ಅಮೆಜಾನ್‌ನಲ್ಲಿ 'ಐಫೋನ್ 11 ಪ್ರೊ' ಗೆ ಭಾರಿ ಡಿಸ್ಕೌಂಟ್!

|

ಜನಪ್ರಿಯ ಆಪಲ್ ಐಫೋನ್‌ ಸಂಸ್ಥೆಯು ಕಳೆದ ಸೆಪ್ಟೆಂಬರ್‌ನಲ್ಲಿ 'ಐಫೋನ್ 11' ಸರಣಿಯನ್ನು ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಚ್ಚರಿ ನೀಡಿತು. ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದ ಐಫೋನ್ 11 ಸರಣಿ ಬಹುಬೇಗನೇ ಐಫೋನ್ ಪ್ರಿಯರ ಮನಗೆದ್ದಿತು. ಆದ್ರೆ ಇದೀಗ ಐಫೋನ್ 11 ಸರಣಿಯಲ್ಲಿನ 'ಐಫೋನ್ 11 ಪ್ರೊ' ಫೋನ್ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದಿದೆ.

ಐಫೋನ್ 11 ಪ್ರೊ

ಹೌದು, ಆಪಲ್ ಸಂಸ್ಥೆಯ ಐಫೋನ್ 11 ಪ್ರೊ ಸ್ಮಾರ್ಟ್‌ಫೋನ್ ಇದೀಗ ಇ-ಕಾಮರ್ಸ್ ತಾಣ ಅಮೆಜಾನ್‌ನಲ್ಲಿ 6,000ರೂ. ಬಿಗ್ ಡಿಸ್ಕೌಂಟ್ ಪಡೆದಿದೆ. 99,900ರೂ. ಪ್ರೈಸ್‌ಟ್ಯಾಗ್ ಹೊಂದಿದ್ದ, 64GB ವೇರಿಯಂಟ್‌ನ ಐಫೋನ್ 11 ಪ್ರೊ ಈಗ 93,900ರೂ.ಗಳಿಗೆ ಲಭ್ಯ. ಹೀಗಾಗಿ ಡಿಸ್ಕೌಂಟ್‌ನಲ್ಲಿ ಐಫೋನ್ 11 ಪ್ರೊ ಖರೀದಿಸಬೇಕೆಂದಿದ್ದರೇ ಇದುವೇ ರೈಟ್‌ ಟೈಮ್ ಆಗಿದೆ. ಇನ್ನು ಐಫೋನ್ 11 ಪ್ರೊ ಫೀಚರ್ಸ್‌ಗಳೆನು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಐಫೋನ್ 11 ಪ್ರೊ ಫೋನ್‌ 5.8 ಇಂಚಿನ ಸೂಪರ್ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 1,125×2,436 ಆಗಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಗಿಚು ಪ್ರತಿರೋಧಕ‌ ಗ್ಲಾಸ್ ಕವಚ ಪಡೆದಿದೆ.

ಪ್ರೊಸೆಸರ್‌ ಹೇಗಿದೆ

ಪ್ರೊಸೆಸರ್‌ ಹೇಗಿದೆ

ಐಫೋನ್ 11 ಪ್ರೊ ಫೋನ್‌ ಹೊಸ A 13 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಹೊಸ iOS 13 ಬೆಂಬಲ ನೀಡಲಿದೆ. ಹಾಗೆಯೇ 4GB RAM ಸಾಮರ್ಥ್ಯ ಇದ್ದು, 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಿವೆ.

ಮೂರು ಕ್ಯಾಮೆರಾಗಳು

ಮೂರು ಕ್ಯಾಮೆರಾಗಳು

ಐಫೋನ್ 11 ಪ್ರೊ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಈ ಮೂರು ಕ್ಯಾಮೆರಾಗಳು ಮತ್ತು ಸೆಲ್ಫಿ ಸಹ 12ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿವೆ. ಪ್ರಾಥಮಿಕ ಕ್ಯಾಮೆರಾವು ವೈಲ್ಡ್‌ ಆಂಗಲ್, ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್‌ ಆಂಗಲ್ ಮತ್ತು ತೃತೀಯ ಕ್ಯಾಮೆರಾವು ಟೆಲಿಫೋಟೊ ಲೆನ್ಸ್‌ ಸಾಮರ್ಥ್ಯವನ್ನು ಹೊಂದಿವೆ.

ಮೆಮೊರಿ ಬಲ

ಮೆಮೊರಿ ಬಲ

ಐಫೋನ್ 11 ಪ್ರೊ ಫೋನ್ ಮೂರು ಸ್ಟೋರೇಜ್ ವೇರಿಯಂಟ್ ಮಾದರಿಯ ಆಯ್ಕೆಗಳನ್ನು ಪಡೆದಿದೆ. ಅವುಗಳು ಕ್ರಮವಾಗಿ 64GB, 128GB ಮತ್ತು 256GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಪಡೆದಿದೆ.

ಬ್ಯಾಟರಿ

ಬ್ಯಾಟರಿ

ಐಫೋನ್ 11 ಪ್ರೊ ಸ್ಮಾರ್ಟ್‌ಫೋನ್ 3065mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಸಿಲ್ವರ್, ಗೋಲ್ಡ್, ಮಿಡ್‌ನೈಟ್ ಗ್ರೀನ್ ಮತ್ತು ಗ್ರೇ ಬಣ್ಣಗಳ ಆಯ್ಕೆ ಪಡೆದಿದೆ.

Most Read Articles
Best Mobiles in India

English summary
The 64GB variant of the iPhone 11 Pro gets Rs 6,000 off in a discount on Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X