Home
ಸುದ್ದಿಜಾಲ

ನಿಮ್ಮ ಬಳಿ ಈ ನೋಕಿಯಾ ಫೋನ್ ಇದೆಯಾ? ಹಾಗಿದ್ರೆ ಇಂದಿನಿಂದ ಈ ಸೇವೆ ಲಭ್ಯ!

ನೋಕಿಯಾ (Nokia) ಫೀಚರ್‌ ಅಥವಾ ಕೀಪ್ಯಾಡ್‌ ಫೋನ್‌ಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿವೆಯೋ ಅದೇ ರೀತಿಯ ಇತ್ತೀಚಿಗೆ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಸಹ ಹೆಚ್ಚಿನ ಜನರನ್ನು ಆಕರ್ಷಿಸುತ್ತಿವೆ. ಈ ನಡುವೆ ಈ ನೋಕಿಯಾ ಫೋನ್ ಖರೀದಿ ಮಾಡಿದ್ದವರಿಗೆ ಶುಭ ಸುದ್ದಿ ನಿಡಲಾಗಿದೆ.

ಹೌದು, ಹೆಚ್‌ಎಮ್‌ಡಿ ಗ್ಲೋಬಲ್ (HMD Global) ಕ್ಲಾಸಿಕ್ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನ್‌ಗಳಿಗೆ ಅತ್ಯಾಕರ್ಷಕ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅಂದರೆ ಯುಪಿಐ ಸ್ಕ್ಯಾನ್ ಮತ್ತು ಪೇ (UPI Scan and Pay). ಈ ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದು, ಈ ಹೊಸ ಫೀಚರ್ಸ್‌ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬರಲಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್‌?, ಇದು ಈ ಫೋನ್‌ನಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ? ಎಂಬ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಬಳಿ ಈ ನೋಕಿಯಾ ಫೋನ್ ಇದೆಯಾ? ಹಾಗಿದ್ರೆ ಇಂದಿನಿಂದ ಈ ಸೇವೆ ಲಭ್ಯ!

ನೋಕಿಯಾ 2660 ಫ್ಲಿಪ್ ಫೋನ್‌ ಗೆ ಯುಪಿಐ ಫೀಚರ್ಸ್‌: ಸರಳವಾದ ಬಟನ್ ಒತ್ತುವುದರ ಮೂಲಕ ಸುರಕ್ಷಿತ ಮತ್ತು ಅನುಕೂಲಕರ ಡಿಜಿಟಲ್ ವಹಿವಾಟುಗಳನ್ನು ಮಾಡಲು ಬಳಕೆದಾರರನ್ನು ಈ ಫೋನ್ ಅನುಮತಿಸುತ್ತದೆ. ಪ್ರಮುಖ ಮಾಹಿತಿ ಏನೆಂದರೆ ನೋಕಿಯಾ 2660 ಫ್ಲಿಪ್ ನ ಹೊಸ ಖರೀದಿದಾರರಿಗೆ ಸದ್ಯಕ್ಕೆ ಇದು ಲಭ್ಯ ಇರುವುದಿಲ್ಲ. ಅದಾಗ್ಯೂ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸಂಪೂರ್ಣವಾಗಿ ಈ ಸೇವೆ ನೀಡಲಾಗುತ್ತದೆ ಎಂದು ಹೆಚ್‌ಎಮ್‌ಡಿ ಹೇಳಿದೆ.

ಅದರಂತೆ ಹೆಚ್‌ಎಮ್‌ಡಿ ಈಗಾಗಲೇ ಅಸ್ತಿತ್ವದಲ್ಲಿರುವ ಬೇಸ್‌ಗೆ ಸಾಫ್ಟ್‌ವೇರ್ ನವೀಕರಣವನ್ನು ಹೊರತಂದಿದೆ. ಈ ಮೂಲಕ ಎಲ್ಲರಿಗೂ ಡಿಜಿಟಲ್ ಪಾವತಿ ಸೇರ್ಪಡೆಯನ್ನು ಖಚಿತಪಡಿಸುತ್ತದೆ. ಅಂದರೆ ಬಳಕೆದಾರರು ಇನ್ಮುಂದೆ ಸ್ಮಾರ್ಟ್‌ಫೋನ್‌ನಲ್ಲಿ ಮಾಡಬಹುದಾದ ಯುಪಿಐ ಆಧಾರಿತ ಆರ್ಥಿಕ ವಹಿವಾಟನ್ನು ಈ ಫೋನ್‌ನಲ್ಲೂ ಸಹ ಮಾಡಬಹುದಾಗಿದೆ.

ಇದರೊಂದಿಗೆ ಈ ಫೋನ್‌ ಎರಡು ಹೊಸ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಒಂದು ಪಾಪ್ ಪಿಂಕ್ ಮತ್ತೊಂದು ಲಶ್ ಗ್ರೀನ್. ಈ ಫೋನ್ ಫೋಟೋಗಳನ್ನು ಸೆರೆಹಿಡಿಯಲು ಅತ್ಯುತ್ತಮ ರಿಯರ್ ಕ್ಯಾಮೆರಾ, ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್‌ ಅನ್ನು ಸಹ ನೀಡಲಿದೆ. ಅಷ್ಟೇ ಅಲ್ಲದೆ ಎಸ್ಎಮ್ಎಸ್‌ ಮತ್ತು ಕರೆಗಳಂತಹ ಅಗತ್ಯ ಫೀಚರ್ಸ್‌ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಕ್ಲಾಸಿಕ್ ಸ್ನೇಕ್ ಗೇಮ್ ಸಹ ಇರುವುದು ನಿಮ್ಮನ್ನು ಈ ಫೋನ್‌ಕಡೆ ಸೆಳೆಯುವಂತೆ ಮಾಡುತ್ತದೆ.

ಈ ಫ್ಲಿಪ್ ವಿನ್ಯಾಸವು ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಮೈಕ್ರೊಫೋನ್ ಮತ್ತು ಇಯರ್‌ಪೀಸ್ ಅನ್ನು ಬಳಕೆದಾರರ ಮುಖಕ್ಕೆ ಇನ್ನಷ್ಟು ಹತ್ತಿರ ತರಲಾಗಿದೆ. ಈ ಮೂಲಕ ಕರೆ ನಿರ್ವಹಣೆಯನ್ನು ಸರಳಗೊಳಿಸುತ್ತದೆ. ಇದರೊಂದಿಗೆ 2.8 ಇಂಚಿನ ಡಿಸ್ಪ್ಲೇ ಮತ್ತು ಬಳಕೆದಾರ-ಸ್ನೇಹಿ ಇಂಟರ್ಫೇಸ್ ಯಾವುದೇ ಅಸ್ಪಷ್ಟತೆಯನ್ನು ನಿವಾರಿಸುತ್ತದೆ. ಇದರೊಂದಿಗೆ ವಿಶೇಷ ಡಿಸ್‌ಪ್ಲೇ ಆಯ್ಕೆ ಒಳಬರುವ ಕರೆಗಳನ್ನು ಸುಲಭವಾಗಿ ಗುರುತಿಸುವಂತೆ ಮಾಡುತ್ತದೆ.

ಇದರೊಂದಿಗೆ ತುರ್ತು ಬಟನ್ ಆಯ್ಕೆಯನ್ನೂ ಸಹ ಈ ಫೋನ್‌ನಲ್ಲಿ ನೀಡಲಾಗಿದ್ದು, ಹೆಚ್ಚುವರಿ ಭದ್ರತೆಯನ್ನು ನೀಡಲಾಗಿದೆ. ಅಂದರೆ ಬಳಕೆದಾರರು ತುರ್ತು ಸಂದರ್ಭಗಳಲ್ಲಿ ಪ್ರೀತಿಪಾತ್ರರ ಜೊತೆಗೆ ತ್ವರಿತ ಸಂಪರ್ಕವನ್ನು ಇದು ಆಕ್ಟಿವ್‌ ಮಾಡುತ್ತದೆ ಹಾಗೂ ತ್ವರಿತ ಸಹಾಯಕ್ಕಾಗಿ ಐದು ಸಂಪರ್ಕಗಳನ್ನು ಹೊಂದಿರುತ್ತದೆ. ಮತ್ತು ಹೊಂದಾಣಿಕೆಯ ವಾಲ್ಯೂಮ್ ಸೆಟ್ಟಿಂಗ್‌ಗಳೊಂದಿಗೆ ಸ್ಪಷ್ಟವಾದ ಕರೆ ಗುಣಮಟ್ಟವನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಇನ್ನು 2021 ರಿಂದ 2022 ಕ್ಕೆ ಹೋಲಿಸಿದರೆ ಹೆಚ್‌ಎಮ್‌ಡಿ ಗ್ಲೋಬಲ್ ತನ್ನ ಫ್ಲಿಪ್ ಫೋನ್ ಮಾರುಕಟ್ಟೆ ಷೇರಿನಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಎರಡು ಪಟ್ಟು ಹೆಚ್ಚಳವನ್ನು ಕಂಡಿದೆ. ಕಂಪನಿಯು 2023 ರಲ್ಲಿ ಮತ್ತಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ ಎನ್ನಲಾಗದೆ. ಯಾಕೆಂದರೆ ಹೆಚ್ಚಿನ ಜನರು ಸಾಮಾನ್ಯ ಸ್ಮಾರ್ಟ್‌ಫೋನ್‌ ತ್ಯಜಿಸಿ ಬದಲಾಗಿ ಈ ಫೋನ್‌ಗಳ ಕಡೆ ಹೆಚ್ಚಾಗಿ ಆಕರ್ಷಿತರಾಗಲಿದ್ದಾರೆ ಎನ್ನಲಾಗಿದೆ.

ನಿಮ್ಮ ಬಳಿ ಈ ನೋಕಿಯಾ ಫೋನ್ ಇದೆಯಾ? ಹಾಗಿದ್ರೆ ಇಂದಿನಿಂದ ಈ ಸೇವೆ ಲಭ್ಯ!

ನೋಕಿಯಾ 2660 ಫ್ಲಿಪ್ ಫೋನ್‌ ಅನ್ನು ನೀವು ಈಗ ಅಮೆಜಾನ್ ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಸದ್ಯಕ್ಕೆ 4,499ರೂ.ಗಳ ಬೆಲೆ ಹೊಂದಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ. ಉಳಿದಂತೆ ಯುಪಿಐ ಸ್ಕ್ಯಾನ್ ಮತ್ತು ಪೇ ವೈಶಿಷ್ಟ್ಯಗಳು ಈಗಾಗಲೇ ಹಲವಾರು ನೋಕಿಯಾ ಫೋನ್‌ಗಳಲ್ಲಿ ಲಭ್ಯವಿದೆ, ಅದರಲ್ಲೂ ನೋಕಿಯಾ 110 2G ಫೋನ್ ನಲ್ಲಿ ಸಹ ಇದು ಲಭ್ಯ ಇದ್ದು, ಈ ಫೋನ್‌ ಬೆಲೆ ಕೇವಲ 1,699ರೂ.ಗಳು.

Best Mobiles in India

English summary
HMD Global has introduced exciting new features to the classic Nokia 2660 Flip phones. It means UPI Scan and Pay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+