Home
ಸುದ್ದಿಜಾಲ

ಭಾರತದಲ್ಲಿ ಐಫೋನ್ 12 ಮತ್ತು ಐಫೋನ್ 12 ಪ್ರೊ ಪ್ರೀ-ಆರ್ಡರ್‌ಗೆ ಲಭ್ಯ!

ಆಪಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 12 ಸರಣಿಯನ್ನು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೊ ಹಾಗೂ ಐಫೋನ್ 12 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಇವುಗಳಲ್ಲಿ ಐಫೋನ್ 12 ಮತ್ತು ಐಫೋನ್ 12 ಪ್ರೊ ಮಾಡೆಲ್‌ಗಳು ಈಗ (ಅಕ್ಟೋಬರ್ 23ರಿಂದ) ಭಾರತದಲ್ಲಿ ಪ್ರೀ-ಆರ್ಡರ್‌ ಮಾಡಲು ಲಭ್ಯವಿದೆ.

ಐಫೋನ್ 12 ಮತ್ತು ಐಫೋನ್ 12 ಪ್ರೊ

ಹೌದು, ಆಪಲ್‌ ಐಫೋನ್ 12 ಮತ್ತು ಐಫೋನ್ 12 ಪ್ರೊ ಈಗ ಭಾರತದಲ್ಲಿ ಪ್ರೀ-ಆರ್ಡರ್‌ ಲಭ್ಯವಿದೆ. ಗ್ರಾಹಕರು ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಮತ್ತು ಕಂಪನಿಯ ಆಫ್‌ಲೈನ್ ಮತ್ತು ಆನ್‌ಲೈನ್ ಚಿಲ್ಲರೆ ಪಾಲುದಾರರ ಮೂಲಕ ಲೈವ್ ಆಗಿರುತ್ತವೆ. ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಆಪಲ್ ಟ್ರೇಡ್-ಇನ್ ಆಫರ್ ಜೊತೆಗೆ ಐಫೋನ್ 12 ಮತ್ತು ಐಫೋನ್ 12 ಪ್ರೊ ಫೋನಿಗೆ ಪ್ರೀ-ಆರ್ಡರ್ ತೆಗೆದುಕೊಳ್ಳುತ್ತಿದೆ. ಐಫೋನ್ 12 ಹಾಗೂ ಐಫೋನ್ 12 ಪ್ರೊ ಫೋನ್‌ಗಳಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಇದೆ.

IndiaiStore

IndiaiStore.com ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ಆಪಲ್ ಆಥರೈಸ್ಡ್ ಡಿಸ್ಟ್ರಿಬ್ಯೂಟರ್ ಮೂಲಕ ಐಫೋನ್ 12 ಅನ್ನು ಮೊದಲೇ ಆರ್ಡರ್ ಮಾಡುವ ಗ್ರಾಹಕರು ಹೆಚ್‌ಡಿಎಫ್‌ಸಿ ಕಾರ್ಡ್‌ನಲ್ಲಿ 6,000ರೂ. ಕ್ಯಾಶ್‌ಬ್ಯಾಕ್‌ ಲಭ್ಯವಿದೆ ಹಾಗೂ ಸುಲಭ ಇಎಂಐ ಆಯ್ಕೆಗಳಿವೆ.ಫ್ಲಿಪ್‌ಕಾರ್ಟ್ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪ್ರದರ್ಶಿಸುವ ಬ್ಯಾನರ್ ಅನ್ನು ಸಹ ಹೊಂದಿದೆ, ಆದರೂ ಅದರ ಪ್ಲಾಟ್‌ಫಾರ್ಮ್ ಮೂಲಕ ಪ್ರೀ-ಆರ್ಡರ್‌ ತೆಗೆದುಕೊಳ್ಳಲು ಇನ್ನೂ ಪ್ರಾರಂಭವಾಗಿಲ್ಲ. ಅಂತೆಯೇ, ಅಮೆಜಾನ್ ಇನ್ನೂ ಐಫೋನ್ 12 ಸರಣಿಯ ಪೂರ್ವ-ಆದೇಶಗಳನ್ನು ಪ್ರಾರಂಭಿಸಿಲ್ಲ. ಈ ಎರಡು ಮಾಡೆಲ್‌ಗಳ ಬೆಲೆ ಹಾಗೂ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡಿರಿ.

ಐಫೋನ್ 12- ಪೀಚರ್ಸ್

ಐಫೋನ್ 12- ಪೀಚರ್ಸ್

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಐಫೋನ್ 12 64GB ವೇರಿಯಂಟ್ ಬೆಲೆಯು ಬೆಲೆ 79,900ರೂ.

ಐಫೋನ್ 12 ಪ್ರೊ- ಫೀಚರ್ಸ್‌

ಐಫೋನ್ 12 ಪ್ರೊ- ಫೀಚರ್ಸ್‌

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಐಫೋನ್ 12 ಪ್ರೊ 128GB ವೇರಿಯಂಟ್ ದರವು 119,900ರೂ.

Best Mobiles in India

English summary
Apple India online store is taking pre-orders along an Apple trade-in offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+