣ ಇಬೇ (ebuy) ಇಂಡಿಯಾದಲ್ಲಿ ಮಾತ್ರ ದೊರೆಯುತ್ತಿದೆ.

ಇಂಟೆಕ್ಸ್‌ನಿಂದ ರೂ 3990 ಕ್ಕೆ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

ಇಂಟೆಕ್ಸ್ ಕಂಪನಿ ಇಷ್ಟು ಕಡಿಮೆ ಬೆಲೆಗೆ 8 ಮೆಗಾಪಿಕ್ಸಲ್ ರಿಯರ್ ಕ್ಯಾಮೆರಾ, 8ಜಿಬಿ ಆಂತರಿಕ ಮೆಮೊರಿಯನ್ನು ನೀಡುತ್ತಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸಲ್ ಆಗಿದೆ ಮತ್ತು ಇದರಲ್ಲಿ LED ಫ್ಲ್ಯಾಶ್ ಲೈಟ್ ಕೂಡ ಇದೆ.

ಇದರೊಂದಿಗೆ ಕಂಪೆನಿ ಇಂಟೆಕ್ಸ್ ಎಕ್ವಾ V5 ಹೆಸರಿನ ಸ್ಮಾರ್ಟ್‌ಪೋನ್ ಅನ್ನು ಕೂಡ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 3000 ರೂ ಇರಬಹುದೆಂದು ಅಂದಾಜಿಸಲಾಗಿದೆ.

ಓದಿರಿ:ವಾಟ್ಸಾಪ್‌ನಲ್ಲಿ ನಿಮ್ಮ ಅತ್ಯುತ್ತಮ ಸ್ನೇಹಿತರು ಯಾರು?

ಇಂಟೆಕ್ಸ್ ಕ್ಲೌಡ್ ಸ್ಮಾರ್ಟ್‌ಪೋನ್‌ನ ವಿಶೇಷತೆಗಳು
1. ಇದು ಆಂಡ್ರಾಯ್ಡ್ ಕಿಟ್ ಕ್ಯಾಟ್ 4.4.2 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.
2. 5 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ ಇದರಲ್ಲಿದೆ.
3. 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ.
4. ಡಿವೈಸ್ 512ಎಮ್‌ಬಿ ರಾಮ್ ಅನ್ನು ಹೊಂದಿದೆ.
5.ಫೋನ್ ಆಂತರಿಕ ಮೆಮೊರಿ 8 ಜಿಬಿಯಾಗಿದ್ದು 32ಜಿಬಿ ವರೆಗೆ ಎಸ್‌ಡಿ ಕಾರ್ಡ್ ಅನ್ನು ಬಳಸಬಹುದು.
6.8 ಮೆಗಾಪಿಕ್ಸಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು LED ಪ್ಲ್ಯಾಶ್ ಲೈಟ್ ಕೂಡ ಇದರಲ್ಲಿದೆ.
7. ಈ ಸ್ಮಾರ್ಟ್‌ಪೋನ್ 3ಜಿ, GPRS/ EDGE, A-GPS ಮತ್ತು ವೈಫೈ, ಯುಎಸ್‌ಬಿ, ಬ್ಲ್ಯೂಟೂತ್ ಅನ್ನು ಒಳಗೊಂಡಿದೆ. ಫೋನ್ ಬೆಲೆ ರೂ 3990 ಆಗಿದೆ.

Best Mobiles in India

English summary
Intex has expanded its Cloud series with the addition of Cloud V. Intex Cloud V runs on Android 4.4.2 KitKat and features 5-inch (480x854p) FWVGA TFT display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+