Home
ಸುದ್ದಿಜಾಲ

ಆಪಲ್ ಐಫೋನ್ 12 ಸರಣಿ ಲಾಂಚ್; ಫೀಚರ್ಸ್‌ ಏನು?..ಬೆಲೆ ಎಷ್ಟು?

ಆಪಲ್ ಸಂಸ್ಥೆಯ ತನ್ನ ಬಹುನಿರೀಕ್ಷಿತ ಐಫೋನ್ 12 ಸರಣಿಯನ್ನು ಇಂದು(ಅ. 13ರಂದು) ಬಿಡುಗಡೆ ಆಗಿದೆ. ಸೆಪ್ಟೆಂಬರ್‌ನಲ್ಲಿಯೇ ಬಿಡುಗಡೆ ಆಗಬೇಕಿದ್ದ ಐಫೋನ್ 12 ಸರಣಿಯ ಕೊರೊನಾ ವೈರಸ್‌ ಹಾವಳಿಯಿಂದಾಗಿ ಈಗ ಅನಾವರಣಗೊಂಡಿದೆ. ಐಫೋನ್ 11 ಸರಣಿಯ ಮುಂದುವರಿದ ಆವೃತ್ತಿಯಾಗಿರುವ ಐಫೋನ್‌ 12 ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಆಪಲ್‌

ಹೌದು, ಟೆಕ್‌ ದೈತ್ಯ ಆಪಲ್‌ ಸಂಸ್ಥೆಯು Hi, Speed ಹೆಸರಿನ ಕಾರ್ಯಕ್ರದಲ್ಲಿ ಇಂದು ಐಫೋನ್ 12 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯು ನಿರೀಕ್ಷೆಯಂತೆ ಐಫೋನ್ 12 ಸರಣಿಯು ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದೆ. ಈ ಐಫೋನ್‌ಗಳು ಅಪ್‌ಗ್ರೇಡ್‌ ಬ್ಯಾಟರಿ, ನೂತನ ಬಣ್ಣಗಳ ಆಯ್ಕೆ, ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಅಪ್‌ಗ್ರೇಡ್‌ ಹಾಗೂ ಹೊಸತನದ ಸ್ಪರ್ಶ ನೀಡಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ಹೋಮ್‌ಪಾಡ್‌ ಮಿನಿ ಡಿವೈಸ್‌ ಸಹ ಲಾಂಚ್ ಆಗಿದೆ. ಇನ್ನು ಐಫೋನ್‌ 12 ಸರಣಿಯ ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಐಫೋನ್ 12

ಐಫೋನ್ 12

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಐಫೋನ್ 12 64GB ವೇರಿಯಂಟ್ ಬೆಲೆಯು ಬೆಲೆ 79,900ರೂ.

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಐಫೋನ್ 12 ಮಿನಿ ಬೆಲೆಯು 69,900ರೂ.

ಐಫೋನ್ 12 ಪ್ರೊ

ಐಫೋನ್ 12 ಪ್ರೊ

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಐಫೋನ್ 12 ಪ್ರೊ 128GB ವೇರಿಯಂಟ್ ದರವು 119,900ರೂ.

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ. ಈ ಫೋನ್ ಬೆಲೆಯು 129,900ರೂ.

ಆಪಲ್ ಹೋಮ್‌ಪಾಡ್ ಮಿನಿ

ಆಪಲ್ ಹೋಮ್‌ಪಾಡ್ ಮಿನಿ

ಆಪಲ್ ಕಂಪನಿಯು ಐಫೋನ್ 12 ಸರಣಿಯೊಂದಿಗೆ ಆಪಲ್ ಹೋಮ್‌ಪಾಡ್ ಮಿನಿ ಸಹ ಲಾಂಚ್ ಮಾಡಿದೆ. ಈ ಡಿವೈಸ್‌ ಸಿರಿ ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಪಡೆದಿದೆ. ಈ ಡಿವೈಸ್‌ ಹೋಮ್‌ಪಾಡ್ ಮಿನಿ ಹೋಮ್‌ಪಾಡ್‌ಗಿಂತ ಸಾಕಷ್ಟು ಚಿಕ್ಕದಾಗಿದೆ. ಈ ಡಿವೈಸ್‌ ಬೆಲೆಯು 9,900ರೂ. ಆಗಿದೆ.

Best Mobiles in India

English summary
Apple has launched four iPhone 12 models — iPhone 12 mini, iPhone 12, iPhone 12 Pro, and iPhone 12 Pro Max.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+