ಭಾರತದಲ್ಲಿಂದು 'ಐಫೋನ್ 11' ಸರಣಿ ಫೋನ್‌ಗಳ ಸೇಲ್!.ಎಲ್ಲಿ ಲಭ್ಯ?.ಬೆಲೆ ಎಷ್ಟು?

|

ಜನಪ್ರಿಯ ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ಐಫೋನ್ 11' ಸರಣಿಯು ಭಾರತದಲ್ಲಿ ಇಂದಿನಿಂದ ಖರೀದಿಗೆ ಲಭ್ಯವಾಗಲಿದೆ. ಈ ಸರಣಿಯು ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದ್ದು, ಈ ಐಫೋನ್‌ಗಳು ಕ್ಯಾಮೆರಾ, ಐಓಎಸ್‌ 13 ಮತ್ತು ಡಿವೈಸ್‌ ವಿಶೇ‍ಷತೆಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಈಗಾಗಲೇ ಕೇಲವು ಗ್ರಾಹಕರು ಪ್ರಿ ಆರ್ಡರ್‌ ಮಾಡಿದ್ದಾರೆ.

ಆಪಲ್‌ನ ಐಫೋನ್ 11

ಹೌದು, ಆಪಲ್‌ನ 'ಐಫೋನ್ 11', 'ಐಫೋನ್ 11 ಪ್ರೊ' ಮತ್ತು 'ಐಫೋನ್ 11 ಪ್ರೊ ಮ್ಯಾಕ್ಸ್‌' ಫೋನ್‌ಗಳು ಇಂದು ಸಂಜೆ ಆರು ಗಂಟೆಯಿಂದ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿವೆ. ಗ್ರಾಹಕರು ಈ ಐಫೋನ್‌ಗಳನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ತಾಣಗಳ ಮೂಲಕ ಖರೀದಿಸಬಹುದಾಗಿದೆ. ಪರ್ಪಲ್, ವೈಟ್, ಗ್ರೀನ್, ಯೆಲ್ಲೊ, ಬ್ಲ್ಯಾಕ್ ಮತ್ತು ರೆಡ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿವೆ. ಹಾಗಾದರೇ ಐಫೋನ್ 11 ಸರಣಿಯ ಫೋನ್‌ಗಳ ಬೆಲೆ ಎಷ್ಟು?..ಎಲ್ಲಿ ಲಭ್ಯ?..ಮತ್ತು ಕೀ ಹೈಲೈಟ್ಸ್‌ಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಐಫೋನ್ 11

ಐಫೋನ್ 11

ಐಫೋನ್ 11, 6.1 ಇಂಚಿನ ಲಿಕ್ವಿಡ್‌ ರೆಟಿನಾ ಹೆಚ್‌ಡಿ ಎಲ್‌ಸಿಡಿ ಪಾನೆಲ್‌ ಹೊಂದಿದ್ದು, ಜೊತೆಗೆ ಗ್ಲಾಸ್‌ ಮತ್ತು ಅಲ್ಯೂಮಿನಿಯಮ್ ಡಿಸೈನ್‌ನಿಂದ ರಚಿತವಾಗಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಅವು 12ಎಂಪಿ ಸೆನ್ಸಾರ್‌ನಲ್ಲಿವೆ. ಸೆಲ್ಫಿಗಾಗಿಯೂ ಸಹ 12ಎಂಪಿ ಸೆನ್ಸರಾ ಕ್ಯಾಮೆರಾ ನೀಡಲಾಗಿದೆ. A13 ಬಯೋನಿಕ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಡ್ಯುಯಲ್ ಸಿಮ್ ಕನೆಕ್ಟಿವಿಟಿ ಮತ್ತು ಡಾಲ್ಬಿ ಆಟೋಮ್ ಸೌಂಡ್‌ ಸೌಲಭ್ಯವನ್ನು ಹೊಂದಿದೆ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

5.8 ಇಂಚಿನ ಸೂಪರ್ ರೆಟಿನಾ XDA OLED ಡಿಸ್‌ಪ್ಲೇಯನ್ನು ಹೊಂದಿದ್ದು, ಜೊತೆಗೆ ಗ್ಲಾಸ್‌ ಮತ್ತು ಸ್ಟೈನ್‌ಲೆಸ್ ಸ್ಟೀಲ್ ಡಿಸೈನ್‌ನಿಂದ ರಚಿತವಾಗಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ನಲ್ಲಿವೆ. ಸೆಲ್ಫಿಗಾಗಿಯೂ ಸಹ 12ಎಂಪಿ ಸೆನ್ಸರಾ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ಸಹ A13 ಬಯೋನಿಕ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, IP68 ವಾಟರ್‌ ರೆಸಿಸ್ಟಂಟ್ಸ್‌ ಮತ್ತು ಡಾಲ್ಬಿ ಆಟೋಮ್ ಸೌಂಡ್‌ ಸೌಲಭ್ಯವನ್ನು ಪಡೆದಿದೆ.

ಐಫೋನ್ 11 ಪ್ರೊ ಮ್ಯಾಕ್ಸ್‌

ಐಫೋನ್ 11 ಪ್ರೊ ಮ್ಯಾಕ್ಸ್‌

ಗ್ಲಾಸ್‌ ಮತ್ತು ಸ್ಟೈನ್‌ಲೆಸ್ ಸ್ಟೀಲ್ ಡಿಸೈನ್‌ ಹೊಂದಿರುವ 'ಐಫೋನ್ 11 ಪ್ರೊ ಮ್ಯಾಕ್ಸ್‌' 6.5 ಇಂಚಿನ ಸೂಪರ್ ರೆಟಿನಾ XDA OLED ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ನಲ್ಲಿವೆ ಜೊತೆಗೆ ಸೆಲ್ಫಿಗಾಗಿಯೂ ಸಹ 12ಎಂಪಿ ಸೆನ್ಸರಾ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ಸಹ A13 ಬಯೋನಿಕ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, IP68 ವಾಟರ್‌ ರೆಸಿಸ್ಟಂಟ್ಸ್‌ ಮತ್ತು ಡಾಲ್ಬಿ ಆಟೋಮ್ ಸೌಂಡ್‌ ಸೌಲಭ್ಯವನ್ನು ಪಡೆದಿದೆ.

ಎಲ್ಲಿ ಲಭ್ಯ

ಎಲ್ಲಿ ಲಭ್ಯ

ಭಾರತದಲ್ಲಿ ಇಂದು ಸಂಜೆ 6 ಗಂಟೆಗೆ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್‌ಗಳ ಮೊದಲ ಸೇಲ್ ಆರಂಭವಾಗಲಿದೆ. ಆಫ್‌ಲೈನ್‌ನಲ್ಲಿ ಪ್ರಮುಖ ರಿಟೈಲ್‌ ಸ್ಟೋರ್ ಮತ್ತು ಅಧಿಕೃತ ಆಪಲ್ ಡಿಸ್ಟ್ರಿಬ್ಯೂಟರ್ ಖರೀದಿಸಬಹುದಾಗಿದೆ. ಹಾಗೆಯೇ ಅಮೆಜಾನ್, ಪ್ಲಿಪ್‌ಕಾರ್ಟ್‌ ಮತ್ತು ಪೇಟಿಎಮ್ ಮಾಲ್‌ ಆನ್‌ಲೈನ್‌ ತಾಣಗಳಲ್ಲಿಯೂ ಲಭ್ಯವಾಗಲಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

*ಐಫೋನ್‌ 11-64GB -64,900ರೂ
*ಐಫೋನ್‌ 11-128GB -69,900ರೂ
*ಐಫೋನ್‌ 11-256GB -79,900ರೂ

*ಐಫೋನ್‌ 11 ಪ್ರೊ-64GB -99,900 ರೂ
*ಐಫೋನ್‌ 11 ಪ್ರೊ-256GB -1,13,900ರೂ
*ಐಫೋನ್‌ 11 ಪ್ರೊ-512GB -1,31,900ರೂ

*ಐಫೋನ್‌ 11 ಪ್ರೊ ಮ್ಯಾಕ್ಸ್‌-64GB -1,09,900ರೂ
*ಐಫೋನ್‌ 11 ಪ್ರೊ ಮ್ಯಾಕ್ಸ್‌-256GB -1,23,900ರೂ
*ಐಫೋನ್‌ 11 ಪ್ರೊ ಮ್ಯಾಕ್ಸ್‌-512GB -1,41,900ರೂ.

Best Mobiles in India

English summary
Apple will start selling the iPhone 11, iPhone 11 Pro, and iPhone 11 Pro Max starting 6pm IST today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X