Home
ಸುದ್ದಿಜಾಲ

Apple: ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?

ಆಪಲ್‌ (Apple) ಇತರೆ ಕಂಪೆನಿಗಳಿಂಗ ಭಿನ್ನವಾಗಿದ್ದು, ಇದರ ಯಾವುದೇ ಡಿವೈಸ್‌ಗಳಿಗೂ ಸಹ ಅಪಾರವಾದ ಬೇಡಿಕೆ ಇದೆ. ಅದರಲ್ಲೂ ಆಪಲ್‌ ಐಫೋನ್‌ಗಳನ್ನು ಜನರು ದೊಡ್ಡ ಮಟ್ಟದಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಆಪಲ್‌ ಪ್ರಿಯರು ಕುಣಿದು ಕುಪ್ಪಳಿಸುವ ವಿಷಯವೊಂದು ಹೊರಬಿದ್ದಿದೆ.

ಹೌದು, ಆಪಲ್‌ ತನ್ನ ಡಿವೈಸ್‌ಗಳನ್ನು ಬಳಕೆ ಮಾಡುವ ಗ್ರಾಹಕರು ಯಾವುದೇ ಸಮಸ್ಯೆಗಳಿಗೆ ಸಿಲುಕಬಾರದು ಹಾಗೂ ಆ ಡಿವೈಸ್‌ಗಳ ಮೂಲಕ ಉತ್ತಮವಾದ ಅನುಭವ ಪಡೆಯಬೇಕು ಅನ್ನೋ ವಿಷಯದಲ್ಲೇ ಕೆಲಸ ಮಾಡುತ್ತದೆ. ಇದರಿಂದಾಗಿಯೇ ಇಂದು ಆಪಲ್‌ ಫೋನ್‌ಗಳಿಗೆ ಹೆಚ್ಚು ಆಕರ್ಷಿತರಾಗುತ್ತಿರುವುದು. ಅದರಲ್ಲೂ ಅಪ್‌ಡೇಟ್‌ ಹಾಗೂ ಭದ್ರತೆ ವಿಚಾರದಲ್ಲಿ ಇದು ಸದಾ ಮುಂದಿದ್ದು, iOS 18 ಮೂಲಕ ತನ್ನ ಗ್ರಾಹಕರನ್ನು ಹೊಸ ಲೋಕಕ್ಕೆ ಕರೆದೊಯ್ಯಲು ಸಿದ್ಧವಾಗಿದೆ. ಹಾಗಿದ್ರೆ, ಈ ಅಪ್‌ಡೇಟ್‌ನಲ್ಲಿ ಏನೆಲ್ಲಾ ನಿರೀಕ್ಷೆ ಮಾಡಬಹುದು? ಯಾಕಾಗಿ ಇದನ್ನು ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ ಎಂದು ಕರೆಯಲಾಗುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು

iOS 18 ನವೀಕರಣ: WWDC ಸಮಯದಲ್ಲಿ ಅಂದರೆ ಜೂನ್‌ನಲ್ಲಿ iOS 18 ನವೀಕರಣವನ್ನು ಆರಂಭಿಸಲು ಆಪಲ್‌ ಎಲ್ಲಾ ತಯಾರಿ ಮಾಡಿಕೊಂಡಿದೆ. ಮತ್ತು ವರದಿಯ ಪ್ರಕಾರ, ಹೊಸ ಓಡಸ್‌ ಅಪ್‌ಡೇಟ್ ಆಪಲ್‌ನ ಇತಿಹಾಸದಲ್ಲಿ ದೊಡ್ಡ ಐಒಎಸ್ ಅಪ್‌ಡೇಟ್ ಆಗಿರುತ್ತದೆ ಎನ್ನಲಾಗಿದೆ. ಅಂದರೆ ಇದು ಎಐ (AI) ನಲ್ಲಿ ಕೆಲಸ ಮಾಡುತ್ತಿದ್ದು, ಈ ಮೂಲಕ ಇತರೆ ಎಐ ಆಧಾರಿತ ಪ್ಲಾಗ್‌ಶಿಪ್ ಆಡ್ರಾಯ್ಡ್‌ ಡಿವೈಸ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಗಮನಿಸಬೇಕಾದ ವಿಷಯ ಏನೆಂದರೆ ಎಐ (artificial intelligence) ಪ್ರಸ್ತುತ ಟೆಕ್ ಉದ್ಯಮದಲ್ಲಿ ಅತ್ಯಂತ ಮಹತ್ವದ ವಿಷಯವಾಗಿದೆ. ಓಪನ್‌ ಎಐ ನಿಂದ ಹಿಡಿದು ಗೂಗಲ್‌ ಮತ್ತು ಮೆಟಾ ವರೆಗೆ ಎಲ್ಲಾ ಕಡೆ ಎಐ ಎಐ. ಅದರಲ್ಲೂ ಬಹುತೇಕ ಎಲ್ಲಾ ಪ್ರಮುಖ ಟೆಕ್ ಪ್ಲೇಯರ್‌ಗಳು ಸ್ಮಾರ್ಟ್‌ಫೋನ್‌ ಸೇರಿದಂತೆ ತಮ್ಮ ಉತ್ಪನ್ನಗಳಲ್ಲಿ ಹೊಸ ಎಐ ಫೀಚರ್ಸ್‌ ಅನ್ನು ಸಂಯೋಜಿಸುವ ಕೆಲಸ ಮಾಡುತ್ತಿವೆ.

ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು

ಉದಾಹರಣೆಗೆ ಕಳೆದ ವರ್ಷ, ಗೂಗಲ್ ತನ್ನ ಪಿಕ್ಸೆಲ್ 8 ಸರಣಿಯಲ್ಲಿ (Google Pixel 8 series) ಎಐ ಚಾಲಿತ ಫೀಚರ್ಸ್‌ಗೆ ಹೆಚ್ಚಿನ ಒತ್ತು ನೀಡಿತ್ತು ಮತ್ತು ಈ ವರ್ಷ, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S24 (Galaxy S24) ಶ್ರೇಣಿಗಾಗಿ ಎಐ ವರ್ಧನೆಗಳನ್ನು ಘೋಷಿಸಿತ್ತು. ಇಷ್ಟಾದರೂ ಆಪಲ್‌ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ, ಎಐ ಆಪಲ್‌ಗೆ ದೂರದ ಮಾತಲ್ಲ ಅನ್ನೋದು ಸಹ ನಿಮಗೆ ತಿಳಿದಿರಲಿ.

ಮುಂಬರುವ iOS 18 ಅಪ್‌ಡೇಟ್‌ನಿಂದ ಆಪಲ್‌ ಎಐ ನಲ್ಲೇ ತನ್ನದೇ ಆದ ಸಾಮರ್ಥ್ಯ ತೋರಿಸಲಿದೆ. ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಪ್ರಕಾರ, WWDC ಸಮಯದಲ್ಲಿ iOS 18 ಅಪ್‌ಡೇಟ್ ಅನ್ನು ಘೋಷಣೆ ಮಾಡಲು ಆಪಲ್‌ ರೆಡಿಯಾಗಿದ್ದು, ಈ ಬಾರಿಯ ನವೀಕರಣವು ದೊಡ್ಡದಾಗಿರುತ್ತದೆ, ಐಫೋನ್‌ಗಳಿಗೆ ಟನ್ ಗಟ್ಟಲೆ ಹೊಸ ಎಐ ಕೇಂದ್ರಿತ ಫೀಚರ್ಸ್‌ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು

ತನ್ನ ಇತ್ತೀಚಿನ ಪವರ್ ಆನ್ ಸುದ್ದಿಪತ್ರದಲ್ಲಿ, iOS 18 ಐಫೋನ್‌ಗೆ ಹೆಚ್ಚು ಅಗತ್ಯವಿರುವ ಬದಲಾವಣೆಯನ್ನು ನೀಡುತ್ತದೆ ಎಂದು ಗುರ್ಮನ್ ಬಹಿರಂಗಪಡಿಸಿದರು. ಅಲ್ಲದೆ ಬಳಕೆದಾರರು, ಡೆವಲಪರ್‌ಗಳು ಮತ್ತು ನಿಯಂತ್ರಕರಿಂದ ಅನೇಕ ದೀರ್ಘಕಾಲದ ಮನವಿಗಳನ್ನು ಈ ಮೂಲಕ ಪರಿಹರಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹಾಗಿದ್ರೆ, ಈ ಹೊಸ ಓಎಸ್‌ನಲ್ಲಿ ಏನೆಲ್ಲಾ ನೋಡಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

- ಸಿರಿಯ ಹೊಸ ಆವೃತ್ತಿಯು ಹೆಚ್ಚು ಇಂಟೆಲಿಜೆಂಟ್‌ ಆಗಿದ್ದು, ದೊಡ್ಡ ಭಾಷಾ ಮಾದರಿ ತಂತ್ರಜ್ಞಾನವನ್ನು ಒಳಗೊಂಡಿರುವ ಹೊಸ ಎಐ ವ್ಯವಸ್ಥೆಯನ್ನು ಇದು ಬಳಕೆ ಮಾಡಿಕೊಳ್ಳುತ್ತದೆ ಎನ್ನಲಾಗಿದೆ.

- ಮೆಸೆಜ್‌ ಆಪ್‌ಗಳಲ್ಲಿ ಎಐ ಫೀಚರ್ಸ್‌ ಇರಲಿದ್ದು, ಯಾವುದೇ ಪ್ರಶ್ನೆಗಳಿಗೆ ಮತ್ತು ಸಂಪೂರ್ಣ ವಾಕ್ಯಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದೆ. ಇದರೊಂದಿಗೆ ಆಟೋಮ್ಯಾಟಿಕ್‌ ಆಗಿ ರಚಿಸಲಾದ ಪ್ಲೇ ಪಟ್ಟಿಗಳಲ್ಲೂ ಇದು ತನ್ನ ಸಾಮರ್ಥ್ಯ ತೋರಿಸಲಿದೆಯಂತೆ. ಅಂದರೆ ಆಪಲ್‌ ಮ್ಯೂಸಿಕ್‌ನಲ್ಲಿ ಇದು ಉತ್ತಮ ಅನುಭವ ನೀಡಲಿದೆ.

- ಕೀನೋಟ್ ಮತ್ತು ಪೇಜ್‌ನಂತಹ ಐವರ್ಕ್‌ ಆಪ್‌ಗಳಿಗಾಗಿ ಜನರೇಟಿವ್ ಎಐ ಫೀಚರ್ಸ್‌ ಕೆಲಸ ಮಾಡಲಿದೆ. ಇದರೊಂದಿಗೆ ಡೆವಲಪರ್‌ಗಳಿಗೆ ಹೊಸ ಆಪ್‌ಗಳನ್ನು ವೇಗವಾಗಿ ಬರೆಯಲು ಸಹಾಯ ಮಾಡುವ ಎಕ್ಸ್‌ಕೋಡ್‌ಗಾಗಿ ಜನರೇಟಿವ್ ಎಐ ಫೀಚರ್ಸ್‌ ಸಹಾಯ ಮಾಡಲಿದೆ.

Best Mobiles in India

English summary
Apple is now ready to take its customers to a new world with iOS 18. Sources said that tons of AI features will be available in this update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+