Just In
Don't Miss
- Sports
ಸೈನ್ ಮಾಡಿ ಕೆಣಕಿದ ಕೆಸ್ರಿಕ್ಗೆ ಬ್ಯಾಟ್ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ
- News
'ಅತ್ಯಾಚಾರ ರಾಜಧಾನಿ' ಉನ್ನಾವೋ: ಗಾಬರಿಗೊಳಿಸುವ ಅಂಕಿ-ಅಂಶ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಆಪಲ್ ಹೊಸ 'iOS 13 ಓಎಸ್'ನಲ್ಲಿ ನೀವು ಈ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದು!
ಆಪಲ್ ಸಂಸ್ಥೆಯೇನಾದರೂ ಹೊಸ ಸುದ್ದಿಯನ್ನು ಹೊರಹಾಕಿದರೆ ಇಡೀ ಟೆಕ್ ಮಾರುಕಟ್ಟೆಯಲ್ಲಿ ಹೊಸ ತಲ್ಲಣಗಳನ್ನು ಸೃಷ್ಠಿಸುತ್ತದೆ. ಇದೀಗ ಕಂಪನಿಯು ಅಂಥಹದೊಂದು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದು, ಕಂಪನಿಯುತನ್ನ ಬಹುನಿರೀಕ್ಷಿತ 'iOS 13' ಓಎಸ್ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. ಇದನ್ನು ಕೇಳಿ ಐಪೋನ್ ಪ್ರಿಯರಂತು ದಿಲ್‌ಖುಷ್ ಆಗಲಿದ್ದು, ನಿರೀಕ್ಷೆಗಳ ಮಟ್ಟ ಹೆಚ್ಚಾಗಿದೆ.
ಹೌದು, ಆಪಲ್ ತನ್ನ ಹೊಸ iOS 13 ಓಎಸ್ ಅನ್ನು ಇದೇ ಜೂನ್ 3ರಂದು ಕ್ಯಾಲಿಫೊರ್ನಿಯದಲ್ಲಿ ನಡೆಯುವ 'ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆಸ್ಸ್'ನಲ್ಲಿ(WWDC) ಅನಾವರಣ ಮಾಡಲು ಸಜ್ಜಾಗಿದೆ. ಇನ್ನು ಕಂಪನಿಯ ಹೊಸ ಐಫೋನ್ ಮತ್ತು ಐಫೋಡ್ ಡಿವೈಸ್‌ಗಳಲ್ಲಿ ಈ iOS 13 ಓಎಸ್ ಕೆಲಸಮಾಡಲಿದ್ದು, ಬಳಕೆದಾರರಿಗೆ ಹಲವು ನೂತನ ಇನ್‌ಬಿಲ್ಟ್ ಫೀಚರ್ಸ್‌ಗಳ ಪರಿಚಯವಾಗಲಿದೆ.
ಆಪಲ್ iOS 13 ಓಎಸ್ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಿದ್ದು, ಅವುಗಳಲ್ಲಿ ಡಾರ್ಕ್ ಮೋಡ್, ರಿಮೈಂಡರ್ ಆಪ್, ಫೈಂಡ್ ಮೈ ಐಫೋನ್ ಸೇರಿದಂತೆ ಮತ್ತಷ್ಟು ನವೀನ ಮಾದರಿಯ ಫೀಚರ್ಸ್‌ಗಳು ತುಂಬಿರಲಿವೆ. ಹಾಗಾದರೇ ಆಪಲ್‌ನ ಹೊಸ iOS 13 ಓಎಸ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಓದಿರಿ : ಶಿಯೋಮಿಯ 'ಮಿ 4' ಸ್ಮಾರ್ಟ್ಬ್ಯಾಂಡ್ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

ಡಾರ್ಕ್ ಮೋಡ್
ಈ ಹಿಂದಿನ ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆಸ್ಸ್'ನಲ್ಲಿ ಕಂಪನಿ ಹೊಸ ಓಎಸ್ ಅನ್ನು ಪರಿಚಯಿಸಿದ್ದು, ಹಾಗೇ ಈ ಸರತಿಯು iOS 13 ಓಎಸ್ ಪರಿಚಯಿಸಲಿದ್ದು, ಅದರ ವಿಶೇಷತೆಗಳನ್ನು ಪ್ರದರ್ಶಿಸಲಿದೆ. ಈ ಓಎಸ್‌ನ ವಿಶೇಷತೆ ಡಾರ್ಕ್ ಮೋಡ್ ಆಯ್ಕೆ ಆಗಿದ್ದು, ಇನ್‌ಬಿಲ್ಟ್ ಹೊಂದಿರಲಿದೆ. ಹೀಗಾಗಿ ಮುಂದಿನ ಐಫೋನ್ ಮತ್ತು ಐಫೋಡ್‌ಗಳಲ್ಲಿ ಬಳಕೆದಾರರು ಡಾರ್ಕ್ ಮೋಡ್ ಫೀಚರ್ ಲಭ್ಯವಾಗಲಿದೆ.

ಪರಿಷ್ಕೃತ ಹೆಲ್ತ ಆಪ್
ಆಪಲ್ ಕಂಪನಿಯ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಿರುತ್ತವೆ ಆ ನಿರೀಕ್ಷೆಗಳನ್ನು ತಲುಪುವ ಪ್ರಯತ್ನಗಳನ್ನು ಕಂಪನಿ ಮಾಡುತ್ತದೆ. ಈ ನಿಟ್ಟಿನಲ್ಲಿ ಹೊಸ iOS 13 ಓಎಸ್‌ನಲ್ಲಿ ಪರಿಷ್ಕೃತ ಹೆಲ್ತ ಆಪ್ ಇನ್‌ಬಿಲ್ಟ್ ಆಗಿ ಸೇರಿಕೊಂಡಿರಲಿದ್ದು, ಗ್ರಾಹಕರಿಗೆ ರನ್ನಿಂಗ್, ಡೈಲಿ ಆಕ್ಟಿವಿಟಿ ಎಲ್ಲವನ್ನು ಟ್ರಾಕ್ ಮಾಡಲಿದೆ. ಇದರೊಂದಿಗೆ ಹೆಲ್ತ್ ಟ್ರಾಕ್‌ಗೆ ಸಂಭಂದಿಸಿದ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದೆ.

ರಿಮೈಂಡರ್ ಮತ್ತು ಬುಕ್ಸ್ ಆಪ್
ಹೊಸ ಓಎಸ್‌ನಲ್ಲಿ ರಿಮೈಂಡರ್ ಮತ್ತು ಬುಕ್ಸ್ ಆಪ್ ಇರಲಿದ್ದು, ಇದು ನಾಲ್ಕು ಡಿಫಾಲ್ಟ್ ಆಯ್ಕೆಗಳನ್ನು ಹೊಂದಿರಲಿದೆ. ಅವುಗಳೆಂದರೇ ಆಲ್ ಟಾಸ್ಕ್, ಶೆಡ್ಯುಲ್ಡ್ ಟಾಸ್ಕ್, ಟಾಸ್ಕ್ ಟು ಬಿ ಡನ್ ಟುಡೇ ಮತ್ತು ಫ್ಲ್ಯಾಗ್ಡ್ ಟಾಸ್ಕ್. ಇವು ಬಳಕೆದಾರರಿಗೆ ನೆನೆಪಿಸುವ ಕೆಲಸ ಮಾಡಲಿದ್ದು, ರಿಮೈಂಡರ್ ಸೆಟ್ಟ್ ಮಾಡಿಕೊಳ್ಳಬೇಕು. ಬುಕ್ಸ್‌ಗೆ ಸಂಭಂದಿತ ಆಪ್ ಸಹ ಇರಲಿದೆ.

ಐ ಮೆಸ್ಸೆಜ್ ಆಪ್
ಐ ಮೆಸ್ಸೆಜ್ ಆಪ್ ವಾಟ್ಸಪ್ ಮೆಸ್ಸೆಜ್ ರೀತಿಯಲ್ಲಿಯೇ ಇರಲಿದ್ದು, ಪ್ರೋಫೈಲ್ ಪಿಚ್ಚರ್ ಮತ್ತು ಡಿಸ್‌ಪ್ಲೇ ನೇಮ್ ಆಯ್ಕೆಗಳನ್ನು ಹೊಂದಿರಲಿದೆ. ಈ ಐ ಮೆಸ್ಸೆಜ್ ಆಪ್‌ನಲ್ಲಿ ಪ್ರೈವೆಸ್ಸಿ ಸೆಟ್ಟಿಂಗ್ ಮಾಡಿಕೊಳ್ಳಲು ಆಯ್ಕೆ ಇದ್ದು, ಯಾರು ನನ್ನ ಪ್ರೊಫೈಲ್ ನೋಡಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ. ಹಾಗೇ ಮೆಮ್ಸ್, ಇಮೋಜಿಗಳು, ಎನಿಮೋಜಿಗಳು, ಸ್ಟಿಕ್ಕರ್ ಆಯ್ಕೆಗಳು ಸಹ ಇರಲಿವೆ.

ಮ್ಯಾಪ್ ಆಪ್
ಐಫೋನ್ ಡಿವೈಸ್‌ಗಳಲ್ಲಿ ಆಪಲ್ ಮ್ಯಾಪ್ ಇದ್ದು, ಈ ಆಪ್ ನ್ಯಾವಿಗೇಶನ್ ಸೇವೆ ನೀಡುತ್ತದೆ. ಇದೀಗ ಹೊಸ ಅಪ್‌ಡೇಟ್ ಮಾದರಿಯ ಆಪ್‌ನಲ್ಲಿ ಗ್ರಾಹಕರಿಗೆ ಫ್ರಿಕ್ವೇಂಟ್ ಲೊಕೇಶನ್ ಸೆಟ್ಟ್ ಮಾಡಬಹುದಾಗಿದ್ದು, ಈ ಮೂಲಕ ವೇಗದ ನ್ಯಾವಿಗೇಶನ್ ಪಡೆಯಬಹುದಾಗಿದೆ. ಇದಲ್ಲದೇ ಆ ಫ್ರಕ್ವೆಂಟ್ ಲೊಕೇಶನ್‌ನಲ್ಲಿರುವವರು ಗ್ರೂಪ್ ಕ್ರಿಯೆಟ್ ಮಾಡಿಕೊಳ್ಳುವ ಆಯ್ಕೆಗಳು ಸೇರಿರಲಿವೆ ಎನ್ನಲಾಗಿದೆ.

ಫೈಂಡ್ ಮೈ ಐಫೋನ್ ಮತ್ತು ಫೈಂಡ್ ಮೈ ಫ್ರೆಂಡ್ಸ್
ಆಪಲ್ 'ಫೈಂಡ್ ಮೈ ಐಫೋನ್' ಮತ್ತು 'ಫೈಂಡ್ ಮೈ ಫ್ರೆಂಡ್ಸ್' ಎರಡನ್ನು ಒಂದೇ ಆಪ್‌ನಲ್ಲಿ ವಿಲೀನ್ ಮಾಡಿದ್ದು, ಸದ್ಯ ಗ್ರೀನ್‌ಟಚ್ ಆಯ್ಕೆಯಿಂದ ಗುರುತಿಸಿಕೊಂಡಿದೆ. ಈ ಆಪ್ ಮೂಲಕ ಐಫೋನ್ ಹುಡುಕಬಹುದಾಗಿದ್ದು, ಜೊತೆಗೆ ಫೈಂಡ್ ಮೈ ಫ್ರೆಂಡ್ ಫೀಚರ್ ಸೇರಿಸಲಾಗಿದೆ. ಹಾಗೇ ಈ ಹಿಂದೆ ಆಪಲ್ ಬಾಹ್ಯವಾಗಿ ಫೋನ್ ಹುಡುಕುವ ಆಯ್ಕೆ ಪರಿಚಯಿಸಲಿದೆ ಎನ್ನವ ಮಾತುಗಳು ಇದ್ದವು.

ಮೇಲ್ ಆಪ್
ಹೊಸ iOS 13 ಓಎಸ್ ಹಲವು ಮಹತ್ತರ ಫೀಚರ್ಸ್‌ಗಳನ್ನು ತುಂಬಿಕೊಂಡಿದ್ದು, ಈ ಆಯ್ಕೆಗಳು ಗ್ರಾಹಕರಿಗೆ ಖುಷಿ ನೀಡಲಿವೆ. ಅವುಗಳಲ್ಲಿ ಮೇಲ್ ಆಪ್ ಒಂದಾಗಿದ್ದು, ಇದರಲ್ಲಿ ಬೇಡವಾದ ಮೇಲ್‌ಗಳನ್ನು ಬರದಂತೆ ತಡೆಯುವ ಆಯ್ಕೆಗಳು ಇರಲಿವೆ. ವೈಯಕ್ತಿಕ ಮೇಲ್ ಥ್ರೇಡ್ ಅನ್ನು ಮ್ಯೂಟ್ ಮಾಡುವ ಆಯ್ಕೆ ಸಹ ಇದ್ದು, ಪೊಲ್ಡರ್ ಮ್ಯಾನೇಜಮೆಂಟ್ ಆಯ್ಕೆಗಳು ಇರಲಿವೆ.

ಸ್ಲಿಪ್ ಮೋಡ್
ಆಪಲ್ iOS 13 ಓಎಸ್ ಡಿವೈಸ್‌ಗಳಲ್ಲಿ ಸ್ಲಿಪ್ ಮೋಡ್ ಆಯ್ಕೆಯನ್ನು ಪರಿವಯಿಸಲಿದ್ದು, ಮಲಗುವ ಸಮಯದಲ್ಲಿ ಡಿವೈಸ್‌ಗಳ ನೋಟಿಫಿಕೇಶನಗಳಿಂದ ಡಿಸ್ಟರ್ಬ್ ಆಗಬಾರದೆಂದು ಈ ಆಯ್ಕೆಯನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಡಾರ್ಕ್ ಮೋಡ್, ಲಾಕ್ ಸ್ಕ್ರೀನ್ ಮತ್ತು ನೋಟಿಫಿಕೇಶನ್‌ಗಳನ್ನು ಆಟೋ ಮ್ಯೂಟ್ ಮಾಡಿಕೊಳ್ಳಲಿದೆ.
ಓದಿರಿ : 'ಬ್ಲೂಟೂತ್ ಸ್ಪೀಕರ್' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090