iPad: ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್! 30,000 ರೂ.ಒಳಗೆ ಲಭ್ಯ ಐಪ್ಯಾಡ್ 10
ಫ್ಲಿಪ್‌ಕಾರ್ಟ್ (Flipkart) ಆಗಾಗ್ಗೆ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಬಗ್ಗೆ (Flipkart Big Saving Days Sale) ಘೋಷಣೆ ಮಾಡಿದೆ. ಈ ಸೇಲ್‌ನಲ್ಲಿ ಐಪ್ಯಾಡ್ 10 ಅನ್ನು ಭಾರೀ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಹೌದು, ಫ್ಲಿಪ್‌ಕಾರ್ಟ್ ಮೇ 2 ರಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಆಯೋಜಿಸಲು ಸಿದ್ಧವಾಗಿದೆ. ಈವೆಂಟ್‌ಗೆ ಮುಂಚಿತವಾಗಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ಹಾಗೂ ಐಪ್ಯಾಡ್‌ಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಅದರಂತೆ ಈ ಸೇಲ್‌ನಲ್ಲಿ ಐಪ್ಯಾಡ್ 10 ಗೆ (iPad 10) ಭರ್ಜರಿ ಆಫರ್ ಇದೆ ಎನ್ನಲಾಗಿದೆ. ಆಗಿದ್ರೆ ಇದಕ್ಕೆ ಇರುವ ಆಫರ್ ಏನು?, ಈ ಫೋನ್‌ನ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಪ್ಯಾಡ್ 10ಗೆ ಆಫರ್: ಫ್ಲಿಪ್‌ಕಾರ್ಟ್ ಮೇ 2 ರಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬಿಗ್ ಸೇವಿಂಗ್ ಡೇಸ್ ಸೆಲ್ ಅನ್ನು ಆಯೋಜಿಸಲು ಸಿದ್ಧವಾಗಿದೆ ಮತ್ತು ಈವೆಂಟ್‌ಗೆ ಮುಂಚಿತವಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಟಿಪ್‌ಸ್ಟರ್ ಅಭಿಷೇಕ್ ಯಾದವ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಐಪ್ಯಾಡ್ ಸಂಬಂಧ ಪೋಸ್ಟ್‌ವೊಂದನ್ನು ಗುರುತಿಸಿದ್ದಾರೆ.
ಅಗ್ಗದ ದರದಲ್ಲಿ ಅತ್ಯುತ್ತಮ ಪ್ಯಾಡ್ ಬೇಕು ಅನ್ನೋರಿಗೆ ಐಪ್ಯಾಡ್ 10 ಆಪಲ್ ಖರೀದಿ ಮಾಡಬಹುದಾಗಿದೆ. ಅದಾಗ್ಯೂ, ಉತ್ತಮ ಫೀಚರ್ಸ್ ಆಯ್ಕೆ ಬಯಸುವ ಜನರು ಒನ್‌ಪ್ಲಸ್ ಪ್ಯಾಡ್ ಗೋ ನಂತಹ ಅಂಡ್ರಾಯ್ಡ್ ಟ್ಯಾಬ್ಲೆಟ್ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಪಡೆಯಲು ನೀವು ಹೆಚ್ಚು ಪ್ರೀಮಿಯಂ ಆವೃತ್ತಿಗೆ ಹೋಗಬಹುದು. ಅಂದರೆ ಒನ್‌ಪ್ಲಸ್ ಪ್ಯಾಡ್ ಅನ್ನು ಖರೀದಿ ಮಾಡಬಹುದಾಗಿದೆ.

2022 ರಲ್ಲಿ 44,900 ರೂ.ಗಳಲ್ಲಿ ಲಾಂಚ್ ಆದ ಈ ಐಪ್ಯಾಡ್ 10 ಫ್ಲಾಟ್-ಎಡ್ಜ್ ವಿನ್ಯಾಸ, ವಿಶಾಲವಾದ ಬೆಜೆಲ್‌ಗಳನ್ನು ಹೊಂದಿದೆ ಮತ್ತು 5G ಗೆ ಬೆಂಬಲವನ್ನು ನೀಡಲಿದೆ. ಟ್ಯಾಬ್ಲೆಟ್ ಆಪಲ್ ಸ್ವಾಮ್ಯದ ಲೈಟನಿಂಗ್ ಪೋರ್ಟ್ ಅನ್ನು ಹೊಂದಿಲ್ಲ ಮತ್ತು ಚಾರ್ಜ್ ಮಾಡಲು ಟೈಪ್-ಸಿ ಪೋರ್ಟ್ ಆಯ್ಕೆ ಪಡೆದಿದಿದೆ. ಇನ್ನು ಈ ಟ್ಯಾಬ್ಲೆಟ್ 10.9 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಮೇಲಿನ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿಯೂ ಕೆಲಸ ಮಾಡಲಿದೆ.
ತೆಳ್ಳಗಿನ ಬೆಜೆಲ್ ಆಯ್ಕೆ ಇದ್ದು, ಸಂಪೂರ್ಣ ದೃಷ್ಟಿಕೋನವು ಉಳಿದ ಐಪ್ಯಾಡ್ ಲೈನ್ ಅಪ್‌ಗೆ ಅನುಗುಣವಾಗಿದೆ. ಈ ಐಪ್ಯಾಡ್ 12 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದ್ದು, 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ವರ್ಷಗಳ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿದ್ದು, ಈ ಮೂಲಕ ಅತ್ಯುತ್ತಮ ಅನುಭವ ಪಡೆಯಬಹುದಾಗಿದೆ.

10 ನೇ ತಲೆಮಾರಿನ ಐಪ್ಯಾಡ್ A14 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು ತಾಂತ್ರಿಕವಾಗಿ ಬಹಳ ಹಳೆಯ ಚಿಪ್‌ಸೆಟ್ ಆಗಿದೆ. ಇದು ಮೂಲಭೂತ ಕಾರ್ಯಗಳಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇತರ ಪ್ರಮುಖ ಫೀಚರ್ಸ್ ಎಂದರೆ ಮ್ಯಾಜಿಕ್ ಕೀಬೋರ್ಡ್ ಫೋಲಿಯೊ ಕವರ್, 5G ಸಂಪರ್ಕ ಮತ್ತು ಇನ್ನೂ ಅನೇಕ ಸೌಲಭ್ಯಗಳನ್ನು ಪಡೆದಿದೆ.
ಆಪಲ್ ಐಫೋನ್ 16 ಫೀಚರ್ಸ್ ಲೀಕ್: ಈ ನಡುವೆ ಮುಂಬರುವ ಆಪಲ್‌ನ ಐಫೋನ್ 16 ವಿನ್ಯಾಸ ಲೀಕ್ ಆಗಿದೆ. ಅದರಂತೆ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಎರಡಕ್ಕೂ ದೊಡ್ಡ ಡಿಸ್‌ಪ್ಲೇಗಳ ಆಯ್ಕೆಯನ್ನು ನೀಡಲಾಗುತ್ತದೆ ಎನ್ನಲಾಗಿದ್ದು, ಪ್ರೊ ಅಲ್ಲದ ಮಾದರಿಗಳಿಗೆ ವಿಭಿನ್ನ ಕ್ಯಾಮೆರಾ ಐಲ್ಯಾಂಡ್ ರಚನೆ ಮತ್ತು ವಿಭಿನ್ನ ಬಟನ್ ಆಯ್ಕೆಗಳನ್ನು ಸಹ ನೀಡಲಾಗಿದೆ. ಟಿಪ್‌ಸ್ಟರ್ ಸೋನಿ ಡಿಕ್ಸನ್ ಸಹ ಈ ಹಿಂದೆ ಕೆಲವು ಮಾಹಿತಿಗಳನ್ನು ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ವಿವಿಧ ಬಟನ್ ಆಯ್ಕೆಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ.


Click it and Unblock the Notifications








