Home
ಸುದ್ದಿಜಾಲ

ಬಹುನಿರೀಕ್ಷಿತ ಐಫೋನ್ 12 ಮತ್ತು ಐಫೋನ್ 12 ಮಿನಿ ಬಿಡುಗಡೆ; ಬೆಲೆ ಎಷ್ಟು?

ಐಫೋನ್‌ ಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಆಪಲ್ ಐಫೋನ್ 12 ಸರಣಿಯು ಬಿಡುಗಡೆ ಆಗಿದೆ. ಈ ಸರಣಿಯು ನಿರೀಕ್ಷೆಯಂತೆ ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದೆ. ನೂತನ ಐಓಎಸ್‌ 14 ನಲ್ಲಿ ಕಾರ್ಯನಿರ್ವಹಿಸುವ ಈ ಐಫೋನ್‌ 12 ಸರಣಿಯ ಫೋನ್‌ಗಳು ಹಲವು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಹೊಂದಿವೆ.

ಆಪಲ್‌

ಹೌದು, ಆಪಲ್‌ ಸಂಸ್ಥೆಯು Hi, Speed ಹೆಸರಿನ ಕಾರ್ಯಕ್ರದಲ್ಲಿ ತನ್ನ ಐಫೋನ್ 12 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ ಐಫೋನ್ 12 ಮಿನಿ ಮತ್ತು ಐಫೋನ್‌ 12 ಫೋನ್‌ಗಳು ಹೊಸ ಕಲರ್‌ ಆಯ್ಕೆಗಳನ್ನು ಪಡೆದಿದ್ದು, ಜೊತೆಗೆ ಕ್ಯಾಮೆರಾ, ಡಿಸೈನ್‌ ನಿಂದಲೂ ಅಟ್ರ್ಯಾಕ್ಟ್‌ ಆಗಿವೆ. ಹಾಗೆಯೇ ಭಾರತದಲ್ಲಿ ಆಕರ್ಷಕ ಪ್ರೈಸ್‌ಟ್ಯಾಗ್‌ ಹೊಂದಿವೆ. ಹಾಗಾದರೇ ಐಫೋನ್‌ 12 ಮಿನಿ ಹಾಗೂ ಐಫೋನ್‌ 12 ಫೋನ್‌ಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಐಫೋನ್ 12 ಮಿನಿ-ಫೀಚರ್ಸ್‌

ಐಫೋನ್ 12 ಮಿನಿ-ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಐಫೋನ್ 12 ಮಿನಿ ಬೆಲೆಯು 69,900ರೂ.

ಐಫೋನ್ 12 - ಫೀಚರ್ಸ್‌

ಐಫೋನ್ 12 - ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಐಫೋನ್ 12 64GB ವೇರಿಯಂಟ್ ಬೆಲೆಯು ಬೆಲೆ 79,900ರೂ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಪಲ್ ಐಫೋನ್ 12 ಮತ್ತು ಐಫೋನ್ 12 ಮಿನಿ ಫೋನ್‌ಗಳು ಆಕರ್ಷಕ ಲುಕ್‌ನಲ್ಲಿದ್ದು, 64GB, 128GB ಮತ್ತು 256GB ವೇರಿಯಂಟ್‌ ಆಯ್ಕೆ ಹೊಂದಿವೆ. 64GB ವೇರಿಯಂಟ್‌ನ ಐಫೋನ್ 12 ಮಿನಿ ಬೆಲೆಯು 69,900ರೂ. ಆಗಿದೆ. 128GB ವೇರಿಯಂಟ್ ದರವು 74,900ರೂ ಆಗಿದ್ದು, 256GB ಸ್ಟೋರೇಜ್‌ ದರವು 84,900ರೂ. ಆಗಿದೆ. ಅದೇ ರೀತಿ ಐಫೋನ್ 12 ಫೋನಿನ 64GB ವೇರಿಯಂಟ್‌ ಬೆಲೆಯು 79,900ರೂ, 128GB ವೇರಿಯಂಟ್ ಬೆಲೆಯು 84,900ರೂ, 256GB ಸ್ಟೋರೇಜ್‌ ವೇರಿಯಂಟ್‌ 94,900ರೂ. ಪ್ರೈಸ್‌ಟ್ಯಾಗ್ ಹೊಂದಿದೆ. ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿವೆ. ಐಫೋನ್ 12 ಪ್ರೀ-ಆರ್ಡರ್ ಅಕ್ಟೋಬರ್ 16ರಿಂದ ಶುರು ಹಾಗೂ ಐಫೋನ್ 12 ಮಿನಿ ನವೆಂಬರ್ 6 ರಿಂದ ಪ್ರೀ-ಆರ್ಡರ್ ಪ್ರಾರಂಭವಾಗಲಿದೆ.

Best Mobiles in India

English summary
iPhone 12 mini price in India starts at Rs. 69,900, while iPhone 12 begins at Rs. 79,900.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+