ಐಫೋನ್‌ 12 ಪ್ರೊ ಖರೀದಿಸಲು ಇದಕ್ಕಿಂತ ಒಳ್ಳೆಯ ಕೊಡುಗೆ ಮತ್ತೆ ಸಿಗಲ್ಲ!

|

ಡಿಸ್ಕೌಂಟ್‌ನಲ್ಲಿ ಐಫೋನ್‌ 12 ಪ್ರೊ ಖರೀದಿಸುವ ಯೋಚನೆ ಇದ್ದರೆ, ಅದಕ್ಕೆ ಇದೀಗ ಸೂಕ್ತ ಸಮಯ ಬಂದಿದೆ. ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್ ಐಫೋನ್‌ 12 ಪ್ರೊ ಫೋನಿಗೆ ಸುಮಾರು 25,000ರೂ.ಗಳ ದೊಡ್ಡ ರಿಯಾಯಿತಿ ಘೋಷಿಸಿದೆ. ಈ ಕೊಡುಗೆಯು ಆಪಲ್ ಐಫೋನ್‌ 12 ಪ್ರೊ ಫೋನಿನ ಎಲ್ಲ ವೇರಿಯಂಟ್ ಮಾದರಿ ಫೋನ್‌ಗಳಿಗೂ ಅನ್ವಯವಾಗಲಿದೆ.

ರಿಯಾಯಿತಿ

ಅಮೆಜಾನ್‌ನಲ್ಲಿ ಐಫೋನ್‌ 12 ಪ್ರೊ ರಿಯಾಯಿತಿ ಜೊತೆಗೆ ಸುಮಾರು 15,000ರೂ. ವರೆಗಿನ ವಿನಿಮಯ (ಎಕ್ಸ್‌ಚೇಂಜ್) ಬೋನಸ್‌ ಆಯ್ಕೆ ಸಹ ಒಳಗೊಂಡಿದೆ. ಈ ಮೂಲಕ ಗ್ರಾಹಕರು ತಮ್ಮ ಹಳೆಯ ಫೋನ್‌ ವಿನಿಮಯ ಮಾಡುವ ಮೂಲಕ ಹೆಚ್ಚಿನ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. 128GB ಸಂಗ್ರಹ ಮಾದರಿಯ ಐಫೋನ್‌ 12 ಪ್ರೊ ಕೊಡುಗೆಯಲ್ಲಿ 95,900 ರೂ.ಗಳ ಬೆಲೆಗೆ ಲಭ್ಯ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

ಐಫೋನ್‌

ಅದೇ ರೀತಿ ಐಫೋನ್‌ 12 ಪ್ರೊ 256GB ಸಂಗ್ರಹ ಮಾದರಿಯ ಫೋನಿನ ರಿಯಾಯಿತಿ ಬೆಲೆಯು 99,900 ರೂ. ಆಗಿದೆ. ಇನ್ನು 512GB ಸಂಗ್ರಹ ಮಾದರಿಯ ಫೋನಿನ ರಿಯಾಯಿತಿ ದರವು 1,07,900ರೂ. ಆಗಿದೆ. ಈ ಡಿಸ್ಕೌಂಟ್‌ನೊಂದಿಗೆ ಗ್ರಾಹಕರು ತಮ್ಮ ಹಳೆಯ ಫೋನ್‌ ವಿನಿಮಯ ಮಾಡಿ ಎಕ್ಸ್‌ಚೇಂಜ್ ಬೋನಸ್‌ ಸಹ ಪಡೆಯಬಹುದು. ಹಾಗಾದರೇ ಐಫೋನ್ 12 ಪ್ರೊ ಫೋನಿನ ಫೀಚರ್ಸ್‌ಗಳು ಹೇಗಿವೆ ಹಾಗೂ ನೂತನ ಐಫೋನ್ 13 ಸರಣಿಯ ಫೀಚರ್ಸ್‌ ಬಗ್ಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಪ್ರೊ ಡಿಸ್‌ಪ್ಲೇ ಮತ್ತು ರಚನೆ

ಐಫೋನ್ 12 ಪ್ರೊ ಡಿಸ್‌ಪ್ಲೇ ಮತ್ತು ರಚನೆ

ಐಫೋನ್ 12 ಪ್ರೊ ಫೋನ್‌ 6.1-ಇಂಚಿನ ಇಂಚಿನ ಸೂಪರ್ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಒಎಲ್ಇಡಿ ಡಿಸ್‌ಪ್ಲೇ ಸುಮಾರು 3.5 ಮಿಲಿಯನ್ ಪಿಕ್ಸೆಲ್‌ಗಳನ್ನು ಹೊಂದಿರುತ್ತದೆ ಮತ್ತು ಗರಿಷ್ಠ ಬ್ರೈಟ್‌ನೆಶ್‌ ಮಟ್ಟ 1200 ನಿಟ್‌ಗಳವರೆಗೆ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಐಪಿ 68 ರೇಟಿಂಗ್ ಆಗಿದ್ದು, 6 ಮೀಟರ್‌ವರೆಗೆ 30 ನಿಮಿಷಗಳವರೆಗೆ ನೀರಿನ ಮುಳುಗುವಿಕೆಯನ್ನು ತಡೆದುಕೊಳ್ಳುತ್ತವೆ.

ಐಫೋನ್ 12 ಪ್ರೊ ಪ್ರೊಸೆಸರ್‌ ಪವರ್

ಐಫೋನ್ 12 ಪ್ರೊ ಪ್ರೊಸೆಸರ್‌ ಪವರ್

ಐಫೋನ್ 12 ಪ್ರೊ ಫೋನ್‌ ಆಪಲ್‌ನ ಎ 14 ಬಯೋನಿಕ್ ಸಿಸ್ಟಮ್-ಆನ್-ಚಿಪ್‌ಸೆಟ್‌ ಪ್ರೊಸೆಸರ್‌ ಕಾರ್ಯನಿರ್ವಹಿಸುತ್ತದೆ. ಪ್ರೊಸೆಸರ್‌ಗೆ ಪೂರಕವಾಗಿ iOS 14 ಬೆಂಬಲ ನೀಡಲಿದೆ. ಇನ್ನು ಎ 14 ಬಯೋನಿಕ್ ಅನ್ನು 4 ಕೆ ವಿಡಿಯೋ ಎಡಿಟಿಂಗ್ ಸೇರಿದಂತೆ ಮಾತುಕತೆಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಎ 13 ಬಯೋನಿಕ್ ಚಿಪ್‌ಗಿಂತ ಸಿಪಿಯು ಕಾರ್ಯಕ್ಷಮತೆಯಲ್ಲಿ 40 ಪ್ರತಿಶತದಷ್ಟು ವರ್ಧನೆ ಮತ್ತು ಗ್ರಾಫಿಕ್ಸ್‌ನಲ್ಲಿ 30 ಪ್ರತಿಶತದಷ್ಟು ಸುಧಾರಣೆಯನ್ನು ಇದು ಒಳಗೊಂಡಿದೆ.

ಐಫೋನ್ 12 ಪ್ರೊ ಕ್ಯಾಮೆರಾ

ಐಫೋನ್ 12 ಪ್ರೊ ಕ್ಯಾಮೆರಾ

ಐಫೋನ್ 12 ಪ್ರೊ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಐಫೋನ್ 12 ಪ್ರೊ ಫೋನ್ ಎರಡು ವೈಡ್ ಆಂಗಲ್ ಸೆನ್ಸಾರ್‌ಅನ್ನು ಹೊಂದಿದೆ ಮತ್ತು 4x ಆಪ್ಟಿಕಲ್ ಜೂಮ್‌ಗಾಗಿ 52 ಎಂಎಂ ಫೋಕಲ್ ಲೆಂಗ್ತ್ ಟೆಲಿಫೋಟೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ.

ಐಫೋನ್ 13 ಫೋನ್‌ ಫೀಚರ್ಸ್‌

ಐಫೋನ್ 13 ಫೋನ್‌ ಫೀಚರ್ಸ್‌

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌

ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ ಫೋನ್‌ ಫೀಚರ್ಸ್‌

ಐಫೋನ್ 13 ಪ್ರೊ ಫೋನ್‌ ಫೀಚರ್ಸ್‌

ಐಫೋನ್ 13 ಪ್ರೊ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ ಫೀಚರ್ಸ್‌

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ ಫೀಚರ್ಸ್‌

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್‌ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್‌ ಮೋಡ್‌ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ.

Most Read Articles
Best Mobiles in India

English summary
iPhone 12 Pro selling at a Discount of Rs 25,000 on Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X