Home
ಸುದ್ದಿಜಾಲ

'ಐಓಎಸ್‌ 14' ಬಿಡುಗಡೆಗೆ ಸಜ್ಜಾದ ಆಪಲ್!..ಅಚ್ಚರಿ ಫೀಚರ್ಸ್‌ಗಳು!

ವಿಶ್ವ ಟೆಕ್ ಹಿರಿಯಣ್ಣ ಆಪಲ್ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ 'ಐಓಎಸ್‌ 13' ವರ್ಷನ್‌ ಅನ್ನು ಬಿಡುಗಡೆ ಮಾಡಿ ಐಫೋನ್‌ಗಳಿಗೆ ನ್ಯೂ ಲುಕ್ ನೀಡಿದೆ. ಐಫೋನ್ ಪ್ರಿಯರಿಗೆ ಈ ಹೊಸ ಐಓಎಸ್‌ 13 ಓಎಸ್‌ನ ಖುಷಿ ಮಾಸುವ ಮುನ್ನವೇ ಆಪಲ್‌ ಹೊಸದಾಗಿ 'ಐಓಎಸ್‌ 14' ಲಾಂಚ್ ಮಾಡುವ ತಯಾರಿ ನಡೆಸಿದೆ. ಇದೀಗ ಗ್ರಾಹಕರಲ್ಲಿ ಐಓಎಸ್‌ 14 ಓಎಸ್‌ನಲ್ಲಿ ಅದೆಷ್ಟು ಹೊಸ ಫೀಚರ್ಸ್‌ಗಳು ಲಗ್ಗೆ ಇಡುತ್ತವೆಯೋ ಎನ್ನುವ ಕುತೂಹಲ ಮೂಡಿದೆ.

ಐಓಎಸ್‌ 14

ಹೌದು, ಆಪಲ್ ಸಂಸ್ಥೆಯು ನೂತನ 'ಐಓಎಸ್‌ 14' ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ ಎನ್ನುವ ಲೀಕ್ ಸುದ್ದಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ. ಈ ಸಮಾಚಾರ ಐಫೋನ್‌ ಪ್ರಿಯರಿಗೆ ಸರ್‌ಪ್ರೈಸ್‌ ಎನಿಸಿದ್ದು, ಆದರೆ ಐಓಎಸ್‌ 14 ಆವೃತ್ತಿಯಲ್ಲಿ ಏನೆಲ್ಲಾ ಅಪ್‌ಗ್ರೇಡ್‌ ಫೀಚರ್ಸ್‌ಗಳು ತುಂಬಿರುತ್ತವೆ ಎನ್ನುವ ಕೌತುಕ ದಿನೇ ದಿನೇ ಹೆಚ್ಚಾಗುತ್ತಲಿದೆ. ಹಾಗಾದರೇ ಲೀಕ್ ಆಗಿರುವ ವದಂತಿಗಳ ಪ್ರಕಾರ ಆಪಲ್‌ 'ಐಓಎಸ್‌ 14' ಆವೃತ್ತಿ ಬಿಡುಗಡೆ ಯಾವಾಗ ಮತ್ತು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

5G ನೆಟವರ್ಕ್‌ಗೆ ಸಪೋರ್ಟ್‌

5G ನೆಟವರ್ಕ್‌ಗೆ ಸಪೋರ್ಟ್‌

ಆಪಲ್‌ 'ಐಓಎಸ್‌ 14' ಆವೃತ್ತಿ ಮುಖ್ಯವಾಗಿ 5G ನೆಟವರ್ಕ್‌ಗೆ ಸೂಕ್ತ ಬೆಂಬಲ ನೀಡುತ್ತದೆ ಎನ್ನಲಾಗಿದೆ. ಮುಂಬರುವ 2020 ಐಫೋನ್‌ ಸರಣಿಗಳು 5G ನೆಟವರ್ಕ್‌ ಲಭ್ಯತೆಯನ್ನು ಒಳಗೊಂಡಿರಲಿದ್ದು, ಆ ಐಫೋನ್‌ಗಳಲ್ಲಿ ಐಓಎಸ್‌ 14 ಕೆಲಸಮಾಡಲಿದೆ ಎಂದು ಹೇಳಲಾಗಿದೆ.

ಆಪಲ್‌ AR ಗ್ಲಾಸ್‌

ಆಪಲ್‌ AR ಗ್ಲಾಸ್‌

ಆಪಲ್ ಸಂಸ್ಥೆಯು 2020 ವರ್ಷದಲ್ಲಿ 5G ಬೆಂಬಲಿತ ಐಫೋನ್‌ಗಳ ಜೊತೆಗೆ ಆಪಲ್ AR ಗ್ಲಾಸ್‌ ಬಿಡುಗಡೆ ಮಾಡುವ ಯೋಜನೆಗಳಿವೆ. ಈ ಆಪಲ್ AR ಗ್ಲಾಸ್‌ ಡಿವೈಸ್‌ಗಳು ಸಹ ಹೊಸ ಐಓಎಸ್‌ 14 ಅವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಸ್ಮಾರ್ಟ್‌ ಕೆಲಸ

ಸ್ಮಾರ್ಟ್‌ ಕೆಲಸ

ಐಓಎಸ್‌ 14 ಆವೃತ್ತಿಯ ಓಎಸ್‌ ಅತ್ಯಂತ ಸ್ಮಾರ್ಟ್‌ ಆಗಿ ಕೆಲಸ ಮಾಡಲಿದ್ದು, ಸ್ಪಾಮ್‌-spam ಕರೆಗಳನ್ನು ಫಿಲ್ಟರ್‌ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಹಾಗೆಯೇ ಇ-ಮೇಲ್ ಆಯ್ಕೆಗಳಲ್ಲಿಯೂ ಲಿಂಕ್‌ಗಳನ್ನು ಸೇರಿಸುವಲ್ಲಿಯೂ ಹೆಚ್ಚು ವೃತ್ತಿಪರತೆ ಕಾಣಿಸಲಿದೆ. ಇದರೊಂದಿಗೆ ಪ್ರೊಸೆಸರ್‌ ಆಧಾರಿತ ಕೆಲಸಗಳು ಸ್ಮಾರ್ಟ್‌ ಆಗಿ ನಡೆಯಲಿದೆ.

ಐಓಎಸ್‌ 14 ಬಿಡುಗಡೆ ಯಾವಾಗ

ಐಓಎಸ್‌ 14 ಬಿಡುಗಡೆ ಯಾವಾಗ

ಆಪಲ್ ಸಂಸ್ಥೆಯು ಇತ್ತೀಚಿಗೆ ಐಓಎಸ್‌ 13 ಆವೃತ್ತಿಯನ್ನು ಲಾಂಚ್ ಮಾಡಿದ್ದು, ಇದೀಗ ಐಓಎಸ್‌ 13 ಓಎಸ್‌ ಬಿಡುಗಡೆಗೆ ಸಜ್ಜಾಗಿದೆ. ಐಓಎಸ್‌ 14 ಆವೃತ್ತಿಯನ್ನು 2020ರಲ್ಲಿ ನಡೆಯುವ WWDC-2020 ಕಾರ್ಯಕ್ರಮದಲ್ಲಿ ಅನಾವರಣ ಮಾಡುವ ಸಾಧ್ಯತೆಗಳು ಅಧಿಕ ಎನ್ನುವ ಸಂಗತಿ ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆ.

Best Mobiles in India

English summary
Assuming Apple follows prior years, it will likely unveil iOS 14 at its annual WWDC conference - WWDC 2020. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+