Home
ಸುದ್ದಿಜಾಲ

ಯಾವೆಲ್ಲಾ ಐಫೋನ್‌ಗಳು iOS 18 ಅಪ್‌ಡೇಟ್‌ ಪಡೆಯಲಿವೆ?..ಲಿಸ್ಟ್‌ ಇಲ್ಲಿದೆ ನೋಡಿ

ಬಹುನಿರೀಕ್ಷಿತ ಆಪಲ್‌ ಸಂಸ್ಥೆಯ WWDC 2024 ಅದ್ದೂರಿಯಾಗಿ ಮುಕ್ತಾಯವಾಗಿದೆ. ಈ ಕಾರ್ಯಕ್ರಮದಲ್ಲಿ ಆಪಲ್ ಕಂಪನಿಯು ಪ್ರಮುಖ ಸಾಫ್ಟ್‌ವೇರ್ ಅಪ್‌ಡೇಟ್‌ ಅನ್ನು ಘೋಷಿಸಿದ್ದು, ಆಪಲ್‌ ಪ್ರಿಯರು ಹುಬ್ಬೇರಿಸುವಂತೆ ಮಾಡಿದೆ. ಮುಖ್ಯವಾಗಿ iOS 18, iPadOS 18, macOS Sequoia, watchOS 11 ಮತ್ತು visionOS 2 ಘೋಷಿಸಿದೆ. ಇನ್ನು ನೂತನ ಫೀಚರ್ಸ್‌ಗಳು AI ಮೇಲೆ ಕೇಂದ್ರೀಕರಿಸುತ್ತವೆ ಅನ್ನೊದು ವಿಶೇ‍ಷ ಆಗಿದೆ. ಸಂಸ್ಥೆಯ ಕೆಲವು ಐಫೋನ್‌ ಸರಣಿ, ಐಪಾಡ್‌ಗಳು, ವಾಚ್‌ಗಳು, ಹೊಸ ಓಎಸ್‌ ಪಡೆಯಲಿವೆ.

ಹೌದು, ಆಪಲ್‌ WWDC 2024 ಕಾರ್ಯಕ್ರಮದಲ್ಲಿ ತನ್ನ ಎಲ್ಲ ವಿಭಾಗದ ಓಎಸ್‌ ನಲ್ಲಿ ಅಪ್‌ಡೇಟ್‌ ಮಾಡಿದ್ದು, ಅಪ್‌ಡೇಟ್‌ ಓಎಸ್‌ ನೂತನ ಆಯ್ಕೆಗಳನ್ನು ಪಡೆದಿವೆ. ಹೊಸ ಓಎಸ್‌ನಲ್ಲಿ ಸಾಕಷ್ಟು ಅಚ್ಚರಿ ಹಾಗೂ ಕುತೂಹಲಕಾರಿ ಫೀಚರ್ಸ್‌ ಸೇರ್ಪಡೆ ಆಗಿವೆ. ಬಹುನಿರೀಕ್ಷಿತ iOS 18 ಹಾಗೂ iPadOS 18 ಕೂಡಾ ಘೋಷಣೆ ಆಗಿವೆ. ಹಾಗಾದರೇ ಈ ನೂತನ ಓಎಸ್‌ ಸಪೋರ್ಟ್‌ ಪಡೆಯುವ ಡಿವೈಸ್‌ಗಳ ಸಂಪೂರ್ಣ ಲಿಸ್ಟ್‌ ಇಲ್ಲಿದೆ ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಯಾವೆಲ್ಲಾ ಐಫೋನ್‌ಗಳು iOS 18 ಅಪ್‌ಡೇಟ್‌ ಪಡೆಯಲಿವೆ?..ಲಿಸ್ಟ್‌ ಇಲ್ಲಿದೆ ನೋಡಿ

iOS 18 ಓಎಸ್‌ ಸಪೋರ್ಟ್‌ ಪಡೆಯುವ ಐಫೋನ್‌ಗಳು

- ಐಫೋನ್ 15
- ಐಫೋನ್ 15 ಪ್ಲಸ್
- ಐಫೋನ್ 15 ಪ್ರೊ
- ಐಫೋನ್ 15 ಪ್ರೊ ಮ್ಯಾಕ್ಸ್‌
- ಐಫೋನ್ 14

- ಐಫೋನ್ 14 ಪ್ಲಸ್
- ಐಫೋನ್ 14 ಪ್ರೊ
- ಐಫೋನ್ 14 ಪ್ರೊ ಮ್ಯಾಕ್ಸ್‌
- ಐಫೋನ್ 13
- ಐಫೋನ್ 13 ಮಿನಿ
- ಐಫೋನ್ 13 ಪ್ರೊ
- ಐಫೋನ್ 13 ಪ್ರೊ ಮ್ಯಾಕ್ಸ್‌
- ಐಫೋನ್ 12

- ಐಫೋನ್ 12 ಮಿನಿ
- ಐಫೋನ್ 12 ಪ್ರೊ
- ಐಫೋನ್ 12 ಪ್ರೊ ಮ್ಯಾಕ್ಸ್‌
- ಐಫೋನ್ 11
- ಐಫೋನ್ 11 ಪ್ರೊ

- ಐಫೋನ್ 11 ಪ್ರೊ ಮ್ಯಾಕ್ಸ್‌
- ಐಫೋನ್ XS
- ಐಫೋನ್ XS ಮ್ಯಾಕ್ಸ್
- ಐಫೋನ್ XR
- ಐಫೋನ್ SE (2 ನೇ ಜನರೇಶನ್‌ ಅಥವಾ ನಂತರದ)

iPadOS 18 ಅಪ್‌ಡೇಟ್‌ ಪಡೆಯುವ ಡಿವೈಸ್‌ಗಳ ಲಿಸ್ಟ್‌:

- ಐಪ್ಯಾಡ್ ಪ್ರೊ (M4)
- ಐಪ್ಯಾಡ್ ಪ್ರೊ 12.9 ಇಂಚಿನ (3 ನೇ ಜನರೇಶನ್‌ ಮತ್ತು ನಂತರದ)
- ಐಪ್ಯಾಡ್ ಪ್ರೊ 11 ಇಂಚಿನ (1 ನೇ ಜನರೇಶನ್‌ ಮತ್ತು ನಂತರದ)
- ಐಪ್ಯಾಡ್ ಏರ್ (M2)
- ಐಪ್ಯಾಡ್ ಏರ್ (3 ನೇ ಜನರೇಶನ್‌ ಮತ್ತು ನಂತರದ)
- ಐಪ್ಯಾಡ್ (7 ನೇ ಜನರೇಶನ್‌ ಮತ್ತು ನಂತರದ)
- ಐಪ್ಯಾಡ್ ಮಿನಿ (5 ನೇ ಜನರೇಶನ್‌ ಮತ್ತು ನಂತರದ)

watchOS 11 ಓಎಸ್‌ ಅಪ್‌ಡೇಟ್‌ ಪಡೆಯುವ ಡಿವೈಸ್‌ಗಳ ಲಿಸ್ಟ್‌:

- ಆಪಲ್ ವಾಚ್ SE (2 ನೇ ಜನರೇಶನ್‌)
- ಆಪಲ್ ವಾಚ್ ಸರಣಿ 6
- ಆಪಲ್ ವಾಚ್ ಸರಣಿ 7
- ಆಪಲ್ ವಾಚ್ ಸರಣಿ 8
- ಆಪಲ್ ವಾಚ್ ಸರಣಿ 9
- ಆಪಲ್ ವಾಚ್ ಅಲ್ಟ್ರಾ
- ಆಪಲ್ ವಾಚ್ ಅಲ್ಟ್ರಾ 2

Best Mobiles in India

English summary
iOS 18, iPadOS 18 supported devices list is here. check all the compatible iPhones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+