ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್‌; ಐಫೋನ್‌ 11, ಐಫೋನ್ SE ಬೆಲೆಯಲ್ಲಿ ಇಳಿಕೆ!

|

ಆಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 12 ಸರಣಿ ಬಿಡುಗಡೆ ಆಗಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರೆಲ್ಲ ಬೆರಗು ಕಣ್ಣಿನಿಂದ ಐಫೋನ್ 12 ಸರಣಿ ನೋಡುವಂತಾಗಿದೆ. ಐಫೋನ್ 12 ಸರಣಿ ಲಾಂಚ್ ಅದರ ಬೆನ್ನಲೇ ಸಂಸ್ಥೆಯು ಇದೀಗ ಮತ್ತೊಂದು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಅದೆನೆಂದರೇ ಸಂಸ್ಥೆಯ ಐಫೋನ್‌ 11 ಹಾಗೂ ಐಫೋನ್ SE ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.

ಐಫೋನ್

ಹೌದು, ಆಪಲ್ ಕಂಪನಿಯ ಐಫೋನ್ 12 ಸರಣಿ ಲಾಂಚ್ ಮಾಡಿರುವ ಬೆನ್ನಲೇ ತನ್ನ ಐಫೋನ್‌ಗಳ ಬೆಲೆಯಲ್ಲಿ ಕಡಿತ ಮಾಡಿದೆ. ಕಂಪನಿಯ ಕೆಲವು ಐಫೋನ್‌ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಈಗಲೂ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಐಫೋನ್‌ 11 ಹಾಗೂ ಐಫೋನ್ SE ಸಹ ಸೇರಿವೆ. ಇದೀಗ ಈ ಎರಡು ಐಫೋನ್‌ಗಳ ಬೆಲೆಯಲ್ಲಿ ಕಡಿತ ಮಾಡಿದ್ದು, ಗ್ರಾಹಕರಿಗೆ ಸರ್‌ಪ್ರೈಸ್‌ ಅನಿಸಿದೆ. 64GB ವೇರಿಯಂಟ್‌ನ ಐಫೋನ್‌ 11 ಬೆಲೆ ಈಗ 54,990ರೂ. ಆಗಿದ್ದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌ನಲ್ಲಿ 49,990ರೂ.ಗೆ ಮಾರಾಟ ಆಗುವ ನಿರೀಕ್ಷೆ ಇದೆ. ಹಾಗೆಯೇ 64GBಯ ಐಫೊನ್ SE 37,900ರೂ.ಗೆ ಸಿಗಲಿದೆ. ಹಾಗಾದರೇ ಆಪಲ್ ಸಂಸ್ಥೆಯ ಐಫೋನ್‌ 11 ಹಾಗೂ ಐಫೋನ್ SE ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್ 11- ಫೀಚರ್ಸ್‌

ಐಫೋನ್ 11- ಫೀಚರ್ಸ್‌

ಆಪಲ್ ಸಂಸ್ಥೆಯು ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಐಫೋನ್ SE ಡಿಸ್‌ಪ್ಲೇ

ಐಫೋನ್ SE ಡಿಸ್‌ಪ್ಲೇ

ಐಫೋನ್ SE 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಅಲ್ಲದೆ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್‌ ಹೊಸ ಐಫೋನ್ ಮಾದರಿಗಳಲ್ಲಿ ಕಂಡುಬರುವ ಹ್ಯಾಪ್ಟಿಕ್ ಟಚ್ ಬೆಂಬಲವನ್ನು ಹೊಂದಿದೆ.

ಐಫೋನ್ SE ಪ್ರೊಸೆಸರ್

ಐಫೋನ್ SE ಪ್ರೊಸೆಸರ್

ಐಫೋನ್ SE ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಹುಡ್ ಅಡಿಯಲ್ಲಿ, ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ನ ಮಾದರಿಯನ್ನೆ ಹೊಂದಿದೆ. ಇನ್ನು ಈ ಐಫೋನ್‌ RAM ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಬ್ಯವಿಲ್ಲ, ಆದರೆ ಈ ಐಫೋನ್‌ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಐಫೋನ್ SE ಕ್ಯಾಮೆರಾ

ಐಫೋನ್ SE ಕ್ಯಾಮೆರಾ

ಐಫೋನ್ SE ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಇದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ f/ 1.8 ಲೆನ್ಸ್‌ + ಒಐಎಸ್ ಹೊಂದಿದೆ ಮತ್ತು ಸ್ಲೋ ಸಿಂಕ್‌ ಜೊತೆಗೆ ದಿಗೆ ಎಲ್ಇಡಿ ಟ್ರೂ ಟೋನ್ ಫ್ಲ್ಯಾಷ್ ಹೊಂದಿದೆ. ಇದು 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಅನ್ನು ನೀಡುತ್ತದೆ. ಜೊತೆಗೆ ರಿಯರ್‌ ಕ್ಯಾಮೆರಾ ಪ್ರೊಟೆಕ್ಷನ್‌ ಗಾಗಿ ಶಾಂಪೈರ್‌ ಕ್ರಿಸ್ಟಲ್ ಲೆನ್ಸ್ ಕವರ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ನೀಡಲಾಗಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

Most Read Articles
Best Mobiles in India

English summary
iPhone 11 and iPhone SE in India just after it announced the iPhone 12 series. Flipkart & Amazon still sell at lower prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X