ಭಾರತದಲ್ಲಿ ಐಫೋನ್ 12 ಮತ್ತು ಐಫೋನ್ 12 ಪ್ರೊ ಖರೀದಿಗೆ ಲಭ್ಯ!..ಬೆಲೆ ಎಷ್ಟು?

|

ಆಪಲ್‌ ಸಂಸ್ಥೆಯ ಐಫೋನ್ 12 ಮತ್ತು ಐಫೋನ್ 12 ಪ್ರೊ ಮಾಡೆಲ್‌ಗಳು ಭಾರತದಲ್ಲಿ ಖರೀದಿಗೆ ಲಭ್ಯವಿವೆ. ಸಂಸ್ಥೆಯು ಭಾರತದಲ್ಲಿ ಇದೇ ಅಕ್ಟೋಬರ್ 23ರಂದು ಪ್ರೀ-ಆರ್ಡರ್‌ ಪ್ರಾರಂಭಿಸಿತ್ತು. ಇನ್ನು ಐಫೋನ್ 12 ಫೋನಿನ 64GB ಬೇಸ್‌ ವೇರಿಯಂಟ್‌ ಬೆಲೆಯು 79,900ರೂ.ಗಳು ಆಗಿದೆ. ಹಾಗೆಯೇ ಐಫೋನ್ 12 ಪ್ರೊ ಫೋನಿನ ಆರಂಭಿಕ ವೇರಿಯಂಟ್‌ ದರವು 1,19,900ರೂ. ಆಗಿದೆ.

ಐಫೋನ್ 12

ಹೌದು, ಆಪಲ್‌ ಐಫೋನ್ 12 ಮತ್ತು ಐಫೋನ್ 12 ಪ್ರೊ ಮಾಡೆಲ್‌ಗಳು ಭಾರತದಲ್ಲಿ ಈಗ ಖರೀದಿಗೆ ಲಭ್ಯ ಆಗಿವೆ. ಗ್ರಾಹಕರು ಆಫ್‌ಲೈನ್‌ ಹಾಗೂ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದಾಗಿದೆ. ಅದೇ ರೀತಿ ಈ ಎರಡು ಫೋನ್‌ಗಳಿಗೆ ಅಮೆಜಾನ್ ಇ-ಕಾಮರ್ಸ್‌ ತಾಣವು ಎಕ್ಸ್‌ಚೇಂಜ್ ರಿಯಾಯಿತಿ ತಿಳಿಸಿದೆ. ಇನ್ನು ಗ್ರಾಹಕರು ಅಧಿಕೃತ ಆಪಲ್ ಡಿಸ್ಟ್ರಿಬ್ಯೂಟರ್ ಬಳಿ ಹೆಚ್‌ಡಿಎಫ್‌ಸಿ ಕಾರ್ಡ್‌ ಬಳಸಿ ಐಫೋನ್ 12 ಖರೀದಿಸಿದರೇ 6,000ರೂ. ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಐಫೋನ್ 12 ಮತ್ತು ಐಫೋನ್ 12 ಪ್ರೊ ಫೋನ್‌ಗಳ ಬೆಲೆ ಹಾಗೂ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡಿರಿ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಭಾರತದಲ್ಲಿ ಐಫೋನ್ 12 ಫೋನಿನ 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 79,900 ರೂ. ಆಗಿದೆ. ಹಾಗೆಯೇ 128 ಜಿಬಿ ಆಯ್ಕೆಯ ವೇರಿಯಂಟ್ ಬೆಲೆ ರೂ. 84,900ರೂ. ಆಗಿದೆ. ಇನ್ನು 256 ಜಿಬಿ ಮಾದರಿ ವೇರಿಯಂಟ್‌ ದರವು 94,900ರೂ. ಬೆಲೆ ಹೊಂದಿದೆ. ಅದೇ ರೀತಿ ಐಫೋನ್ 12 ಪ್ರೊ ಫೋನಿನ 128 ಜಿಬಿ ರೂಪಾಂತರಕ್ಕೆ 1,19,900ರೂ. ಆಗಿದ್ದು, 256 ಜಿಬಿ ವೇರಿಯಂಟ್‌ ದರವು 1,29,900ರೂ. ಆಗಿದೆ. ಮತ್ತು 512 ಜಿಬಿ ಶೇಖರಣಾ ವೇರಿಯಂಟ್‌ ಬೆಲೆಯು 1,49,900ರೂ. ಆಗಿದೆ.

ಐಫೋನ್ 12- ಪೀಚರ್ಸ್

ಐಫೋನ್ 12- ಪೀಚರ್ಸ್

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಐಫೋನ್ 12 64GB ವೇರಿಯಂಟ್ ಬೆಲೆಯು ಬೆಲೆ 79,900ರೂ.

ಐಫೋನ್ 12 ಪ್ರೊ- ಫೀಚರ್ಸ್‌

ಐಫೋನ್ 12 ಪ್ರೊ- ಫೀಚರ್ಸ್‌

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಐಫೋನ್ 12 ಪ್ರೊ 128GB ವೇರಿಯಂಟ್ ದರವು 119,900ರೂ.

Most Read Articles
Best Mobiles in India

English summary
iPhone 12 and iPhone 12 Pro both are available along with trade-in discounts through Apple’s online store in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X