ಐಫೋನ್ 15 ಲಾಂಚ್ ಆಗುತ್ತಿರುವ ಬೆನ್ನಲ್ಲೇ ಈ ಐಫೋನ್‌ಗೆ ಭಾರೀ ಡಿಸ್ಕೌಂಟ್!
ಐಫೋನ್‌ನ ಮುಂದಿನ ಸರಣಿ ಫೋನ್‌ಗಳಾದ ಐಫೋನ್ 15 ಶೀಘ್ರದಲ್ಲೇ ಲಾಂಚ್ ಆಗುತ್ತದೆ ಎಂಬ ಸುದ್ದಿ ಒಂದು ಕಡೆಯಾದರೆ ಮತ್ತೊಂದೆಡೆ ಈಗಾಗಲೇ ಬಹು ಬೇಡಿಕೆ ಸೃಷ್ಟಿಸಿದ್ದ ಹಾಗೂ ಐಫೋನ್‌ಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಲಭ್ಯ ಇದ್ದ ಐಫೋನ್ 12 ಗೆ (iPhone 12) ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಈ ಆಫರ್ ಬಳಕೆ ಮಾಡಿಕೊಂಡು ನೀವು ಈ ಫೋನ್ ಅನ್ನು 12,700ರೂ.ಗಳಿಗೆ ಖರೀದಿ ಮಾಡಬಹುದು.
ಹೌದು, ಐಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗ ಉತ್ತಮ ಭದ್ರತಾ ಫೀಚರ್ಸ್ ಹೊಂದಿರುವುದರಿಂದಾಗಿ ಬೇಡಿಕೆ ಬಹಳ ಹೆಚ್ಚಾಗಿಯೇ ಇದೆ. ಈ ನಡುವೆ ಐಫೋನ್ ಮುಂದಿನ ಸರಣಿಯ ಲಾಂಚ್‌ಗೆ ದಿನಗಣನೆ ಆರಂಭ ಆಗಿದ್ದು, ಈ ನಡುವೆ ಐಫೋನ್ 12 ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ(E-commerce site) ಭರ್ಜರಿ ಆಫರ್ ನೀಡಲಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ಐಫೋನ್ 12 ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಇಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ. ಅದರಂತೆ ಈ ಫೋನ್ 6.1ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, ಕನಿಷ್ಠ 625 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹಾಗೂ ಗರಿಷ್ಠ 1200 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ 1170 x 2532 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ವಿಶೇಷ ಎನಿಸಿದೆ.
ಐಫೋನ್ 12 ಪ್ರೊಸೆಸರ್ ಮಾಹಿತಿ: ಈ ಫೋನ್ ಆಪಲ್ A14 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರ GPU 4-ಕೋರ್ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದರೊಂದಿಗೆ ಓಎಸ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳುವ ಆಯ್ಕೆ ಇದೆ. ಅಂದರೆ ಬಳಕೆದಾರರು ಐಓಎಸ್ 14.1, ಐಓಎಸ್ 16.5 , OS 17 ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.
ಐಫೋನ್ 12 ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 12 ಮೆಗಾಪಿಕ್ಸೆಲ್ ನ ಎರಡು ಕ್ಯಾಮೆರಾ ಸೆನ್ಸರ್‌ಗಳನ್ನು ನೀಡಲಾಗಿದ್ದು, ಇವು ನೈಟ್ ಮೋಡ್, 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಸೌಲಭ್ಯ ನೀಡಲಿವೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ಟ್ರೂ ಡೆಪ್ತ್ ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದೆ.
ಐಫೋನ್ 12 ಬ್ಯಾಟರಿ ಹಾಗೂ ಇತರೆ: ಉಳಿದಂತೆ ಈ ಫೋನ್ 2,815 mAh ಸಾಮರ್ಥ್ಯ ಬ್ಯಾಟರಿ ಹೊಂದಿದ್ದು, ಇದು 15W ವೈರ್ ಹಾಗೂ 7.5W ವಾಯರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ಈ ಫೋನ್ ವೈ-ಫೈ 802.11 a/b/g/n/ac/6, ಬ್ಲೂಟೂತ್ ಆವೃತ್ತಿ 5.0, A2DP, LE, ಯುಎಸ್‌ಬಿ ಲೈಟ್ನಿಂಗ್ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.
ಐಫೋನ್ 12 ಆಫರ್ ವಿವರ: ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡುತ್ತಿರುವ ಹಿನ್ನೆಲೆ ಈ ಫೋನ್‌ಗೆ ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಭಾರಿ ರಿಯಾಯಿತಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಫೋನ್‌ಗಳನ್ನು ಈ ವರ್ಷ ಸ್ಥಗಿತ ಮಾಡಲಾಗುತ್ತದೆ ಎಂಬ ಮಾಹಿತಿ ಸಹ ತಿಳಿದುಬಂದಿದೆ. ಅದರಂತೆ ಈ ಫೋನ್ 59,900 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವು ಇದನ್ನು 12,700 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಮೂಲಕ 53,999ರೂ.ಗೆ ಮಾರಾಟ ಆಗುತ್ತಿರುವ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್ ಹೆಚ್ಚುವರಿಯಾಗಿ ಪಡೆಯಬಹುದು. ಇದಾದ ನಂತರ ಈ ಫೋನ್‌ಗೆ 51,300 ರೂ. ಆಗಲಿದೆ. ಬಳಿಕ ವಿನಿಮಯ ಆಫರ್ ಬಳಕೆ ಮಾಡಿಕೊಂಡು ನೀವು 38,600ರೂ.ವರೆಗೂ ಹಣ ಉಳಿಸಬಹುದು. ಈ ಮೂಲಕ ನೀವು 12,700ರೂ.ಗಳಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.

ಇನ್ನು ಐಫೋನ್‌ನ ಮುಂದಿನ ಸರಣಿಯ ಫೋನ್ ಗಳಾದ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಅನ್ನು ಕೆಲವೇ ತಿಂಗಳುಗಳಲ್ಲಿ ಲಾಂಚ್ ಮಾಡಲಾಗುತ್ತಿದೆ. ಈ ನಡುವೆ ಈ ಫೋನ್‌ಗಳ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿದ್ದು, ಪ್ರೊ ಮಾದರಿಗಳು ಇನ್ನೂ ಹೆಚ್ಚಿನ ದುಬಾರಿ ಬೆಲೆ ಹೊಂದಿರಲಿವೆ ಎನ್ನಲಾಗಿದೆ. ಯಾಕೆಂದರೆ ಸುಧಾರಿತ ಪ್ರೊಸೆಸರ್ ಹಾಗೂ ಡಿಸ್‌ಪ್ಲೇ ಆಯ್ಕೆಗಳನ್ನು ಈ ಫೋನ್‌ಗಳು ಹೊಂದಿರಲಿವೆ ಎಂದು ತಿಳಿದುಬಂದಿದೆ.


Click it and Unblock the Notifications








