'ಐಓಎಸ್ 10'ರಲ್ಲಿನ ಎಲ್ಲರೂ ತಿಳಿಯಲೇಬೇಕಾದ ರಹಸ್ಯ ಫೀಚರ್‌ಗಳು!

By Suneel
|

ಆಪಲ್‌ ಇದೀಗ ತಾನೆ 'ಐಓಎಸ್ 10' ಬಿಡುಗಡೆ ಮಾಡಿದ್ದು, ಹಲವು ಅತ್ಯಾಧುನಿಕ ಹೊಸ ಫೀಚರ್‌ಗಳನ್ನು ಹೊಂದಿದೆ. ಅವುಗಳಲ್ಲಿ 'ಐಮೆಸೇಜ್ ಆಪ್‌ ಸ್ಟೋರ್' ಪ್ರಮುಖವಾದುದು. ಆಪಲ್‌ ಕಂಪನಿ 'ಐಓಎಸ್ 10'ನಲ್ಲಿರುವ ಹಲವು ರಹಸ್ಯ ಫೀಚರ್‌ಗಳನ್ನು ಬಹಿರಂಗಪಡಿಸಿಲ್ಲ. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಆಪಲ್‌ ಬಹಿರಂಗ ಪಡಿಸದ 'ಐಓಎಸ್‌ 10'ನಲ್ಲಿನ ರಹಸ್ಯ ಫೀಚರ್‌ಗಳನ್ನು ತಿಳಿಸುತ್ತಿದೆ. ಆಪಲ್‌ ಡಿವೈಸ್‌ಗಳ ಪ್ರಿಯರು ತಿಳಿಯಲೇಬೇಕಾದ ಹೊಸ ಫೀಚರ್‌ಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿರಿ.

'ಐಓಎಸ್ 10' ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್ ಹೇಗೆ?

ಹಳೆಯ ಹೋಮ್‌ ಬಟನ್  ರೀಸ್ಟೋರ್‌

ಹಳೆಯ ಹೋಮ್‌ ಬಟನ್ ರೀಸ್ಟೋರ್‌

'ಐಓಎಸ್‌ 10' ಹೊಸ ಅನ್‌ಲಾಕ್‌ ಫೀಚರ್‌ ಅನ್ನು ಹೊಂದಿದ್ದು, ಡಿವೈಸ್ ಅನ್‌ಲಾಕ್‌ ಮಾಡಲು ಹೋಮ್‌ ಬಟನ್ ಪ್ರೆಸ್‌ ಮಾಡಿದರೆ ಸಾಕು. ಆದರೆ ಹಳೆಯ ಅನ್‌ಲಾಕ್‌ ವಿಧಾನ ಪಡೆಯಲು Settings > General > Accessibility > Home Button > Rest Finger to Open ಆಪ್ಶನ್‌ ಅನ್ನು ಆನ್‌ ಮಾಡಿ.

ಪೂರ್ವವಾಗಿ ಇನ್‌ಸ್ಟಾಲ್‌ ಆದ ಆಪ್‌ ತೆಗೆಯಿರಿ

ಪೂರ್ವವಾಗಿ ಇನ್‌ಸ್ಟಾಲ್‌ ಆದ ಆಪ್‌ ತೆಗೆಯಿರಿ

'ಐಓಎಸ್‌ 10' ನಲ್ಲಿ ಪೂರ್ವವಾಗಿ ಇನ್‌ಸ್ಟಾಲ್‌ ಆಗಿರುವ ಆಪ್‌ಗಳನ್ನು ಸುಲಭವಾಗಿ ರಿಮೂವ್‌ ಮಾಡಬಹುದು. ಆದರೆ ಆಪ್‌ಗಳು ಸಂಪೂರ್ಣವಾಗಿ ಡಿಲೀಟ್‌ ಆಗಿರುವುದಿಲ್ಲ. ಅಗತ್ಯವಿದ್ದಲ್ಲಿ ಪುನಃ ಇತರೆ ಆಪ್‌ಗಳಂತೆ ಆಪ್‌ ಸ್ಟೊರ್‌ನಿಂದ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಸಫಾರಿ'ಯಲ್ಲಿ ಹಲವು ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ

ಸಫಾರಿ'ಯಲ್ಲಿ ಹಲವು ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ

ಸಫಾರಿ ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳು ಓಪನ್‌ ಆಗಿದ್ದಲ್ಲಿ ಅವುಗಳನ್ನು ಕ್ಲೋಸ್‌ ಮಾಡಲು ಕೆಳಭಾಗದ ಬಲದಲ್ಲಿ ಟ್ಯಾಬ್‌ ಬಟನ್‌ ಅನ್ನು ಹೋಲ್ಡ್‌ ಮಾಡಿ ಎಲ್ಲಾ ಟ್ಯಾಬ್‌ಗಳನ್ನು ಒಮ್ಮೆಯೇ ಕ್ಲೋಸ್ ಮಾಡಿ.

ಡೀಫಾಲ್ಟ್‌ ನಂಬರ್‌, ಇಮೇಲ್‌ ವಿಳಾಸ ಮತ್ತು ಕಾಂಟ್ಯಾಕ್ಟ್‌ಗಳನ್ನು ಆಯ್ಕೆ ಮಾಡಿ

ಡೀಫಾಲ್ಟ್‌ ನಂಬರ್‌, ಇಮೇಲ್‌ ವಿಳಾಸ ಮತ್ತು ಕಾಂಟ್ಯಾಕ್ಟ್‌ಗಳನ್ನು ಆಯ್ಕೆ ಮಾಡಿ

ಕಾಂಟ್ಯಾಕ್ಟ್‌ ಆಪ್‌ನಲ್ಲಿ ಕಾಂಟ್ಯಾಕ್ಟ್‌ ಓಪನ್‌ ಮಾಡಿದಾಗ ಟೆಕ್ಸ್ಟ್‌, ಕಾಲ್‌ ಫೇಸ್‌ಟೈಮ್ ಮತ್ತು ಇಮೇಲ್‌ನ ನೀಲಿ ಐಕಾನ್‌ಗಳು ಪ್ರದರ್ಶಿತವಾಗುತ್ತವೆ. ಈ ಸಂಪರ್ಕವು ಹಲವು ಫೋನ್‌ ನಂಬರ್‌ಗಳು ಮತ್ತು ಇಮೇಲ್‌ ವಿಳಾಸವನ್ನು ಹೊಂದಿದ್ದಲ್ಲಿ ಡೀಫಾಲ್ಟ್‌ ಸಂಪರ್ಕವಾಗಿ ಆಯ್ಕೆ ಮಾಡಬಹುದು. ಮುಂದಿನ ಸಮಯದಲ್ಲಿ ಈ ಐಕಾನ್‌ಗಳನ್ನು ಟ್ಯಾಪ್‌ ಮಾಡಿದರೆ ನೇರವಾಗಿ ಮೆಸೇಜ್‌, ಮೇಲ್‌, ಕರೆ ಮಾಡಬಹುದು ಅಥವಾ ಇಮೇಲ್ ವಿಳಾಸವನ್ನು ಪಡೆಯಬಹುದು.

ಕರೆ ದಾಖಲೆಗಳಲ್ಲಿ ಇತ್ತೀಚಿನ ಬ್ಯಾಡ್ಜ್‌

ಕರೆ ದಾಖಲೆಗಳಲ್ಲಿ ಇತ್ತೀಚಿನ ಬ್ಯಾಡ್ಜ್‌

ಕೆಲವರು ಹಲವು ನಂಬರ್‌ಗಳನ್ನು ಹೊಂದಿರುತ್ತಾರೆ. ಅವರಿಗೆ ಕರೆ ಮಾಡಲು ಯಾವ ನಂಬರ್‌ಗೆ ಕರೆ ಮಾಡಬೇಕು ಎಂದು ತಿಳಿಯದಿದ್ದಲ್ಲಿ, ಕರೆ ದಾಖಲೆ ಓಪನ್‌ ಮಾಡಿ ಸಂಪರ್ಕ ಹೆಸರಿನ ಮುಂದೆ 'i' ಬಟನ್‌ ಅನ್ನು ಟ್ಯಾಪ್‌ ಮಾಡಿ, ಇತ್ತೀಚೆಗೆ ಕರೆ ಮಾಡಿದ ಬ್ಯಾಡ್ಜ್ ನಂಬರ್‌ ಆ ಸಂಪರ್ಕಕ್ಕೆ ಸಂಬಂಧಿಸಿದಂತೆ ಪ್ರದರ್ಶಿತವಾಗುತ್ತದೆ.

Raise to wake

Raise to wake

ನಿಮ್ಮ ಐಫೋನ್‌ ಅನ್ನು ಕೈಗೆ ಎತ್ತಿಕೊಂಡರೆ ಲಾಕ್‌ ಸ್ಕ್ರೀನ್‌ ಅನ್ನು ನೋಡಬಹುದು, ನೋಟಿಫೀಕೇಶನ್ ಚೆಕ್‌ ಮಾಡಬಹುದು, ಶೀಘ್ರವಾಗಿ ಸಮಯ ನೋಡಬಹುದು. ಈ ಫೀಚರ್‌ 'ಐಫೋನ್ 5ಎಸ್‌'ನಲ್ಲಿ ಇಲ್ಲ. ಆದರೆ ಐಫೋನ್ 6ಎಸ್‌ ಮತ್ತು ಇತರೆ ಹೊಸ ಡಿವೈಸ್‌ಗಳಲ್ಲಿ ಇದೆ. ಈ ಫೀಚರ್‌ ಅನ್ನು ಡಿಸೇಬಲ್‌ ಮಾಡಲು Settings>Display and Brightness>Raise to Wake ಅನ್ನು ಡಿಸೇಬಲ್‌ ಮಾಡಿ

ಅಭಿವೃದ್ದಿ ಹೊಂದಿದ ಡಯಲ್‌ ನೆರವು

ಅಭಿವೃದ್ದಿ ಹೊಂದಿದ ಡಯಲ್‌ ನೆರವು

'ಐಓಎಸ್‌ 10' ಅಪ್‌ಡೇಟ್‌ ಆದ ಡಿವೈಸ್‌ನಲ್ಲಿ Settings > Phone > Dial Assist ಗೆ ಹೋಗಿ Dial Assist ಅನ್ನು ಆನ್‌ ಮಾಡಿ. ನಂತರ ನೀವು ಯಾವುದಾದರೂ ಲ್ಯಾಂಡ್‌ಲೈನ್‌ ನಂಬರ್‌ನಿಂದ ಕರೆ ಸ್ವೀಕರಿಸಿದಲ್ಲಿ, 'ಐಓಎಸ್ 10' ನಂಬರ್ ಯಾವ ನಗರ, ರಾಜ್ಯದ್ದು ಎಂದು ಹೇಳುತ್ತದೆ. ಅಲ್ಲದೇ 'Unknown Number' ಕರೆಯಲ್ಲಿ ತೋರಿಸುತ್ತದೆ.

ಸಂಪರ್ಕಗಳ ಹೆಸರು ಸಲಹೆ

ಸಂಪರ್ಕಗಳ ಹೆಸರು ಸಲಹೆ

ಕೆಲವು ಸಮಯಗಳಲ್ಲಿ ಎಲ್ಲರೂ ಸಹ ಅಪರಿಚಿತ ನಂಬರ್‌ಗಳಿಂದ ಟೆಕ್ಸ್ಟ್‌ ಮತ್ತು ಐಮೆಸೇಜ್ ಅನ್ನು ಪಡೆಯುತ್ತಾರೆ. ಅಂತಹ ಅಪರಿಚಿತ ನಂಬರ್‌ ಯಾರದ್ದು, ಅವರ ಇಮೇಲ್‌ ವಿಳಾಸ ಏನು ಎಂಬ ಮಾಹಿತಿಯನ್ನು 'ಐಓಎಸ್ 10' ಸ್ವಯಂಕೃತವಾಗಿ ನೀಡುತ್ತದೆ.

 ಸಫಾರಿಯಲ್ಲಿ ಅನ್‌ಲಿಮಿಟೆಡ್ ಟ್ಯಾಬ್‌ಗಳು

ಸಫಾರಿಯಲ್ಲಿ ಅನ್‌ಲಿಮಿಟೆಡ್ ಟ್ಯಾಬ್‌ಗಳು

'ಐಓಎಸ್‌ 9'ವರೆಗೂ ಸಹ ಸಫಾರಿ ಬ್ರೌಸರ್‌ನಲ್ಲಿ ಕೇವಲ 36 ಟ್ಯಾಬ್‌ಗಳನ್ನು ಓಪನ್‌ ಮಾಡಬಹುದಿತ್ತು. ಆದರೆ 'ಐಓಎಸ್ 10'ನಲ್ಲಿ ಟ್ಯಾಬ್‌ಗಳ ಯಾವುದೇ ಮಿತಿಯಿಲ್ಲ.

ಬೆಡ್‌ಟೈಮ್‌

ಬೆಡ್‌ಟೈಮ್‌

'ಐಓಎಸ್ 10'ನಲ್ಲಿನ ಕ್ಲಾಕ್‌ ಆಪ್‌ 'ಬೆಡ್‌ಟೈಮ್‌' ಎಂಬ ಹೊಸ ಫೀಚರ್‌ ಅನ್ನು ಹೊಂದಿದೆ. ಈ ಆಪ್‌ನಲ್ಲಿ ಮಲಗುವ ವೇಳೆ ಮತ್ತು ಏಳುವ ವೇಳೆಯನ್ನು ಸೆಟ್‌ ಮಾಡಲು ಅನುವು ಮಾಡಿಕೊಡುತ್ತದೆ.

 ಶೀಘ್ರವಾಗಿ ಓದದ ಎಲ್ಲಾ ಮೇಲ್‌ಗಳ ಪರಿಶೀಲನೆ

ಶೀಘ್ರವಾಗಿ ಓದದ ಎಲ್ಲಾ ಮೇಲ್‌ಗಳ ಪರಿಶೀಲನೆ

'ಐಓಎಸ್ 10' ಮೇಲ್‌ ಆಪ್‌ ಕೆಳಭಾಗದ ಎಡಭಾಗದಲ್ಲಿ ಹ್ಯಾಂಡಿ ಬಟನ್ ಹೊಂದಿದ್ದು, ಶೀಘ್ರವಾಗಿ ಓದದ ಎಲ್ಲಾ ಮೇಲ್‌ಗಳನ್ನು ಚೆಕ್‌ ಮಾಡಲು ಸಹಾಯ ಮಾಡುತ್ತದೆ. ಇತರೆ ಫಿಲ್ಟರ್‌ಗಾಗಿ ಬಟನ್‌ ಮೇಲೆ ದೀರ್ಘವಾಗಿ ಪ್ರೆಸ್‌ ಮಾಡಬಹುದು.

Most Read Articles
Best Mobiles in India

Read more about:
English summary
iOS 10 Hidden Features Everyone Should Know About. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more