Apple Iphone: ಭಾರತ ಸರ್ಕಾರದಿಂದ ಐಫೋನ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ; ಈಗಲೇ ಈ ಕೆಲಸ ಮಾಡಿ!
ಆಫಲ್ ಐಫೋನ್ ಹೊಂದಿರುವ ಬಳಕೆದಾರರಿಗೆ ಭಾರತ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದ್ದು, ಈ ಮೂಲಕ ತಕ್ಷಣವೇ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಿ ಎಂದು ಕೇಳಿಕೊಂಡಿದೆ. ಈ ಅಪ್‌ಡೇಟ್‌ನಿಂದಾಗಿ ಐಫೋನ್ ಬಳಕೆದಾರರು ಈ ಗಂಭೀರ ಸಮಸ್ಯೆಯಿಂದ ಪಾರಾಗಲಿದ್ದಾರೆ.
ಹೌದು, ಆಪಲ್ ಐಫೋನ್‌ಗಳು ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಸಾಮರ್ಥ್ಯ ಹಾಗೂ ಭದ್ರತಾ ವಿಚಾರದಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿವೆ. ಅದಾಗ್ಯೂ ಸಹ ಕೆಲವು ಲೋಪದೋಷಗಳು ಕಂಡುಬರುತ್ತಿದ್ದು, ಈ ಕಾರಣಕ್ಕಾಗಿಯೇ ಐಫೋನ್ ಬಳಕೆದಾರರಿಗೆ ಭಾರತದ ಸರ್ಕಾರ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಸರ್ಕಾರ ಯಾಕೆ ಈ ತಕ್ಷಣದ ಎಚ್ಚರಿಕೆ ರವಾನಿಸಿದೆ, ಐಫೋನ್ ಬಳಕೆದಾರರು ಮಾಡಬೇಕಿರುವುದು ಏನು ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಐಫೋನ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ: ಆಪಲ್ ತನ್ನ ಬಳಕೆದಾರರನ್ನು ಎಲ್ಲಾ ರೀತಿಯ ಬೆದರಿಕೆಗಳಿಂದ ಕಾಪಾಡಲು ನಿಯಮಿತವಾಗಿ ನವೀಕರಣಗಳನ್ನು ಹೊರತರುತ್ತಲೇ ಇರುತ್ತದೆ. ಇದರಿಂದಾಗಿ ಐಫೋನ್‌ಗಳಲ್ಲಿ ಹೊಸದಾಗಿ ಪತ್ತೆಯಾಗುವ ಅಪಾಯಕಾರಿ ದೋಷಗಳಿಂದ ರಕ್ಷಿಸಲಾಗುತ್ತಿದೆ. ಅದರಂತೆ ಈಗ ತುರ್ತು ನವೀಕರಣವನ್ನು ಐಫೋನ್ ಬಳಕೆದಾರರು ಪಡೆದುಕೊಂಡಿದ್ದು, ಈ ಸಂಬಂಧ ಭಾರತ ಸರ್ಕಾರವು ಸಹ ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಿದೆ.
ಆಪಲ್ ಐಫೋನ್‌ನ ಬಳಕೆದಾರರಿಗೆ iOS 16.5.1 ನವೀಕರಣವನ್ನು ಹೊರತಂದಿದೆ. ಐಫೋನ್ ಬಳಕೆದಾರರನ್ನು ರಕ್ಷಿಸಲು ಸೂಕ್ತವಾದ ಪ್ಯಾಚ್‌ಗಳೊಂದಿಗೆ ಅಪ್‌ಡೇಟ್ ಇದು ಕಾಣಿಸಿಕೊಂಡಿದ್ದು, ನೀವು ಇತ್ತೀಚಿನ ನವೀಕರಣವನ್ನು ತಕ್ಷಣವೇ ಡೌನ್‌ಲೋಡ್ ಮಾಡಬೇಕು ಎಂದು ಸರ್ಕಾರ ಹೇಳಿದೆ. ಇದರಿಂದಾಗಿ ನೀವೇನಾದರೂ ಆಪಲ್ ಐಫೋನ್ ಬಳಕೆ ಮಾಡುತ್ತಿದ್ದರೆ ತಕ್ಷಣವೇ ಅಪ್‌ಡೇಟ್ ಮಾಡಿ.
ಈ ಸಂಬಂಧ ಆಪಲ್ ಮಾಹಿತಿ ನೀಡಿದ್ದು, ಹ್ಯಾಕರ್‌ಗಳಿಂದ ಸಿಸ್ಟಮ್ ದಾಳಿಗೆ ಬಳಸಬಹುದಾದ ದುರ್ಬಲತೆಗಳಿಗೆ ಹೊಸ ಐಒಎಸ್ ಅಪ್‌ಡೇಟ್ ಪರಿಹಾರವಾಗಿದೆ. ಕರ್ನಲ್‌ನಲ್ಲಿನ ಅಸಮರ್ಪಕ ಇನ್‌ಪುಟ್ ಮೌಲ್ಯೀಕರಣದಿಂದಾಗಿ ಈ ದೋಷ ಸದ್ಯದ ಐಓಎಸ್‌ನಲ್ಲಿ ಕಾಣಿಸಿಕೊಂಡಿದೆ. ಈ ದುರ್ಬಲತೆಯು ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಸ್ಕ್ಯಾಮರ್‌ಗಳಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಿದೆ.
ಗ್ರಾಹಕರ ರಕ್ಷಣೆ ಹಿನ್ನೆಲೆ ತನಿಖೆ ನಡೆಯುವವರೆಗೆ, ಪ್ಯಾಚ್‌ಗಳು ಲಭ್ಯವಾಗುವವರೆಗೆ ಆಪಲ್ ಭದ್ರತಾ ಸಮಸ್ಯೆಗಳನ್ನು ಬಹಿರಂಗಪಡಿಸುವುದಿಲ್ಲ ಹಾಗೂ ಚರ್ಚಿಸುವುದಿಲ್ಲ ಅಷ್ಟೇ ಅಲ್ಲದೆ ಈ ಸಂಬಂಧ ಯಾವುದೇ ಮಾಹಿತಿ ಖಚಿತಪಡಿಸುವುದಿಲ್ಲ. ಈ ಕಾರಣದಿಂದಾಗಿ ಯಾವುದೇ ವಂಚನೆಯನ್ನು ತಪ್ಪಿಸಲು ನೀವು ಸಾಧ್ಯವಾದಷ್ಟು ಬೇಗ ಇತ್ತೀಚಿನ iOS 16.5.1 ಅನ್ನು ಇನ್‌ಸ್ಟಾಲ್ ಮಾಡಬೇಕು ಎಂದು ಒತ್ತಿ ಹೆಳಿದೆ.
ರಷ್ಯಾದ ಭದ್ರತಾ ಸಾಫ್ಟ್‌ವೇರ್ ತಯಾರಕ ಕ್ಯಾಸ್ಪರ್ಸ್ಕಿ ಲ್ಯಾಬ್ ಭದ್ರತಾ ನ್ಯೂನತೆಯನ್ನು ಕಂಡುಕೊಂಡಿದ್ದು, ದುರುದ್ದೇಶಪೂರಿತ ಲಿಂಕ್ ಅನ್ನು ಹೊಂದಿರುವ ಐಮೆಸೆಜ್ ಅನ್ನು ಕಳುಹಿಸುವ ಮೂಲಕ ಈ ದಾಳಿ ನಡೆದಿದೆ ಎಂದು ಅದು ಅದು ಮಾಹಿತಿ ನೀಡಿದೆ. ಜೊತೆಗೆ ಭದ್ರತಾ ಸಂಸ್ಥೆಯ ಪ್ರಕಾರ ಆಕ್ರಮಣಕಾರರು ಬಳಕೆದಾರರ ಡಿವೈಸ್‌ಗೆ ಸೋಂಕುಂಟು ಮಾಡಬಹುದು. ಜೊತೆಗೆ ಮೆಸೆಜ್ ನೋಡದೆಯೇ ಕೋಡ್ ಅನ್ನು ರನ್ ಮಾಡಬಹುದು ಎಂದು ತಿಳಿಸಿದೆ.
ಈ ಸೋಂಕಿನ ನಂತರ ಸ್ಥಾಪಿಸಲಾದ ದುರುದ್ದೇಶಪೂರಿತ ಕೋಡ್ 24 ಆಜ್ಞೆಗಳನ್ನು ಹೊಂದಿದೆ ಎಂದು ತಿಳಿಸಿದ್ದು, ಇವು ಆಪಲ್‌ನ ಕೀಚೈನ್‌ನಿಂದ ಪಾಸ್‌ವರ್ಡ್‌ಗಳನ್ನು ಹೊರತೆಗೆಯುವುದು, ಸ್ಥಳಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಫೈಲ್‌ಗಳನ್ನು ಮಾರ್ಪಡಿಸುವುದು ಅಥವಾ ಅವುಗಳನ್ನು ವಶಕ್ಕೆ ಪಡೆದುಕೊಳ್ಳುವುದು ಸೇರಿದಂತೆ ಮುಂತಾದ ಕಾರ್ಯಗಳನ್ನು ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ.
iOS 16.5.1 ಅಪ್‌ಡೇಟ್‌ಗೆ ಯಾರ್ಯಾರಿಗೆ ಲಭ್ಯ?: ಐಫೋನ್ 8 ಮತ್ತು ಅದರ ನಂತರದ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ನವೀಕರಣ ಲಭ್ಯ ಇದೆ. ಜೊತೆಗೆ ಐಪ್ಯಾಡ್ ಪ್ರೊ ನ ಎಲ್ಲಾ ಮಾದರಿಗಳು, ಐಪ್ಯಾಡ್ ಏರ್ 3 ನೇ ತಲೆಮಾರಿನ ಮತ್ತು ನಂತರದ ಡಿವೈಸ್‌ಗಳು ಹಾಗೂ ಐಪ್ಯಾಡ್ 5 ನೇ ತಲೆಮಾರಿನ ಮತ್ತು ನಂತರದ ಡಿವೈಸ್ ಹಾಗೂ ಐಪ್ಯಾಡ್ ಮಿನಿ 5 ನೇ ತಲೆಮಾರಿನ ಮತ್ತು ನಂತರದ ಡಿವೈಸ್‌ಗಳಲ್ಲಿ ಅಪ್‌ಡೇಟ್ ಮಾಡಬಹುದು.

ಐಒಎಸ್ 16.5.1 ಅಪ್‌ಡೇಟ್ ಡೌನ್‌ಲೋಡ್ ಮಾಡುವುದು ಹೇಗೆ?: ಮೊದಲು ನಿಮ್ಮ ಐಫೋನ್‌ನಲ್ಲಿನ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ. ಅದರಲ್ಲಿ ಜನರಲ್ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ಸಾಫ್ಟ್‌ವೇರ್ ನವೀಕರಣ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ ನಿಮ್ಮ ಡಿವೈಸ್‌ಗೆ ಲಭ್ಯವಿರುವ ನವೀಕರಣವನ್ನು ನೀವು ನೋಡುತ್ತೀರಿ. ಇದರಲ್ಲಿ ಒಂದಕ್ಕಿಂತ ಹೆಚ್ಚು ನವೀಕರಣಗಳನ್ನು ತೋರಿಸಿದರೆ ಇತ್ತೀಚಿನ ನವೀಕರಣ ಡೌನ್‌ಲೋಡ್ ಮಾಡಿ.


Click it and Unblock the Notifications








