Home
ಸುದ್ದಿಜಾಲ

ಈ ಹಳೆಯ ಐಫೋನ್‌ ಬೆಲೆಯಲ್ಲಿ ದಿಢೀರ್ ಇಳಿಕೆ!..ಇದುವೇ ಸಖತ್‌ ಆಫರ್‌!

ಆಪಲ್‌ ಸಂಸ್ಥೆಯು ಹೊಸದಾಗಿ ಐಫೋನ್‌ 15 ಸರಣಿಯ ಲಾಂಚ್ ಮಾಡಿ, ಮಾರುಕಟ್ಟೆಯಲ್ಲಿ ಭಾರೀ ಸದ್ದು ಸೃಷ್ಠಿಸಿದೆ. ಅದರ ಬೆನ್ನಲ್ಲೇ ಕೆಲವು ಜನಪ್ರಿಯ ಮಾಡೆಲ್‌ಗಳನ್ನು ಸ್ಥಗಿತ ಮಾಡಿದೆ. ಆ ಪೈಕಿ ಐಫೋನ್‌ 12 ಕೂಡಾ ಒಂದಾಗಿದ್ದು, ಇದು ಅಧಿಕೃತವಾಗಿ ಇನ್ನು ಅಲಭ್ಯ. ಆದರೆ ಐಫೋನ್‌ 12 ಆನ್‌ಲೈನ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಸ್ಟಾಕ್‌ ಲಭ್ಯ ಇರುವವರೆಗೂ ಖರೀದಿಗೆ ಸಿಗುತ್ತದೆ. ಸದ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಬಿಗ್ ಡಿಸ್ಕೌಂಟ್‌ ಪಡೆದಿದೆ.

ಹೌದು, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಪಲ್‌ ಐಫೋನ್‌ 12 ಮೊಬೈಲ್‌ ಶೇ. 16% ರಷ್ಟು ಆಕರ್ಷಕ ಡಿಸ್ಕೌಂಟ್‌ ಪಡೆದಿದ್ದು, 59,900ರೂ. ಪ್ರೈಸ್‌ಟ್ಯಾಗ್‌ ಹೊಂದಿರುವ 64GB ವೇರಿಯಂಟ್‌ ಮೊಬೈಲ್‌ 49,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಬ್ಯಾಂಕ್‌ ಆಫರ್‌, ಎಕ್ಸ್‌ಚೇಂಜ್ ಕೊಡುಗೆಗಳು ಸಹ ಗ್ರಾಹಕರಿಗೆ ದೊರೆಯುತ್ತವೆ. ಗ್ರಾಹಕರು ಈ ಐಫೋನ್‌ ಅನ್ನು ಬ್ಲ್ಯಾಕ್‌, ಗ್ರೀನ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.

ಈ ಹಳೆಯ ಐಫೋನ್‌ ಬೆಲೆಯಲ್ಲಿ ದಿಢೀರ್ ಇಳಿಕೆ!..ಇದುವೇ ಸಖತ್‌ ಆಫರ್‌!

ಐಫೋನ್‌ 12 ಮೊಬೈಲ್‌ 64GB, 128GB ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, A14 ಬಯೋನಿಕ್ ಚಿಪ್ ಸೆಟ್‌ ಪ್ರೊಸೆಸರ್‌ ಪಡೆದಿದೆ. ಇದರ ಜೊತೆಗೆ ನೈಟ್‌ ಮೋಡ್, 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಐಫೋನ್‌ 12 ಇತರೆ ಫೀಚರ್ಸ್‌ ಬಗ್ಗೆ ಹಾಗೂ ಇತ್ತೀಚಿನ ಜನಪ್ರಿಯ ಐಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್ 12 ಮೊಬೈಲ್‌ ಫೀಚರ್ಸ್‌ ಹೀಗಿವೆ :
ಐಫೋನ್ 12 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಸೂಪರ್‌ ರೆಟೀನಾ XDR ಡಿಸ್‌ಪ್ಲೇ ಪಡೆದಿದೆ. ಹಾಗೆಯೇ A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿದೆ. ಇದು 5G ಸಪೋರ್ಟ್‌ ಪಡೆದಿದ್ದು, ಹಿಂಬದಿ ಯಲ್ಲಿ ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ ಅನ್ನು ಹೊಂದಿವೆ.

ಹಾಗೆಯೇ ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿವೆ. ಇದಲ್ಲದೇ ಈ ಐಫೋನ್ IP68 ವಾಟರ್‌ ರೆಸಿಸ್ಟಂಟ್‌ ಸೌಲಭ್ಯ ಕೂಡಾ ಪಡೆದಿದೆ. ಇನ್ನು ಈ ಐಫೋನ್‌ ಅನ್ನು ಬ್ಲ್ಯಾಕ್‌, ಗ್ರೀನ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಐಫೋನ್‌ 15 ಮೊಬೈಲ್‌ ಫೀಚರ್ಸ್‌ ಹೀಗಿವೆ :
ಐಫೋನ್‌ 15 ಮೊಬೈಲ್‌ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 1600 nits ಬ್ರೈಟ್ನಸ್‌ ಬೆಂಬಲ ಇದೆ. ಇನ್ನು ಈ ಫೋನ್ ಮಾತ್ರೆ ಮಾದರಿಯ ( ಪಿಲ್‌ ಶೇಪ್‌ ಮಾದರಿ) ಪಂಚ್‌ ಹೋಲ್‌ ರಚನೆ ಹೊಂದಿದೆ. ಹಾಗೆಯೇ ಈ ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯ ದಲ್ಲಿ ಕೆಲಸ ನಿರ್ವಹಿಸಲಿದೆ.

ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಇದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕ ತಂತ್ರಜ್ಞಾನ ಹೊಂದಿದ್ದು, ಇದರ ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಅನ್ನು ಪಡೆದಿದೆ. ಜೊತೆಗೆ 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Best Mobiles in India

English summary
iPhone 12 discontinued after iPhone 15 launch. but now this iPhone available at big discount. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+