iPhone: 3 ತಿಂಗಳಿಂದ ನೀರಿನಲ್ಲೇ ಬಿದ್ದಿದ್ದ ಈ ಐಫೋನ್: ಕಿಂಚಿತ್ತೂ ಸಮಸ್ಯೆ ಆಗಿಲ್ಲ ರೀ...
ಐಫೋನ್‌ಗಳು (iPhones) ಇತರೆ ಸ್ಮಾರ್ಟ್‌ಫೋನ್‌ಗಳಿಂತ ಭಿನ್ನ ಎಂದು ಹೇಳುವುದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಈಗ ಅವುಗಳ ಸಾಲಿಗೆ ಮತ್ತೊಂದು ಕಾರಣವನ್ನೂ ಸೇರ್ಪಡೆ ಮಾಡಬಹುದು. ಅದುವೇ ಈ ಐಫೋನ್ ನೀರಿನಲ್ಲಿ ಮೂರು ತಿಂಗಳು ಬಿದ್ದಿದ್ದರೂ ಯಾವುದೇ ಸಮಸ್ಯೆಗೆ ಒಳಗಾಗಿಲ್ಲ.
ಹೌದು, ಐಫೋನ್‌ಗಳು ಉತ್ತಮ ಕಾರ್ಯಕ್ಷಮತೆ, ಭದ್ರತಾ ಫೀಚರ್ಸ್‌ಗೆ ಹೆಸರುವಾಸಿ. ಅದರಂತೆ ಐಫೋನ್ 12 (iPhone 12) ಇದೀಗ ಸ್ಮಾರ್ಟ್‌ಫೋನ್ ಬಳಕೆದಾರರು ಹುಬ್ಬೇರಿಸುವಂತೆ ಮಾಡಿದೆ. ಮೂರು ತಿಂಗಳ ಕಾಲ ನೀರಿನಲ್ಲಿ ಇದ್ದರೂ ಸಹ ಏನೂ ಆಗೇ ಇಲ್ಲ ಎಂಬಂತೆ ಕಾರ್ಯನಿರ್ವಹಿಸುತ್ತಿದೆ. ಪರಿಣಾಮ ಐಫೋನ್ ಮೇಲೆ ಜನರಿಗೆ ಇನ್ನಷ್ಟು ಕ್ರೇಜ್ ಹುಟ್ಟುವಂತೆ ಆಗಿದೆ. ಹಾಗಿದ್ರೆ, ಎಲ್ಲಿ ಈ ಘಟನೆ ನಡೆದಿದ್ದು?, ಮೂರು ತಿಂಗಳ ನಂತರ ಈ ಫೋನ್ ಅನ್ನು ಪತ್ತೆ ಮಾಡಿದವರು ಯಾರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೂರು ತಿಂಗಳ ನಂತರ ಪತ್ತೆಯಾದ ಐಫೋನ್: ಉತ್ತರ ಕ್ಯಾಲಿಫೋರ್ನಿಯಾದ ಸ್ಟಾನಿಸ್ಲಾಸ್ ನದಿಯಲ್ಲಿ ಈ ಐಫೋನ್ 12 ಪತ್ತೆಯಾಗಿದೆ. ಇದು ಮೂರು ತಿಂಗಳ ಹಿಂದೆ ಬಿದ್ದ ಫೋನ್ ಎಂದು ತಿಳಿದುಬಂದಿದೆ. ನವೆಂಬರ್ 10 ರಂದು ನದಿಯನ್ನು ಸ್ವಚ್ಛಗೊಳಿಸುವಾಗ ಪಾಚಿಯಿಂದ ಆವೃತವಾಗಿದ್ದ ಐಫೋನ್ ಸಿಕ್ಕಿದೆ. ನಂತರ ಇದನ್ನು ಪರಿಶೀಲನೆ ನಡೆಸಲಾಗಿ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.
ಈ ಫೋನ್ ಲೀ ಎಂಬುವರ ಕೈಗೆ ಸಿಕ್ಕಿದ್ದು, ಇದನ್ನು ಆರಂಭದಲ್ಲಿ ಆರು ದಿನಗಳ ಕಾಲ ಗಾಳಿ ಹಾಗೂ ಬಿಸಿಲಿಗೆ ಹಾಕಿ ಒಣಗಿಸಿದ್ದಾರೆ ನಂತರ ಚಾರ್ಜರ್‌ಗೆ ಹಾಕಿದಾಗ ಫೋನ್ ಚಾರ್ಜ್ ಸಹ ಆಗಿದೆ. ಇದರಿಂದ ಸಂತಸಗೊಂಡ ಅವರು ಫೋನ್ ಅನ್ನು ಆನ್ ಮಾಡಿದ್ದಾರೆ. ಅದೃಷ್ಟ ಏನೆಂದರೆ ಈ ಫೋನ್ ಪಾಸ್‌ವರ್ಡ್ ಕೂಡ ಹೊಂದಿಲ್ಲ. ಪರಿಣಾಮ ಸೆಪ್ಟೆಂಬರ್ 4 ರಂದು ಅದೇ ನದಿಯಲ್ಲಿ ಸೆರೆಹಿಡಿಯಲಾದ ವಿಡಿಯೋವನ್ನೂ ಸಹ ಪ್ಲೇ ಮಾಡಿ ನೋಡಿದ್ದಾರೆ.

ಮಾಲೀಕರಿಗೆ ನೀಡಲು ಮುಂದಾದ ಲೀ: ಈ ವಿಶೇಷ ಫೋನ್ ಅನ್ನು ಲೀ ಅವರು ಅದರ ಮಾಲೀಕರಿಗೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಫೋನ್ ಪಾಸ್‌ವರ್ಡ್ ಹೊಂದಿಲ್ಲದ ಪರಿಣಾಮ ಫೋನ್‌ನಲ್ಲಿ ಇರುವ ಕೆಲವು ಸಂಪರ್ಕಗಳಿಗೆ ಕರೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾದಂತೆ. ಇದು ಒಂದು ಕಡೆಯಾದರೆ ಇಷ್ಟು ದಿನ ನೀರಿನಲ್ಲಿ ಮುಳಿಗಿದ್ದ ಫೋನ್ ಇನ್ನೂ ಜೀವಂತವಾಗಿದೆ ಎಂದರೆ ಅದು ಹೇಗೆ ಸಾಧ್ಯ ಎನ್ನುವ ಚರ್ಚೆ ಸಾಮಾಜಿಕ ವಲಯದಲ್ಲಿ ಎದ್ದಿದೆ. ಯಾಕೆಂದರೆ ಈ ಫೋನ್‌ಗಳನ್ನು ನಿರ್ದಿಷ್ಟ ಅವಧಿಯವರೆಗೆ 6 ಮೀಟರ್ ಮಾತ್ರ ನೀರಿನ ಒಳಗೆ ಇರಿಸಬಹುದು. ಆದರೆ ಈ ಫೋನ್ ಎಲ್ಲವನ್ನು ಮೀರಿಸಿದೆ.
ಇನ್ನು ಈ ಸಾಮರ್ಥ್ಯ ಎಲ್ಲಾ ರೀತಿಯ ಫೋನ್‌ಗಳಲ್ಲಿ ಇರುವುದಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಅಂದರೆ ಎಲ್ಲಾ ಐಫೋನ್‌ಗಳು ದೀರ್ಘಾವಧಿಯ ಮುಳುಗುವಿಕೆಯನ್ನು ತಡೆದುಕೊಳ್ಳುವುದಿಲ್ಲ. ಈ ಕಾರಣಕ್ಕೆ ಆಪಲ್ ದ್ರವ ಹಾನಿಯನ್ನು ತಡೆಗಟ್ಟಲು ಹಲವಾರು ರೀತಿಯ ಮಾರ್ಗಸೂಚಿಗಳನ್ನೂ ಸಹ ನೀಡುತ್ತದೆ. ಈಜು ಅಥವಾ ಸ್ನಾನದ ವೇಳೆ ಫೋನ್ ಬಳಕೆ ಮಾಡಬಾರದು ಎಂದೂ ಸಹ ತಿಳಿಸಲಾಗಿದೆ.

ಏನೇ ಈ ಇರಲಿ ಈ ಒಂದು ಫೋನ್ ಮಾತ್ರ ಸ್ಮಾರ್ಟ್‌ಫೋನ್ ಬಗ್ಗೆ ತಿಳಿದುಕೊಂಡಿದ್ದ ವಿಷಯಗಳನ್ನೇ ಅದಲು ಬದಲು ಮಾಡಿಬಿಟ್ಟಿದೆ. ಹಾಗಿದ್ರೆ, ಮತ್ಯಾಕೆ ತಡ ನಿಮ್ಮ ಫೋನ್ ಏನಾದರೂ ಇದೇ ರೀತಿ ದೀರ್ಘ ದಿನಗಳ ಕಾಲ ನೀರಿನಲ್ಲಿ ಮುಳುಗಿದ್ರೂ ಮತ್ತೆ ಸರಿಯಾಗಿ ಕೆಲಸ ಮಾಡುತ್ತದೆ ಎಂದರೆ ಕಮೆಂಟ್ ಮಾಡಿ ನಿಮ್ಮ ಸಂತಸ ಹಂಚಿಕೊಳ್ಳಿ. ಹಾಗೆಯೇ ನಿಮ್ಮ ಫೋನ್ ನೀರಿನಲ್ಲಿ ಬೀಳದಂತೆ ಕಾಪಾಡಿಕೊಳ್ಳಿ.


Click it and Unblock the Notifications








